ಈಗಿನ ಕಾಲದವರಾದ ನಾವು ನೀವು ಜಾಯಿಕಾಯಿ ಎಂದರೆ ಕಣ್ಣು ಬಾಯಿ ಬಿಡುತ್ತೇವೆ. ಏಕೆಂದರೆ ಅದನ್ನು ನೋಡಿರುವುದೂ ಇಲ್ಲ ಮತ್ತು ಅದರ ಬಗ್ಗೆ ಕೇಳಿರುವುದೂ ಇಲ್ಲ. ಆದರೆ ಹಿಂದಿನ ಕಾಲದಲ್ಲಿ ಜಾಕಾಯಿಗೆ ವಿಶೇಷವಾದ ಮಹತ್ವವಿತ್ತು. ಆಯುರ್ವೇದ ಪದ್ಧತಿಯಲ್ಲಿ ಇದು ತುಂಬಾ ಹೆಚ್ಚಾಗಿ ಬಳಕೆ ಆಗುತ್ತಿತ್ತು. ಇಂದು ಕೇವಲ ಗ್ರಂಧಿಗೆ ಅಂಗಡಿಗಳಲ್ಲಿ ಮಾತ್ರ ಸಿಗುವ ಮಟ್ಟಿಗೆ ಜಾಕಾಯಿ ಬಂದು ತಲುಪಿದೆ. ಆದರೆ ಈಗಲೂ ಕೂಡ ಕೆಲವರು ಕೆಲವೊಂದು ಬೇಕರಿ ಉತ್ಪನ್ನಗಳನ್ನು ತಯಾರು ಮಾಡುವಾಗ ಸುವಾಸನೆಗೆ ಎಂದು ಜಾಕಾಯಿ ಬಳಕೆ ಮಾಡುತ್ತಾರೆ. ಸಾಧಾರಣವಾಗಿ ಜಾಕಾಯಿ ಒಂದು ಮಸಾಲೆ ಪದಾರ್ಥವಾಗಿದ್ದು, ಜಾಯಿಕಾಯಿ ಗಿಡ ಜಾವಿತ್ರಿ ಮತ್ತು ಜಾಯಿಕಾಯಿ ಎಂಬ ಎರಡು ಬಗೆಯ ಪದಾರ್ಥಗಳನ್ನು ಒಳಗೊಂಡಿರುತ್ತದೆ. ಎರಡಕ್ಕೂ ಕೂಡ ತಮ್ಮದೇ ಆದ ಆರೋಗ್ಯ ಪ್ರಯೋಜನಗಳು ಇವೆ. ಈ ಲೇಖನದ ಮೂಲಕ ನಾವು ಜಾಯಿಕಾಯಿ ಯ ಆರೋಗ್ಯಕರ ಗುಣಗಳ ಬಗ್ಗೆ ತಿಳಿದುಕೊಳ್ಳೋಣ.

ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿ ನಮ್ಮನ್ನು ಆರೋಗ್ಯವಾಗಿರಿಸುವ ಕೆಲಸದಿಂದ ಹಿಡಿದು ನಮ್ಮ ಮಂಡಿ ನೋವು, ಮೂಳೆ ನೋವು ಮತ್ತು ಮೈ ಕೈ ನೋವಿನ ಸಮಸ್ಯೆಯನ್ನು ದೂರ ಮಾಡುವವರೆಗೂ ಜಾಕಾಯಿಯ ಆರೋಗ್ಯ ಪ್ರಯೋಜನಗಳು ಇಂದು ನಮಗೆ ಸಿಗುತ್ತವೆ ಎಂದು ಹೇಳಬಹುದು. ಈ ಲೇಖನದಲ್ಲಿ ಜಾಯಿಕಾಯಿಗೆ ಸಂಬಂಧ ಪಟ್ಟ ಕೆಲವು ಸೂಕ್ಷ್ಮ ವಿಚಾರಗಳನ್ನು ತಿಳಿಸಿ ಕೊಡಲಾಗಿದೆ. ಜಾಯಿಕಾಯಿ ಇದರ ಹೆಸರನ್ನು ಕೇಳಿರುತ್ತೇವೆ. ಸಾಮಾನ್ಯವಾಗಿ ಈ ಜಾಯಿಕಾಯಿಯನ್ನು ಮಕ್ಕಳಿಗೆ ನೀಡುತ್ತಾರೆ, ಯಾಕೆಂದರೆ ಮಕ್ಕಳಿಗೆ ಶೀತ ಮತ್ತು ಕೆಮ್ಮು ಆದಾಗ ಈ ಜಾಯಿಕಾಯಿಯನ್ನು ತೇಯ್ದು ಅದರ ರಸವನ್ನು ಮಕ್ಕಳ ನಾಲಿಗೆಗೆ ಹಚ್ಚುತ್ತಾರೆ. ಈ ರಸವನ್ನು ಮಕ್ಕಳು ನುಂಗುವುದರಿಂದ ಕಫ ಕರಗುತ್ತದೆ, ಶೀತ ಕೆಮ್ಮು ಬೇಗನೆ ನಿವಾರಣೆಯಾಗುತ್ತದೆ. ಇನ್ನೂ ಜಾಯಿಕಾಯಿಯ ರಸವನ್ನು ಮಕ್ಕಳ ನಾಲಿಗೆ ಸವರುವುದರಿಂದ ಮಕ್ಕಳ ತೊದಲು ನುಡಿ ಕೂಡ ಬೇಗ ಪರಿಹಾರವಾಗುತ್ತದೆ. ಹೌದು ವಯಸ್ಸು ಹೆಚ್ಚುತ್ತಾ ಇದ್ದರೂ, ಮಕ್ಕಳು ತೊದಲು ನುಡಿ ಅಲ್ಲಿಯ ಮಾತನಾಡುತ್ತಾ ಇರುತ್ತಾರೆ. ಅಂತಹ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದಕ್ಕೆ ಜಾಯಿಕಾಯಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇಂದು ನಮ್ಮ ನಿಮ್ಮೆಲ್ಲರ ಮಧ್ಯದಲ್ಲಿ ವಿಪರೀತ ದೇಹದ ತೂಕವನ್ನು ಹೊಂದಿ, ಬೊಜ್ಜಿನ ಪ್ರಮಾಣವನ್ನು ಹೆಚ್ಚಾಗಿ ದೇಹದಲ್ಲಿ ಸೇರಿಸಿಕೊಂಡು ಕಷ್ಟ ಪಡುವ ಬಹಳಷ್ಟು ಮಂದಿ ಇದ್ದಾರೆ. ಮೂರರಲ್ಲಿ ಒಬ್ಬರು ಇಂತಹ ಸಮಸ್ಯೆಯನ್ನು ಖಂಡಿತವಾಗಿ ಅನುಭವಿಸುತ್ತಿರುತ್ತಾರೆ.

ತಮ್ಮ ಬಗೆ ಬಗೆಯ ಡಯಟ್ ಪದ್ಧತಿಗಳನ್ನು ಅನುಸರಿಸುವುದರಿಂದ ಹಿಡಿದು ಬೆಳಗಿನ ಸಮಯದಲ್ಲಿ ಗಿಡಮೂಲಿಕೆಗಳ ಚಹಾ ಕುಡಿದು, ರಾತ್ರಿ ಉಪವಾಸವಿದ್ದು, ಮಧ್ಯಾಹ್ನದ ಸಮಯದಲ್ಲಿ ಇಲ್ಲವೆಂದರೆ ಸಂಜೆಯ ಸಮಯದಲ್ಲಿ ಸಣ್ಣ ಪುಟ್ಟ ವ್ಯಾಯಾಮಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿರುವ ವರು ಅದೆಷ್ಟೋ ಮಂದಿ ಇದ್ದಾರೆ.

