ಡಾನ್ಸ್ ಮಾಡಿ ಅಮ್ಮನ್ನು ಸತಾಯಿಸುತ್ತಿರುವ ನಟಿ ಹರಿಪ್ರಿಯಾ ವಿಡಿಯೋ

0 2

ಹರಿಪ್ರಿಯಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟಿಯರಲ್ಲಿ ಇವರೂ ಸಹ ಒಬ್ಬರು. ಇವರ ಬಾಲ್ಯದ ಹೆಸರು ಶೃತಿ. ವಿದ್ಯಾಮಂದಿರ ಶಾಲೆಯಲ್ಲಿ ತಮ್ಮ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದ ಇವರು ನೃತ್ಯದಲ್ಲಿ ತುಂಬಾ ಆಸಕ್ತಿ ಇದ್ದ ಕಾರಣರಿಂದ ಭರತ ನಾಟ್ಯ ತರಬೇತಿಗೆ ಸೇರಿಕೊಂಡರು. ಭರತ ನಾಟ್ಯ ಕಲಿತ ನಂತರ ಹಲವಾರು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆಯನ್ನೂ ಸಹ ಪಡೆದರು. ಒಮ್ಮೆ ಇವರ ಭರತನಾಟ್ಯದ ಚಿತ್ರಗಳನ್ನು ಗಮನಿಸಿದ ಚಲನಚಿತ್ರ ನಿರ್ದೇಶಕ ರಿಚರ್ಡ್ ಇವರಿಗೆ 2008 ರಲ್ಲಿ ತುಳು ಚಿತ್ರ ಒಂದರಲ್ಲಿ ಅಭಿನಯಿಸಲು ಅವಕಾಶ ಕೊಟ್ಟರು. ಈ ಮೂಲಕ ಚಲನ ಚಿತ್ರಗಳಲ್ಲಿ ಅಭಿನಯ ಮಾಡಲು ಆರಂಭಿಸಿದ ಹರಿಪ್ರಿಯಾ ಅವರು 2008 ರಲ್ಲಿ ತೆರೆಕಂಡ ಮನಸುಗಳ ಮಾತು ಮಧುರ ಎಂಬ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ಕನ್ನಡ ಚಲನಚಿತ್ರ ರಂಗಕ್ಕೂ ಪಾದಾರ್ಪಣೆ ಮಾಡಿದರು. ಇದಾದ ನಂತರ ಕಳ್ಳರ ಸಂತೆ , ಚೆಲುವೆಯೇ ನಿನ್ನ ನೋಡಲು , ಬೆಲ್ ಬಾಟಮ್ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿ ಕೆಲವು ತೆಲುಗು ಮಲಯಾಳಂ ಹಾಗೂ ತುಳು ಚಿತ್ರಗಳಲ್ಲಿ ಕೂಡ ನಟನೆ ಮಾಡಿದ್ದಾರೆ.

ಹರಿಪ್ರಿಯಾ ಮಲಯಾಳಂನಲ್ಲಿ ತಿರುವಂಬಾಡಿ ಥಂಪನ್ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಕೂಡಾ ಮಿಂಚಿದರು. ಅವರ ಮೂರನೆಯ ತೆಲುಗು ಚಿತ್ರ ಅಬ್ಬಾಯಿ ಕ್ಲಾಸ್ ಅಮ್ಮಾಯಿ ಮಾಸ್ನಲ್ಲಿ ಅವರು ಅಭಿನಯಿಸುವ ಹುಡುಗಿ ಪಾತ್ರದಲ್ಲಿ ತೊಡಗಿಕೊಳ್ಳಲು ಎರಡು ವಾರಗಳ ಕಾಲ ಕಾರ್ಯಾಗಾರವನ್ನು ಸಹ ಮಾಡಿದರು. 2014 ರಲ್ಲಿ ತೆರೆಕಂಡ ಶ್ರೀ ಮುರಳಿ ಅಭಿನಯದ ಚಿತ್ರ ಉಗ್ರಮ್ ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದರು. ಉಗ್ರಂ ಯಶಸ್ವಿ ನಂತರ ಅವರು ದೊಡ್ಡ ಬ್ಯಾನರ್ ಚಲನಚಿತ್ರಗಳಾದ ಸುದೀಪ್ ಅಭಿನಯದ ರನ್ನ ಮತ್ತು ರಕ್ಷಿತ್ ಶೆಟ್ಟಿ ಅಭಿನಯದ ರಿಕ್ಕಿ ಚಲನಚಿತ್ರಗಳು ಮತ್ತು ಹಾಸ್ಯ ಚಲನಚಿತ್ರವಾದ ಶರಣ್ ಅಭಿನಯದ ಬುಲೆಟ್ ಬಸ್ಯ ಚಿತ್ರಗಳಲ್ಲಿ ಕೂಡಾ ಅಭಿನಯ ಮಾಡಿದರು.

