ಉದ್ಯೋಗದ ನಿರೀಕ್ಷೆಯಲ್ಲಿದ್ರೆ ಟಾಪ್ 5 ಉದ್ಯೋಗದ ಮಾಹಿತಿ ನಿಮಗಾಗಿ

0 1

ಈಗಾಗಲೇ ವಿದೇಶಿ ಕಂಪನಿಗಳಿಂದ ದೇಶಕ್ಕೆ ಬರುತ್ತಿದ್ದ ಉದ್ಯೋಗ ಬೇಡಿಕೆ ಸಂಪೂರ್ಣ ಕುಸಿತಗೊಂಡಿದೆ. ಇನ್ನೊಂದೆಡೆ ಸರಕಾರಿ ಯೋಜನೆಗಳಿಗೆ ಬೇಕಿದ್ದ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಪ್ರತಿ ವರ್ಷ ಪದವಿ ಪಡೆದು ಹೊರ ಬರುತ್ತಿರುವ ಪದವೀಧರರಿಗೆ ಮುಂದಿನ ಮೂರು ವರ್ಷಗಳ ಕಾಲ ಉದ್ಯೋಗ ಎಂಬುದು ಬರೀ ಕನಸಿನ ಮಾತು ಎನ್ನುವಂತಾಗಿದೆ. ಆದರೆ ಇದಕ್ಕೆ ವಿರುದ್ಧವಾಗಿ ಶುಭ ಸಮಾಚಾರ ಎನ್ನುವಂತೆ ಕೆಲವು ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್ ಅನ್ನು ಆರಂಭಿಸಿವೆ. ಕ್ಯಾಂಪಸ್‌ ಸೆಲೆಕ್ಷನ್‌ ಸೀಸನ್ ಇದು. ವಿಶೇಷವಾಗಿ ಟೆಕ್‌ ಕಂಪನಿಗಳು ಉತ್ತಮ ಟ್ಯಾಲೆಂಟ್‌ಗಾಗಿ ಸರ್ಚ್‌ ಮಾಡುವ ಕಾಲವಾಗಿದ್ದು, ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ರೌಂಡ್‌ ಹಾಕುತ್ತಿರುತ್ತಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕ್ಯಾಂಪಸ್‌ ಸೆಲೆಕ್ಷನ್‌ ಸೀಸನ್ ಇದು. ವಿಶೇಷವಾಗಿ ಟೆಕ್‌ ಕಂಪನಿಗಳು ಉತ್ತಮ ಟ್ಯಾಲೆಂಟ್‌ಗಾಗಿ ಹುಡುಕುವ ಕಾಲವಾಗಿದ್ದು, ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ರೌಂಡ್‌ ಹಾಕುತ್ತಿರುತ್ತಾರೆ. ಇನ್ಫೋಸಿಸ್ ಮತ್ತು ಕಾಗ್ನಿಜಂಟ್ ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್‌ಗಾಗಿ ಪ್ಲಾನ್‌ ಮಾಡಿರುತ್ತವೆ. ಇಂತಹ ಸಮಯದಲ್ಲಿ ಉದ್ಯೋಗವನ್ನು ಅರಸುತ್ತಿರುವ ಅಭ್ಯರ್ಥಿಗಳಿಗೆ ಜಾಬ್‌ ರೋಲ್ ಮತ್ತು ವೇತನ ಆಫರ್‌ ಎರಡರ ಬಗ್ಗೆಯೂ ಕುತೂಹಲವಿರುತ್ತದೆ. ಫ್ರೆಶರ್‌ಗಳಿಗೆ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ಉತ್ತಮ ಸಂಬಳವನ್ನು ನೀಡಲಾಗುತ್ತದೆ. ಅಂತಹ ಜಾಬ್‌ ರೋಲ್‌ಗಳು ಟೆಕ್‌ ಕಂಪನಿಗಳಲಿದ್ದು, ಅವುಗಳ ಪ್ರೊಫೈಲ್ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಸಾಫ್ಟ್‌ವೇರ್‌ ಡೆವಲಪರ್‌ನ ಪ್ರಾಥಮಿಕ ಕೆಲಸವೆಂದರೆ ಅಪ್ಲಿಕೇಶನ್‌ ಅಥವಾ ಸಾಫ್ಟ್‌ವೇರ್‌ ಡೆವಲಪ್‌ ಮಾಡುವುದು. ಅಲ್ಲದೇ ಸಾಫ್ಟ್‌ವೇರ್‌ನ ಸಂಪೂರ್ಣ ಡೆವಲಪ್‌ಮೆಂಟ್‌ ಪ್ರಕ್ರಿಯೆ ನೋಡಿಕೊಳ್ಳುವುದು. ಈ ರೋಲ್‌ಗೆ ಕಂಪ್ಯೂಟರ್ ಸೈನ್ಸ್‌ ಪದವಿ, ಸಾಫ್ಟ್‌ವೇರ್ ಇಂಜಿನಿಯರಿಂಗ್, ಬಿಇ ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು.