ಆದರೆ ದೇಹದ ತೂಕವನ್ನು ಕಡಿಮೆ ಮಾಡುವ ಶಕ್ತಿ ಜಾಯಿಕಾಯಿ ಗೆ ಇದೆ. ನೀವು ಮೇಲಿನ ಎಲ್ಲಾ ಪ್ರಯತ್ನಗಳನ್ನು ಪಟ್ಟು ಯಾವುದೇ ಬಗೆಯ ಪರಿಹಾರಗಳನ್ನು ಕಾಣದೆ ಇದ್ದರೆ ಈ ಒಂದು ಗಿಡಮೂಲಿಕೆಯನ್ನು ಪ್ರಯತ್ನ ಪಡಬಹುದು. ಏಕೆಂದರೆ ಇದರಲ್ಲಿ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುವ ಕೆಲವೊಂದು ಸಂಯುಕ್ತಗಳು ಅಡಗಿವೆ

ಇನ್ನೂ ಮೊಡವೆ ಸಮಸ್ಯೆ ತುಂಬ ಕಾಡುತ್ತಾ ಇದ್ದರೆ ಅದಕ್ಕೆ ಹೀಗೆ ಮಾಡಿ ಒಂದು ಕಲ್ಲಿನ ಮೇಲೆ ಹಾಲನ್ನು ಹಾಕಿ, ಆ ಹಾಲಿನ ಮೇಲೆ ಜಾಯಿಕಾಯಿಯನ್ನು ತೇಯಬೇಕು. ಆನಂತರ ಬಂದ ರಸವನ್ನು ಮುಖದ ಮೇಲೆ ಲೇಪನ ಮಾಡಿಕೊಂಡು ಅದು ಒಣಗಿದ ಮೇಲೆ ತಣ್ಣೀರಿನಿಂದ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಅಥವಾ ಜಾಯಿಕಾಯಿ ಪುಡಿಯನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ, ಮುಖಕ್ಕೆ ಪ್ಯಾಕ್ ಹಾಕಿಕೊಳ್ಳುವುದರಿಂದ ಸಹ ಮೊಡವೆ ಒಂದು ವಾರದಲ್ಲಿಯೆ ಒಣಗುತ್ತದೆ. ಇದರಿಂದ ಮೊಡವೆ ಸಮಸ್ಯೆ ಪರಿಹಾರವಾಗುತ್ತದೆ ತ್ವಚೆ ಕಾಂತಿಯುತವಾಗಿ ಕಾಣುತ್ತದೆ.

