ಕನ್ನಡ ಚಿತ್ರರಂಗದಲ್ಲಿ ತೊಂಬತ್ತರ ದಶಕದಲ್ಲಿ ಹೆಸರು ವಾಸಿಯಾಗಿದ್ದ ನಟಿ ಇವರು. ವಿಷ್ಣುವರ್ಧನ್, ಶಂಕರ್ ನಾಗ್, ಅನಂತ ನಾಗ್, ಜಗ್ಗೇಶ್, ಅಂಬರೀಶ್, ಕಾಶಿನಾಥ್ ಇಂತಹ ಎಲ್ಲಾ ದಿಗ್ಗಜರೊಂದಿಗೆ ಚಿಕ್ಕ ವಯಸ್ಸಿನಲ್ಲೇ ನಟಿಸಿ ಹೆಸರು ಪಡೆದು ಎಂಬತ್ತು ಚಿತ್ರಗಳಲ್ಲಿ ನಟಿಸಿ ಮರೆಯಾಗಿದ್ದರು ನಟಿ ಅಂಜಲಿ‌ ಸುಧಾಕರ್. ಇಪ್ಪತೊಂದು ವರ್ಷಗಳ ನಂತರದಲ್ಲಿ ಭಾರತಕ್ಕೆ ಬಂದಿದ್ದಾರೆ. ಅವರ ಸಿನಿ ಪಯಣದ ಅನುಭವ ಹಂಚಿಕೊಂಡಿದ್ದಾರೆ. ಇದರ ಬಗೆಗಿನ ಮಾಹಿತಿ ನಾವೂ ತಿಳಿಯೋಣ.

ಇಪ್ಪತ್ತು ವರ್ಷಗಳು ಮರೆಯಾಗಿದ್ದು ಯಾಕೆ ಎಂಬ ಪ್ರಶ್ನೆಗೆ ಅಂಜಲಿಯವರು ಮದುವೆ ಆದ ಮೇಲೆ ದುಬೈಗೆ ಹೋದೆ. ಮಕ್ಕಳು ಸಂಸಾರ ಹೀಗೆ ಇದ್ದುಬಿಟ್ಟೆ. ನಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದಿದ್ದು, ತುಂಬಾ ಕೆಲಸದಲ್ಲಿ ನಿರತರಾಗಿದ್ದವರು ಮದುವೆಯಾದ ತಕ್ಷಣವೇ ಹೊಂದಿಕೊಳ್ಳಲು ಕಷ್ಟ ಆಗಲಿಲ್ಲ. ಯಾವ ಪಾತ್ರಗಳಲ್ಲೂ ನಟಿಸಿದ್ದರು. ಧಾರಾವಾಹಿ ಮತ್ತು ಸಿನೆಮಾದ ವ್ಯತ್ಯಾಸ ಮಾಡದೆ ನಟಿಸಿದ್ದೆನೆ. ನಟಿಯಾಗಿ ಪರಿಚಯಿಸಿದ್ದೆ ಕಾಶಿನಾಥ್ ಅವರು. ಚಿತ್ರಗಳಲ್ಲಿ ನಟಿಸುವಾಗ ಖುಷಿಯಿತ್ತು, ಮದುಯಾದ ಮೇಲೆ ಒಂದು ವರ್ಷಕ್ಕೆ ಮಗಳು ಹುಟ್ಟಿದಳು. ಇಬ್ಬರೂ ಮಕ್ಕಳ ನೋಡಿಕೊಳ್ಳುವುದರಲ್ಲಿ ವರ್ಷಗಳು ಕಳೆದಿದ್ದು ತಿಳಿಯಲಿಲ್ಲ. ಮಕ್ಕಳನ್ನು ಬಿಟ್ಟು ಮತ್ತೆ ಚಿತ್ರಗಳಲ್ಲಿ ನಟಿಸಬೇಕು ಎಂಬಂತೆ ಯಾವತ್ತು ಅನಿಸಿಲ್ಲ ಎನ್ನುತ್ತಾರೆ. ಪತಿಯದು