ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಮೂಡಿ ಬರುತ್ತಿದ್ದು , ಯಾವ ಧಾರಾವಾಹಿಗಳು ಸಿನಿಮಾಗಿಂತ ಕಡಿಮೆ ಏನಿಲ್ಲ ಎಂಬಂತೆ ಇದೆ. ಕನ್ನಡದ ಧಾರಾವಾಹಿಗಳು ಹೆಣ್ಣು ಮಕ್ಕಳನ್ನಷ್ಟೇ ಅಲ್ಲದೇ ಧಾರಾವಾಹಿಗಳು ಎಂದರೆ ಮೂಗು ಮುರಿಯುತ್ತಿದ್ದ ಗಂಡು ಮಕ್ಕಳನ್ನು ಸಹ ತನ್ನತ್ತ ಆಕರ್ಷಿಸುತ್ತಿದೆ. ಕನ್ನಡದಲ್ಲಿ ಹಲವಾರು ಧಾರಾವಾಹಿಗಳು ಸಖತ್ ಹಿಟ್ ಆಗಿದ್ದು, ಇತ್ತೀಚಿನ ದಿನಗಳಲ್ಲಿ ಹಿಟ್ ಆದ ಧಾರಾವಾಹಿಗಳಲ್ಲಿ ಈಗ ಒಂದು ವರ್ಷದ ಹಿಂದಿನಿಂದ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯೂ ಕೂಡಾ ಒಂದು.

ಈ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದರೆ, ಅನಿರುದ್ ಅವರು ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ಅವರು ಅನು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ಮತ್ತೊಂದು ಪ್ರಮುಖ ಪಾತ್ರ ಎಂದರೆ ಪುಷ್ಪಾ. ಪುಷ್ಪಾ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ಅಂದರೆ, ಅನು ಸಿರಿಮನೆ ಅವರ ತಾಯಿಯಾಗಿ ಹಾಗೂ ಸುಬ್ಬು ಸಿರಿಮನೆ ಅವರ ಪತ್ನಿಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ನಾವು ಈ ಲೇಖನದ ಮೂಲಕ ಪುಷ್ಪ ಪಾತ್ರಧಾರಿಯಾಗಿ ಅಭಿನಯಿಸಿದ ಅಪೂರ್ವ ಅವರ ಮಗಳು ಹೇಳಿದ್ದಾಳೆ ಎನ್ನುವುದನ್ನು ನೋಡೋಣ.

ಪುಷ್ಪಾ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸಖತ್ ಆಗಿ ನಟನೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಅಪೂರ್ವ ಅವರು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಗಿಣಿ ಧಾರಾವಾಹಿಯಲ್ಲಿ ನಾಯಕ ನಟನ ಚಿಕ್ಕಮ್ಮನ ಪಾತ್ರದಲ್ಲಿ ಅಭಿನಯ ಮಾಡಿದ್ದರು. ಅರಗಿಣಿ ಧಾರಾವಾಹಿಯಲ್ಲಿ ಇವರ ಕನ್ನಡ ಮಿಶ್ರಿತ ಅರೆಬರೆ ಇಂಗ್ಲಿಷ್ ಭಾಷೆಯಿಂದ (ಒಂದು ರೀತಿಯಲ್ಲಿ ಕಂಗ್ಲೀಷ್ ಅಂದರೂ ತಪ್ಪಾಗಲಾರದು) ವೀಕ್ಷಕರ ಮನ ಗೆದ್ದಿದ್ದರು. ಇನ್ನು ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಅಪೂರ್ವ ಅವರು ಪುಷ್ಪಾ ಮತ್ತು ಸುಬ್ಬು ಎಂಬ ಜೋಡಿಯ ಮೂಲಕ ಸಖತ್ ಫೇಮಸ್ ಕೂಡ ಆಗಿದ್ದಾರೆ.

ಇವರು ಮಾತನಾಡುವ ಶೈಲಿ, ಇವರು ಜಗಳವಾಡುವ ರೀತಿ, ಅಮ್ಮ ಮಗಳ ಸಂಬಂಧ, ಗಂಡ ಹೆಂಡತಿ ಸಂಬಂಧ ಅಭಿಮಾನಿಗಳಿಗೆ ಬಹಳ ಇಷ್ಟ. ಒಟ್ಟಾರೆಯಾಗಿ ಹೇಳುವುದಾದರೆ ಸಾಮಾನ್ಯ ಮಹಿಳೆ ಯಾವ ರೀತಿ ವರ್ತಿಸುತ್ತರೆಯೋ ಅದೇ ರೀತಿ ಪುಷ್ಪಾ ಅವರು ಕೂಡ ನಟನೆ ಮಾಡುತ್ತಿದ್ದು ಜನರ ಮನಸ್ಸನ್ನು ಗೆದ್ದಿದ್ದಾರೆ. ಇನ್ನು ಪುಷ್ಪಾ ಪಾತ್ರಧಾರಿಯ ನಿಜವಾದ ಹೆಸರು ಅಪೂರ್ವ. ಈ ಅಪೂರ್ವ ಅವರಿಗೆ ನಿಜ ಜೀವನದಲ್ಲಿ ಒಬ್ಬ ಮಗಳು ಕೂಡ ಇದ್ದಾರೆ. ಇಲ್ಲಿ ಅವರ ಮಗಳು ಹೇಗಿದ್ದಾರೆ ಎಂದು ನೀವು ನೋಡಬಹುದು.

ಇನ್ನು ಅಪೂರ್ವ ಅವರಿಗೆ ಈ ಪುಷ್ಪಾ ಪಾತ್ರವು ಖ್ಯಾತಿಯನ್ನು ತಂದು ಕೊಟ್ಟಿದೆ. ಇವರು ಎಲ್ಲೆ ಹೋದರು ಕೂಡ ಜನ ಇವರನ್ನು ಪುಷ್ಪಾ ಎಂತಲೇ ಗುರ್ತಿಸುತ್ತಾರೆ. ಅಷ್ಟರ ಮಟ್ಟಿಗೆ ಈ ಪಾತ್ರವು ಅಪೂರ್ವ ಅವರಿಗೆ ಖ್ಯಾತಿಯನ್ನು ತಂದು ಕೊಟ್ಟಿದೆ. ಈ ಜೊತೆ ಜೊತೆಯಲಿ ಧಾರಾವಾಹಿಯಷ್ಟೇ ಅಲ್ಲದೆ ಕನ್ನಡದ ಹಲವಾರು ಧಾರಾವಾಹಿಗಳಲ್ಲಿ ಕೂಡಾ ಬಣ್ಣವನ್ನು ಹಚ್ಚಿ ನಟನೆ ಮಾಡಿರುವ ಇವರು ಕಿರುತೆರೆಗೆ ಮಾತ್ರ ಸೀಮಿತವಾಗಿರದೇ ಬೆಳ್ಳಿತೆರೆಯಲ್ಲೂ ಕೂಡ ತಮ್ಮ ನಟನೆಯ ಛಾಪನ್ನು ಮೂಡಿಸಿದ್ದಾರೆ. ಇನ್ನು ಇವರಿಗೆ ಒಬ್ಬಳು ಮಗಳಿದ್ದು, ಧಾರಾವಾಹಿಯಲ್ಲೂ ಕೂಡ ಒಬ್ಬಳೆ ಮಗಳು ಮತ್ತು ನಿಜ ಜೀವನದಲ್ಲೂ ಕೂಡ ಒಬ್ಬಳೆ ಮಗಳು.

ಇನ್ನು ಅಪೂರ್ವ ಅವರಿಗೆ ಮಗಳು ಎಂದರೆ ಪಂಚ ಪ್ರಾಣ. ಚಿತ್ರೀಕರಣ ಇರಲಿಲ್ಲ ಎಂದರೆ ಸಾಕು ಅಪೂರ್ವ ಅವರು ಹೆಚ್ಚಿನ ಸಮಯವನ್ನು ಮಗಳೊಂದಿಗೆ ಕಳೆಯುತ್ತಾರೆ. ಹೀಗೆ ತಮ್ಮ ಮಗಳನ್ನು ಇವರು ಬಹಳ ಇಷ್ಟ ಪಡುತ್ತಾರೆ. ಇನ್ನು ಪುಷ್ಪ ಪಾತ್ರಧಾರಿ ಅಪೂರ್ವ ಅವರಿಗೆ ಪ್ರತೀ ವರ್ಷ ಜೀ ಕನ್ನಡ ವಾಹಿನಿ ಆಯೋಜಿಸುವ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸುಬ್ಬು ಸಿರಿಮನೆ ಹಾಗೂ ಪುಷ್ಪ ಜೋಡಿಗೆ ಬೆಸ್ಟ್ ಅಪ್ಪ ಅಮ್ಮ ಪ್ರಶಸ್ತಿ ಕೂಡಾ ದೊರಕಿದ್ದು , ನಿನ ಜೀವನದಲ್ಲಿ ಕೂಡಾ ಪುಷ್ಪ / ಅಪೂರ್ವ ಅವರು ಬೆಸ್ಟ್ ಅಮ್ಮಾ ಎಂಬುದನ್ನು ನಿರೂಪಿಸಿದ್ದಾರೆ.

Leave a Reply

Your email address will not be published. Required fields are marked *