Ultimate magazine theme for WordPress.

ಇವನದ್ದು ಹೀರೊ ಆಗೋ ಮುಖನ ಅಂದೊರೆ ಇವತ್ತು ನನ್ನ ಮನೆ ಕಾಯ್ತಿದಾರೆ

0 0

2018 ರಲ್ಲಿ ಸಿನಿ ಮ್ಯಾಕ್ಸಿನ್ ಹೊರಡಿಸಿದ ಟಾಪ್ ಟೆನ್ ಇಂಡಿಯನ್ ಸ್ಟಾರ್ ನಟರಲ್ಲಿ ಧನುಷ್ ಅವರು ಒಬ್ಬರು. ಅವರು ನಟನೆಯಲ್ಲಿ ಮಾತ್ರವಲ್ಲದೆ ಕಥೆ, ನಿರ್ದೇಶನ, ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಲಿವುಡ್ ನಿಂದ ಹಾಲಿವುಡ್ ವರೆಗೆ ಧನುಷ್ ಅವರು ಫೇಮಸ್ ಆಗಿದ್ದಾರೆ. ಪ್ರಾರಂಭದಲ್ಲಿ ಅವಮಾನ ಮಾಡಿದವರು ಇಂದು ಹೊಗಳುತ್ತಿದ್ದಾರೆ. ಹಾಗಾದರೆ ಧನುಷ್ ಅವರ ಪ್ರಾರಂಭದ ಜೀವನ ಹಾಗೂ ಅವರ ಸಿನಿಮಾ ಜೀವನದ ಬಗ್ಗೆ ಕೆಲವು ಸ್ವಾರಸ್ಯಕರ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಧನುಷ್ ಅವರು 1983, ಜುಲೈ 28 ರಂದು ಕಸ್ತೂರಿ ರಾಜನ್ ಹಾಗೂ ವಿಜಯಲಕ್ಷ್ಮೀ ಎಂಬ ದಂಪತಿಯ ಮಗನಾಗಿ ತಮಿಳುನಾಡಿನಲ್ಲಿ ಸಾಧಾರಣ ಕುಟುಂಬದಲ್ಲಿ ಜನಿಸಿದ್ದಾರೆ. ಕಸ್ತೂರಿ ರಾಜನ್ ಅವರು ತಮಿಳು ಸಿನಿಮಾ ನಿರ್ದೇಶಕರಾಗಿದ್ದರು. ಧನುಷ್ ಅವರ ಮೂಲ ಹೆಸರು ವೆಂಕಟೇಶ್ವರ ಪ್ರಭು ಕಸ್ತೂರಿ ರಾಜನ್. ಇವರಿಗೆ ಇಬ್ಬರು ಸಹೋದರಿಯರು ಹಾಗೂ ಒಬ್ಬ ಸಹೋದರನಿದ್ದು ಅವರು ತಮಿಳು ಮತ್ತು ತೆಲುಗಿನಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಮೊದಲು ಧನುಷ್ ಅವರು ಬಹಳ ಕಷ್ಟಪಟ್ಟಿದ್ದಾರೆ. ಇವರ ತಂದೆ ಪ್ರಾರಂಭದಲ್ಲಿ ಕಥೆ ಬರೆದು ನಿರ್ದೇಶಕರ, ನಿರ್ಮಾಪಕರ ಹಿಂದೆ ಅಲೆಯುತ್ತಿದ್ದರು ನಂತರ ಸಹಾಯಕ ನಿರ್ದೇಶಕರಾದರು ಅವರು ಮಕ್ಕಳನ್ನು ಒಳ್ಳೆಯ ಸ್ಕೂಲಿಗೆ ಸೇರಿಸಿದರು. ಮೊದಲು ಧನುಷ್ ಅವರು ಉತ್ತಮ ವಿದ್ಯಾರ್ಥಿಯಾಗಿದ್ದು ನಂತರ ಪ್ರೇಮಪಾಶದಲ್ಲಿ ಸಿಲುಕಿ ಓದಿನಲ್ಲಿ ಹಿಂದೆ ಉಳಿದರು. ಧನುಷ್ ಅವರ ತಂದೆ ನಿರ್ದೇಶಕರಾಗಿದ್ದರಿಂದ ತಮ್ಮ ಮಕ್ಕಳನ್ನು ಸಿನಿಮಾದಲ್ಲಿ ಸ್ಟಾರ್ ಮಾಡಬೇಕೆಂದು ಆಸೆ ಪಟ್ಟರು. ಅವರು ತಮ್ಮ ಆಸೆಯನ್ನು ಮಕ್ಕಳ ಬಳಿ ಹೇಳಿಕೊಂಡಾಗ ಧನುಷ್ ಅವರು ನಿರಾಕರಿಸಿದರು. ಜನರಿಗೆ ಇಷ್ಟವಾಗುವ ಕ್ವಾಲಿಟಿ ನನಗೆ ಇಲ್ಲ ಎಂದು ಹೇಳಿದರು, ಆದರೆ ತಂದೆ ಓದಿನಲ್ಲಿ ಆಸಕ್ತಿ ಇಲ್ಲ, ಸಿನಿಮಾದ ಕಡೆ ಆದರೂ ಗಮನ ಹರಿಸಲು ತಮ್ಮ ಹೊಸ ಕಥೆಗೆ ಧನುಷ್ ಅವರನ್ನು ಹೀರೊ ಆಗಿ ಆಯ್ಕೆ ಮಾಡಿ ತಾವೆ ನಟನೆಯ ಬಗ್ಗೆ ಮಗನಿಗೆ ಹೇಳಿಕೊಡುತ್ತಾರೆ. ಈ ಸಿನಿಮಾದಿಂದ ಅವರ ಮೂಲ ಹೆಸರು ಹೋಗಿ ಅವರ ಹೆಸರು ಧನುಷ್ ಆಗುತ್ತದೆ. ಇವರ ನಟನೆಗೆ ಕಳಪೆ ಮಟ್ಟದ ಪ್ರತಿಕ್ರಿಯೆ ಬಂದಿತು ಇದರಿಂದ ಧನುಷ್ ಬೇಸರ ವ್ಯಕ್ತಪಡಿಸಿದರು, ಆಗ ಕಸ್ತೂರಿ ರಾಜನ್ ಹುರಿದುಂಬಿಸುತ್ತಾರೆ.