ಟೂರ್ ಹೋಗಿ ಕೆಲಸ ಮಾಡುವದರಿಂದ ಮಕ್ಕಳ ಎಲ್ಲಾ ಜವಾಬ್ದಾರಿ ನಿರ್ವಹಿಸುತ್ತಾ ತುಂಬಾ ಖುಷಿಯಾಗಿದ್ದೆ. ಜುಲೈ ಮತ್ತೆ ಅಗಸ್ಟ್ ಎರಡು ತಿಂಗಳು ಮಾತ್ರ ಭಾರತಕ್ಕೆ ಬರುತ್ತಿದ್ದರಂತೆ ಅಂಜಲಿ. ಈಗ ಭಾರತಕ್ಕೆ ಬಂದ ಕಾರಣ ಕೇಳಿದಾಗ, ದುಬೈನಲ್ಲಿ ಹತ್ತನೆಯ ತರಗತಿ ಹಾಗೂ ಪಿಯುಸಿ ವರೆಗೆ ಮಾತ್ರ ಮಕ್ಕಳು ಕಲಿಯುವುದು ಹೆಚ್ಚು ಇದಾದ ನಂತರ ಫಾರಿನ್ ಅಥವಾ ಭಾರತಕ್ಕೆ ಬರುತ್ತಾರೆ. ದೊಡ್ಡ ಮಗಳ ಪಿಯುಸಿ ಹಾಗೂ ಚಿಕ್ಕ ಮಗಳ ಹತ್ತನೇಯ ತರಗತಿ ಒಟ್ಟಿಗೆ ಮುಗಿಯಿತು. ದೊಡ್ಡ ಮಗಳು ಸಿರಿ ಲಂಡನ್ ಹೋದರೆ ಚಿಕ್ಕ ಮಗಳು ಸಮೃದ್ಧಿ ಭಾರತಕ್ಕೆ ಬಂದಳು. ಪತಿ ಸೌದಿಯಲ್ಲಿ ಕೆಲಸ ಮಾಡುತ್ತಿದ್ದರೆ ಎಂದರು. ತೆರೆಯ ಮೇಲೆ ಮತ್ತೆ ಅಂಜಲಿ ಅವರನ್ನು ನೋಡಬಹುದು ಆದರೆ ತನಗೆ ಇಷ್ಟ ಆಗುವ ಪಾತ್ರಗಳು ಸಿಕ್ಕರೆ ಧಾರಾವಾಹಿಯಲ್ಲಿ ಇಲ್ಲವೆ ಸಿನಿಮಾದಲ್ಲಿ ಯಾವೂದರಲ್ಲಾದರೂ ನಟಿಸುವೆ ಎಂದರು.

ಚಂದನವನಕ್ಕೆ ಪಾದಾರ್ಪಣೆ ಮಾಡಿದ ರೀತಿ ಅದು ನನಗೂ ಒಂದು ಆಶ್ಚರ್ಯವೇ. ಬಣ್ಣ ಹಚ್ಚಿದ್ದು ನಮ್ಮ ಕುಟುಂಬದಲ್ಲಿ ನಾನೊಬ್ಬಳೆ. ಗುಟ್ಟಳ್ಳಿಯ ಬಳಿ ರಮೇಶ್ ಹಾಗೂ ಅಭಿನಯ ಅವರ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು ಆ ಸಮಯದಲ್ಲಿ ಸ್ಕೂಲ್ ಮುಗಿಸಿ ಬರುತ್ತಿದ್ದವಳು ಶೂಟಿಂಗ್ ನೋಡುತ್ತಾ ನಿಂತಿದ್ದೆ. ನಟನೆ ಮಾಡುತ್ತಿಯಾ ಕೇಳಿದರು ಇಲ್ಲಾ ಅಂದ ಮೇಲೆ ಆರೇಳು ತಿಂಗಳು ಬಿಟ್ಟು, ಕಂಕಣ ಭಾಗ್ಯ ಎಂಬ ಚಿತ್ರದಲ್ಲಿ ತಂಗಿಯ ಪಾತ್ರಕ್ಕೆ ಮತ್ತೆ ಕೇಳಿದರು. ಒಪ್ಪಿಗೆ ಸಿಕ್ಕಿತು, ಕಂಕಣಭಾಗ್ಯ ಮೊದಲ ಚಿತ್ರ. ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಶಿನಾಥ್ ಅವರ ಅನಂತನ ಅವಾಂತರ ಚಿತ್ರದಲ್ಲಿ ನಟಿಸಿದ್ದರು. ಅದೇ ಚಿತ್ರದಲ್ಲಿ ಸೀರೆ ಮೊದಲ ಬಾರಿ ಉಟ್ಟಿದ್ದು. ಸಿನಿಮಾ ಎಂದರೆ ಏನು ಎಂದು ನೋಡಿದ್ದು ಎರಡೆ ಚಿತ್ರ ಹಾಗಾಗಿ ಡಬ್ಬಲ್ ಮಿನಿಂಗ್ ಮಾತುಗಳ ಅರ್ಥ ಗೊತ್ತಿರಲಿಲ್ಲ. ಹಾಗಾಗಿ ಡೈಲಾಗ್ ಹೇಳಿಕೊಟ್ಟ ನಂತರ ಮಾಡುವುದು ಮಾತ್ರ ಗೊತ್ತಿತ್ತು ಅಷ್ಟೆ ಎಂದರು. ಯಾವತ್ತು ಈ ತರಹದ ಪಾತ್ರ ಮಾಡಬಾರದಾಗಿತ್ತು ಎಂಬ ಹಿಂಜರಿಕೆ ಇಲ್ಲಾ. ಡಗಾರ್ ಎಂಬ ಪದದಲ್ಲೆ ಹೆಸರುವಾಸಿಯಾಗಿದ್ದ ಅಂಜಲಿ ನಟಿಸುವಾಗ ಆ ಶಬ್ದದ ಅರ್ಥವೆ ಗೊತ್ತಿರಲಿಲ್ಲ. ಕಾಶಿನಾಥ್ ಅವರು ತೀರಿ ಹೋದಾಗ ಬರಲು ಆಗಲಿಲ್ಲ ಎರಡು ಹೆಣ್ಣು ಮಕ್ಕಳನ್ನು ಬಿಟ್ಟು ಬರುವುದು ಕಷ್ಟ ಇತ್ತು. ವಿಷ್ಣುವರ್ಧನ್ ಅವರು ನಟಿಸುವ ಸಂದರ್ಭದಲ್ಲಿ ಅಂಜಲಿ ಸ್ಕೂಲ್ ಗೆ ಹೋಗುತ್ತಿದ್ದರಂತೆ. ಆ ದಿನಗಳಲ್ಲಿ ಅವರೊಂದಿಗೆ ನಟಿಸಿರುವುದು ತುಂಬಾ ಖುಷಿ ಇದೆ. ವಿಷ್ಣುವರ್ಧನ್, ಅಂಬರೀಶ್ ಎಲ್ಲರೂ ಮರಣ ಹೊಂದಿದಾಗ ಬರಲು ಸಾಧ್ಯವಾಗಲಿಲ್ಲ ಅದರ ನೋವು ತುಂಬಾ ಇದೆ. ವಿಷ್ಣುವರ್ಧನ್ ಅವರು ನಿನ್ನ ಕಣ್ಣಿನ ಅಭಿನಯ ತುಂಬಾ ಚೆನ್ನಾಗಿದೆ ಎನ್ನುತ್ತಿದ್ದರು. ರಾಜ್ ಕುಮಾರ್ ಅವರು ಕೂಡ ತುಂಬಾ ಪ್ರೀತಿಸುತ್ತಿದ್ದರು. ಅವರ ಮನೆಗೂ ಹೋಗಿದ್ದೆ ಅಲ್ಲಿ ಅರಿಶಿನ ಕುಂಕುಮ ನೀಡಿದ್ದನ್ನು ನೆನೆಪಿಸಿಕೊಂಡರು.

