ಚಿತ್ರರಂಗದಲ್ಲಿ ಹಾಸ್ಯದ ಪಾತ್ರದಲ್ಲಿ ಹೆಸರು ಮಾಡಿದವರಲ್ಲಿ ಉಮಾಶ್ರೀ ನಂತರದಲ್ಲಿ ನಮಗೆ ಕೇಳಿಬರುವ ಹೆಸರೆ ರೇಖಾ ದಾಸ್ ಅವರದ್ದು. ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಎಲ್ಲರನ್ನೂ ನಗಿಸಿದವರು ರೇಖಾ ದಾಸ್. ಮನಸ್ಸಿನಲ್ಲಿ ನೋವಿದ್ದರೂ ಬಣ್ಣ ಹಚ್ಚಿ ಎಲ್ಲರನ್ನೂ ನಗಿಸಿದ ಶ್ರೇಷ್ಠ ವ್ಯಕ್ತಿತ್ವ ರೇಖಾ ದಾಸ್ ಅವರದ್ದು. ತಮ್ಮ ನಟನೆಯ ಮೂಲಕ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುವ ರೇಖಾ ದಾಸ್ ಅವರು ತಮ್ಮ ಜೀವನದ ಬಗ್ಗೆ ಏನೆಂದು ಹೇಳಿದ್ದಾರೆ ಅನ್ನೋದನ್ನು ನಾವು ಈ ಲೇಖನದಲ್ಲಿ ನೋಡೋಣ.

ಹೆಗ್ಗಡೆ ಸ್ಟುಡಿಯೋದವರು ರೇಖಾ ದಾಸ್ ಅವರನ್ನು ಸಂದರ್ಶನ ನಡೆಸಿದಾಗ ಅವರು ಹೇಳಿದ ಕೆಲವು ಮಾತುಗಳು ಈ ರೀತಿಯಾಗಿದೆ. ಇತ್ತೀಚೆಗೆ ಕೆಲವು ಕಡೆಗಳಲ್ಲಿ ಚಿತ್ರರಂಗದಲ್ಲಿ ಹಿರಿಯ ಕಲಾವಿದರಿಗೆ ಬೆಲೆ ಸಿಗುತ್ತಿಲ್ಲವೆಂಬ ಸ್ಟುಡಿಯೋ ಸಿಬ್ಬಂದಿಯವರ ಮಾತಿಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ ರೇಖಾ ದಾಸ್ ಅವರು. ಅವರ ಅನಿಸಿಕೆಯ ಪ್ರಕಾರ ಕೆಲವು ದೊಡ್ಡ ಕಲಾವಿದರಿಗೆ ಬೆಲೆ ಕಡಿಮೆಯಾಗುತ್ತಿದೆ. ದೊಡ್ಡ ಕಲಾವಿದರು ಏನು ಮಾಡುತ್ತಿದ್ದಾರೆ ಹೇಗಿದ್ದಾರೆ? ಊಟವಾದರೂ ಮಾಡಲು ಇದೆಯೋ ಇಲ್ಲವೋ? ಎಂಬುದನ್ನು ನೋಡುತ್ತಿಲ್ಲ. ಕನಿಷ್ಠ ಪಕ್ಷ ದೊಡ್ಡ ಕಲಾವಿದರು, ಚಿತ್ರರಂಗದಲ್ಲಿ ಮಾತು ನಡೆಯುವವರು, ಹಿರಿಯ ಕಲಾವಿದರನ್ನು ಸಿನಿಮಾದಲ್ಲಿ ಉಪಯೋಗಿಸುವಂತೆ ಸಲಹೆಯನ್ನಾದರೂ ನೀಡಬಹುದು. ಇದರಿಂದ ಹಿರಿಯ ನಟರಿಗೆ ಸಹಾಯವಾಗುತ್ತದೆ. ದುಡ್ಡು ಕೊಡುವುದಕ್ಕಿಂತ ಸಿನೆಮಾಕ್ಕೆ ಸಜೆಸ್ಟ್ ಮಾಡುವುದು ಬಹಳ ಉತ್ತಮ. ಏಕೆಂದರೆ ಹಿರಿಯ ಕಲಾವಿದರಿಗೆ ಚಿಕ್ಕ ವಯಸ್ಸಿನಿಂದಲೆ ನಟಿಸುತ್ತಿರುವುದರಿಂದ ಸಿನಿಮಾದಲ್ಲಿ ನಟಿಸುವುದನ್ನು ಬಿಟ್ಟು ಬೇರೆ ಯಾವ ಕೆಲಸಗಳು ಬರುವುದಿಲ್ಲ.

