ಆಚಾರ್ಯ ಚಾಣಕ್ಯ ಅವರು ತಿಳಿಸುವ ಐದು ಅಂಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ಮುಂದೆ ಬರಬಹುದು. ಅವರು ತಿಳಿಸಿರುವ ಐದು ಅಂಶಗಳು ಏನು ಅನ್ನೋದು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಚಾಣಕ್ಯ ಹೇಳುವ ಪ್ರಕಾರ ನಾವು ಮೂರ್ಖರ ಜೊತೆ ಎಂದಿಗೂ ವಾದ – ವಿವಾದವನ್ನು ಮಾಡಬಾರದು. ನಿಮ್ಮ ಸ್ನೇಹಿತರಲ್ಲಿ ಕೆಲವರಿಗೆ ಈ ರೀತಿಯ ಮನೋಭಾವನೆಯವರು ಇರುತ್ತಾರೆ ಯಾರೂ ಯಾವುದೇ ಮಾತನ್ನು ಹೇಳಿದರೂ ಕೂಡ ಅವರು ನಿಜ ಎಂದು ಒಪ್ಪಿಕೊಳ್ಳುವುದಿಲ್ಲ ಅದರ ಬದಲು ತಮ್ಮದೇ ವಾದ ಮಂಡಿಸುತ್ತಾರೆ. ತಾವು ಹೇಳಿದ ಮಾತೇ ಸರಿ ಇನ್ನೊಬ್ಬರು ಹೇಳಿದ ಮಾತು ತಪ್ಪು ಎನ್ನುವುದು ಅವರ ವಾದವಾಗಿರುತ್ತದೆ. ಯಾವುದೇ ತಿಳುವಳಿಕೆ ಇರುತ್ತದೆಯೊ ಅಂತಹ ವ್ಯಕ್ತಿಯ ಜೊತೆ ಮಾತನಾಡಿ ಪ್ರಯೋಜನ ಅನಿಸಿಕೊಳ್ಳುತ್ತದೆ ಆದರೆ ಯಾವ ವ್ಯಕ್ತಿ ಅರ್ಧ ಜ್ಞಾನವನ್ನು ಹೊಂದಿರುತ್ತಾನೋ ಅಂತಹ ವ್ಯಕ್ತಿಯ ಜೊತೆ ಮಾತನಾಡುವುದು ವ್ಯರ್ಥ. ಯಾರಾದರೂ ಏನಾದರೂ ಒಳ್ಳೆಯ ಮಾತುಗಳನ್ನು ಹೇಳಿದರೆ ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಟ್ಟುಬಿಡುತ್ತಾರೆ. ಅಂದರೆ ಯಾರು ಏನು ಹೇಳುತ್ತಾರೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಷ್ಟು ತಾಳ್ಮೆ ಕೂಡ ಅವರಲ್ಲಿರುವುದಿಲ್ಲ. ಹಾಗಿದ್ದಾಗ ಅಂತಹವರ ಮಧ್ಯೆ ನಾವು ಕೂಡ ಅವರು ಹೇಳಿದ ಮಾತನ್ನು ಅವರ ಹಾಗೆ ನಿರ್ಲಕ್ಷಿಸಬೇಕು. ಆಗ ಅವರು ಕೂಡ ಸುಮ್ಮನೆ ಇರುತ್ತಾರೆ ನಾವು ನೆಮ್ಮದಿಯಿಂದ ಇರಬಹುದು.

