ಯೋಗ ಮಾಡುವುದರಿಂದ ನಮಗೆ ಬಹಳ ಉಪಯೋಗವಿದೆ. ಅದರಲ್ಲಿ ಭುಜಂಗಾಸನದಿಂದ ಬಹಳಷ್ಟು ಪ್ರಯೋಜನಗಳಿವೆ ಅವುಗಳು ಯಾವುವೆಂದು ಈ ಲೇಖನದ ಮೂಲಕ ತಿಳಿಯೋಣ. ಭುಜಂಗಾಸನ ಮಾಡುವುದರಿಂದ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಕೆಲವು ಪ್ರಯೋಜನಗಳು ಈ ಕೆಳಗಿನಂತಿವೆ.

ಭುಜಂಗಾಸನ ಬೆನ್ನೆಲುಬು ಮತ್ತು ಹಿಂಭಾಗದ ಅಂಗಾಂಶಗಳ ಅಸ್ವಸ್ಥತೆಯನ್ನು ಗುಣಪಡಿಸುತ್ತದೆ. ಉಳುಕು, ಚಳಕು, ಬೆನ್ನು ಮೂಳೆಗಳ ಸ್ಥಳಾಂತರಗಳು ಸರಿಯಾಗುತ್ತದೆ. ಎದೆನೋವು ನಿವಾರಣೆಯಾಗುತ್ತದೆ, ಎದೆಯು ವಿಶಾಲಗೊಳ್ಳುತ್ತದೆ ಮತ್ತು ಹಸಿವು ಹೆಚ್ಚುತ್ತದೆ. ಮಹಿಳೆಯರಿಗೆ ಈ ಭಂಗಿ ಹೆಚ್ಚು ಉಪಯುಕ್ತವಾಗಿದೆ.

ಈ ಆಸನವನ್ನು ಮಾಡುವ ವಿಧಾನವೇಂದರೆಈ ಆಸನವನ್ನು ಬೆಳಗ್ಗೆ ಎದ್ದಕೂಡಲೆ ರೇಚಕ ಮತ್ತು ಪೂರಕ ಜೊತೆಗೆ ಮಾಡಿದರೆ ಆಯಾಸವೆಲ್ಲಾ ಹೋಗಿ ದಿನವೆಲ್ಲ ಉತ್ಸಾಹದಿಂದ ದುಡಿಯುವ ಶಕ್ತಿ ನೀಡುತ್ತದೆ. ರಕ್ತ ಪ್ರದರ, ಶ್ವೇತ ಪ್ರದರ ಉರಿಮೂತ್ರ ಮೊದಲಾದ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ರಕ್ತ ಚಲನೆಯು ನಿಯಮಿತವಾಗಿ ನಡೆಯುತ್ತದೆ. ಭುಜಂಗಾಸನದಲ್ಲಿ ಹಲವು ಪ್ರಭೇದಗಳಿವೆ. ಉದಾಹರಣೆಗೆ ಈ ಆಸನದ ಸ್ಥಿತಿಯಿಂದ ಅಂಗಗಳನ್ನು ಭುಜದ ಸ್ಥಾನಕ್ಕಿಂತ ಸ್ವಲ್ಪ ಹಿಂದೆ ಸರಿಸಿ ಕಟ್ಟನ್ನು ಚೆನ್ನಾಗಿ ಎತ್ತಿ ಕೈಗಳು ನೆಟ್ಟಗಾಗುವಂತೆ ಬೆನ್ನನ್ನು ಹಿಂದಕ್ಕೆ ನಿಧಾನವಾಗಿ ಒತ್ತುತ್ತಾ ಮೇಲೆ ನೋಡುತ್ತಿದ್ದರೆ ಅದೇ ಸರಳಹಸ್ತ ಭುಜಂಗಾಸನವಾಗುತ್ತದೆ. ರೇಚಕ ಪೂರಕಗಳೂ ಪೂರ್ಣಸ್ಥಿತಿಯಲ್ಲಿ ಕಾಲವೂ ಭುಜಂಗಾಸನದಂತೆಯೆ ಇರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ. ಈ ಆಸನವನ್ನು ಮಾಡುವ ಮೂಲಕ ಉತ್ಸಾಹದಿಂದ ಇರಲು ಸಾಧ್ಯ.

Leave a Reply

Your email address will not be published. Required fields are marked *

error: Content is protected !!