ಓದಿನ ನಂತರ ಏನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ ಸ್ವಂತ ಉದ್ಯೋಗ ಮಾಡುವುದಾ ಅಥವಾ ಜಾಬ್ ಮಾಡುವುದಾ. ಬಿಸಿನೆಸ್ ಮತ್ತು ಜಾಬ್ ಮಧ್ಯೆ ಇರುವ ವ್ಯತ್ಯಾಸವನ್ನು ಈ ಲೇಖನದ ಮೂಲಕ ತಿಳಿಯೋಣ.

ನಮ್ಮ ಎಜುಕೇಶನ್ ಮುಗಿದಕೂಡಲೆ ಜಾಬ್ ವಿಷಯಕ್ಕೆ ಬಂದರೆ ನಮ್ಮ ಮುಂದೆ ಸಾಮಾನ್ಯವಾಗಿ ಎರಡು ಆಯ್ಕೆಗಳಿರುತ್ತವೆ ಮೊದಲನೆಯದು ಒಳ್ಳೆ ಜಾಬ್ ಮಾಡುವುದು ಇನ್ನೊಂದು ಸ್ವಂತ ಉದ್ಯೋಗ ಮಾಡುವುದು. ನೀವು ಯಾವುದಾದರೂ ಕಂಪನಿಯಲ್ಲಿ ಜಾಬ್ ಮಾಡುತ್ತಿದ್ದರೆ ನೀವೆಷ್ಟೇ ಕೆಲಸ ಮಾಡಿದರು ತಿಂಗಳಲ್ಲಿ ಬರುವ ಸಂಬಳ ಫಿಕ್ಸ್ ಇರುತ್ತದೆ. ಕೆಲಸ ಮಾಡುವ ಸಮಯ ಫಿಕ್ಸ್ ಆಗಿರುತ್ತದೆ ಏನ್ ಕೆಲಸ ಮಾಡಬೇಕೆಂದು ಹೇಳಿರುತ್ತಾರೆ. ಬಿಸಿನೆಸ್ ಬಗ್ಗೆ ನೋಡುವುದಾದರೆ ತಿಂಗಳಿಗೆ ಬರುವ ಸಂಬಳದ ಬಗ್ಗೆ ಫಿಕ್ಸ್ ಇರುವುದಿಲ್ಲ ಟೈಮ್ ಫಿಕ್ಸ್ ಇರುವುದಿಲ್ಲ. ಎಲ್ಲಿ ಏನು ಎಷ್ಟೊತ್ತ ಕೆಲಸ ಮಾಡಬೇಕೆಂಬುದರ ಬಗ್ಗೆ ಮೊದಲೇ ತಿಳಿದಿರುವುದಿಲ್ಲ. ಜಾಬ್ ಮತ್ತು ಬಿಸಿನೆಸ್ ಬೆಳವಣಿಗೆಯನ್ನು ಒಂದು ಉದಾಹರಣೆಯ ಮೂಲಕ ತಿಳಿಯುವದಾದರೆ ಒಬ್ಬ BE ಪಾಸ್ ಮತ್ತು ಒಬ್ಬ BA ಫೇಲ್ ಆಗಿದ್ದಾನೆ. ಸುನೀಲ BE ಪಾಸ್ ಮಾಡಿ ಒಂದು ಕಂಪನಿಯಲ್ಲಿ ಕೆಲಸ ಸಿಗುತ್ತದೆ ಮನೆಯವರೆಲ್ಲರೂ ಖುಷಿಯಾಗುತ್ತಾರೆ. ಅವನ ಗೆಳೆಯ ಅನೀಲ BA ಫೇಲ್ ಆಗುತ್ತಾನೆ ಮನೆಯವರೆಲ್ಲರೂ ನಿರಾಶರಾಗುತ್ತಾರೆ ಅವನಿಗೆ ಓದಲು ಮನಸ್ಸಿರಲಿಲ್ಲ ಬಿಸಿನೆಸ್ ಬಗ್ಗೆ ಐಡಿಯಾಗಳಿದ್ದವು ಅವನಿಗೆ ಬಿಸಿನೆಸ್ ಶುರು ಮಾಡಲು 3 ಲಕ್ಷ ಹಣ ಬೇಕಾಗುತ್ತದೆ ತನ್ನ ಅಂಕಲ್ ಬಳಿ ಸಾಲ ಮಾಡಿ ಹಣ ತೆಗೆದುಕೊಳ್ಳುತ್ತಾನೆ ಬಟ್ಟೆ ಬಿಸಿನೆಸ್ ಶುರು ಮಾಡುತ್ತಾನೆ. ಸುನೀಲ ತನ್ನ ಸಂಬಳದಿಂದ ಬೈಕ್ ತೆಗೆದುಕೊಳ್ಳುತ್ತಾನೆ. ಅನೀಲ ತನ್ನ ಅಂಗಡಿಗೆ ಬೇರೆ ಬೇರೆ ರೀತಿಯ ಬಟ್ಟೆ ತರುತ್ತಾನೆ. 8ತಿಂಗಳ ನಂತರ ಸುನೀಲ ತನ್ನ ಬೈಕನ 20% ಕ್ಲಿಯರ್ ಮಾಡುತ್ತಾನೆ ಇನ್ನು 80,000ರೂ ಕೊಡಬೇಕಾಗುತ್ತದೆ. ಅನೀಲ ಒಂದು ಲಕ್ಷ ಹಣವನ್ನು ಸಾಲ ತೀರಿಸುತ್ತೇನೆ. ಒಂದು ವರ್ಷದ ನಂತರ ಸುನೀಲ ಹೈ ಸ್ಯಾಲರಿ ಬಗ್ಗೆ ಯೋಚಿಸುತ್ತಾನೆ ಕಂಪನಿಯಿಂದ ಸಿಗುವುದಿಲ್ಲ. ಅನೀಲಗೆ ಬಿಸಿನೆಸ್ ಲಿ 25% ಲಾಭವಾಗುತ್ತದೆ ಅವನು ಅಂಕಲ್ ಗೆ 1ಲಕ್ಷ ಕೊಡುತ್ತಾನೆ. ಸುನೀಲ ಬೈಕನ ಲೋನ್ ತುಂಬಿ 2ಲಕ್ಷ ಸಾಲಮಾಡಿ ಟಿ.ವಿ ಲ್ಯಾಪ್ ಟಾಪ್ ತೆಗೆದುಕೊಳ್ಳುತ್ತಾನೆ. ಅನೀಲ ಲಾಭ ಬಂದಿರುವುದರಿಂದ ಬೇರೆ ಊರಿನಲ್ಲೂ ಬಟ್ಟೆ ಅಂಗಡಿ ಇಡುತ್ತಾನೆ ಆದಾಯ ಹೆಚ್ಚಾಗುತ್ತದೆ.

