ಕೊರೊನ ವೈರಸ್ ನಾಶ ಮಾಡಲು ನಾಟಿ ಔಷಧಿಗೆ ಗ್ರೀನ್ ಸಿಗ್ನಲ್ ಕೊಟ್ಟ ಸರ್ಕಾರ

0 3

ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಈಗಾಗಲೇ ಜನರಲ್ಲಿ ಸಾಕಷ್ಟು ತಲ್ಲಣ ಉಂಟು ಮಾಡಿದೆ. ಈಗಾಗಲೇ ಕೊರೊನಾಗೆ ವ್ಯಾಕ್ಸಿನ್ ಬಂದಿದ್ದಾರೆ ಸಹ ದೇಶದ ಎಲ್ಲರಿಗೂ ಈಗಲೇ ತಲುಪಿಸಲು ಆಗುತ್ತಿಲ್ಲ. ಇದರ ನಡುವೆ ಅಲ್ಲಲ್ಲಿ ಕೆಲವರು ಆಯುರ್ವೇದಿಕ್ ಔಷಧಿಗಳನ್ನ ನೀಡುತ್ತಿದ್ದಾರೆ ಹಾಗೂ ಕೊರೊನಾಗೆ ಆಯುರ್ವೇದಿಕ್ ಔಷಧ ನೀಡಿದರೆ ಗುಣವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಇಂತಹವರಲ್ಲಿ ಒಬ್ಬರು ಅಂದ್ರೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ನಂ ನಿವಾಸಿ ಆನಂದಯ್ಯ ಕೂಡ ಒಬ್ಬರು. ಆನಂದಯ್ಯನವರ ಆಯುರ್ವೇದಿಕ್ ಔಷಧಿಯಿಂದ ಕೊರೊನಾ ಗುಣಮುಖವಾಗುತ್ತದೇ ಎಂದು ಸಾವಿರಾರು ಜನ ಔಷಧಕ್ಕೆ ಮುಗಿ ಬಿದ್ದಿದ್ದರು. ಆದರೆ ಯಾವುದೇ ಸಂಶೋಧನೆ ಅಥವಾ ಅಧ್ಯಯನ ನಡೆಸದೆ ಆನಂದಯ್ಯ ಔಷಧ ನೀಡ್ತಿದ್ದಾರೆ ಅನ್ನೋ ಕಾರಣಕ್ಕೆ ಅವರು ಔಷಧ ನೀಡದಂತೆ ಆಂಧ್ರಪ್ರದೇಶ ಸರ್ಕಾರ ತಡೆಯೊಡ್ಡಿತ್ತು. ಈಗ ಆನಂದಯ್ಯ ಔಷಧ ನೀಡಬಹುದು ಎಂದು ಆಂಧ್ರ ಹೈಕೋರ್ಟ್ ಮತ್ತು ಆಂಧ್ರ ಸರ್ಕಾರ ಎರಡೂ ಗ್ರೀನ್ ಸಿಗ್ನಲ್ ನೀಡಿವೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪೆಡಂಭೂತವಾಗಿ ಕಾಡುತ್ತಿರುವ ಕೊರೊನಾಗೆ ನಾಟಿ ಔಷಧ ನೀಡುವ ಮೂಲಕ ನೆಲ್ಲೂರಿನ ಕೃಷ್ಣಪಟ್ಟಣಂ ಆನಂದಯ್ಯ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದರು. ಇದೀಗ ಭಾರೀ ಚರ್ಚೆಗಳು, ಪರೀಕ್ಷೆಗಳ ಬಳಿಕ ಕೆಲ ಷರತ್ತುಗಳೊಂದಿಗೆ ಆನಂದಯ್ಯ ಕೊರೊನಾ ಔಷಧಕ್ಕೆ ಗ್ರೀನ್ ಸಿಗ್ನಲ್ ನೀಡಿರುವುದಾಗಿ ಆಂಧ್ರಪ್ರದೇಶದ ಸಿಎಂ ಕಚೇರಿ ತಿಳಿಸಿದೆ. ಕೊರೊನಾ ವೈರಸ್ ವಿರುದ್ಧ ಆಯುರ್ವೇದ ಔಷಧ ನೀಡುವುದನ್ನು ಮುಂದುವರಿಸುವಂತೆ ನಾಟಿ ವೈದ್ಯ ಆನಂದಯ್ಯ ಅವರಿಗೆ ಆಂಧ್ರಪ್ರದೇಶ ಸರ್ಕಾರದ ಒಪ್ಪಿಗೆ ಸೂಚಿಸಿದೆ. ಆಯುಷ್ ಸಚಿವಾಲಯದ ಕೇಂದ್ರೀಯ ಆಯುರ್ವೇದ ಪರಿಶೋಧನೆ ಸಂಸ್ಥೆ ಸಮಿತಿಯ ಅನುಮೋದನೆಯ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಆಂಧ್ರ ಸರ್ಕಾರ ಸ್ಪಷ್ಟಪಡಿಸಿದೆ.