ಮಕ್ಕಳು ಮದುವೆಯಾಗಿ ಹೊರಟು ಹೋಗುತ್ತಾರೆ. ಮಕ್ಕಳು ಮಕ್ಕಳಾಗಿ ನಮ್ಮೊಂದಿಗೆ ಇರುವುದು ಕೆಲವು ವರ್ಷಗಳು ಮಾತ್ರವೆ ಆದರೆ ಚಿತ್ರರಂಗಕ್ಕೆ ಮತ್ತೆ ಬರಬಹುದು. ಹಾಗಾಗಿ ಮಕ್ಕಳ ಬಾಲ್ಯ ಅವರೊಂದಿಗೆ ಕಳೆಯುವ ಆಸೆ ಇತ್ತು. ದುಬೈ ನಲ್ಲಿ ಅಂಜಲಿ ಅವರಿಗೆ ಬೆಸ್ಟ್ ಮದರ್ ಪ್ರಶಸ್ತಿ ಕೂಡ ಸಿಕ್ಕಿತ್ತು. ಅಂಜಲಿ ಪರ್ಫೆಕ್ಟ್ ಆಗಲು ಕುಟುಂಬವೇ ಕಾರಣ. ಇಷ್ಟೆಲ್ಲಾ ನಗು ಇದ್ದರೂ ಮನಸ್ಸಿನ ಒಂದು ಭಾಗದಲ್ಲಿ ನೋವಿದೆ. ಅವಸರವಾಗಿ ಭಾರತಕ್ಕೆ ಬರಲು ಅಣ್ಣನ ಸಾವು ಕಾರಣವಾಯಿತು. ಅಕ್ಕ ಒಬ್ಬಳೆ ಆಗಿ ಬಿಟ್ಟಳು. ತಮ್ಮ ಕೂಡ ಹನ್ನೊಂದು ವರ್ಷಗಳ ಹಿಂದೆ ದುಬೈನಲ್ಲಿಯೆ ತೀರಿ ಹೋಗಿದ್ದ. ನಾಲ್ಕು ಜನ ಮಕ್ಕಳು ಅಂಜಲಿ ಅವರ ತಂದೆ ತಾಯಿಗೆ. ಅಣ್ಣನೆ ಆಸ್ತಿಯ ಎಲ್ಲಾ ವಹಿವಾಟು ನೋಡಿಕೊಳ್ಳುತ್ತಿದ್ದ. ಮಕ್ಕಳ ನೃತ್ಯ ಸಮಾರಂಭಕ್ಕೆ ಪ್ರೆಂಡ್ ಕಾರಿನಲ್ಲಿ ಬಾ ಎಂದು ಕಳಿಸಿದ್ದೆ. ಅವರು ಮುಂದೆ ಹೋಗಿ ಕಾರ್ ಪಾರ್ಕ್ ಮಾಡಿ ಫೋನ್ ಬಂತೆಂದು ಚೂರು ಮುಂದೆ ಹೋಗಿದ್ದ ತಮ್ಮನ ತಲೆಯ ಮೇಲೆ ಸಮಾರಂಭದ ಹೆಸರು ಬರೆದಿದ್ದ ಫಲಕ ಅವನ ತಲೆಯ ಮೇಲೆ ಬಿದ್ದು ಅಸುನಿಗಿದ್ದ ಎಂದು ಕಣ್ಣೀರಿಡುತ್ತಿದ್ದ. ಶಿವ ನಾಗ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ ಅಂಜಲಿ. ಶಿವ ಎಂದರೆ ಅಣ್ಣ. ನಾಗ ಎಂದರೆ ತಮ್ಮನ ಹೆಸರು. ನನ್ನಿಂದಾನೆ ತಮ್ಮ ಸತ್ತನೆಂದು ತುಂಬಾ ನೋವಿದೆ. ನಾವು ನಾಲ್ಕು ಜನರು ಇದ್ದರೆ ಬೇರೆ ಯಾರು ಬೇಕಾಗಿರಲಿಲ್ಲ. ಇನ್ನೂ ಅಣ್ಣನೂ ಎರಡು ವರ್ಷ ಆಯಿತು ಮರಣ ಹೊಂದಿ. ಕೆಟ್ಟ ಅಣ್ಣ ತಮ್ಮ ಅವರಾಗಿದ್ದರೆ ಮರೆಯಬಹುದಿತ್ತೆನೋ ಅಂದು ಕೊಂಡಿದ್ದು