ಸುನೀಲನಿಗೆ 10% ಸಂಬಳ ಜಾಸ್ತಿ ಸಿಗುತ್ತದೆ ಕಾರ ಲೋನ್ ಮಾಡಿ ಒಂದು ಕಾರನ್ನು ತೆಗೆದುಕೊಳ್ಳುತ್ತಾನೆ. ಅನೀಲ ಬೇರೆ ಬೇರೆ ಎರಡು ಶೋಪಗಳನ್ನು ತೆರೆಯುತ್ತಾನೆ ಸುನೀಲನಿಗಿಂತ ಅನೀಲನ ಸಂಬಳ 300% ಹೆಚ್ಚಾಗಿದೆ. ಸುನೀಲ 2ವರ್ಷದ ನಂತರ 2ಲಕ್ಷ ಸಾಲ ಮಾಡಿ ಮನೆ ಮಾಡುತ್ತಾನೆ. ಅನಿಲ 8ಬಟ್ಟೆ ಶೋಪಗಳ ಮಾಲೀಕನಾಗಿರುತ್ತಾನೆ ಮತ್ತು ರಿಸೇಲರ ಆಗಿರುತ್ತಾನೆ ರಿಸೇಲರ ಅಂದ್ರೆ ಬೇರೆ ಕಡೆ ಕಡಿಮೆ ಬೆಲೆಯಲ್ಲಿ ಖರೀದಿಸಿ ಮಾರುವುದು ಅಲ್ಲದೆ ಅನಿಲ ಬಳಿ 2 ಕಾರು ಮತ್ತು ಒಂದು ದೊಡ್ಡ ಮನೆ ಇರುತ್ತದೆ. ಸುನೀಲ ಚಿಂತಿತನಾದ ಅನೀಲ 5ವರ್ಷದ ನಂತರ 5ಲಕ್ಷ ಸಂಬಳ 8ಲಕ್ಷ ತಿಂಗಳಿನ ಆದಾಯವಾಗಿದೆ. ಅವನ ಬಳಿ 20ಜನ ಕೆಲಸಗಾರರಿದ್ದರು. ಸುನೀಲ ಆದಾಯ ತಿಂಗಳಿಗೆ 60,000ಇತ್ತು ಮತ್ತು ಲೋನ್ 40ಲಕ್ಷ ಇತ್ತು. ಹೀಗೆ ಸುನೀಲ ಸಾಲದಲ್ಲಿ ಮುಳುಗಿದ ಅನಿಲ ಹಣ ಗಳಿಸಿದ ಸ್ವಂತ ಉದ್ಯೋಗದಿಂದ. ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಧನ್ಯವಾದಗಳು.

Leave a Reply

Your email address will not be published. Required fields are marked *