ಆನಂದಯ್ಯರ ಔಷಧ ನೀಡಲು ಸರ್ಕಾರ ತಡೆಯೊಡ್ಡಿರುವುದನ್ನ ಪ್ರಶ್ನಿಸಿ ಆನಂದಯ್ಯ ಮತ್ತು ಇತರ ಇಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು ಸೋಮವಾರ ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರ ಔಷಧ ವಿತರಣೆಗೆ ನಿಷೇಧ ಹೇರಿದ್ದು ಯಾಕೆ ಎಂದು ಸರ್ಕಾರವನ್ನ ಪ್ರಶ್ನಿಸಿತ್ತು. ಇದಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲರು ಆನಂದಯ್ಯ ನೀಡುತ್ತಿರುವ ಔಷಧದ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಇದಾದ ಬಳಿಕ ಉತ್ತರ ನೀಡುವುದುದಾಗಿ ಹೇಳಿದ್ದರು. ಆನಂದಯ್ಯ ಅವರ ಪರ ವಕೀಲರು ಸರ್ಕಾರಕ್ಕೆ ಔಷಧ ನಿಷೇಧಿಸುವ ಯಾವುದೇ ಅಧಿಕಾರವಿಲ್ಲ ಎಂದು ವಾದಿಸಿದರು. ಬಳಿಕ ಮಧ್ಯಾಹ್ನ 3 ಗಂಟೆಗೆ ಮತ್ತೊಮ್ಮೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕಣ್ಣಿಗೆ ಹಾಕುವ ಡ್ರಾಪ್ಸ್ ಹೊರತು ಪಡಿಸಿ ಉಳಿದ ಔಷಧಗಳನ್ನ ನೀಡಲು ಗ್ರೀನ್ ಸಿಗ್ನಲ್ ನೀಡಿತ್ತು. ಇದೇ ರೀತಿ ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಫಾರ್ ಆಯುರ್ವೇದಿಕ್ ಸೈನ್ಸ್ಸ್ ಕೂಡ ಆನಂದಯ್ಯರ ಔಷಧದಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ. ಹೀಗಾಗಿ ಔಷಧ ವಿತರಣೆಗೆ ಅನುಮತಿ ನೀಡಿ ಎಂದು ಆಂಧ್ರ ಸರ್ಕಾರಕ್ಕೆ ಹೇಳಿತ್ತು.

