ಸಾಮಾನ್ಯವಾಗಿ ಮೊಣಕಾಲು ನೋವು ಎಲ್ಲರಲ್ಲೂ ಕಂಡುಬರುತ್ತದೆ. ದೇಹ ತೂಕ ಹೆಚ್ಚಾಗಿರುವುದು, ಕಾಲಿನಲ್ಲಿ ಎಣ್ಣೆ ಅಂಶ ಕಡಿಮೆಯಿದ್ದರೆ, ಅಥವಾ ಕಾಲಿಗೆ ತೀವ್ರ ಮಟ್ಟದಲ್ಲಿ ಪೆಟ್ಟಾಗಿದ್ದರೆ ಮೊಣಕಾಲು ನೋವು ಬರುತ್ತದೆ.

ಈ ಮೊಣಕಾಲು ನೋವಿನಲ್ಲಿ ಕಾಣುವ ಪ್ರಮುಖ ಲಕ್ಷಣಗಳನ್ನು ನೋಡುವುದಾದರೆ ಮೊಣಕಾಲು ನಲ್ಲಿ ಕಟ ಕಟ ಶಬ್ಧವಾಗುವುದು, ನಡೆಯುವಾಗ ಮೊಣಕಾಲಿನಲ್ಲಿ ನೋವಾಗುವುದು, ಬಾವುಬರುವುದು, ವಿಪರೀತ ಸೆಳೆತ ಇದೆಲ್ಲವು ಮೊಣಕಾಲಿನ ಲಕ್ಷಣಗಳಾಗಿರುತ್ತವೆ.

ಈ ಮೊಣಕಾಲಿನ ಸಮಸ್ಯೆಗೆ ಮನೆಯಲ್ಲಿನ ಪದಾರ್ಥ ಬಳಸಿ ನೋವು ಕಡಿಮೆ ಮಾಡಿಕೊಳ್ಳಬಹುದು. ಎಳ್ಳೆಣ್ಣೆ ಯಿಂದ ಮೊಣಕಾಲಿನ ಭಾಗಕ್ಕೆ ಲೇಪಿಸಿ ಮಸಾಜ್ ಮಾಡಿಕೊಂಡರೆ ನೋವು ಕಡಿಮೆ ಮಾಡಿಕೊಳ್ಳಬಹುದು. ಸಾಸಿವೆ ಎಣ್ಣೆಯಿಂದಲೂ ಈ ನೋವನ್ನು ಶಮನ ಮಾಡಬಹುದು.

ಆಹಾರ ಪದ್ಧತಿಯಲ್ಲಿ ಪ್ರಮುಖವಾಗಿ ತರಕಾರಿಗಳು,ಹಾಲಿನಂತಹ ಕ್ಯಾಲ್ಸಿಯಂ ಇರುವ ಪದಾರ್ಥಗಳನ್ನು ಸೇವಿಸಿ. ಇದಲ್ಲದೆ ಆರ್ಯುವೇದದಲ್ಲಿ ಈ ಸಮಸ್ಯೆಗೆ ಪಂಚ ಕರ್ಮ ಚಿಕಿತ್ಸೆ ಲಭ್ಯವಿದೆ. ಪಂಚ ಕರ್ಮದಲ್ಲಿನ ಜಾನುಬಸ್ತಿ ಚಿಕಿತ್ಸೆ ಪಡೆದರೆ ಮೊಣಕಾಲಿನ ಸಮಸ್ಯೆ ನಿವಾರಿಸಬಹುದು.ಈ ರೀತಿಯ ಚಿಕಿತ್ಸೆ , ಆಹಾರ ಪದ್ದತಿ ಗಳಲ್ಲಿನ ಬದಲಾವಣೆಯಿಂದ ಶಾರೀರಿಕ ಸಮಸ್ಯೆಗಳನ್ನು ದೂರವಾಗಿಸಬಹುದು.

Leave a Reply

Your email address will not be published. Required fields are marked *

error: Content is protected !!