ಆಗಿನ ಕಾಲದಲ್ಲಿ ಕೆಲಸ ತುಂಬಾ ಇರುತ್ತಿತ್ತು. ಆದರೆ ಸಂಬಳ ಕಡಿಮೆಯಾಗಿತ್ತು. ಉಮಾಶ್ರೀ ಅವರು ನಾಲ್ಕು ಶಿಪ್ಟ್ ಕೆಲಸ ಮಾಡುತ್ತಿದ್ದರೆ, ರೇಖಾ ದಾಸ್ ಅವರು ಮೂರು ಶಿಪ್ಟ್ ಕೆಲಸ ಮಾಡುತ್ತಿದ್ದರು. ಆದರೆ ಈಗ ಸಂಬಳ ಹೆಚ್ಚಿದೆ ಆದರೆ ಕೆಲಸವಿಲ್ಲ ಎಂದು ರೇಖಾ ದಾಸ್ ಅವರು ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು. ನಂತರದಲ್ಲಿ ಸ್ಟುಡಿಯೋದವರು ಆಗಿನ ಕಾಲದ ಹಾಸ್ಯ ನಟಿಯರಲ್ಲಿ ಹೆಸರು ಪಡೆದ ನಿಮಗೆ ಆಗ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿತ್ತು? ಅಭಿಮಾನಿಗಳ ಪ್ರೀತಿಗೆ ನಿಮ್ಮ ಸ್ಪಂದನೆ ಹೇಗಿತ್ತು ಎಂದು ಕೇಳಿದ್ದರು. ಅದಕ್ಕೆ ರೇಖಾ ದಾಸ್ ಅವರು ಆ ಕಾಲ ಅಲ್ಲಿಯೆ ನಿಲ್ಲಬೇಕಿತ್ತು ಅನ್ನಿಸುತ್ತದೆ. ಆ ಕಾಲದಲ್ಲಿ ಎಷ್ಟೊಂದು ಚಿತ್ರಗಳಲ್ಲಿ ಅಭಿನಯಿಸಿದ್ದೆ, ಮೂರು ಶಿಪ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದೆ ಈಗ ಅದು ಯಾವುದು ಇಲ್ಲ. ಕಥೆಗಾರರು ಹಾಸ್ಯ ನಟರಿಗೆ ಎಂದು ಕಥೆಯನ್ನು ಬರೆಯುತ್ತಿದ್ದರು. ಆದರೆ ಈಗ ಅವರು ಯಾರು ಉಳಿದಿಲ್ಲ. ಈಗ ಒಂದು ದಿನಕ್ಕೆ ಕೆಲಸ ಸಿಗುವುದು ಅದು ಅತಿಥಿ ಪಾತ್ರಗಳಲ್ಲಿ ಒಂದು ದಿನದ ಮಟ್ಟಿಗೆ ಹೋಗಿ ಬಂದರೆ ಮುಗಿದು ಹೋಗುತ್ತದೆ. ಈಗ ಇವನ್ನೆಲ್ಲವನ್ನು ನೋಡಿದಾಗ ಕಲಾವಿದರಾದರೆ ಇಷ್ಟೆನಾ ಜೀವನ ಅನ್ನಿಸಿಬಿಡುತ್ತದೆ ಎನ್ನುತ್ತಾರೆ.

