ಕೆಲವೊಂದು ಸಿನಿಮಾಗಳು ನಮಗೆ ನಮ್ಮ ಬದುಕಿನ ಕೆಲವು ಸಂಬಂಧಗಳ ಮೌಲ್ಯವನ್ನು ತಿಳಿಸುತ್ತವೆ. ಅಂತದ್ದೆ ಒಂದು ಕನ್ನಡದ ಅಪ್ರತಿಮ ಸಿನಿಮಾ ಜೋಗಿ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕತ್ವದ ಪ್ರೇಮ್ ನಿರ್ದೇಶನದಲ್ಲಿ 2005 ರಲ್ಲೀ ಮೂಡಿ ಬಂದ ಜೋಗಿ ಸಿನೆಮಾ ಕನ್ನಡಿಗರ ಮನ ಗೆದ್ದಿತ್ತು. ತಾಯಿಯ ಸೆಂಟಿಮೆಂಟ್ ಹಾಗೂ ರೌಡಿಸಂ ಇವೆರಡನ್ನೂ ಒಟ್ಟುಗೂಡಿಸಿ ಒಂದು ಮನ ಮಿಡಿಯುವ ಕಥೆಯನ್ನು ಪ್ರೇಮ್ ಅವರು ಅಚ್ಚು ಕಟ್ಟಾಗಿ ನಿರ್ದೇಶನ ಮಾಡಿ, ಕನ್ನಡಿಗರಿಗೆ ಅರ್ಪಿಸಿದರು. ಅಂತಹ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ನಟಿ ಜೆನಿಫರ್ ಕೊತ್ವಾಲ್. ಮುಂಬೈ ಬೆಡಗಿ ಜೆನಿಫರ್ ಕೊತ್ವಾಲ್ ತನ್ನ ಮೋಹಕ ನಟನೆ ಹಾಗೂ ಡ್ಯಾನ್ಸ್ ನಿಂದ ಜನರ ಮನ ಗೆದ್ದಿದ್ದಾರೆ. ಜೋಗಿ ಸಿನೆಮಾದಲ್ಲೀ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿ ತಮ್ಮ ಮೊದಲ ಸಿನಿಮಾದಿಂದಲೇ ಕನ್ನಡ ಚಿತ್ರ ರಂಗದಾಲ್ಲಿ ಫುಲ್ ಫೇಮಸ್ ಆದರು. ನಂತರದಲ್ಲೀ ಕನ್ನಡದಲ್ಲಿ ಸುಮಾರು 12 ಚಿತ್ರಗಳಲ್ಲಿ ನಾಯಕಿಯಾಗಿ ಜೆನಿಫರ್ ನಟಿಸಿದ್ದರು. ಜೆನಿಫರ್ ಅವರ ಕನ್ನಡದಲ್ಲಿ ಕೊನೆಯ ಚಿತ್ರ ಹುಲಿ. ಈ ಚಿತ್ರದ ನಂತರ ಜೆನಿಫರ್ ಮತ್ತೆ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಲಿಲ್ಲ.

ಹುಲಿ ಚಿತ್ರ 2012 ರಲ್ಲಿ ತೆರೆ ಕಂಡಿದ್ದು. ಇವರು ಮತ್ತೆ ಸಿನಿಮಾಗಳಲ್ಲಿ ನಟಿಸದೇ ಇರಲು ಒಂದು ಕಾರಣವಿತ್ತು. ನಟಿ ಜೆನಿಫರ್ ಅವರು ಡಿಸ್ಕ್ ಇಂಜ್ಯುರಿ ಇಂದಾಗಿ ಮತ್ತೆ ಸಿನಿಮಾಗಳಲ್ಲಿ ನಟಿಸಲು ಹಿಂಜರಿದರು. ಇತ್ತೀಚೆಗೆ ಜೆನಿಫರ್ ಅವರು ಜೋಗಿ ಸಿನಿಮಾದ ಹದಿನೈದನೇ ವರ್ಷದ ಸಂಭ್ರಮಾಚರಣೆಯನ್ನು ನೆನಪಿಸಿಕೊಂಡು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಹಾಗೂ ಇದರ ಜೊತೆಗೆ ತಮ್ಮ ಪ್ರೀತಿಯ ಅಭಿಮಾನಿಗಳು ಕಳುಹಿಸಿದ ಸಂದೇಶಗಳನ್ನು ಕೂಡಾ ಹಂಚಿಕೊಂಡಿದ್ದಾರೆ. ಜೆನಿಫರ್ ಹದಿನೈದು ವರ್ಷದ ಹಿಂದಿನ ಜೋಗಿ ಸಿನಿಮಾವನ್ನು ನೆನಪಿಸಿಕೊಂಡು ಕನ್ನಡ ಸಿನಿಮಾ ರಂಗದ ಮೇಲೆ ಅವರು ತೋರಿರುವ ಪ್ರೀತಿ ಅಭಿಮಾನವನ್ನು ಕಂಡರೆ ತುಂಬಾ ಹೆಮ್ಮೆ ಎನಿಸುತ್ತದೆ. ಜೆನಿಫರ್ ಈಗ ಮುಂಬೈನಲ್ಲಿ ನೆಲೆಸಿದ್ದಾರೆ.

By

Leave a Reply

Your email address will not be published. Required fields are marked *