ಮೊಬೈಲ್‌ ಡೆವಲಪರ್‌ಗಳನ್ನು ಸಾಫ್ಟ್‌ವೇರ್ ಡೆವಲಪರ್‌ ಎಂದೇ ಪರಿಗಣಿಸಲಾಗುತ್ತದೆ. ಆದರೆ ಈ ರೋಲ್‌ ನಿರ್ವಹಿಸುವವರು ಹೆಚ್ಚಾಗಿ ಮೊಬೈಲ್‌ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್, ಐಒಎಸ್‌, ವಿಂಡೋಸ್‌ ವೇದಿಕೆಗಳಿಗೆ ಬಿಲ್ಡ್‌ ಮಾಡಬೇಕಾಗುತ್ತದೆ. ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ ಬಳಕೆದಾರರು ಹೆಚ್ಚಾಗುತ್ತಿರುವವರೆಗೂ ಮೊಬೈಲ್‌ ಡೆವಲಪರ್‌ಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ಈ ಹುದ್ದೆಯ ಆಕಾಂಕ್ಷಿಗಳು ಕಂಪ್ಯೂಟರ್ ಸೈನ್ಸ್‌ ಡಿಗ್ರಿ ಅಥವಾ ಬಿಇ ಅಥವಾ ಇನ್ಫಾರ್ಮೇಶನ್ ಸಿಸ್ಟಮ್‌ ಬಗ್ಗೆ ವಿದ್ಯಾರ್ಹತೆ ಪಡೆದಿರಬೇಕು.

ಇನ್ಫಾರ್ಮೇಶನ್ ಸೆಕ್ಯೂರಿಟಿ ಅನಾಲಿಸ್ಟ್‌ ಒಂದು ಕಂಪನಿಯ ಮಾಹಿತಿಗಳನ್ನು, ಮಾಹಿತಿ ವ್ಯವಸ್ಥೆಯನ್ನು ಕಾಪಾಡುವ, ಸೆಕ್ಯೂರಿಟಿ ಮಾನದಂಡಗಳನ್ನು ಅಪ್ಡೇಟ್‌ ಮಾಡುವ ಕೆಲಸವನ್ನು ನಿರ್ವಹಿಸಬೇಕು. ಈ ಹುದ್ದೆಗೂ ಕಂಪ್ಯೂಟರ್ ಸೈನ್ಸ್‌ ಬ್ಯಾಚುಲರ್ ಡಿಗ್ರಿ ಅಥವಾ ಡಾಟಾ ಸೆಕ್ಯೂರಿಟಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಮಾಡಿರಬೇಕು.

ಒಂದು ಕಂಪನಿಯ ಹಿಂದಿನ ಕಂಪ್ಯೂಟರ್ ಎಕೋಸಿಸ್ಟಮ್‌ ಅನ್ನು ಅಧ್ಯಯನ ಮಾಡಿ, ಇನ್ನಷ್ಟು ಉತ್ತಮ ವ್ಯವಸ್ಥೆಗೆ ಪರಿಹಾರ ನೀಡುವ ಕೆಲಸ ಮಾಡುವುದೇ ಕಂಪ್ಯೂಟರ್ ಸಿಸ್ಟಮ್‌ ಅನಾಲಿಸ್ಟ್‌ಗಳ ಕರ್ತವ್ಯ. ಕಂಪನಿಯ ಕಾರ್ಯವೈಖರಿಗೆ ಅನುಗುಣವಾಗಿ ಉತ್ತಮ ಕಂಪ್ಯೂಟರ್ ಸಿಸ್ಟಮ್ ವ್ಯವಸ್ಥೆ ಮಾಡಬೇಕು. ಈ ಉದ್ಯೋಗ ನಿರ್ವಹಿಸಲು ಕಂಪ್ಯೂಟರ್ ಸೈನ್ಸ್‌ ಅಥವಾ ಇನ್ಫಾರ್ಮೇಶನ್‌ ಸೈನ್ಸ್‌ ಡಿಗ್ರಿ ಪಡೆದಿರಬೇಕು. ಉತ್ತಮ ಅನಾಲಿಸಿಸ್‌ನೊಂದಿಗೆ ಸಮಸ್ಯೆ ನಿವಾರಿಸುವವರು ನೀವಾಗಿದ್ದರೇ, ಉತ್ತಮ ವಿವರಗಳಿಗೆ ಗಮನ ಕೊಡುವವರು ನೀವಾಗಿದ್ದರೇ ಇಲ್ಲಿವೆ ಉದ್ಯೋಗಾವಕಾಶ. UI / UX ಡಿಸೈನರ್‌ಗಳು ನಾವಿಗೇಷನ್ ಕಾಂಪೋನೆಂಟ್‌ಗಳನ್ನು ಬಿಲ್ಡ್‌ ಮಾಡುವ, ಬಳಕೆದಾರರ ಬೇಡಿಕೆಗೆ ಅನುಗುಣವಾಗಿ ಗ್ರಾಫಿಕ್ ಎಲಿಮೆಂಟ್‌ಗಳನ್ನು ಡಿಸೈನ್‌ ಮಾಡುವ ಕೆಲಸ ಮಾಡಬೇಕಾಗುತ್ತದೆ. ಕಂಪ್ಯೂಟರ್ ಸೈನ್ಸ್‌ ಪದವಿ / ಬಿಇ ಜೊತೆಗೆ ಡಿಜಿಟಲ್ ಪ್ರಾಡಕ್ಟ್‌ಗಳಿಗೆ ಡಿಸೈನ್‌ ಅನುಭವವುಳ್ಳವರು ಈ ಉದ್ಯೋಗ ಪಡೆದು ಉತ್ತಮ ಸ್ಯಾಲರಿ ಗಳಿಸಬಹುದು.

Leave A Reply

Your email address will not be published.