ಜಾಯಿಕಾಯಿ ಮತ್ತೊಂದು ಸಮಸ್ಯೆಯನ್ನು ಬೇಗ ಪರಿಹರಿಸುತ್ತದೆ. ಅದೇನೆಂದರೆ ನಿಮಗೇನಾದರೂ ಮೊಣಕಾಲು ನೋಯುತ್ತಾ ಇದ್ದರೆ, ಅಥವಾ ಮಂಡಿ ನೋವು ಇದ್ದರೆ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಜಾಯಿಕಾಯಿಯ ಪುಡಿಯನ್ನು ತೆಗೆದುಕೊಂಡು ಅಥವಾ ಇದನ್ನು ತುರಿದು ಇದರ ಪುಡಿಯನ್ನು ತೆಗೆದುಕೊಂಡು, ಇದಕ್ಕೆ ಸಾಸಿವೆ ಎಣ್ಣೆಯನ್ನು ಮಿಶ್ರ ಮಾಡಿ. ಈ ಮಿಶ್ರಣವನ್ನು ಸ್ವಲ್ಪ ಬೆಚ್ಚಗೆ ಮಾಡಿ ನೋವಾದ ಭಾಗಕ್ಕೆ ಲೇಪನ ಮಾಡಿಕೊಂಡು ಮಸಾಜ್ ಮಾಡಿಕೊಳ್ಳಬೇಕು. ನೀವೇ ಮಸಾಜ್ ಮಾಡಿಕೊಳ್ಳುವುದಕ್ಕಿಂತ ಯಾರಾದರೂ ಮಸಾಜ್ ಮಾಡಲು ಸಹಾಯ ಮಾಡಿದರೆ ಇನ್ನೂ ಪರಿಣಾಮಕಾರಿಯಾಗಿ ನಿಮಗೆ ಫಲಿತಾಂಶ ದೊರೆಯುತ್ತದೆ. ಶೀತ ಕೆಮ್ಮಿನ ಸಮಸ್ಯೆ ಬಂದರೆ ಜಾಯಿಕಾಯಿಯನ್ನು ತೇಯ್ದು, ಅದರ ರಸವನ್ನು ಮಿತಿಯಾಗಿ ಸೇರಿಸಿ ಮಕ್ಕಳಿಗೂ ಕೂಡ ನೀಡಬಹುದು. ಈ ರೀತಿ ಮಾಡುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ. ಈ ರೀತಿಯಾಗಿ ಜಾಯಿಕಾಯಿಯನ್ನು ಬಳಸಿ ಇನ್ನಷ್ಟು ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಮೊದಲೇ ಹೇಳಿದ ಹಾಗೆ ಜಾಯಿಕಾಯಿಯಲ್ಲಿ ನಿಮ್ಮ ದೇಹದ ಬೊಜ್ಜನ್ನು ಕರಗಿಸುವ ಅದ್ಭುತ ತಂತ್ರಗಾರಿಕೆ ಅಡಗಿದೆ. ಹಾಗಾಗಿ ನಿಮಗೆ ಎದುರಾಗುವ ಟೈಪ್ – 2 ಮಧುಮೇಹವನ್ನು ಸುಲಭವಾಗಿ ನಿಯಂತ್ರಣ ಮಾಡುತ್ತದೆ. ಕೇವಲ ವಯಸ್ಸಾದವರು ಮಾತ್ರವಲ್ಲದೆ ಈಗಿನ ಕಾಲದಲ್ಲಿ ವಯಸ್ಕರು ಮತ್ತು ಮಕ್ಕಳು ಕೂಡ ಬಹಳ ಚಿಕ್ಕ ವಯಸ್ಸಿಗೆ ಮಧುಮೇಹದ ಸಮಸ್ಯೆಗೆ ಗುರಿ ಆಗುತ್ತಿದ್ದಾರೆ. ಇದಕ್ಕೆ ಕಾರಣ ಅವರ ಮನೆಗಳಲ್ಲಿ ಅನುಸರಿಸುತ್ತಿರುವ ಕೆಲವು ಹೊಸ ಬಗೆಯ ಜೀವನ ಶೈಲಿಯ ಪದ್ಧತಿಗಳು. ತುಂಬಾ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವವರಿಗೆ ಇಂತಹ ದೊಡ್ಡ ದೊಡ್ಡ ಕಾಯಿಲೆಗಳು ತುಂಬಾ ದೀರ್ಘ ಕಾಲದವರೆಗೆ ಬಂದು ಕಾಡುತ್ತವೆ.

ಹಾಗಾಗಿ ಸಾಮಾನ್ಯರ ರೀತಿ ಸರಳವಾದ ಆಹಾರ ಪದ್ಧತಿಯನ್ನು ಅನುಸರಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಜೊತೆಯಲ್ಲಿ ಜಾಯಿಕಾಯಿ ಬಳಸುವುದರಿಂದ ಮಧುಮೇಹ ಸಮಸ್ಯೆ ನಿಯಂತ್ರಣವಾಗಿ ಮೆಟಬಾಲಿಸಂ ಪ್ರಕ್ರಿಯೆ ಹೆಚ್ಚಾಗುತ್ತದೆ.

Leave a Reply

Your email address will not be published. Required fields are marked *