ಸ್ಟುಡಿಯೋದವರು ರೇಖಾ ದಾಸ್ ಅವರಿಗೆ ಸತತ ಮೂವತ್ತೆಂಟು ವರ್ಷಗಳಿಂದ ಚಿತ್ರರಂಗದಲ್ಲಿ ನಟಿಸುತ್ತಿದ್ದಿರಿ, ನಿಮ್ಮ ಸ್ಟೂಡೆಂಟ್ ಗಳು ನಿಮ್ಮ ಬಳಿ ಕಲಿತವರು ಚಿತ್ರರಂಗಕ್ಕೆ ಕಾಲಿಡಬೇಕು ಅನ್ನುವ ಅನಿಸಿಕೆ ಬಂದಿದ್ದು ಹೇಗೆ ಎಂದು ಕೇಳುತ್ತಾರೆ? ಇದಕ್ಕೆ ಪ್ರತಿಕ್ರಿಯೆ ಆಗಿ ರೇಖಾ ದಾಸ್ ಅವರು ಮೊದಲು ತುಂಬಾ ಸಿನಿಮಾಗಳಲ್ಲಿ ತೊಡಗಿದ್ದೆ. ನಂತರದಲ್ಲಿ ಅವಕಾಶಗಳು ಕಡಿಮೆಯಾಗಿತ್ತು. ತಡವಾಗಿ ಚೆನೈ ಯುನಿವರ್ಸಿಟಿಯಿಂದ ಡಾಕ್ಟರೇಟ್ ಸನ್ಮಾನ ಸಿಕ್ಕಿತು. ನಟನೆಯ ರಂಗದಲ್ಲಿ ಕಲಿತಿದ್ದನ್ನು ಹಾಗೆ ಬಿಡುವುದರ ಬದಲು ಹೊಸಬರಿಗೆ ಕಲಿಸುವುದು ಒಳ್ಳೆಯದು ಅನ್ನಿಸಿದಾಗ ಗೊತ್ತಿರುವುದನ್ನು ಇನ್ನೊಬ್ಬರಿಗೆ ಕಲಿಸುವುದಕ್ಕೆ ಮುಂದಾದೆ. ಕಲಿಸುವುದಕ್ಕೆ ಬೇಕಾದ ಅರ್ಹತೆಗೆ ಸರ್ಟಿಫಿಕೇಟ್ ಅವಶ್ಯಕತೆ ಇರುತ್ತದೆ. ಡಾಕ್ಟರೇಟ್ ಬಂದಾಗ ಬೇರೆ ಬೇರೆ ಇನ್ಸ್ಟಿಟ್ಯೂಟ್ ನಲ್ಲಿ ಕಲಿಸಲು ಟೀಚರ್ ಆಗಿ, ಪ್ರಾಂಶುಪಾಲರಾಗಿ ಕೆಲಸ ಪ್ರಾರಂಭಿಸಿದೆ. ಕರೋನಾದ ಕಾರಣ ಎಲ್ಲವೂ ಬಂದಾಗಿದೆ. ಎಷ್ಟೋ ವಿಧ್ಯಾರ್ಥಿಗಳು ಕಾಲ್ ಮಾಡಿ ಆನ್ಲೈನ್ ನಲ್ಲಿ ಕಲಿಸಿ ಎನ್ನುತ್ತಾರೆ. ಮಕ್ಕಳು ಹೇಳುತ್ತಾರೆ ಕಲೆ ಇದೆ, ಪ್ರತಿಭೆ ಇದೆ ಆನ್ಲೈನ್ ಕ್ಲಾಸ್ ಮಾಡಿ ಕಲಿಸಬಹುದು ಅದನ್ನು ಮಾಡು ಎನ್ನುತ್ತಾರೆ ರೇಖಾ ದಾಸ್. ಡಾಕ್ಟರೇಟ್ ಬಂದಿರುವುದರ ಕುರಿತು ಹೇಳಿ ಎಂದು ಕೇಳಿದಾಗ ರೇಖಾ ದಾಸ್ ಈ ರೀತಿಯಾಗಿ ಹೇಳುತ್ತಾರೆ. ಡಾಕ್ಟರೇಟ್ ಲೇಟಾಗಿ ಸಿಕ್ಕಿದರೂ, ಸಿಕ್ಕಿದ್ದು ಖುಷಿಯಾಗಿತ್ತು. ಚಿತ್ರರಂಗಕ್ಕೆ ಬಂದ ಮೂವತ್ತೇಳು ವರ್ಷಗಳ ನಂತರದಲ್ಲಿ ಸಿಕ್ಕಿದ ಅವಾರ್ಡ್ ಅದು. ಅರ್ಧಶತಕ ಸಮೀಪ ಬಂದರು ಒಂದು ಎಪ್ಪತ್ತೈದು ಶೇಕಡಾ ಮಾತ್ರವೇ ತೃಪ್ತಿ ಸಿಕ್ಕಿದ್ದು. ಯಾಕೋ ಎಲ್ಲಾ ಅರ್ಧ ಅರ್ಧವೇ ಆದಂತ ಭಾವನೆ ಆದರೂ ಈ ಕಲೆಯನ್ನು ಬಿಡಲು ಮನಸ್ಸು ಬಂದಿಲ್ಲ ಎನ್ನುತ್ತಾರೆ.