ಆಚಾರ್ಯ ಚಾಣಕ್ಯ ತಿಳಿಸುವ ಎರಡನೇ ಮಾತು ಎಂದರೆ ನಮಗೆ ಎಷ್ಟೇ ಹತ್ತಿರದ ಸ್ನೇಹಿತರು ಇದ್ದರೂ ಕೂಡ ಅವರ ಬಳಿ ನಮ್ಮ ಗುಟ್ಟನ್ನು ಅಥವ ನಮ್ಮ ವೀಕ್ನೆಸ್ ಪಾಯಿಂಟನ್ನು ಹೇಳಿಕೊಳ್ಳಬಾರದು. ನಮ್ಮ ಜೀವನದ ಎಲ್ಲಾ ವಿಷಯಗಳನ್ನು ಕೂಡ ನಾವು ನಮ್ಮ ಆಪ್ತ ಸ್ನೇಹಿತರ ಬಳಿ ಹಂಚಿಕೊಳ್ಳುತ್ತೇವೆ. ಆದರೆ ನಮಗೆ ತಿಳಿದಿರಬೇಕಾದ ಒಂದು ವಿಷಯ ಎಂದರೆ, ನಮ್ಮ ಜೀವನದಲ್ಲಿ ಇವತ್ತು ಇದ್ದವರು ನಾಳೆಗೆ ಇರುವುದಿಲ್ಲ ಇವತ್ತು ಸ್ನೇಹಿತನಾದವನು ನಾಳೆಯೂ ಸ್ನೇಹಿತನಾಗಿಯೇ ಇರುವುದಿಲ್ಲ ಶತ್ರುವೂ ಆಗಬಹುದು. ನಮ್ಮ ಜೀವನದಲ್ಲಿ ಶತ್ರುಗಳಿಗಿಂತ ದೊಡ್ಡ ಶತ್ರು ಯಾರು ಎಂದರೆ ನಮ್ಮ ಮೊದಲಿನ ಸ್ನೇಹಿತರಾಗಿದ್ದವರು. ಅಂತಹ ವ್ಯಕ್ತಿಗಳು ನಿಮ್ಮ ಪ್ರೀತಿ ವಿಷಯದ ಬಗ್ಗೆ ಅಂದರೆ ನಿಮ್ಮ ಒಳ್ಳೆಯತನ ಕೆಟ್ಟತನ ಎಲ್ಲವನ್ನು ಅರಿತುಕೊಂಡಿರುತ್ತಾರೆ. ಆತ ನಿಮ್ಮ ಜೀವನದಲ್ಲಿ ಏನಾದರೂ ಆಟವಾಡಿ ಜೀವನವನ್ನು ಹಾಳುಗೆಡವಲು ಬಯಸಬಹುದು ಸ್ನೇಹಿತರಾಗಿದ್ದ ಸಂದರ್ಭದಲ್ಲಿ ಸ್ನೇಹಿತರ ಬಳಿ ನಿಮ್ಮ ವಿಕ್ನೆಸ್ ಪಾಯಿಂಟ್ ಏನಾದರೂ ಹೇಳಿ ಕೊಂಡಿದ್ದರೆ ಅದನ್ನು ಅವರ ಉಪಯೋಗಕ್ಕೆ ಬಳಸಿಕೊಂಡು ನಿಮ್ಮ ಜೀವನದಲ್ಲಿ ಆಟವಾಡಬಹುದು. ಹಾಗಾಗಿ ಯಾರೊಂದಿಗಾದರೂ ಸ್ನೇಹ ಬೆಳೆಸುವ ಮುನ್ನ ಯೋಚನೆ ಮಾಡಿ ಸ್ನೇಹ ಮಾಡಬೇಕು ಎಂದು ಆಚಾರ್ಯ ಚಾಣಕ್ಯ ತಿಳಿಸುತ್ತಾರೆ.

ಆಚಾರ್ಯ ಚಾಣಕ್ಯ ತಿಳಿಸುವ ಮೂರನೇ ಸೂತ್ರ ಎಂದರೆ ನಮ್ಮ ಒಂದು ದೋಷದಿಂದಾಗಿ ಉಳಿದ ಎಲ್ಲಾ ಒಳ್ಳೆ ತನಗಳು ನಶ್ವರ ವಾಗುತ್ತವೆ. ಉದಾಹರಣೆಗೆ ನಮ್ಮಲ್ಲಿ ಒಂದು ಒಳ್ಳೆಯ ದನಗಳಂತೂ ಅದರಲ್ಲಿ ಒಂದು ದೋಷ ಇದ್ದರೆ ಜನರಿಗೆ ನಮ್ಮಲ್ಲಿ ಕಾಣುವುದು ಒಳ್ಳೆತನವನ್ನು ಗುರುತಿಸುವುದಿಲ್ಲ ಬದಲಿಗೆ ನಮ್ಮಲ್ಲಿರುವ ಒಂದು ದೋಷವನ್ನು ಎತ್ತಿಹಿಡಿದು ತೋರಿಸುತ್ತಾರೆ. ನಾವೆಷ್ಟೇ ಒಳ್ಳೆಯವರೇ ಆಗಿದ್ದರು ನಮ್ಮೆದುರು ಇರುವಂತಹ ವ್ಯಕ್ತಿಗಳು ನಮ್ಮ ಒಳ್ಳೆಯತನವನ್ನು ಗುರುತಿಸದೆ ನಮ್ಮಲ್ಲಿರುವ ದೋಷವನ್ನೇ ಪರಿಗಣಿಸುತ್ತಾರೆ. ಹಾಗಾಗಿ ಒಳ್ಳೆಯ ಕೆಲಸ ಮಾಡಿ ಆ ಮೂಲಕ ಹಣವನ್ನು ಸಂಪಾದಿಸಿ. ಅಹಂಕಾರಿ ಆಗಿರಬಾರದು ದಾನ ಧರ್ಮವನ್ನು ಮಾಡಬೇಕು. ಆದರೆ ಎಡಗೈಯಲ್ಲಿ ಮಾಡಿದ ಸಹಾಯ ಬಲಗೈಗೆ ಈಗ ತಿಳಿಯಬಾರದು ಎನ್ನುವ ಹಾಗೆ ನಾವು ದಾನ ಧರ್ಮವನ್ನು ಮಾಡಬೇಕು ಆದರೆ ನಾವು ಮಾಡಿದ ದಾನ-ಧರ್ಮ ಇನ್ನೊಬ್ಬರಿಗೆ ತಿಳಿಯಬಾರದು ಎಂದರ್ಥ.