ಆದರೆ ಕಣ್ಣಿಗೆ ಡ್ರಾಪ್ ಮಾತ್ರ ಹಾಕುವಂತಿಲ್ಲ ಎಂದು ಷರತ್ತು ವಿಧಿಸಿ ಆಂಧ್ರ ಸರ್ಕಾರ ನಾಟಿ ವೈದ್ಯ ಆನಂದಯ್ಯಗೆ ಕೊರೊನಾ ವಿರುದ್ಧ ಆಯುರ್ವೇದ ಔಷಧ ನೀಡುವುದನ್ನು ಮುಂದುವರಿಸುವಂತೆ ಸೂಚಿಸಿದೆ. ಕಣ್ಣಿಗೆ ಡ್ರಾಪ್ ಹಾಕುವ ವೈದ್ಯ ಪದ್ಧತಿಯ ಬಗ್ಗೆ ಸಂಶೋಧನಾ ವರದಿ ಬರಬೇಕಾಗಿದ್ದು ಅದಕ್ಕೆ ಇನ್ನೂ ಎರಡರಿಂದ ಮೂರು ವಾರಗಳ ಸಮಯ ಹಿಡಿಯುತ್ತದೆ ಎಂದು ಹೇಳಿದೆ. ಕೊರೊನಾ ವಿರುದ್ಧ ನಾಟಿ ವೈದ್ಯ ಆನಂದಯ್ಯ ನೀಡುವ ಆಯುರ್ವೇದ ಔಷಧವನ್ನು ಬಳಸಿದರೆ ತೊಂದರೆ ಏನೂ ಇಲ್ಲ ಎಂದು CCRAS ಸಮಿತಿ ಸಲ್ಲಿಸಿದೇ. ಈ ತಾಜಾ ಅಧ್ಯಯನದ ವರದಿಯ ಮೇರೆಗೆ ಇದೀಗ ವೈದ್ಯ ಆನಂದಯ್ಯ ನೀಡುವ ವಿವಾದಿತ ಪಿಎಲ್​ಎಫ್ ​ಔಷಧಿಗೆ ಅನುಮೋದನೆ ದೊರೆತಿದೆ. ಆದರೆ ಆನಂದಯ್ಯ ನೀಡುವ ಆಯುರ್ವೇದ ಔಷಧದಿಂದ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತದೆ, ಕಡಿಮೆಯಾಗುತ್ತದೆ ಎಂಬುದಕ್ಕೆ ಇನ್ನೂ ಪುಷ್ಠಿ ದೊರೆತಿಲ್ಲ ಎಂದೂ CCRAS ಸಮಿತಿ ಸ್ಪಷ್ಟಪಡಿಸಿದೆ. ಇದರೊಂದಿಗೆ ಜನ ತಮ್ಮ ಸ್ವ ಇಚ್ಛೆಯಿಂದ ಆನಂದಯ್ಯ ನಾಟಿ ಔಷಧ ಬಳಸಬಹುದು ಎಂದು ಆಂಧ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದನ್ನು ಆಧರಿಸಿ ಆನಂದಯ್ಯ ಔಷಧ ವಿತರಣೆಗೆ ಸರ್ಕಾರ ಅನುಮತಿ ನೀಡಿದೆ. ಆದರೆ ಕೊವಿಡ್ ರೋಗಿಗಳ ಬದಲು ಅವರ ಸಂಬಂಧಿಕರು ಮಾತ್ರ ಔಷಧ ತೆಗೆದುಕೊಂಡು ಬರಬಹುದು ಅಂತಾ ಹೇಳಿದೆ. ಆನಂದಯ್ಯ ಕೋರ್ಟಿನ ಕೇಸ್ ಮುಗಿಸಿ ಕಳೆದ ಎರಡು ದಿನಗಳಿಂದ ಕೊವಿಡ್‌ಗೆ ಔಷಧ ಈಡುತ್ತಿದ್ದಾರೆ. ತಮ್ಮ ಸ್ವಂತ ತೋಟದಲ್ಲಿ‌ ಔಷಧಿ ತಯಾರಿಕೆಗೆ ಆನಂದಯ್ಯ ಆಸಕ್ತಿ‌ ಹೊಂದಿದ್ದರು ಆದರೆ ಅಧಿಕಾರಿಗಳು ಇದಕ್ಕೆ ಒಪ್ಪದ ಕಾರಣ ಕೃಷ್ಣಪಟ್ಟಣಂನ ಸಿವಿಆರ್ ಕಾಂಪ್ಲೆಕ್ಸ್‌ನಲ್ಲಿ ಔಷಧ ವಿತರಣೆ ಮಾಡಲಿದ್ದಾರೆ. ಹೀಗಾಗಿ ಆನಂದಯ್ಯ ಬೆಂಬಲಿಗರು ಔಷಧಿ ಸಾಮಾಗ್ರಿ ತಯಾರಿಕೆ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದಾರೆ.

Leave A Reply

Your email address will not be published.