ವಾರದಲ್ಲಿ ಒಮ್ಮೆಯಾದ್ರೂ ಹಲಸಿನ ಬೀಜ ತಿನ್ನುವುದರಿಂದ ಏನಾಗುತ್ತೆ

0 2

ಹಲಸಿನ ಹಣ್ಣು ಎಂದರೆ ಅದು ಸುವಾಸನೆ ಹಾಗೂ ರುಚಿ ಎರಡನ್ನೂ ಹೊಂದಿದೆ. ಈ ಹಣ್ಣನ್ನು ಬಳಸಿಕೊಂಡು ವಿವಿಧ ರೀತಿಯ ಖಾದ್ಯಗಳನ್ನು ಕೂಡ ತಯಾರಿಸುತ್ತಾರೆ. ಅದೇ ರೀತಿಯಾಗಿ ಹಲಸಿನ ಹಣ್ಣನ್ನು ಹಾಗೆ ಕೂಡಾ ತಿನ್ನಬಹುದು. ಇದು ಬೇಸಗೆಯಲ್ಲಿ ಹೆಚ್ಚಾಗಿ ಬೆಳೆಯುವ ಕಾರಣದಿಂದಾಗಿ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಹಲಸಿನ ಹಣ್ಣನ್ನು ಯಥೇಚ್ಛವಾಗಿ ಬಳಸುವರು. ಇದರಿಂದ ಹಪ್ಪಳ, ದೋಸೆ ಹಾಗೂ ಇತ್ಯಾದಿ ತಿಂಡಿ ತಿನಿಸುಗಳನ್ನು ಬಳಸುವರು. ಪ್ರಕೃತಿದತ್ತವಾಗಿ ಸಿಗುವಂತಹ ಈ ಹಣ್ಣಿನಲ್ಲಿ ಹಲವಾರು ರೀತಿಯ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇವೆ. ವಿಟಮಿನ್ ಬಿ, ಪೊಟಾಶಿಯಂ ಮತ್ತು ಪ್ರೋಟೀನ್ ಇದರಲ್ಲಿ ಸಮೃದ್ಧವಾಗಿದೆ. ಇದರಲ್ಲಿನ ಇತರ ಕೆಲವೊಂದು ಪೋಷಕಾಂಶಗಳು ಈ ಹಣ್ಣನ್ನು ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸುವಂತೆ ಮಾಡಿದೆ. ಈ ಲೇಖನದ ಮೂಲಕ ನಾವು ಹಲಸಿನ ಹಣ್ಣಿನ ಆರೋಗ್ಯಕರ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ.

ಖನಿಜಾಂಶ, ವಿಟಮಿನ್ ಗಳು ಮತ್ತು ಆಹಾರದ ನಾರಿನಾಂಶ ಹೊಂದಿರುವಂತಹ ಹಲಸಿನ ಹಣ್ಣು ನೈಸರ್ಗಿಕ ವಿರೇಚಕ ಗುಣ ಹೊಂದಿದೆ ಮತ್ತು ಇದು ಜೀರ್ಣಕ್ರಿಯೆ ವ್ಯವಸ್ಥೆಯ ಸಮಸ್ಯೆಯನ್ನು ದೂರ ಮಾಡುವುದು. ವಿಟಮಿನ್ ಎ ಒಳಗೊಂಡಿರುವ ಹಲಸಿನ ಹಣ್ಣು ಕಣ್ಣಿಗೆ ಕೂಡ ಒಳ್ಳೆಯದು. ಹಲಸಿನ ಹಣ್ಣಿನಲ್ಲಿ ಕೊಲೆಸ್ಟ್ರಾಲ್ ಮತ್ತು ಅನಾರೋಗ್ಯಕರ ಕೊಬ್ಬು ಇಲ್ಲದಿರುವುದು ಇದರ ಮತ್ತೊಂದು ಗುಣವಾಗಿದೆ. ವಿಟಮಿನ್ ಬಿಯಿಂದ ಸಮೃದ್ಧವಾಗಿರುವ ಇದರಲ್ಲಿ ನಿಯಾಸಿನ್, ಪಿರಿಡಾಕ್ಸಿನ್, ರಿಬೋಫ್ಲಾವಿನ್ ಮತ್ತು ಫೋಲಿಕ್ ಆಮ್ಲವಿದೆ. ವಿಟಮಿನ್ ಸಿ ಕೂಡ ಇರುವ ಇದು ಪ್ರತಿರೋಧಕ ವ್ಯವಸ್ಥೆ ಬಲಪಡಿಸುವಲ್ಲಿ ತುಂಬಾ ಸಹಕಾರಿ ಆಗಿರುವುದು. ಹಲಸಿನ ಹಣ್ಣಿನಲ್ಲಿ ಲಿಗ್ನಾನ್ಸ್, ಐಸೊಫ್ಲಾವೊನ್ ಮತ್ತು ಸಪೋನಿನ್ ಗಳಂತಹ ಹಲವಾರು ರಿತಿಯ ಪೈಥೋ ಕೆಮಿಕಲ್ ಗಳು ಇವೆ. ಇದೆಲ್ಲವೂ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಎಂದು ಹೇಳಲಾಗುತ್ತದೆ.

