ರವಿಚಂದ್ರನ್ ಮಗಳು ಅಳಿಯ ಜೊತೆ ಎಂಜಾಯ್ ಮಾಡ್ತಿರೋ ವಿಡಿಯೋ

0 1

ಕನ್ನಡ ಚಿತ್ರರಂಗದಲ್ಲಿ ಅದ್ಭುತ ಪ್ರೇಮ ಲೋಕವನ್ನು ಸೃಷ್ಟಿಸಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಯುವಕರಿಂದ ಹಿಡಿದು ದೊಡ್ಡವರವರೆಗೆ ಅಭಿಮಾನಿಗಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿ ನಿರ್ದೇಶಕ, ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ರವಿಚಂದ್ರನ್ ಅವರ ಕುಟುಂಬದವರ ಬಗ್ಗೆ ಕೆಲವು ಸ್ವಾರಸ್ಯಕರ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಚಿತ್ರರಂಗದ ಬಣ್ಣದ ಲೋಕದಲ್ಲಿ ಕನಸನ್ನು ಕಟ್ಟಿಕೊಂಡು ನನಸು ಮಾಡಿದ ಕನಸುಗಾರ ವಿ. ರವಿಚಂದ್ರನ್ ಅವರು ಇತ್ತೀಚೆಗೆ ತಮ್ಮ 60ನೇ ವರ್ಷದ ಹುಟ್ಟು ಹಬ್ಬವನ್ನು ಮನೆಯಲ್ಲಿ ಸರಳವಾಗಿ ಆಚರಿಸಿಕೊಂಡರು. ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂದು ಅಭಿಮಾನಿಗಳು ಆಸೆಯನ್ನು ಹೊಂದಿದ್ದರು ಆದರೆ ಕೊರೋನ ಮಹಾಮಾರಿ ದೇಶದಾದ್ಯಂತ ಹರಡಿರುವುದರಿಂದ ರವಿಚಂದ್ರನ್ ಅವರು ತಮ್ಮ ಮನೆಯಲ್ಲಿ ಸರಳವಾಗಿ ಆಚರಿಸಿಕೊಂಡರು. ಅವರು ಮನೆಯಲ್ಲಿಯೇ ಕುಟುಂಬದವರೊಂದಿಗೆ ತಮ್ಮ ಮಕ್ಕಳಾದ ಮನೋರಂಜನ್, ವಿಕ್ರಂ, ಗೀತಾಂಜಲಿ, ಅಳಿಯ ಅಜಯ್, ಹೆಂಡತಿ ಸುಮತಿ ಹಾಗೂ ತಮ್ಮ ತಾಯಿಯವರೊಂದಿಗೆ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ರವಿಚಂದ್ರನ್ ಅವರ ಮೊದಲ ಮಗ ಮನೋರಂಜನ್ ರವಿಚಂದ್ರನ್ ಅವರಿಗೆ ಈಗ 33 ವರ್ಷ. ಆಕ್ಟಿಂಗ್ ನಲ್ಲಿ ತರಬೇತಿ ಪಡೆದಿದ್ದಾರೆ. ಸಾಹೇಬ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಬ್ರಹಸ್ಪತಿ ಪ್ರಾರಂಭ, ಮುಗಿಲುಪೇಟೆ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಇವರು ಸಿನಿಮಾದಲ್ಲಿ ನಟಿಸುವುದಲ್ಲದೆ ಕ್ರಿಕೆಟ್ ಆಟವನ್ನು ಚೆನ್ನಾಗಿ ಆಡುತ್ತಾರೆ. ಇವರು ತಮ್ಮ ಬಿಡುವಿನ ಸಮಯದಲ್ಲಿ ವರ್ಕೌಟ್ ಮಾಡುತ್ತಾರೆ. ಇವರಿಗೆ ಇವರ ತಾಯಿ ಸುಮತಿಯವರೆಂದರೆ ಬಹಳ ಇಷ್ಟ ಅವರೊಂದಿಗಿನ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರವಿಚಂದ್ರನ್ ಅವರ ಎರಡನೆ ಮಗ ವಿಕ್ರಂ ರವಿಚಂದ್ರನ್ ಅವರು ಚಿಕ್ಕವಯಸ್ಸಿನಲ್ಲಿಯೇ ನಟನೆಯ ಬಗ್ಗೆ ಆಸಕ್ತಿ ತೋರಿಸುತ್ತಿದ್ದರು ಅವರು ತ್ರಿವಿಕ್ರಮ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.

ರವಿಚಂದ್ರನ್ ಅವರ ಮುದ್ದಿನ ಮಗಳಾದ ಗೀತಾಂಜಲಿ ಅವರ ಮದುವೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಉದ್ಯಮಿ ಆಗಿರುವ ಅಜಯ್ ಅವರೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು. ಅಜಯ್ ಅವರ ಮನೆ ಯಲಹಂಕದಲ್ಲಿ ಇದೆ. ಮದುವೆಗೆ ರಾಕಿಂಗ್ ಸ್ಟಾರ್ ಯಶ್ ದಂಪತಿ, ಉಪೇಂದ್ರ, ಕಿಚ್ಚ ಸುದೀಪ್, ಶಿವಣ್ಣ, ರಜನಿಕಾಂತ್ ಮೊದಲಾದ ಸಿನಿಮಾರಂಗದ ಕಲಾವಿದರು ಹಾಗೂ ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯಾತಿ ಗಣ್ಯರು ಭಾಗವಹಿಸಿ ವಧು ವರರಗೆ ಆಶೀರ್ವಾದ ಮಾಡಿದ್ದಾರೆ. ರವಿಚಂದ್ರನ್ ಅವರು ತಮ್ಮ ಮಕ್ಕಳೊಂದಿಗೆ ಇರುವ ಫೋಟೋಗಳು, ಇತ್ತೀಚಿಗೆ ತಮ್ಮ ಅರವತ್ತನೆ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಫೋಟೋಸ್ ಅಲ್ಲದೆ ಅವರು ಕ್ರಿಕೆಟ್ ಆಡುತ್ತಿರುವ ಫೋಟೋಸ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಒಟ್ಟಿನಲ್ಲಿ ರವಿಚಂದ್ರನ್ ಅವರು ತಮ್ಮ ಮಕ್ಕಳೊಂದಿಗೆ ಎಂಜಾಯ್ ಮಾಡುತ್ತಿರುವ ಫೋಟೋಸ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ನೋಡಿ ಖುಷಿಪಡಬಹುದು. ರವಿಚಂದ್ರನ್ ಅವರು ಹಾಗೂ ಅವರ ಕುಟುಂಬದವರಿಗೆ ದೇವರು ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಆಶಿಸೋಣ.

Leave A Reply

Your email address will not be published.