ಕುಂದಾಪುರದ ಬೆಡಗಿ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮನೆ ಮಾತಾದ ಭೂಮಿ ಶೆಟ್ಟಿಯವರು ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ ಅದೇನೆಂದು ಈ ಲೇಖನದ ಮೂಲಕ ತಿಳಿಯೋಣ.

ಕುಂದಾಪುರದ ಹುಡುಗಿ ಭೂಮಿ ಶೆಟ್ಟಿಯವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಸೀರಿಯಲ್ಲನಲ್ಲಿ ನಟಿಸಿ ತನ್ನ ಛಾಪು ಮೂಡಿಸಿದ್ದಾರೆ. ನಂತರ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಲಕ್ಷಾಂತರ ಜನರ ಪ್ರೀತಿಯನ್ನು ಸಂಪಾದಿಸಿಕೊಂಡು ಬಂದಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಭೂಮಿ ಶೆಟ್ಟಿಯವರು ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಕಿನ್ನರಿ ಧಾರಾವಾಹಿ ಮೂಲಕ ಜನಪ್ರಿಯರಾದವರು ಭೂಮಿ. ಇವರು ಸಿನೆಮಾದಲ್ಲಿ ನಾಯಕಿಯಾಗಿದ್ದಾರೆ ಈ ಮೂಲಕ ಮತ್ತೆ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದಾರೆ.

ಬಿಗ್ ಬಾಸ್ ನಂತರ ಮೊದಲಬಾರಿಗೆ ಸಿನಿಮಾವನ್ನು ಒಪ್ಪಿಕೊಂಡ ಭೂಮಿ ಕಾಮೆಡಿ ಕಥೆಯುಳ್ಳ ಇಕ್ಕಟ್ ಎಂಬ ಸಿನೆಮಾಗೆ ನಾಯಕಿಯಾಗಿದ್ದಾರೆ. ಈ ಸಿನೆಮಾವನ್ನು ಈಶಾನ್ ಖಾನ್ ಹಾಗೂ ಹಸಿಂ ಖಾನ್ ನಿರ್ದೇಶನ ಮಾಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಇಕ್ಕಟ್ ಸಿನೆಮಾದ ಶೂಟಿಂಗ್ ಮುಗಿದಿದೆ. ಹಾಸ್ಯ ನಟನೆಂದು ಗುರುತಿಸಿಕೊಂಡ ನಾಗಭೂಷಣ ಈ ಸಿನೆಮಾಕ್ಕೆ ನಾಯಕನಾಗಿದ್ದಾರೆ. ಈ ಕಥೆ ಲಾಕ್ ಡೌನ್ ಕುರಿತು ಇದೆ. ವಿಚ್ಛೇದನಕ್ಕೆ ಬಯಸಿದ ದಂಪತಿ ಲಾಕ್ ಡೌನ್ ನಿಂದಾಗಿ ಒಟ್ಟಿಗೆ ಇರಬೇಕಾಗುತ್ತದೆ ಆಗ ನಡೆಯುವ ಘಟನೆಗಳೆ ಈ ಸಿನೆಮಾದ ಕಥೆ. ಇದನ್ನು ಮಜವಾಗಿ ತೋರಿಸಿದ್ದಾರೆ. ಒಟ್ಟಿನಲ್ಲಿ ನಗೆ ಗಡಲಿನಲ್ಲಿ ತೇಲಿಸಲು ಹೊರಟಿದ್ದಾರೆ ಭೂಮಿ ಶೆಟ್ಟಿಯವರು. ಭೂಮಿ ಶೆಟ್ಟಿಯವರು ಇನ್ನು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲೆಂದು ಹಾರೈಸೋಣ.

By

Leave a Reply

Your email address will not be published. Required fields are marked *