ತುಂಬಾ ಸಲ ಅಂದು ಕೊಂಡಿರುವುದು ಇದೆ. ಬದುಕಬಾರದು ಅಂದುಕೊಂಡಿದ್ದು ಇದೆ. ಮಕ್ಕಳು ಹಾಗೂ ಅತ್ತಿಗೆಯರು ಧೈರ್ಯ ತುಂಬುತ್ತಿದ್ದರು. ಬಡತನದಲ್ಲಿ ತುಂಬಾ ಖುಷಿ ಇತ್ತು ಕುಟುಂಬದಲ್ಲಿ. ಅಣ್ಣ ತಮ್ಮ ಇಬ್ಬರೂ ಕಷ್ಟದಲ್ಲಿ ನನ್ನ ಜೊತೆಗೆ ಇದ್ದರು ಎನ್ನುತ್ತಾರೆ ಅಂಜಲಿ

ರಾಘವೇಂದ್ರ ಇಷ್ಟದ ದೇವರು. ದುಬೈ ಇಂದ ಸ್ನೇಹಿತರು ಭಾರತಕ್ಕೆ ಬಂದಿದ್ದರು. ಆಗ ಅಣ್ಣ ಅತ್ತಿಗೆ ಅಕ್ಕ ತುಂಬಾ ಚೆನ್ನಾಗಿ ಮಾಡುತ್ತಿದ್ದರು. ಎಲ್ಲಾ ಕೆಲಸಗಳನ್ನು ಅವನೆ ಮುಂದೆ ನಿಂತು ನೋಡಿಕೊಳ್ಳುತ್ತಿದ್ದ. ನಮ್ಮದೆ ದೃಷ್ಟಿ ತಗುಲಿತೆನೋ ಎಂಬಂತೆ ಕಾಣುತ್ತಿತ್ತು. ಸ್ನೇಹಿತರೊಂದಿಗೆ ಬ್ಯಾಂಕಾಕ್ ಹೋದ ಮೇಲೆ ಮೂರು ದಿನದ ನಂತರ ಅಣ್ಣನ ಸಾವಿನ ಸುದ್ದಿ ಬಂದಿತ್ತು. ಅಣ್ಣ ಹೊಸಪೇಟೆಗೆ ಹೋಗಿದ್ದ. ಅವನಿಗೆ ತುಂಬಾ ತಲೆನೋವು ಬರುತ್ತಿತ್ತು. ಅಲ್ಲಿ ಮೆಡಿಸಿನ್ ಸಿಗಲಿಲ್ಲ ಇರಬಹುದು ಬೆಂಗಳೂರಿನಲ್ಲಿ ತೆಗೆದುಕೊಂಡರೆ ಆಯಿತು ಎಂದು ಸುಮ್ಮನಾಗಿದ್ದನೆನೊ ಆದರೆ ಅವನಿಗೆ ಟ್ಯೂಮರ್ ಇತ್ತು. ಅಣ್ಣನಿಗೆ ಹಾಗೆ ಆದಾಗ ಭಾರತಕ್ಕೆ ಬೇಗ ಬಂದುಬಿಟ್ಟರು. ತಮಬಾ ನೋವಾದಾಗ, ಬೇಸರವಾದಾಗ ಹಾಡು ಕೇಳುವುದು ಹಾಗೂ ಪುಸ್ತಕ ಓದುವುದು ಅಂದರೆ ಇಷ್ಟ. ದೇವರ ಬಳಿ ಒಬ್ಬರನ್ನಾದರೂ ಉಳಿಸಿಕೊಡಬಹುದಿತ್ತು ಎಂಬ ನೋವು ತೋಡಿಕೊಳ್ಳುತ್ತಿದ್ದರು. ಈಗ ಇರುವ ಹಣ ಆಸ್ತಿ ಯಾವುದು ಖುಷಿ ಕೊಡುತ್ತಿಲ್ಲ ಅಣ್ಣ ಅಥವಾ ತಮ್ಮ ಒಬ್ಬರಾದರು ಬೇಕಿತ್ತು ಅನಿಸುತ್ತದೆ. ಮಕ್ಕಳು ನಟಿಸುತ್ತಿರಾ ಕೇಳಿದರೆ ಏನು ಹೇಳುವುದಿಲ್ಲ. ಟಿವಿ ನೋಡಿ ನನ್ನ ನಟನೆಯ ಬಗ್ಗೆ ತಮಾಷೆ ಮಾಡಿ ನಗುತ್ತಿದ್ದರು. ಈಗ ಖುಷಿ ಪಡುತ್ತಾರೆ. ದುಬೈ ಅನ್ನು ತುಂಬಾ ನೆನಪಿಸಿಕೊಳ್ಳುತ್ತೆನೆ ಎನ್ನುತ್ತಾರೆ. ಸದ್ಯದಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲಾ, ನನ್ನದೆಯಾದ ಮಹತ್ವ ಹಾಗೂ ಜನರ ಮನ ಮುಟ್ಟುವ ಪಾತ್ರ ಸಿಕ್ಕರೆ ಖಂಡಿತ ಅಭಿನಯಿಸುತ್ತೆನೆ ಎನ್ನುತ್ತಾರೆ. ಕಲಾವಿದರನ್ನು ಅಭಿಮಾನಿಗಳು ನೆನಪಿಸಿಕೊಂಡರೆ ಮಾತ್ರ ನಾವು ಮೇಲೆರಲು ಸಾಧ್ಯ. ಅವರ ಅಭಿಮಾನವೆ ಕಲಾವುದರಿಗೆ ಪ್ರೋತ್ಸಾಹ ಎಂದರು.

ನಟಿ ಅಂಜಲಿ ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತೇ
ಕನ್ನಡ ಚಿತ್ರರಂಗದಲ್ಲಿ ತೊಂಬತ್ತರ ದಶಕದಲ್ಲಿ ಹೆಸರುವಾಸಿಯಾಗಿದ್ದ ನಟಿ ಇವರು. ವಿಷ್ಣುವರ್ಧನ್, ಶಂಕರ್ ನಾಗ್, ಅನಂತ ನಾಗ್, ಜಗ್ಗೇಶ್, ಅಂಬರೀಶ್, ಕಾಶಿನಾಥ್ ಇಂತಹ ಎಲ್ಲಾ ದಿಗ್ಗಜರೊಂದಿಗೆ ಚಿಕ್ಕ ವಯಸ್ಸಿನಲ್ಲೇ ನಟಿಸಿ ಹೆಸರು ಪಡೆದು ಎಂಬತ್ತು ಚಿತ್ರಗಳಲ್ಲಿ ನಟಿಸಿ ಮರೆಯಾಗಿದ್ದರು ನಟಿ ಅಂಜಲಿ‌ ಸುಧಾಕರ್. ಇಪ್ಪತೊಂದು ವರ್ಷಗಳ ನಂತರದಲ್ಲಿ ಭಾರತಕ್ಕೆ ಬಂದಿದ್ದಾರೆ. ಅವರ ಸಿನಿ ಪಯಣದ ಅನುಭವ ಹಂಚಿಕೊಂಡಿದ್ದಾರೆ. ಇದರ ಬಗೆಗಿನ ಮಾಹಿತಿ ನಾವೂ ತಿಳಿಯೋಣ.

ನಟಿ ಅಂಜಲಿ ನ್ಯೂಸ್ ಫಸ್ಟ್ ಕನ್ನಡ ಟಿವಿ ಮಾದ್ಯಮದ ಸಂದರ್ಭದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದರು. ತಮ್ಮ ದುಃಖಗಳನ್ನು, ಖುಷಿಯ ಕ್ಷಣಗಳನ್ನು, ನಟಿಸುವಾಗ ಆದ ಅನುಭವಗಳನ್ನು ಹಂಚಿಕೊಂಡರು. ಚಿತ್ರರಂಗಕ್ಕೆ ಮತ್ತೆ ತಿರುಗಿ ಬರುವ ಭರವಸೆ ಕೊಟ್ಟರು.

Leave a Reply

Your email address will not be published. Required fields are marked *