ರಂಗಾಯಣ ರಘು ಎಂದೇ ಹೆಸರುವಾಸಿ ಆದ ಇವರ ಮೂಲ ಹೆಸರು ಕೊಟ್ಟುರು ಚಿಕರಂಗಪ್ಪ ಎಂದು. ಇವರು ಭಾರತೀಯ ಚಲನಚಿತ್ರ ಮತ್ತು ವೇದಿಕೆಯ ನಟರಾಗಿದ್ದು ಸಿನಿಮಾದಲ್ಲಿ ಇವರ ಹೆಚ್ಚಾಗಿ ತಮಾಷೆ ಮತ್ತು ನಕಾರಾತ್ಮಕ-ಮಸುಕಾದ ಪಾತ್ರಗಳನ್ನು ಬ್ಯೂಟಿ ಇವರು ೨೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ ಅವರು ಬಿ. ವಿ. ಕಾರಂತ್ ಅವರ ರಂಗಭೂಮಿ ಗುಂಪಿನಲ್ಲಿ ರಂಗಾಯಣ್ಣ ಅವರು ವೇದಿಕೆಯ ನಟನಾಗಿ ಕೆಲಸ ಮಾಡಿದರು. ನಂತರ ೧೯೯೫ ರಲ್ಲಿ ಸುಗ್ಗಿ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು ಹಾಗೂ ಸಾಕಷ್ಟು ಚಲನಚಿತ್ರಗಳಲ್ಲಿ ಪೋಷಕನಟನಾಗಿ ಹಾಗೂ ಖಳನಾಯಕನಾಗಿ ಕೂಡಾ ಅಭಿನಯಿಸಿದರು.

೨೦೦೭ ರಲ್ಲಿ ಇವರು ಅಭಿನಯಿಸಿದ ದುನಿಯಾ ಚಿತ್ರದ ಅಭಿನಯಕ್ಕಾಗಿ ಅವರು ಅತ್ಯುತ್ತಮ ಪಾತ್ರ ನಿರ್ವಹಿಸಿ ಅದಕ್ಕಾಗಿ ಅವರ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರ ಇತರ ಗಮನಾರ್ಹ ಪಾತ್ರಗಳು ಹಾಗೂ ಚಲನಚಿತ್ರಗಳು ಎಂದರೆ ಸೈನೈಡ್, ರಾಮ್, ಮತ್ತು ಜಯಮ್ಮನ ಮಗ ಹಾಗೂ ಇನ್ನು ಹಲವು ಚಿತ್ರಗಳು. ನಾವು ಈ ಲೇಖನದಲ್ಲಿ ಸಾಕಷ್ಟು ಖಳನಾಯಕನ ಪಾತ್ರದಲ್ಲಿ ಅಭಿನಯ ಮಾಡಿದ ರಂಗಾಯಣ ರಘು ಅವರ ಜೀವನ ಹಾಗೂ ಕುಟುಂಬದ ಬಗ್ಗೆ ತಿಳಿದುಕೊಳ್ಳೋಣ.

