ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಎಲ್ಲರೂ ಎಲ್ಪಿಜಿ ಸಿಲಿಂಡರ್ ಬಳಕೆ ಮಾಡುತ್ತಿದ್ದಾರೆ. ಪ್ರತಿ ತಿಂಗಳಿನ ಮೊದಲನೇ ದಿನದಂದು ತೈಲಕಂಪನಿಗಳು ಸಿಲಿಂಡರ್ ಬೆಲೆಯನ್ನು ನಿಗದಿಪಡಿಸುತ್ತದೆ. ಕೆಲವು ತಿಂಗಳು ಸಿಲಿಂಡರ್ ಬೆಲೆ ಹೆಚ್ಚಾಗುತ್ತದೆ, ಇನ್ನೂ ಕೆಲವು ತಿಂಗಳು ಬೆಲೆ ಕಡಿಮೆಯಾಗುತ್ತದೆ. ಜೂನ್ ಒಂದರಂದು ತೈಲಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಡಿಮೆಗೊಳಿಸಿದೆ ಅಲ್ಲದೆ ಇನ್ನು ಕೆಲವು ಕ್ಷೇತ್ರದಲ್ಲಿ ಬದಲಾವಣೆಗಳು ಕಂಡು ಬಂದಿದೆ. ಕೊರೋನ ಮಹಾಮಾರಿಯ ಅಟ್ಟಹಾಸದಿಂದ ಜನಸಾಮಾನ್ಯರು ನಲುಗಿ ಹೋಗಿದ್ದಾರೆ. ಗ್ಯಾಸ್ ಸಿಲಿಂಡರ್ ನ ಬೆಲೆ ಇಳಿಮುಖವಾಗಿರುವುದು ಜನಸಾಮಾನ್ಯರಿಗೆ ಸಿಹಿಸುದ್ದಿ ಆಗಿದೆ. ಹಾಗಾದರೆ ಜೂನ್ ತಿಂಗಳಿನ ಗ್ಯಾಸ್ ಸಿಲೆಂಡರ್ ನ ಬೆಲೆ ಎಷ್ಟು ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ತೈಲ ಮಾರುಕಟ್ಟೆ ಕಂಪನಿಗಳು ಇಂದು ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು 100 ರೂಪಾಯಿ ಇಳಿಸಿದೆ. 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರವನ್ನು ಕಡಿತಗೊಳಿಸಲಾಗಿದೆ. ಪ್ರತಿ ಸಿಲಿಂಡರ್​ ದರದಲ್ಲಿ 122 ರೂಪಾಯಿ ಇಳಿಕೆ ಮಾಡಲಾಗಿದೆ ಆದರೆ 14.2 ಕೆ.ಜಿ ಸಿಲಿಂಡರ್ ದರಗಳಲ್ಲಿ ಯಾವುದೆ ವ್ಯತ್ಯಾಸ ಕಂಡು ಬಂದಿಲ್ಲ. ಕೊರೋನ ವೈರಸ್ ನ ತೀವ್ರ ಹಾವಳಿಯ ನಡುವೆ ಜನರಿಗೆ ಈ ವಿಷಯ ಖಂಡಿತ ಖುಷಿ ಕೊಡುತ್ತದೆ. ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ಇಂದು 100 ರೂಪಾಯಿಗಳಷ್ಟು ಇಳಿಸಿವೆ ಅಲ್ಲದೆ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗೆ ಕಡಿತಗೊಳಿಸಲಾಗಿದೆ. ಪ್ರತಿ ಸಿಲಿಂಡರ್​ ದರದಲ್ಲಿ 122 ರೂಪಾಯಿ ಇಳಿಕೆ ಮಾಡಲಾಗಿದೆ ಆದರೆ 14.2 ಕೆ.ಜಿ ಸಿಲಿಂಡರ್ ದರಗಳಲ್ಲಿ ಯಾವುದೆ ವ್ಯತ್ಯಾಸ ಕಂಡುಬಂದಿಲ್ಲ.

