ಹಸನ್ಮುಖಿ ಸದಾ ಲವಲವಿಕೆ ಇಂದ ಇದ್ದ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲ ಆಗಲಿ ಎರಡು ವರ್ಷ ಆಗಿದೆ ಎಂದು ಯಾರಿಗೂ ನಂಬಲು ಸಾಧ್ಯವೇ ಇಲ್ಲ ಇತ್ತೀಚೆಗೆ ಅಷ್ಟೆ ಕುಟುಂಬದ ಸದಸ್ಯರು ಸೇರಿ ಚಿರಂಜೀವಿ ಸರ್ಜಾ ಅವರ ಎರಡನೇ ಪುಣ್ಯ ಸ್ಮರಣೆಯನ್ನು ಅವರ ಸಮಾಧಿ ಅಲ್ಲಿ ಹಮ್ಮಿಕೊಳ್ಳಲಾಯಿತು ಚಿರು ಅವರ ಕುಟುಂಬದ ಸದಸ್ಯರು ಅವರ ಪತ್ನಿ ಮೇಘನಾ ಸರ್ಜಾ ಅವರ ಕುವರ ರಾಯನ್ ರಾಜ್ ಸರ್ಜಾ ಮೇಘನಾ ತಂದೆ ತಾಯಿ ಕೂಡ ಪಾಲ್ಗೊಂಡಿದ್ದರು

ಮೇಘನಾ ರಾಜ್ ಅವರು ಕೂಡ ಇತ್ತೀಚೆಗೆ ಡಾನ್ಸಿಂಗ್ ಶೋ ಮತ್ತು ಕೆಲವೊಂದು ಜಾಹೀರಾತು ರೂಪದರ್ಶಿ ಆಗಿ ಕಾಣಿಸಿಕೊಂಡಿದ್ದಾರೆ ಇನ್ನೂ ತಮ್ಮ ಸಾಮಾಜಿಕ ಜಾಲ ತಾಣಗಳಲ್ಲಿ ತನ್ನ ಮಗನ ಜೊತೆ ಇರುವ ಹಲವಾರು ವಿಡಿಯೋ ತುಣುಕು ಅನ್ನು ಹಂಚಿಕೊಳ್ಳುತ್ತಾ ಇರೋದು ಎಲ್ಲರಿಗೂ ತಿಳಿದ ವಿಷಯ ಇತ್ತೀಚೆಗೆ ಚಿರು ಅವರ ಬಾಲ್ಯದ ಫೋಟೋ ಒಂದು ಸಾಕಷ್ಟು ಸುದ್ದಿ ಮಾಡಿದೆ

ನಿಜ ಚಿರು ಅವರ ಬಾಲ್ಯದ ಫೋಟೋ ಮತ್ತು ರಾಯನ ಫೋಟೋ ಎರಡನ್ನೂ ಒಟ್ಟಿಗೆ ಒಟ್ಟು ಹೋಲಿಕೆ ಮಾಡಿದ್ದಲ್ಲಿ ಯಾವುದು ಚಿರು ಮತ್ತು ಅವರ ಮಗ ಎಂದು ಹೇಳುವುದು ಸ್ವಲ್ಪ ಗೊಂದಲ ಹೊಂದುವುದು ಸಹಜ ಅಷ್ಟು ಹೋಲಿಕೆ ಇದೆ ಚಿರು ಅವರ ತದ್ರೂಪು ಎಂದರೆ ಸುಳ್ಳಲ್ಲ ಮಗು ಹುಟ್ಟಿದಾಗ ಮೂಗು ಮತ್ತು ಕಣ್ಣು ಚಿರು ಹಾಗೇ ಇದೆ ಎಂದು ಅವರ ಅಜ್ಜಿ ಹೇಳಿದ್ದರು ಆದರೆ ಇವಾಗ ನೋಡಿದರೆ ಚಿರು ಅವರ ತದ್ರುಪ ಹಾಗೆ ರಾಯನ್ ಸರ್ಜ್ ಕಾಣಿಸುತ್ತಾ ಇದ್ದಾರೆ

ಇನ್ನೂ ಲಕ್ಷ್ಮಿ ದೇವಿ ಅವರು ಚಿರಂಜೀವಿ ಸರ್ಜಾ ಅವರನ್ನು ಎತ್ತಿಕೊಂಡ ಫೋಟೋ ಕೂಡ ವೈರಲ್ ಆಗಿದೆ ಚಿರು ಪುಣ್ಯ ಸ್ಮರಣೆ ದಿನ ತನ್ನ ಮುತ್ತಜ್ಜಿ ಜೊತೆ ರಾಯನ್ ರಾಜ್ ಸರ್ಜಾ ಬಹಳ ಸಮಯ ಕಾಲ ಕಳೆದಿದ್ದನ್ನ ಮತ್ತು ಅವರು ರಾಯನ್ ಜೊತೆ ಇದ್ದ ಕ್ಷಣಗಳು ಕೂಡ ಸಾಕಷ್ಟು ಸುದ್ದಿ ಮಾಡಿದೆ ಚಿರು ಅವರು ಇಂದಿಗೂ ನಮ್ಮನ್ನೆಲ್ಲ ಅಗಲಿದ್ದಾರೆ ಅವರನ್ನು ರಾಯನ ಮೂಲಕ ನೋಡಿ ಖುಷಿ ಇದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು ರಾಯನ್ ಅವರು ಮುಂದಿನ ಜೀವನದ ಸದಾ ಹಸನ್ಮುಖಿ ಆಗಿ ಇರಲಿ ಎಂದು ನಾವೆಲ್ಲರೂ ಹರಿಸೋಣ ಮೇಘನಾ ಅವರಿಗೂ ಕೂಡ ಇನ್ನೂ ಹೆಚ್ಚು ಹೆಚ್ಚು ತಮ್ಮ ಜೀವನದಲ್ಲಿ ಮುಂದೆ ಹೆಜ್ಜೆ ಇಡಲು ಅವಕಾಶ ಸಿಗಲಿ.

Leave a Reply

Your email address will not be published. Required fields are marked *