ತೆರೆಯ ಮೇಲೆ ನಕ್ಕು ನಗಿಸುವ ನಿಮಗೂ ನಿಜ ಜೀವನದಲ್ಲಿ ಕೆಲವು ಸಮಸ್ಯೆಗಳಿತ್ತು, ನೋವುಗಳಿತ್ತು ಅದನ್ನು ನಿಭಾಯಿಸಿದ ಬಗೆ ಹೇಗೆ? ಎಂದು ರೇಖಾ ಅವರನ್ನು ಕಾಡಿದ ನೋವುಗಳ ಬಗ್ಗೆ ಸ್ಟುಡಿಯೋದವರು ಕೇಳಿದರು. ಎಲ್ಲರಿಗೂ ಜೀವನದಲ್ಲಿ ನೋವು ಇರುವುದು ಸಹಜ. ತುಂಬಾ ದೊಡ್ಡ ಪ್ರಶ್ನೆ ಕೇಳಿದ್ದಿರಾ. ಹಾಸ್ಯ ಕಲಾವಿದರು ತೆರೆಯ ಮೇಲೆ ನಗುತ್ತಾರೆ ,ನಗಿಸುತ್ತಾರೆ ಆದರೆ ಅವರಿಗೂ ತುಂಬಾನೆ ನೋವಿರುತ್ತದೆ. ನನ್ನ ಜೀವನದಲ್ಲಿಯೂ ಮುಕ್ಕಾಲು ಭಾಗ ನೋವೆ ಇತ್ತು. ಈಗಲೂ ನನ್ನ ಮಕ್ಕಳಿಗೆ ನಾನು ಒಬ್ಬಳೆ. ಜೀವನಕ್ಕೆ ಸಂಗಾತಿಯಾಗಿ ಬರುವವರು ನಮಗೆ ಪರಿಪೂರ್ಣ ವ್ಯಕ್ತಿ ಆಗಿರಬೇಕು. ಅಂತಹ ವ್ಯಕ್ತಿತ್ವ ಜೀವನಕ್ಕೆ ಬರದೆ ಹೋದರೆ ಬದುಕು ಹಾಳಾಗಿ ಬಿಡುತ್ತದೆ. ಒಬ್ಬ ಒಂಟಿ ಹೆಣ್ಣು ಮೂರು ತಿಂಗಳ ಮಗುವನ್ನು, ಚಿಕ್ಕ ಮಕ್ಕಳನ್ನು ಬೆಳೆಸುವುದು ಎಷ್ಟು ಕಷ್ಟ ಎಲ್ಲರಿಗೂ ಗೊತ್ತು, ವಯಸ್ಸಾದ ತಂದೆ ತಾಯಿ ಸಾಕುವುದು ಅಷ್ಟು ಕಷ್ಟ ಅದನ್ನು ಹೇಳಿಕೊಳ್ಳುವುದು ಕಷ್ಟ. ಅದನ್ನು ನಾನು ಅನುಭವಿಸಿದೆ. ಈಗಲೂ ಮಕ್ಕಳ ಮುಖ ನೋಡಿ ನೋವು ಮರೆಯುವೆ. ಅವರು ನನಗೆ ಬೆಂಬಲವಾಗಿ, ಆಧಾರವಾಗಿ ನಿಂತಿದ್ದಾರೆ ಅದರಿಂದಲೆ ಇವತ್ತು ನಾನು ಜೀವಂತವಾಗಿರುವುದು ಎಂದು ಹೇಳಬಹುದು.

ಈಗ ನಾನು ಕುಟುಂಬದ ಜೊತೆ ಖುಷಿಯಾಗಿ ಇದ್ದೆನೆ. ಇವತ್ತಿಗೂ ಮಗಳು ಎಲ್ಲ ಜವಾಬ್ದಾರಿ ಹೊತ್ತು, ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ. ಮಗ ಸಣ್ಣವನಾದರೂ ನನ್ನ ಸಂಪಾದನೆ ಶುರುವಾದಾಗ ಮನೆಯಲ್ಲಿ ರಾಣಿಯಂತೆ ಇರಬೇಕು ಕೆಲಸದ ಯೋಚನೆ ಮಾಡಬಾರದು ಎನ್ನುತ್ತಾನೆ ಇಷ್ಟು ಸಾಕಲ್ಲವೆ ಒಬ್ಬ ತಾಯಿಗೆ ಎಂದು ಅತ್ತೆ ಬಿಟ್ಟಿದ್ದರು ರೇಖಾ ದಾಸ್. ನಂತರ ಸ್ಟುಡಿಯೋದವರು ಈಗಿನ ಕೆಲವು ಯುವ ಜನತೆ ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಹೆಚ್ಚು. ಇಷ್ಟು ನೋವುಗಳ ಮಧ್ಯೆಯೂ ಯಾವುದೊ ಬರವಸೆಯಲ್ಲಿ ಜೀವನ ಕಟ್ಟಿಕೊಂಡ ನೀವು ಉಳಿದವರಿಗೆ ಮಾದರಿಯಾಗಿ ಇರುವಿರಿ ಇವರಿಗೆ ನಿಮ್ಮ ಸಂದೇಶವೇನು? ಎಂದು ಕೇಳಿದಾಗ ರೇಖಾ ದಾಸ್ ಅವರ ಉತ್ತರ ಯುವ ಜನತೆಗೆ ನನ್ನ ಮೊದಲ ಸಂದೇಶ ಯಾವುದೆಂದರೆ ಅದು ಆತುರ ಬೀಳಬಾರದು. ಯಾವುದೇ ನಿರ್ಧಾರವನ್ನು ಆತುರದಲ್ಲಿ ತೆಗೆದುಕೊಳ್ಳಬಾರದು. ಆತುರದ ನಿರ್ಧಾರವು ಜೀವನವನ್ನೆ ಹಾಳು ಮಾಡಿಬಿಡುತ್ತದೆ. ನಾವು ಅದರ ಸಾಲಿಗೆ ಬರುತ್ತೆವೆ. ಯೋಚಿಸಿ ನಿರ್ಧರಿಸಿ. ಒಂದಲ್ಲ ಹತ್ತು ಬಾರಿ ಯೋಚಿಸಿ ಆದರೆ ತಪ್ಪು ನಿರ್ಧಾರ ಮಾಡಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದರು.