ನಂತರ ಅವರ ಹಿರಿಯ ಸಹೋದರ ತಾನು ಬರೆದ ಕಥೆಗೆ ಧನುಷ್ ಅವರನ್ನು ನಟನಾಗಿ ಆಯ್ಕೆ ಮಾಡುತ್ತಾರೆ. ಈ ಸಿನಿಮಾ ಸೂಪರ್ ಹಿಟ್ ಆಗುತ್ತದೆ. ಧನುಷ್ ಅವರ ನಟನೆಗೆ ರಜನಿಕಾಂತ್ ಅವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ರಜನಿಕಾಂತ್ ಅವರ ಮಗಳಾದ ಐಶ್ವರ್ಯ ಹಾಗೂ ಧನುಷ್ ಒಂದು ಸಂದರ್ಶನದ ಮೂಲಕ ಪರಿಚಯವಾಗಿ ಪ್ರೀತಿಯಾಗಿ ಐಶ್ವರ್ಯ ಅವರು ರಜನಿಕಾಂತ್ ಅವರ ಬಳಿ ಹೇಳಿಕೊಂಡಾಗ ರಜನಿಕಾಂತ್ ಅವರು ಮದುವೆಗೆ ಒಪ್ಪಿ 2004 ರಲ್ಲಿ ಮದುವೆಯಾಗುತ್ತಾರೆ. ನಂತರ ಅನೇಕ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಜನಪ್ರಿಯ ನಟರಾಗಿ ಗುರುತಿಸಿಕೊಳ್ಳುತ್ತಾರೆ. ಅವರು ತಮ್ಮ ನಟನೆಗೆ ನ್ಯಾಷನಲ್ ಅವಾರ್ಡ್, ತಮಿಳುನಾಡು ಸ್ಟೇಟ್ ಅವಾರ್ಡ್, ಫಿಲ್ಮ್ ಫೇರ್ ಅವಾರ್ಡ್ ಪಡೆದಿದ್ದಾರೆ. 2012 ರಲ್ಲಿ ಐಶ್ವರ್ಯ ಅವರು ಮೊದಲ ಬಾರಿಗೆ ನಿರ್ದೇಶಿಸಿದ ತ್ರಿ ಸಿನಿಮಾದಲ್ಲಿ ಧನುಷ್ ಅವರು ನಟಿಸಿ ಅಂತಾರಾಷ್ಟ್ರೀಯ ಖ್ಯಾತಿ ಪಡೆಯುತ್ತಾರೆ. ಇವರು ಹಿಂದಿ ಭಾಷೆಯಲ್ಲಿ ಕೂಡ ನಟಿಸಿದ್ದಾರೆ. ಹೀಗೆ ಹಿಟ್ ಸಿನಿಮಾ ಮಾಡುತ್ತಾ ದಕ್ಷಿಣ ಭಾರತದ ಫೇಮಸ್ ನಟರಾಗುತ್ತಾರೆ. ಧನುಷ್ ಅವರು ತಮ್ಮದೆ ಕಥೆಗೆ ನಿರ್ದೇಶನ ಮಾಡುತ್ತಾರೆ ಈ ಚಿತ್ರ ತಮಿಳಿನಲ್ಲಿ ಸೂಪರ್ ಹಿಟ್ ಆಗುತ್ತದೆ. ಇದುವರೆಗೂ 44 ಚಿತ್ರಗಳಲ್ಲಿ ನಟಿಸಿದ ಅವರು ಕಡಿಮೆ ಸಮಯದಲ್ಲಿ 4 ರಾಷ್ಟ್ರ ಪ್ರಶಸ್ತಿ, 7 ಫಿಲ್ಮ್ ಫೇರ್ ಅವಾರ್ಡ್, ಸೈಮಾ ಅವಾರ್ಡ್ ಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ, ಅಲ್ಲದೆ ಬಹು ಬೇಡಿಕೆಯ ನಟರಾಗಿದ್ದಾರೆ. ಧನುಷ್ ಅವರು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ, ಹೆಚ್ಚಿನ ಯಶಸ್ಸನ್ನು ಪಡೆಯಲಿ ಎಂದು ಆಶಿಸೋಣ.

Leave A Reply

Your email address will not be published.