ಜೊತೆ ಜೊತೆಯಲ್ಲಿ ಧಾರಾವಾಹಿಯ ಮೀರಾ ಅವರ ಹೆಸರು, ಅವರ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಕನ್ನಡದ ಟಾಪ್ ಮೋಸ್ಟ್ ಧಾರವಾಹಿ, ಜನರ ಮನಸ್ಸಿನಲ್ಲಿ ಉತ್ತುಂಗದಲ್ಲಿರುವ ಜೊತೆ ಜೊತೆಯಲಿ ಧಾರಾವಾಹಿ ಅನೇಕ ವಿಶೇಷತೆಗಳಿಂದ ಕೂಡಿರುವುದು ಯಶಸ್ಸಿಗೆ ಕಾರಣವೆಂದು ಹೇಳಬಹುದು. ಕಿರುತೆರೆಯ ಸೆನ್ಸೇಶನ್ ಆರ್ಯವರ್ಧನ್ ಅವರ ಜೊತೆಗೆ ಇರುವ ಮೀರಾ ಜನರ ಮನಸ್ಸನ್ನು ಗೆದ್ದಿದ್ದಾರೆ. ಈ ಧಾರಾವಾಹಿಯಲ್ಲಿ ಯಾರು ಕೆಟ್ಟವರಲ್ಲ ಯಾರನ್ನೂ ಕೂಡ ವಿಲನ್ ರೀತಿಯಲ್ಲಿ ತೋರಿಸಿಲ್ಲ. ಮೀರಾ ಅವರು ಅನು ಜೊತೆ ಕೆಲವು ಸಲ ರೂಡ್ ಆಗಿ ವರ್ತಿಸುತ್ತಾರೆ. ಅನು ಮತ್ತು ಸಂಪತ್ ಮದುವೆ ಸಂದರ್ಭದಲ್ಲಿ ಮೀರಾ ಬಳಿ ಎರಡು ಲಕ್ಷ ಕೇಳಿದ ಅನುಗೆ 5 ಲಕ್ಷ ಕೊಡುತ್ತಾರೆ ಹಣಕೊಟ್ಟು ಮೀರಾ ಹೇಳಿದ ಮಾತು ನಿಜಕ್ಕೂ ಮನಮುಟ್ಟುವಂತಿದೆ. ಹೆಣ್ಣು ಹೆತ್ತವರಿಗೆ ಎಷ್ಟು ಕಷ್ಟ ಇರುತ್ತದೆ ಎಂದು ನನಗೆ ಚೆನ್ನಾಗಿ ಗೊತ್ತು ಮದುವೆ ಎಂದರೆ ಖರ್ಚು ಇರುತ್ತದೆ ಎಂದು ಹೇಳಿ ಹಣ ಕೊಡುತ್ತಾರೆ.

ಮೀರಾರವರ ನಿಜವಾದ ಹೆಸರು ಮಾನಸ. ಬಿಜಿನೆಸ್ ವುಮೆನ್ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ಇವರು MBA ಓದಿದ್ದಾರೆ. ಓದಿನ ನಂತರ ನಟನೆಯಲ್ಲಿ ಆಸಕ್ತಿ ಹುಟ್ಟಿ ಖಾಸಗಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಾರೆ. ನಂತರ ಧಾರವಾಹಿಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಅಮೃತವರ್ಷಿಣಿ, ಅಶ್ವಿನಿ ನಕ್ಷತ್ರ, ಶುಭವಿವಾಹ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಕೆಲವು ಸಿನಿಮಾಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್ ಮೊದಲಿನಿಂದಲೂ ಪರಿಚಯವಿತ್ತು. ಇವರ ಮುಖಾಂತರ ಧಾರವಾಹಿಗಳಲ್ಲಿ ನಟನೆ ಮಾಡಲು ಅವಕಾಶ ಸಿಕ್ಕಿತು. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೀರಾ ಪಾತ್ರ ಸಿಕ್ಕಿತು. ಸದಾ ಸ್ಟೈಲಿಶ್ ಆಗಿ ಮತ್ತು ಸುಂದರವಾಗಿ ಕಾಣುವ ಮಾನಸ ಇವರಿಗೆ ಮಿಸ್ ಕರ್ನಾಟಕ ಪ್ರಶಸ್ತಿ ಲಭಿಸಿದೆ. ಜನರು ಇವರ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ.

By

Leave a Reply

Your email address will not be published. Required fields are marked *