ನಂತರ ಸ್ಟುಡಿಯೋದವರು ಕೇಳುತ್ತಾರೆ ರೇಖಾ ದಾಸ್ ಗಟ್ಟಿ ಮನಸ್ಸಿನವರಾ ಅಥವಾ ಮೃದು ಮನಸ್ಸಿನವರಾ? ಅದಕ್ಕೆ ರೇಖಾದಾಸ್ ಅವರು ನಗುತ್ತಾ ಈ ರೀತಿಯಾಗಿ ಹೇಳುತ್ತಾರೆ ಮಗಳು ಯಾವಾಗಲು ನನ್ನ ಅಕ್ಕನ ಬಳಿ ಹೇಳುತ್ತಾಳೆ. ದೊಡ್ಡಮ್ಮ ನೋಡಲು ಮೃದುವಾಗಿ ಕಂಡರೂ ತುಂಬಾ ಗಟ್ಟಿ ಆದರೆ ಅಮ್ಮ ಗಟ್ಟಿಯಾಗಿ ಕಂಡರೂ ಒಳಗಿನಿಂದ ಬಹಳ ಮೃದು ಎಂದು ನಾನು ಹಾಗೆ. ಕುಸಿಯುವುದು ಬೇಗ ಎನ್ನುತ್ತಾರೆ. ನಂತರದಲ್ಲಿ ಸ್ಟುಡಿಯೋದವರು ಜೀವನದಲ್ಲಿ ಎಲ್ಲರಿಗೂ ಕನಸು ಇರುತ್ತದೆ‌. ಹಾಗೆ ನಿಮ್ಮ ಜೀವನದಲ್ಲಿ ಇದ್ದ ಕನಸು ಯಾವುದು? ಎಂದು ರೇಖಾ ದಾಸ್ ಗೆ ಕೇಳುತ್ತಾರೆ. ಅದಕ್ಕೆ ರೇಖಾ ದಾಸ್ ನನಗೆ ಬಹಳವಾಗಿ ಕಾಡಿದ ಕನಸೆಂದರೆ ನನ್ನದೆ ಆದ ಒಂದು ಪ್ರೋಡಕ್ಷನ್ ಇರಬೇಕು ಸಿನಿಮಾ ಆಗಲಿ, ವೆಬ್ ಸೀರಿಸ್ ಆಗಲಿ ಏನೇ ಮಾಡಲಿ ಆದರೆ ನನ್ನದೆ ಆದ ಒಂದು ಪ್ರೊಡಕ್ಷನ್ಸ್ ಇರಬೇಕೆಂದು ಆಸೆ ಎನ್ನುತ್ತಾರೆ. ಅದಕ್ಕೆ ತಯಾರಿ ಹೇಗೆ ನಡೆದಿದೆ ಎಂದು ಕೇಳಿದಾಗ ರೇಖಾ ದಾಸ್ ಹೊಸದಾಗಿ ರೇಖಾ ದಾಸ್ ಟಾಕೀಸ್ ಎಂಬ ಯೂಟ್ಯೂಬ್ ಚಾನಲ್ ಮಾಡಿದ್ದೆನೆ. ಅದರಲ್ಲಿ ಎಲ್ಲಾ ತರಹದ ಕಾರ್ಯಕ್ರಮ ಅಂದರೆ ನಟನೆಯ ಕ್ಲಾಸ್, ಮೇಕಪ್ ವಿಷಯವಾಗಿ, ಅಡುಗೆ ಕಾರ್ಯಕ್ರಮ, ಸಂದರ್ಶನಗಳು, ಮುಂತಾದವು ಇರುತ್ತದೆ ಎಂದು ಹೇಳುತ್ತಾರೆ.

ಯಾವುದೇ ಒಬ್ಬ ಕಲಾವಿದ ಆಗಿರಲಿ ಎಲ್ಲರ ಜೀವನವೂ ಕೂಡಾ ಹೂವಿನ ಹಾಸಿಗೆ ಆಗಿರುವುದಿಲ್ಲ. ಜೀವನದಲ್ಲಿ ಎಷ್ಟೋ ಕಷ್ಟಗಳನ್ನು ಎದುರಿಸಿ ಮುಂದೆ ಬಂದಿರುತ್ತಾರೆ. ಅಂತವರ ಸಾಲಿಗೆ ಸೇರಿದವರು ಹಾಸ್ಯ ಕಲಾವಿದೆ ರೇಖಾ ದಾಸ್ ಅವರು.

Leave a Reply

Your email address will not be published. Required fields are marked *