ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರು ಇತ್ತೀಚೆಗಷ್ಟೇ ತಮ್ಮ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಸೆಲ್ಫಿ ಒಂದನ್ನು ಹಂಚಿಕೊಂಡಿದ್ದಾರೆ. ಆದರೆ ಒಂದು ಸೆಲ್ಫಿ ತೆಗೆದುಕೊಳ್ಳುವುದರ ಸಲುವಾಗಿ ರಾಧಿಕಾ ಪಂಡಿತ್ ಅವರು ಬಹಳಷ್ಟು ಸಮಯವನ್ನು ತೆಗೆದುಕೊಂಡು ಹರಸಾಹಸ ಪಟ್ಟಿದ್ದಾರೆ ಎನ್ನಬಹುದು. ಇದರ ಕುರಿತಾಗಿ ರಾಧಿಕಾ ಪಂಡಿತ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ. ಇದೊಂದು ಎಲ್ಲಾ ಹೆಣ್ಣುಮಕ್ಕಳು ಸೆಲ್ಫಿಯ ಹಿಂದಿನ ಕಥೆ. ಒಂದು ಸರಿಯಾದ ಫೋಟೋ ಸಿಗಬೇಕು ಅಂದರೆ ಅದು ಒಂದು ದೊಡ್ಡ ಟಾಸ್ಕ್ ಇದ್ದಂತೆ. ಈ ರೀತಿಯಾಗಿ ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಎಲ್ಲಾ ಹೆಣ್ಣುಮಕ್ಕಳು ಅನುಭವಿಸುವ ಪಾಡನ್ನು ರಾಧಿಕಾ ಪಂಡಿತ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

” Well Behind the scenes of every girl’s ‘selfie’ life! How to get that perfect shot / angle!! It’s definitely a task Didn’t know I was been secretly captured by a board dad and daughter ”

ಈ ರೀತಿಯಾಗಿ ರಾಧಿಕಾ ಪಂಡಿತ್ ಅವರು ತಮ್ಮ ಫೋಟೋದ ಜೊತೆಗೆ ಬರೆದುಕೊಂಡಿದ್ದಾರೆ. ಇನ್ನು ರಾಧಿಕಾ ಪಂಡಿತ್ ಅವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಅಂತಹ ಸಂದರ್ಭದಲ್ಲಿ , ರಾಧಿಕಾ ಒಂದು ಸೆಲ್ಫಿ ಕ್ಲಿಕ್ಕಿಸಲು ಪರದಾಡುತ್ತಿರುವ ಈ ಸನ್ನಿವೇಶವನ್ನು ರಾಕಿಂಗ್ ಸ್ಟಾರ್ ಯಶ್ ರವರು ವಿಡಿಯೋ ಮಾಡಿದ್ದಾರೆ. ಮನೆಯಲ್ಲಿ ಕೂತು ಬೇಜಾರಾಗಿರುವ ಅಪ್ಪ-ಮಗಳು ನನ್ನನ್ನು ಸೀಕ್ರೆಟಾಗಿ ಮೊಬೈಲ್ ನಲ್ಲಿ ಸೆರೆ ಹಿಡಿದಿರುವುದು ಕೂಡ ನನಗೆ ತಿಳಿಯಲಿಲ್ಲ ಎಂದು ರಾಧಿಕಾ ಪಂಡಿತ್ ಅವರು ಬರೆದುಕೊಂಡಿದ್ದಾರೆ.

By

Leave a Reply

Your email address will not be published. Required fields are marked *