Ultimate magazine theme for WordPress.

ದರ್ಶನ್ ಜೊತೆ ಅಭಿನಯಿಸಿದ್ದ ನಟಿ ಮಾನ್ಯ ಅಮೇರಿಕಾದಲ್ಲಿ ಇದ್ರೂ, ಮಗಳು ಕನ್ನಡ ಎಷ್ಟ್ ಚನ್ನಾಗೆ ಮಾತಾಡ್ತಾರೆ ನೋಡಿ

0 1

ಕನ್ನಡ ಚಿತ್ರರಂಗಕ್ಕೆ ಹಲವಾರು ಪರಭಾಷಾ ನಟಿಯರು ನಟಿಸಿದ್ದು ಕೆಲವೊಂದು ನಟಿಯರು ತಮ್ಮ ನಟನೆಯಿಂದ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಚತುರ್ಭಾಷಾ ನಟಿ ಎಂದು ಪ್ರಖ್ಯಾತಿ ಹೊಂದಿರುವ ಮಾನ್ಯ ಇವರು ಕನ್ನಡ ತೆಲುಗು ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ನಟಿಸಿದ ಫಿಲಂಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ

ಇವರು ಹುಟ್ಟಿದ್ದು ಇಂಗ್ಲೆಂಡ್ ಅಲ್ಲಿ ಆದರೂ ತಮ್ಮ ಕಿರಿ ವಯಸ್ಸಿನಲ್ಲಿ ದಕ್ಷಿಣ ಭಾರತಕ್ಕೆ ಬಂದು ನೆಲೆಸಿದ್ದರು ತಮ್ಮ 14 ನೇ ವಯಸ್ಸಿನಲ್ಲಿ ಮಾಡೆಲಿಂಗ್ ಶುರು ಮಾಡಿದ್ದು ಜೋಕರ್ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ್ದರು ಇದು ಮಳೆಯಾಳಂ ಚಿತ್ರವಾಗಿದ್ದು ಈ ಚಿತ್ರದ ಯಶಸ್ಸಿನ ನಂತರ ಹಲವಾರು ಮಲಯಾಳಂ ಚಿತ್ರಗಳಲ್ಲಿ ಹಾಗೂ ತೆಲುಗು ಕನ್ನಡ ಸಿನಿಮಾ ಚಿತ್ರಗಳಲ್ಲಿ ನಟಿಸಿದ್ದಾರೆ

ಡಾಕ್ಟರ್ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆ ನಾಯಕಿಯಾಗಿ ವರ್ಷ ಚಿತ್ರದಲ್ಲಿ ನಟಿಸಿದ್ದಾರೆ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಶಾಸ್ತ್ರಿ ಸಿನಿಮಾದಲ್ಲಿ ನಟಿಸಿ ಪ್ರಸಿದ್ಧಿಯಾಗಿದ್ದಾರೆ ಇವರ ನಾಟ್ಯ ವೈಖರಿ ನಟನೆ ಹಾಗೂ ಮುಗ್ಧತೆಯಿಂದ ಜನ ಮನ ಗೆದ್ದಿದ್ದು ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ 2008ರಲ್ಲಿ ಸತ್ಯಜಿತ್ ಜೊತೆಗೆ ವಿವಾಹವಾಗಿ 2012ರಲ್ಲಿ ಅವರಿಗೆ ವಿಚ್ಛೇದನ ನೀಡುತ್ತಾರೆ

ನಂತರ 2013ರಲ್ಲಿ ಉತ್ತರಪ್ರದೇಶದ ವಿಕಾಸ್ ವಾಜಪೇಯಿ ಅವರೊಂದಿಗೆ ವಿವಾಹವಾಗಿ ಅಮೆರಿಕಾದಲ್ಲಿ ನೆಲೆಸಿರುವ ಇವರಿಗೆ ಮುದ್ದಾದ ಹೆಣ್ಣು ಮಗುವಿದೆ ತನ್ನ ವೈವಾಹಿಕ ಜೀವನ ನಂತರ ಸಿನಿಮಾರಂಗದಿಂದ ದೂರವಿದ್ದು ಮದುವೆ ನಂತರ ಅಮೆರಿಕದಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ ಕೋಲಂಬಿಯ ಯುನಿವರ್ಸಿಟಿ ಯಲ್ಲಿ ಎಂಬಿ ಎ ಪದವಿಯನ್ನು ಪಡೆದಿದ್ದಾರೆ ಪ್ರಸ್ತುತ ಅಲ್ಲಿ ಒಂದು ಕಂಪನಿಯಲ್ಲಿ ಎಚ್ಆರ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ

ಹೊಸ ವರ್ಷ ಯುಗಾದಿ ಹಬ್ಬವನ್ನು ತಮ್ಮ ಮಗಳೊಂದಿಗೆ ಆಚರಿಸುತ್ತ ಎಲ್ಲ ಅಭಿಮಾನಿಗಳಿಗೂ ಹೊಸ ವರ್ಷದ ಶುಭಾಶಯ ಹಾರೈಸಿದ್ದಾರೆ ಇನ್ನು ಅಮೆರಿಕದಲ್ಲಿ ನೆಲೆಸಿದ್ದರೂ ಕೂಡ ತಮ್ಮ ಕನ್ನಡ ಭಾಷಾಭಿಮಾನವನ್ನು ಮರೆಯದೆ ತಮ್ಮ ಮಗಳು ಒಮಿಸ್ಕಾಗು ಕನ್ನಡ ಭಾಷೆಯ ಪರಿಚಯ ಮಾಡಿಸಿದ್ದು ಮುದ್ದಾಗಿ ಒಮಿಸ್ಕ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಎಂದು ತನ್ನ ಬಲಭಷೆಯಲ್ಲಿ ಹರಿಸಿ ಜಾಸ್ತಿ ಬೆಲ್ಲ ಉಪ್ಪು ಬೇವು ಕಾರ ಹುಳಿ ಹಾಗೂ ಮಾವಿನ ಕಾಯಿ ಸೇರಿಸಿ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಗಳು ನೀಡಿದ ಬೆಳ್ಳಿ ಬಟ್ಟಲಲ್ಲಿ ಪಚಡಿ ಮಾಡುವುದನ್ನು ಮಾನ್ಯ ಅವರ ಮಗಳು ಸೇರಿ ಮಾಡಿದ್ದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ

ಇನ್ನು ಆ ಪುಟ್ಟ ಹುಡುಗಿಯ ಮುದ್ದಾದ ಕನ್ನಡ ಮಾತುಗಳು ಕೇಳ್ತಾನೆ ಇರ್ಬೇಕು ಅನಿಸುತ್ತೆ ಜೊತೆಗೆಮುದ್ದು ಮುದ್ದಾಗಿ ದರ್ಶನ್ ದಂಪತಿಗಳಿಗೆ ಶುಭಹಾರೈಕೆಗಳು ಮತ್ತು ಧನ್ಯವಾದ ತಿಳಿಸಿದ್ದಾರೆ ಈ ವಿಡಿಯೋ ತುಂಬಾನೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ

Leave A Reply

Your email address will not be published.