ಈ ಎಲ್‌ಪಿಜಿ ಬೆಲೆ ಕಡಿತದ ನಂತರ ಜೂನ್ 1ರಿಂದ ಪ್ರತಿ ಸಿಲಿಂಡರ್‌ಗೆ ಪರಿಷ್ಕೃತ ಬೆಲೆ 1473.50 ರೂಪಾಯಿ ಆಗಲಿದೆ. ಈ ಹಿಂದೆ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್‌ಗೆ 1595.50 ರೂಪಾಯಿಯಷ್ಟು ಇತ್ತು. ಮೇ ತಿಂಗಳಲ್ಲಿ ತೈಲ ಕಂಪನಿಗಳು ಎಲ್‌ಪಿಜಿ ಅನಿಲ ಬೆಲೆಯನ್ನು ಒಂದು ಸಿಲಿಂಡರ್‌ಗೆ 45 ರೂಪಾಯಿಗೆ ಇಳಿಸಿವೆ ಎಂದು ವರದಿಯಾಗಿದೆ. ಎಲ್​ಪಿಜಿ ಅನಿಲ ಬೆಲೆ ನಗರದಿಂದ ನಗರಕ್ಕೆ ಮತ್ತು ರಾಜ್ಯದಿಂದ ರಾಜ್ಯಕ್ಕೆ ಸ್ಥಳೀಯ ತೆರಿಗೆ ಹಾಗೂ ವ್ಯಾಟ್​ಗೆ ಅನುಗುಣವಾಗಿ ಬದಲಾಗುತ್ತದೆ. ಪ್ರತಿ ತಿಂಗಳಿನ ಒಂದನೆ ತಾರೀಖು ತೈಲ ಕಂಪನಿ ಗ್ಯಾಸ್ ಸಿಲಿಂಡರ್ ದರವನ್ನು ನಿಗದಿಪಡಿಸುತ್ತದೆ. ಕೆಲವೊಮ್ಮೆ ತಿಂಗಳಿಗೆ ಎರಡು ಬಾರಿ ಸಿಲಿಂಡರ್ ದರವನ್ನು ನಿಗದಿಪಡಿಸುತ್ತದೆ. ಒಂದು ಕಡೆ ಗ್ಯಾಸ್ ಸಿಲಿಂಡರ್ ದರ ಇಳಿಕೆಯಾದರೆ ಇನ್ನೊಂದು ಕಡೆ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ ಕಂಡುಬಂದಿದೆ. ಪೆಟ್ರೋಲ್ ಬೆಲೆ 97 ರೂಪಾಯಿ ಮತ್ತು ಡಿಸೇಲ್ ಬೆಲೆ 90 ರೂಪಾಯಿ ಆಗಿದೆ.

2021ರ ಜೂನ್ ತಿಂಗಳಿನಲ್ಲಿ ಕೆಲವು ಮಹತ್ತರ ಬದಲಾವಣೆಗಳು ಕಂಡುಬರಲಿದೆ. ಬ್ಯಾಂಕಿಂಗ್ ಕ್ಷೇತ್ರ, ಸಣ್ಣ ಉಳಿತಾಯ ಯೋಜನೆಗಳಾದ ಸುಕನ್ಯಾ ಸಮೃದ್ಧಿ ಬಡ್ಡಿದರಗಳಲ್ಲಿ ಬದಲಾವಣೆಯಾಗಿದೆ. ಒಟ್ಟಿನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಮಾಡಿರುವುದು ಜನಸಾಮಾನ್ಯರಿಗೆ ಸ್ವಲ್ಪಮಟ್ಟಿಗೆ ಖುಷಿಕೊಟ್ಟಿದೆ. ಕೊರೋನ ವೈರಸ್ ನ ಹಾವಳಿಯಿಂದ ತತ್ತರಿಸಿದ ಜನರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿಯ ಉಸಿರು ಬಿಡುವಂತಾಗಿದೆ. ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಆದಾಯವಿಲ್ಲದೆ ಇರುವವರಿಗೆ ಸಿಲಿಂಡರ್ ನ ಹಣ ತುಂಬಲು ಕಷ್ಟವಾಗುತ್ತಿತ್ತು ಸಿಲಿಂಡರ್ ದರ ಇಳಿಕೆ ಮಾಡಿರುವುದರಿಂದ ಸಹಾಯವಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *