ದೇಹ ತಂಪಾಗಿಸಲು ಈ ಹಾಲಿನ ಶರಬತ್ತು ಕುಡಿಯಿರಿ

0 4

ಬೇಸಿಗೆ ಕಾಲದಲ್ಲಿ ಹಣ್ಣುಗಳು, ಪಾನೀಯಗಳು, ತಂಪಾದ ಆಹಾರ ಪದಾರ್ಥಗಳ ಮೊರೆ ಹೋಗುತ್ತೇವೆ. ಅದರಂತೆ ದೇಹ ತಂಪಾಗಿಸಲು ಅನೇಕ ರೀತಿಯ ಪಾನೀಯಗಳನ್ನು ಕುಡಿಯಲು ಪ್ರಾರಂಭಿಸುತ್ತವೆ. ಅಂಗಡಿಯಲ್ಲಿರುವ ಪಾನೀಯಗಳಿಕ್ಕಿಂತ ಮನೆಯಲ್ಲಿಯೇ ಹಲವಾರು ರೀತಿಯಾದ ಪಾನೀಯಗಳನ್ನು ಮಾಡಿ ಕುಡಿಯಬಹುದು.

ಹಾಲಿನಿಂದ ಶರಬತ್ತು ಮಾಡಿ ಕುಡಿಯಬಹುದು. ಇದರಿಂದ ದೇಹವನ್ನು ಉಷ್ಣತೆಯಿಂದ ತಂಪಾಗಿಸಬಹುದು ಈ ಶರಬತ್ತು ಮಾಡುವ ವಿಧಾನ ಹೇಗೆ ಅಂತಾ ನೋಡೋಣ.
ಹಾಲಿನ ಶರಬತ್ತಿಗೆ ಬೇಕಾದ ಪದಾರ್ಥಗಳು
ಹಾಲು, ನೀರು, ಕಾಮಕಸ್ತೂರಿಬೀಜ, ಸಬ್ಜಾ ಬೀಜಗಳು.

ಹಾಲಿನ ಶರಬತ್ತು ಮಾಡುವ ವಿಧಾನ: ಒಂದು ಬೌಲ್ ಗೆ ಎರಡು ಚಮಚ ಕಾಮ ಕಸ್ತೂರಿ ಬೀಜ, ಎರಡು ಚಮಚ ಸಬ್ಜಾ ಬೀಜ ಹಾಕಿ ನಂತರ ನೀರು ಬೆರಸಿ ಅರ್ಧಗಂಟೆ ನೆನೆಯಲು ಬಿಡಬೇಕು. ಇನ್ನೊಂದು ಬೌಲ್ ಗೆ ಒಂದು ಕಪ್ ಸಕ್ಕರೆ , ಕಾಯಿಸಿ ಆರಿಸಿದ ಹಾಲು , ನೆನೆಸಿದ ಕಾಮ ಕಸ್ತೂರಿ ಹಾಗೂ ಸಬ್ಜಾ ಬೀಜಗಳನ್ನು ಹಾಕಿ ಚೆನ್ನಾಗಿ ಕಲಕಿ ಲೋಟಕ್ಕೆ ಹಾಕಿಕೊಂಡು ಸೇವಿಸಬಹುದು. ಈ ಹಾಲಿನ ಶರಬತ್ತಿನಿಂದ ನಿಮ್ಮ ದೇಹವನ್ನು ತಂಪಾಗಿಸಿಕೊಳ್ಳಬಹುದು ಅಲ್ಲದೆ ದೇಹದ ತೂಕವನ್ನು ಇಳಿಸಲು ಸಹಾಯಕ.

Leave A Reply

Your email address will not be published.