ಆಚಾರ್ಯ ಚಾಣಕ್ಯ ಅವರು ತಿಳಿಸುವ ನಾಲ್ಕನೇ ಅಂಶ ಎಂದರೆ ಹಣವನ್ನು ಖರ್ಚು ಮಾಡುವಾಗ ಯೋಚನೆ ಮಾಡಿ ಖರ್ಚು ಮಾಡಬೇಕು. ಅಂದರೆ ಇವತ್ತು ನಮ್ಮ ಕೈಯಲ್ಲಿ ಹಣವಿದೆ ಎಂದು ಇವತ್ತು ಎಲ್ಲ ಹಣವನ್ನು ಖರ್ಚು ಮಾಡಬಾರದು ನಾಳೆಯ ಬಗ್ಗೆಯೂ ಸ್ವಲ್ಪ ಯೋಚನೆ ಮಾಡಿ ಹಣವನ್ನು ಇಟ್ಟುಕೊಂಡು ಖರ್ಚು ಮಾಡಬೇಕು. ನಮ್ಮ ಜೀವನದಲ್ಲಿ ಎಲ್ಲಾ ದಿನ ಒಂದೇ ರೀತಿಯಾಗಿರುವುದಿಲ್ಲ ಇವತ್ತು ಒಳ್ಳೆಯದಾಗಿದ್ದರೆ ನಾಳೆದಿನ ಕೆಟ್ಟದಾಗಿರಬಹುದು. ನನ್ನಲ್ಲಿ ಸಾಕಷ್ಟು ದುಡ್ಡು ಆಸ್ತಿ ಇದೆ ಎಂದೆಂದಿಗೂ ಯಾವ ವ್ಯಕ್ತಿ ಯೋಚಿಸಬಾರದು. ಮೇಲೆ ಹತ್ತಿದ ವ್ಯಕ್ತಿ ಒಂದಲ್ಲ ಒಂದು ದಿನ ಪುನಹ ಭೂಮಿಗೆ ಬರಲೇಬೇಕು.

ಆಚಾರ್ಯ ಚಾಣಕ್ಯ ತಿಳಿಸುವ 5ನೇ ಅಂಶ ಎಂದರೆ , ಯಾವ ವ್ಯಕ್ತಿ ನಮ್ಮ ಮಾತನ್ನು ಕೇಳುವುದಿಲ್ಲ ಅಂತಹ ವ್ಯಕ್ತಿಗಳನ್ನು ನಾವು ನಂಬಲೇ ಬಾರದು. ನಿಮ್ಮ ಮಾತನ್ನು ಕೇಳಿಸಿಕೊಳ್ಳದ ಆ ವ್ಯಕ್ತಿಗೆ ನಿಮ್ಮ ಮೇಲೆ ಯಾವುದೇ ರೀತಿಯ ಗೌರವ ಇರುವುದಿಲ್ಲ. ಬದಲಿಗೆ ಇಂತಹ ವ್ಯಕ್ತಿಗಳು ತಾವು ಹೇಳಿದ್ದು ಸರಿ ತಮ್ಮ ಮಾತೆ ಆಗಬೇಕು ಎನ್ನುವ ಮನೋಭಾವದವರಾಗಿರುತ್ತಾರೇ. ಅಂತಹ ವ್ಯಕ್ತಿಗಳು ಎಂದಿಗೂ ಕೆಟ್ಟದ್ದನ್ನು ಯೋಚಿಸುತ್ತಿರುತ್ತಾರೆ ಇಂತಹ ವ್ಯಕ್ತಿಗಳ ಜೊತೆ ಎಂದಿಗೂ ನಿಮ್ಮ ಕಷ್ಟಗಳನ್ನು ಹಂಚಿಕೊಳ್ಳಲೇಬೇಡೀ. ಎಂದು ಆಚಾರ್ಯ ಚಾಣಕ್ಯ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *