ಲಾಕ್ ಡೌನ್ ಸಮಯದಲ್ಲಿ ಬಹಳಷ್ಟು ಬಡವರಿಗೆ, ಸಂಕಷ್ಟದಲ್ಲಿರುವವರಿಗೆ ಸೇವೆ ಮಾಡಿದ ಪ್ರಣಿತಾ ಫೌಂಡೇಶನ್ ಬಗ್ಗೆ ಪ್ರಣಿತಾ ಅವರ ಮನದಾಳದ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಕೊರೋನ ನಂತರ ಸಿನಿಮಾ ಇಂಡಸ್ಟ್ರಿ ಸ್ತಬ್ಧವಾಗಿ ಹೋಗಿತ್ತು. ಚಿತ್ರರಂಗದ ಸಹಸ್ರಾರು ಕಲಾವಿದರು ಕಂಗಾಲಾಗಿದ್ದರು, ಆಟೋ ಡ್ರೈವರ್ಸ್ ಜೀವನ ಶೋಚನೀಯವಾಗಿತ್ತು. ಬಿ.ಪಿ.ಎಲ್ ಕಾರ್ಡು ಇಲ್ಲದೆ ಆದಾಯವೂ ಇಲ್ಲದೆ ತುತ್ತು ಅನ್ನಕ್ಕೂ ಪರದಾಡುತ್ತಿದ್ದರು ಇಂಥ ಸಾವಿರಾರು ಕುಟುಂಬಗಳನ್ನು ಸರ್ಕಾರಕ್ಕೂ ಮೊದಲು ಗುರುತಿಸಿ ಸಹಾಯ ಮಾಡಿದ್ದು ಪ್ರಣಿತಾ ಸುಭಾಷ್. ಪಂಚಭಾಷಾ ನಟಿಯಾದ ಇವರು ಪ್ರಣಿತಾ ಫೌಂಡೇಶನ್ ಮೂಲಕ ಬಡವರಿಗೆ ಸಹಾಯ ಮಾಡುತ್ತಿದ್ದಾರೆ. 500 ಸಂಕಷ್ಟದ ಕುಟುಂಬಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಹಾಕುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ಬನಶಂಕರಿ, ಚಾಮರಾಜಪೇಟೆ ಸುತ್ತಲಿನ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಪೊಟ್ಟಣ ಮೂಲಕ ಆಹಾರ ವಿತರಿಸಿದ್ದಾರೆ. ಮತ್ತು 50,000 ದಿನಸಿ ಕಿಟ್ ಗಳನ್ನು ನೀಡಿದ್ದಾರೆ. ಲಾಕ್ ಡೌನ್ ನಂತರ ನಾವೆಲ್ಲರೂ ಮನೆಯಲ್ಲಿ ಸೇಫ್ ಆಗಿದ್ದೀವಿ ಆದರೆ ಅಂದೆ ದುಡಿದು ಅಂದೆ ತಿನ್ನುವ ಪೌರ ಕಾರ್ಮಿಕರು, ಆಟೋ ಡ್ರೈವರ್ಸ್ ಇಂತವರಿಗೆ ಜೀವನ ನಡೆಸುವುದು ಕಷ್ಟವಾಗುತ್ತದೆ ಆದ್ದರಿಂದ ತಮ್ಮ ಫೌಂಡೇಶನ್ ಮೂಲಕ ಸಹಾಯ ಮಾಡಲಾಯಿತು ಎಂದು ಪ್ರಣಿತಾ ಅವರು ತಮ್ಮ ಮಾತನ್ನು ಹಂಚಿಕೊಂಡಿದ್ದಾರೆ. ಹಿಂದೆ ಪ್ರವಾಹ ಬಂದ ಸಮಯದಲ್ಲಿ ಪ್ರಣಿತಾ ಫೌಂಡೇಶನ್ ಹಾಗೂ ಆಟೋ ಡ್ರೈವರ್ಸ್ ಯೂನಿಯನ್ ಸೇರಿ ಸಹಾಯ ಮಾಡಿದ್ದರು ಹಾಗಾಗಿ ಈ ಸಮಯದಲ್ಲಿ ಆಟೋ ಡ್ರೈವರ್ಸ್ ಗೆ ಸಹಾಯ ಮಾಡುತ್ತಾರೆ ಪ್ರಣಿತಾ ಪೌಂಡೇಶನ್ ಟೀಮ್. ಆನ್ಲೈನ್ ಮೂಲಕ ಫಂಡ್ ಕಲೆಕ್ಟ್ ಮಾಡಿ 200 ಆಟೋ ಡ್ರೈವರ್ಸ್ ಕುಟುಂಬಕ್ಕೆ ಸಹಾಯ ಮಾಡಿದರು.

ಪ್ರಣಿತಾ ಅವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ ಅವರ ಮೂಲ ಹಾಸನ, ಅವರು ಅಪ್ಪಟ ಕನ್ನಡತಿ. ಅವರ ಮೊದಲ ಸಿನಿಮಾ ದರ್ಶನ್ ಜೊತೆ ಪೊರ್ಕಿ. ನಂತರ ಬೇರೆ ಬೇರೆ ಭಾಷೆಗಳಲ್ಲಿ ಆಫರ್ ಬಂತು ಪಂಚ ಭಾಷೆಗಳಲ್ಲಿ ನಟಿಸಿದ್ದಾರೆ. ಅವರ ತಂದೆ ತಾಯಿ ಇಬ್ಬರೂ ಡಾಕ್ಟರ್ಸ್ ಆಗಿದ್ದು ಇವರು ಡಾಕ್ಟರ್ ಆಗಬೇಕು ಎನ್ನುವುದು ಮನೆಯವರ ಆಶಯವಾಗಿತ್ತು. ಪ್ರಣಿತಾಗೆ ಅದು ಇಷ್ಟವಿರಲಿಲ್ಲ ಮೊದಲ ಸಿನಿಮಾ ಪೊರ್ಕಿಯಲ್ಲಿ ನಟನೆ ಮಾಡಲು ಅಪ್ಪ ಅಮ್ಮನನ್ನು ಬಹಳ ಕನ್ವಿನ್ಸ್ ಮಾಡಿದ ನಂತರ ಒಪ್ಪುತ್ತಾರೆ. ಪ್ರಣಿತಾ ಅವರ ಈ ಸೇವೆಯನ್ನು ನೋಡಿ ಅವರ ಮನೆಯವರಿಗೆ ಖುಷಿಯಾಗಿದೆ. ಮೊದಲು ಸೋಷಿಯಲ್ ಆಕ್ಟಿವಿಟಿ ಮಾಡುತ್ತಿದ್ದರು ಆದರೆ ತಮ್ಮದೇ ಒಂದು ಸಂಸ್ಥೆ ಇದ್ದರೆ ಒಳ್ಳೆಯದೆಂದು ಪ್ರಣಿತಾ ಫೌಂಡೇಶನ್ ಆರ್ಗನೈಜ್ ಮಾಡಲಾಯಿತು ಅವರ ಟೀಮ್ ಸಹ ಉತ್ತಮವಾಗಿ ಕೆಲಸ ಮಾಡುತ್ತಾರೆ. ಸರ್ವಿಸ್ ಮಾಡುವಾಗ ಕೋವಿಡ್ ಪ್ರಿಕಾಶನ್ ತೆಗೆದುಕೊಂಡು ವಿತರಣೆ ಮಾಡಲಾಗಿದೆ, ನಾವು ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದರೆ ನಾವೆ ಹೋಗಿ ಸಹಾಯ ಮಾಡಬೇಕು ಎನ್ನುವುದು ಪ್ರಣಿತಾ ಅವರ ಅಭಿಪ್ರಾಯ. ಪ್ರಣಿತಾ ಅವರ ತಂದೆ ಬಹಳಷ್ಟು ಸರ್ವಿಸ್ ಮಾಡುತ್ತಾರೆ ಅವರೆ ಇನ್ಸ್ಪಿರೇಶನ್ ಪ್ರಣಿತಾ ಅವರಿಗೆ. ಅವರ ದಿನಚರಿ ಬೇಸರವಾಗಬಾರದೆಂದು ಬ್ಯುಸಿ ಆಗಿರುತ್ತಾರೆ, ಅವರು ಹೆಚ್ಚು ಸಮಯ ಅವರ ಮುದ್ದಿನ ನಾಯಿ ಜೊತೆ ಕಳೆಯುತ್ತಾರೆ. ಪ್ರಣಿತಾ ಫೌಂಡೇಶನ್ ಇಂದ ಹೆಚ್ಚಿನ ಸೇವೆ ಸಿಗಲಿ ಸಮಾಜಕ್ಕೆ ಎಂದು ಹಾರೈಸೋಣ.

Leave a Reply

Your email address will not be published. Required fields are marked *