ಇನ್ನು ಕೊರೋನದಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿ ನಲುಗುತ್ತಿದೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರು ಸಿಲೆಬ್ರೆಟಿಗಳು ಸ್ಯಾಂಡಲ್ ವುಡ್ ನಟಿಯರು ಸಹ ಮನೆಯಲ್ಲೇ ಇದ್ದಾರೆ. ಹೀಗಿದ್ದಾಗ ಕ್ರಿಯಾಶೀಲ ನಟಿ ಹರಿಪ್ರಿಯಾ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಬರವಣಿಗೆಯ ಮೂಲಕ ಜನರಿಗೆ ಸಂದೇಶ ರವಾನಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. Babe knows ಎಂಬ ಬ್ಲಾಗ್ ಮೂಲಕ ಪರ್ಸ್ನಲ್ ಮತ್ತು ಪ್ರೊಫೆಷ್ನಲ್ ವಿಷಯಗಳನ್ನು ನಟಿ ಹರಿಪ್ರಿಯಾ ಬರೆಯುತ್ತಿದ್ದಾರೆ. ತನ್ನ ಕೊರೋನಾ ಟೈಮ್ ಅನ್ನು ಬರವಣಿಗೆಯ ಮೂಲಕ ಹೀಗೂ ಕಾಲ ಕಳೆಯಬಹುದು ಎನ್ನುವುದನ್ನು ಹರಿಪ್ರಿಯಾ ತೋರಿಸಿಕೊಟ್ಟಿದ್ದಾರೆ. ಬರವಣಿಗೆ ಆರಂಭಿಸಿದ ಹರಿಪ್ರಿಯಾ ಅವರ ಬ್ಲಾಗ್ ನಲ್ಲಿ ಬರೆದ ಮೊದಲ ಲೇಖನ ಕೊರೋನಾ ಬಗ್ಗೆಯೇ ಆಗಿತ್ತು. ಕೋವಿಡ್ 19 ನಮ್ಮೆಲ್ಲರನ್ನು ಹುಚ್ಚು ಹಿಡಿಯುವ ಏಕಾಂಗಿ ಬದುಕಿಗೆ ದೂಡಿಬಿಟ್ಟಿದೆ. ಈ ಲಾಕ್‍ಡೌನ್ ಜನರ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಹೀಗಿದ್ದರೂ, ನಮ್ಮಲ್ಲಿ ಕೆಲವರು ಬಂಧನದಲ್ಲೂ ಸ್ವಾತಂತ್ರ್ಯವನ್ನು ಅನ್ವೇಷಿಸುವ ಸ್ವಭಾವವುಳ್ಳವರು ಇರುತ್ತಾರೆ ಇಂತಹವರಿಗೆ ಲಾಕ್‍ಡೌನ್ ಬದುಕು ಒಂದು ಹೊಸ ಅಧ್ಯಾಯವನ್ನೇ ತೆರೆದಿಟ್ಟಿದೆ. ಜಗತ್ತನ್ನು ಕಾಡುತ್ತಿರುವ ಈ ನವೀನ ವೈರಸ್ ಇಂತಹವರಿಗೆ ಹೊಸದೊಂದು ಪ್ರಪಂಚವನ್ನು ನೋಡಲು ಅವಕಾಶ ನೀಡುತ್ತಿರುವುದು ದಿಟವಾಗಿದೆ. ನನ್ನಂತಹ ಕೆಲಸ ಕೆಲಸ ಎನ್ನುವ ಸ್ವಭಾವದವಳಿಗೆ, ಈ ಬಂಧನ ಕಷ್ಟಕರವಾದುದು. ಎಂದು ಬರೆದುಕೊಂಡಿದ್ದಾರೆ. ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿ ಇರುವ ಹರಿಪ್ರಿಯಾ ಅವರು ತಮ್ಮ ತಾಯಿಯ ಜೊತೆ ಸಂತಸದ ಕ್ಷಣಗಳನ್ನು ಕಳೆದ ಕೆಲವು ಫೋಟೋಗಳು ಹಾಗೂ ತಾಯಿಯ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿದೆ

Leave A Reply

Your email address will not be published.