ಯಶ್ ಹಾಗೂ ದರ್ಶನ್ ಇಬ್ಬರಲ್ಲಿ ಈಗ ಬಾಸ್ ಯಾರು? ಕನ್ನಡ ಚಿತ್ರರಂಗದಲ್ಲಿ ಹೊಸ ಚರ್ಚೆ ಶುರು

0 4

ಕನ್ನಡ ಚಿತ್ರರಂಗದಲ್ಲಿ ಈಗ ಕೆಜಿಎಫ್ ನದ್ದೆ ಗದ್ದಲ. ಕೆಜಿಎಫ್ ಸಿನಿಮಾದಿಂದ ಬೇರೆ ಚಿತ್ರರಂಗದವರು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈಗ ಎಲ್ಲರ ಬಾಯಲ್ಲೂ ಯಶ್ ಅವರ ಸುದ್ದಿಯೆ, ಅವರ ಅಭಿಮಾನಿಗಳಿಗಂತೂ ಹಬ್ಬದಂತಾಗಿದೆ. ಯಶ್ ಅವರ ಅಭಿಮಾನಿಗಳು ಯಶ್ ಬಾಸ್ ಎಂದೆ ಟೈಟಲ್ ಕೊಟ್ಟಿದ್ದಾರೆ ಇದನ್ನು ನೋಡಿ ದರ್ಶನ್ ಅವರ ಅಭಿಮಾನಿಗಳು ಅಭಿಯಾನ ಪ್ರಾರಂಭಿಸಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಸ್ಯಾಂಡಲ್‌ವುಡ್‌ನಲ್ಲಿ ಬಾಸ್ ಟೈಟಲ್ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ಬಾಸ್ ಯಾರು ಎನ್ನುವ ಬಗ್ಗೆ ಅಭಿಮಾನಿಗಳ ನಡುವೆ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದೆ. ಯಶ್ ಮತ್ತು ದರ್ಶನ್ ಅಭಿಮಾನಿಗಳು ಈ ವಾಗ್ವಾದಕ್ಕೆ ಇಳಿದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಆಗಾಗ ಫ್ಯಾನ್ಸ್ ವಾರ್ ಸದ್ದು ಮಾಡುತ್ತಲೆ ಇರುತ್ತದೆ. ಸ್ಟಾರ್ ನಟರ ಅಭಿಮಾನಿಗಳು ಒಂದಲ್ಲಾ ಒಂದು ವಿಚಾರಕ್ಕೆ ವಾರ್‌ಗೆ ಇಳಿಯುತ್ತಾ ಇರುತ್ತಾರೆ. ಈಗ ಮತ್ತೆ ಫ್ಯಾನ್ ವಾರ್ ಜೋರಾಗಿದೆ. ನಮ್ಮ ನಟ ಹೆಚ್ಚು, ನಮ್ಮ ನಟ ಹೆಚ್ಚು ಎನ್ನುವ ವಾದ, ವಿವಾದ ಶುರುವಾಗಿದೆ. ದರ್ಶನ್ ಮತ್ತು ಯಶ್ ಅಭಿಮಾನಿಗಳು ಈಗ ಫ್ಯಾನ್ಸ್ ವಾರ್‌ಗೆ ಇಳಿದಿದ್ದಾರೆ.

ಅಭಿಮಾನಿಗಳು ತಮ್ಮ ಸ್ಟಾರ್ ನಟರಿಗೆ ಬಾಸ್ ಎನ್ನುವುದು ಸಾಮಾನ್ಯ ಆದರೆ ಈಗ ಚಿತ್ರರಂಗದ ಬಾಸ್ ಯಾರು ಎನ್ನುವ ಬಗ್ಗೆ ಫ್ಯಾನ್‌ ವಾರ್ ಶುರುವಾಗಿದೆ. ದರ್ಶನ್ ಅಭಿಮಾನಿಗಳು, ಯಶ್ ಅಭಿಮಾನಿಗಳು ತಮ್ಮ ನಟರ ಪರವಾಗಿ ಅಭಿಯಾನ ಶುರು ಮಾಡಿದ್ದಾರೆ. ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಲೀಸ್ಟ್ ಸೇರಿದೆ. ಕೆಜಿಎಫ್ ಮೊದಲ ದಿನದ ಕಲೆಕ್ಷನ್ ಮೂಲಕ ಹೊಸ ಇತಿಹಾಸ ಬರೆದಿದೆ. ಈ ಚಿತ್ರದ ಬಗ್ಗೆ ಹಾಗೂ ಯಶ್ ಬಗ್ಗೆ ಪೋಸ್ಟ್‌ಗಳನ್ನು ಹಂಚಿಕೊಂಡ ಯಶ್ ಅಭಿಮಾನಿಗಳು ಯಶ್ ಹೆಸರಿನ ಜೊತೆಗೆ ಬಾಸ್ ಎನ್ನುವ ಟೈಟಲ್ ಸೇರಿಸಿದ್ದಾರೆ. ಹೆಚ್ಚು ಜನ ಯಶ್ ಬಾಸ್ ಎನ್ನುವ ಟ್ಯಾಗ್ ಬಳಸಿದ್ದಾರೆ. ಹಾಗಾಗಿ ಖಾಸಗಿ ಮಾಧ್ಯಮವೊಂದು ಸಹ ಯಶ್ ಈಗ ಹೊಸ ಬಾಸ್ ಎಂದು ವರದಿ ಮಾಡಿದೆ. ಆದರೆ ಬಹಳ ಹಿಂದಿನಿಂದಲೂ ನಟ ದರ್ಶನ್ ಅವರಿಗೆ ಹೆಚ್ಚಾಗಿ ಬಾಸ್ ಎನ್ನುವ ಟೈಟಲ್ ಬಳಕೆ ಆಗಿದೆ.

