ಒಂದು ಸಿನಿಮಾದ ಹೀರೋಯಿನ್ ಅಂದರೆ ಹೀಗೆ ಇರಬೇಕು ಹಾಗೇ ಇರಬೇಕು ಎನ್ನುವ ಒಂದು ರೀತಿಯ ಚಿತ್ರಣವನ್ನು ನಾವು ರೂಢಿಸಿಕೊಂಡಿದ್ದೇವೆ. ಒಂದು ಸಿನಿಮಾಗೆ ನಟಿಯರ ಆಯ್ಕೆ ಮಾಡಿಕೊಳ್ಳುವಾಗ ಕೂಡಾ ಇದೇ ರೀತಿ ಅನ್ವಯ ಆಗುತ್ತದೆ. ಚಿತ್ರದ ಆರಂಭದಲ್ಲಿ ಬಹಳಷ್ಟು ಸ್ಲಿಮ್ ಆಗಿ ಕಾಣುವ ನಟಿಯರು ನಂತರದ ದಿನಗಳಲ್ಲಿ ಬಹಳಷ್ಟು ದಪ್ಪ ಆಗುವುದೂ ಉಂಟು. ಅದಕ್ಕೆ ಹಲವಾರು ಕಾರಣಗಳು ಇವೆ. ನಾವಿಲ್ಲಿ ನಮಗೆ ಗುರುತೇ ಸಿಗದಷ್ಟು ಬದಲಾದ ಕೆಲವು ನಟಿಯರ ಬಗ್ಗೆ ತಿಳಿದುಕೊಳ್ಳೋಣ.

ಶಾಸ್ತ್ರಿ ಚಿತ್ರದ ಮೂಲಕ ಕನ್ನಡಿಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದ ನಟಿ ಮಾನ್ಯ ಮದುವೆ ಆಗಿ ಕುಟುಂಬದ ಜೊತೆ ಅಮೆರಿಕಾದಲ್ಲಿ ವಾಸವಾಗಿದ್ದು ಈಗ ಅಲ್ಲಿಯೇ ಕೆಲಸಕ್ಕೂ ಸಹ ಸೇರಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರ ಜೊತೆ ರಾಜ್ ಚಿತ್ರದಲ್ಲಿ ನಟಿಸಿದ ನಟಿ ನಿಶಾ ಕೊಠಾರಿ ಮದುವೆ ಆಗಿ ನಂತರ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

ಗಡಿಬಿಡಿ ಅಳಿಯ ಹಾಗೂ ಲಾಲಿ ಚಿತ್ರಗಳ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟಿ ಮೋಹಿನಿ ಈಗ ಅಮೆರಿಕಾದಲ್ಲಿ ನೆಲೆಸಿದ್ದು, ಶೋಷಿತ ಮಹಿಳೆಯರ ಅಭ್ಯುದಾಯಕ್ಕಾಗಿ ಶ್ರಮಿಸುತ್ತಾ ಇದ್ದಾರೆ. ದುರ್ಗದ ಹುಲಿ , ಪಾಪಿಗಳ ಲೋಕದಲ್ಲಿ ಹಾಗೂ ಇನ್ನೂ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ ನಟಿ ವಿನೀತ ಈಗ ಗುರುತು ಸಿಗದೇ ಇರುವಷ್ಟು ಬದಲಾಗಿದ್ದಾರೆ.

ಉಪೇಂದ್ರ ಅವರ ಓಂಕಾರ ಚಿತ್ರದಲ್ಲಿ ಲವ್ಲಿ ಲುಕ್ ನಲ್ಲಿ ಕಾಣಿಸಿಕೊಂಡ ನಟಿ ಪ್ರೀತಿ ಈಗ ಮದುವೆಯಾಗಿ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಶಿವರಾಜ್ ಕುಮಾರ್ ಅವರ ಗಡಿಬಿಡಿ ಕೃಷ್ಣ ಚಿತ್ರದಲ್ಲಿ ಬಬ್ಲಿ ಲುಕ್ ನಲ್ಲಿ ಕಾಣಿಸಿಕೊಂಡ ನಟಿ ರವಳಿ ಈಗ ಗುರುತು ಸಿಗದೇ ಇರುವ ಹಾಗೆ ಬದಲಾಗಿದ್ದಾರೆ.

ಆಗಿನ ಕಾಲದಲ್ಲಿ ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದ್ದ ನಟಿ ಸರಿತಾ ಈಗ ದುಬೈ ನಲ್ಲಿ ವಾಸವಾಗಿದ್ದಾರೆ. ಮೌರ್ಯ, ಅರಸು ಚಿತ್ರಗಳಲ್ಲಿ ನಟಿಸಿದ್ದ ನಟಿ ಮೀರಾ ಜಾಸ್ಮಿನ್ ಗಂಡನಿಗೆ ವಿಚ್ಛೇದನ ನೀಡಿ ಮತ್ತೆ ಚಿತ್ರರಂಗಕ್ಕೆ ಬರಲು ಕಸರತ್ತು ಮಾಡುತ್ತಾ ಇದ್ದಾರೆ.

ಸುದೀಪ್ ಅವರ ಮೈ ಆಟೋಗ್ರಾಫ್ ಚಿತ್ರದಲ್ಲಿ ನಟಿಸಿ ಲವ್ ಟ್ರ್ಯಾಕ್ ನಲ್ಲಿ ಭಾವನೆಗಳನ್ನೂ ಸೃಷ್ಟಿಸಿದ ಶ್ರೀದೇವಿಕಾ ಈಗ ಕುಟುಂಬದ ಜೊತೆ ಸಂತೋಷದ ಜೀವನ ನಡೆಸುತ್ತಾ ಇದ್ದಾರೆ. ನಿಜಕ್ಕೂ ಯಾರೂ ಬೇಕಂತ ದಪ್ಪ ಆಗಲು ಬಯಸುವುದಿಲ್ಲ. ಹಲವು ಆರೋಗ್ಯ ಕಾರಣಗಳಿಂದಲೂ ದಪ್ಪ ಆಗುತ್ತಾರೆ. ನಮ್ಮ ನೆಚ್ಚಿನ ನಟಿಯರು ಈಗ ಹೇಗಿದ್ದಾರೆ ಅನ್ನುವುದನ್ನು ತಿಳಿಸುವುದು ಅಷ್ಟೇ ಈ ಲೇಖನದ ಉದ್ದೇಶವೇ ಹೊರತು ಅವರನ್ನು ಅವಹೇಳನ ಮಾಡುವುದಲ್ಲ.

By

Leave a Reply

Your email address will not be published. Required fields are marked *