೧೯೯೫ ರಲ್ಲೀ ಹಂಸಲೇಖ ರವರು ನಿರ್ದೇಶಿಸಿದ ಕನ್ನಡ ಚಲನಚಿತ್ರವಾದ ಸುಗ್ಗಿಯಲ್ಲಿ ಅಭಿನಯಿಸಿದರು ಹಾಗೂ ನಂತರ ಅವರು ೨೦೦೨ ರಲ್ಲಿ ದಮ್ಮ್ ಚಲನಚಿತ್ರದಲ್ಲಿ ಕಾಣಿಸಿಕೊಂಡರು ನಂತರ ಮೇಘಾ ಬಂಥು ಮೇಘಾ ಮತ್ತು ಮುಂತಾದ ಚಲನಚಿತ್ರ ದಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡವರು. ರಂಗ ಎಸ್.ಎಸ್.ಎಲ್.ಸಿ, ದುನಿಯಾ, ಅಲೆಮಾರಿ, ಮೊದಲಾಸಲಾ ಹಾಗೂ ಮುಂತಾದ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ರಂಗಾಯಣ ರಘು ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ಕಲಾವಿದ. ತಮ್ಮ ಹಾಸ್ಯ ನಟನೆ ಮೂಲಕ ಕಚಗುಳಿ ಇಡುವುದರ ಜೊತೆಗೆ ಹಲವು ಭಾವಪೂರ್ಣ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಇವರು ಮೈಸೂರಿನ ಖ್ಯಾತ ರಂಗಸಂಸ್ಥೆ ರಂಗಾಯಣದ ಪ್ರತಿಭೆ ಎಂದೇ ಹೇಳಬಹುದು. ಇವರಿಗೆ ಬಿಗ್‌ ಬ್ರೇಕ್ ಕೊಟ್ಟ ಚಿತ್ರ ದುನಿಯಾ. ಈ ಚಿತ್ರದಲ್ಲಿ ತಮ್ಮ ಗಂಭೀರ ಪಾತ್ರಗಳಿಂದ ಹೊರಬಂದು ಸಂಪೂರ್ಣ ಹಾಸ್ಯ ಪಾತ್ರ ಮಾಡಿದರು. ಭಿನ್ನ- ಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ರಘುರವರು ಹತ್ತು -ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಒಮ್ಮೆ ರಂಗಾಯಣ ರಘು ಅವರ ಕಾಲಿಗೆ ಏಟಾಗಿದ್ದಾಗ ಅವರ ಜೊತೆಗೆ ಮಂಗಳ ಅವರು ಹೆಚ್ಚಾಗಿ ಇರುತ್ತಿದ್ದರು. ಒಂದು ದಿನ ರಂಗಾಯಣ ರಘು ಅವರೇ ಮಂಗಳ ಅವರಿಗೆ ಪ್ರಪೋಸ್ ಮಾಡಿ ಆಮೇಲೆ ಮನೆಯಲ್ಲಿ ಒಪ್ಪಿಸುವ ಬಗ್ಗೆ ಮಾತುಕತೆ ಆಗಿ ಎಲ್ಲರೂ ಒಪ್ಪಿ1998ರಲ್ಲಿ ಮದುವೆಯಾದರು. ರಂಗಾಯಣ ರಘು ಅವರ ಪತ್ನಿ ಮಂಗಳ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಕನ್ನಡ ವಿಷಯದಲ್ಲಿ ನಂತರ ರಂಗಾಯಣ ರಘು ಅವರು ತಮ್ಮದೇ ಆದ ಸಂಚಾರಿ ಥಿಯೇಟ ರನ್ನು ನಿರ್ಮಾಣ ಮಾಡಿದ್ದಾರೆ ಅದನ್ನು ಇವರ ಹೆಂಡತಿ ನೋಡಿಕೊ ಳ್ಳುತ್ತಾರೆ ಮತ್ತು ಇವರಿಗೆ ಮುದ್ದಾದ ಒಬ್ಬಳು ಮಗಳಿದ್ದಾಳೆ ಅವರ ಹೆಸರು ಚುಕ್ಕಿ ಎಂದು ರಂಗಾಯಣ ರಘು ಅವರಿಗೆ ಅವರ ಮಗಳು ಎಂದರೆ ತುಂಬಾ ಇಷ್ಟ ಅವರು ಕೂಡ ಬಿಡುವಿನ ವೇಳೆಯಲ್ಲಿ ಸಂಚಾರಿ ಥಿಯೇಟರನ್ನು ನೋಡಿಕೊಳ್ಳುತ್ತಾರೆ ಈ ಥಿಯೇಟರ್ನ ಉದ್ದೇಶ ಅನೇಕ ಕಲಾವಿದರಿಗೆ ಅವಕಾಶ ಸಿಗಬೇಕು ಎಂದು ಸ್ಥಾಪನೆ ಮಾಡಿದ್ದಾರೆ. ಇನ್ನು ರಂಗಾಯಣ ರಘು ಅವರು ಬಿಡುವಿನ ಸಮಯದಲ್ಲಿ ಅವರ ಫಾರಂ ಹೌಸ್ ನಲ್ಲಿ ಇರುತ್ತಾರೆ ಇಲ್ಲಿ ತೆಂಗು ಮಾವು ಎಲ್ಲ ಬೆಳೆಗಳನ್ನು ಬೆಳೆದಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!