ಇನ್ನು ಗೂಗಲ್‌ ಕೂಡ ಭಾರತೀಯ ಚಿತ್ರರಂಗದ ಬಾಸ್ ದರ್ಶನ್ ಎಂದು ಹೇಳುತ್ತದೆ. ಈಗಲೂ ಗೂಗಲ್‌ನಲ್ಲಿ ಭಾರತೀಯ ಚಿತ್ರರಂಗದ ಬಾಸ್ ಯಾರು, ಕರ್ನಾಟಕ ಚಿತ್ರರಂಗದ ಬಾಸ್ ಯಾರು, ವರ್ಲ್ಡ್ ಚಿತ್ರರಂಗಕ್ಕೆ ಬಾಸ್ ಯಾರು ಎಂದು ಪ್ರಶ್ನೆ ಮಾಡಿದರೆ, ಅದು ಕನ್ನಡದ ನಟ ದರ್ಶನ್ ಹೆಸರನ್ನು ಹಾಗೂ ದರ್ಶನ್ ಪ್ರೊಪೈಲ್ ತೋರಿಸುತ್ತದೆ ಅಲ್ಲದೆ ದರ್ಶನ್ ಕುರಿತ ಸುದ್ದಿಗಳು ಕಾಣ ಸಿಗುತ್ತವೆ. ಈ ವಿಚಾರಕ್ಕೆ ಈಗ ನಟ ದರ್ಶನ್ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಯಶ್ ಬಾಸ್ ಎನ್ನುವ ಟೈಟಲ್ ವೈರಲ್ ಆಗುತ್ತಿದೆ ಎನ್ನುವ ವಿಚಾರ ಬಂದಾಗ ದರ್ಶನ್ ಅಭಿಮಾನಿಗಳು ಅಖಾಡಕ್ಕೆ ಇಳಿದಿದ್ದಾರೆ.

ಬಾಸ್ ಅಂದರೆ ಅದು ಕೇವಲ ದರ್ಶನ್ ಮಾತ್ರ ಎನ್ನುವುದರ ಜೊತೆಗೆ ಸಾಕಷ್ಟು ಕಮೆಂಟ್‌ಗಳನ್ನು ಮಾಡಿದ್ದಾರೆ ಅಲ್ಲದೆ ಡಿ ಬಾಸ್ ಎನ್ನುವ ಅಭಿಯಾನವನ್ನು ಶುರು ಮಾಡಿದ್ದಾರೆ. ಡಿ ಬಾಸ್ ಎನ್ನುವ ಹೆಸರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಚಾರವಾಗಿ ಯಶ್ ಬಾಸ್ ಎನ್ನುವ ಹೆಸರು ಕೂಡ ಟ್ರೋಲ್ ಆಗುತ್ತಿದೆ. ಇಬ್ಬರ ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗೆ ಸಾಥ್ ನೀಡುತ್ತಾ, ಅವರೆ ಬಾಸ್ ಎನ್ನುತ್ತಾ ಇದ್ದಾರೆ. ಒಟ್ಟಿನಲ್ಲಿ ದರ್ಶನ್ ಹಾಗೂ ಯಶ್ ಇವರಲ್ಲಿ ಬಾಸ್ ಯಾರು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ನಿಮ್ಮ ಪ್ರಕಾರ ಯಾರು ಬಾಸ್ ಎಂಬುದನ್ನು ಕಮೆಂಟ್ ಮಾಡಿ.

Leave A Reply

Your email address will not be published.