ಹಲಸಿನ ಹಣ್ಣಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಫ್ರೀ ರ್ಯಾಡಿಕಲ್ ನ್ನು ತಟಸ್ಥಗೊಳಿಸುವುದು ಮತ್ತು ಕೆಲವು ಕ್ಯಾನ್ಸರ್ ನ್ನು ಇದು ತಡೆಯುವುದು. ಹಲಸಿನ ಹಣ್ಣಿನಲ್ಲಿ ಇರುವಂತಹ ಲ್ಯಾಕ್ಟಿನ್ ಎನ್ನುವ ಅಂಶವು ಗರ್ಭಕೋಶದ ಕ್ಯಾನ್ಸರ್ ವಿರುದ್ಧ ಹೋರಾಡುವುದು ಎಂದು ಅಧ್ಯಯನವು ಹೇಳಿವೆ. ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ಹೊಟ್ಟೆ, ಅನ್ನನಾಳದಂತಹ ಕ್ಯಾನ್ಸರ್ ನ್ನು ತಡೆಯುವುದು. ಬೊಜ್ಜು ದೇಹಿಗಳ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಲಿದೆ. ಇದಕ್ಕಾಗಿ ನೈಸರ್ಗಿಕವಾಗಿ ಸಿಗುವಂತಹ ಹಲಸಿನ ಹಣ್ಣು ತಿಂದರೆ ತುಂಬಾ ಒಳ್ಳೆಯದು. ಇದು ಕೊಬ್ಬು ರಹಿತವಾಗಿದೆ ಮತ್ತು ಕೊಲೆಸ್ಟ್ರಾಲ್ ತುಂಬಾ ಕಡಿಮೆ ಇದೆ. ಇದನ್ನು ತಿಂದರೆ ಅದರಿಂದ ಇತರ ಹಲವಾರು ರೀತಿಯ ಲಾಭಗಳು ಕೂಡ ದೇಹಕ್ಕೆ ಲಭ್ಯವಾಗುವುದು.

ಇನ್ನು ಹಲಸಿನ ಬೀಜ ಗಳಲ್ಲಿಯೂ ಸಹ ನಮ್ಮ ದೇಹಕ್ಕೆ ಅವಶ್ಯಕವಾಗಿರುವ ಅಂತಹ ಪೋಷಕಾಂಶಗಳಾದ ಮೆಗ್ನೀಷಿಯಂ ಸತು ಕಬ್ಬಿಣ ಕ್ಯಾಲ್ಸಿಯಂ ಹಾಗು ತಾಮ್ರದ ಅಂಶಗಳು ಕೂಡ ಅಲ್ಪಪ್ರಮಾಣದಲ್ಲಿರುತ್ತದೆ. ಹಾಗೂ ಅತಿ ಸೂಕ್ಷ್ಮ ಜೀವ ನಿರೋಧಕ ಸಂಯುಕ್ತಗಳು ಸಹ ಇದರಲ್ಲಿವೆ. ಕೆಲವು ಆಹಾರಗಳ ಮೂಲಕ ನಮ್ಮ ದೇಹವನ್ನು ಸೇರುವಂತಹ ಸೂಕ್ಷ್ಮ ಬ್ಯಾಕ್ಟೀರಿಯಾಗಳನ್ನು ನಮ್ಮ ದೇಹಕ್ಕೆ ಸೇರಿದಂತೆ ತಡೆಯುತ್ತದೆ. ಈ ಮೂಲಕ ಹಲವಾರು ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಹಲಸಿನ ಬೀಜದಲ್ಲಿ ಸಾಕಷ್ಟು ಪೋಷಕಾಂಶಗಳು ಇರುವುದರಿಂದ ಇದನ್ನು ನಾನಾ ಬಗೆಯ ಖಾದ್ಯಗಳನ್ನು ತಯಾರಿಸಿ ತಿನ್ನಬಹುದು. ಹಲಸಿನ ಬೀಜದಲ್ಲಿ ಇರುವಂತಹ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಅಜೀರ್ಣ ಆಗಿದ್ದರೆ ತಕ್ಷಣ ಪರಿಹಾರವನ್ನು ನೀಡುತ್ತದೆ. ವಿಟಮಿನ್ ಎ ಅಂಶವು ಇರುವುದರಿಂದ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ಆಗಾಗ ಹಲಸಿನ ಬೀಜವನ್ನು ಸೇವಿಸುವುದರಿಂದ ನಮ್ಮ ರಕ್ತದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ರಕ್ತಹೀನತೆಯನ್ನು ಕೂಡಾ ದೂರ ಮಾಡುತ್ತದೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಿಸಲಿಕ್ಕೆ ಇದು ಸಹಾಯಕಾರಿಯಾಗುತ್ತದೆ. ಹಲಸಿನ ಹಣ್ಣಿನಲ್ಲಿ ಥೈಮೇನ್ ಮತ್ತು ನಿಯಾಸಿನ್ ನಂತಹ ವಿಟಮಿನ್ ಗಳು ಇರುವ ಕಾರಣದಿಂದಾಗಿ ಇದು ದೇಹಕ್ಕೆ ಶಕ್ತಿ ನೀಡುವುದು.ಇಷ್ಟು ಮಾತ್ರವಲ್ಲದೆ ಹಲಸಿನ ಹಣ್ಣಿನಲ್ಲಿ ಇರುವಂತಹ ಇನ್ನೂ ಹಲವಾರು ರೀತಿಯ ಆರೋಗ್ಯ ಲಾಭಗಳ ಬಗ್ಗೆ ಅಧ್ಯಯನಗಳು ನಡೆಯುತ್ತಲಿದೆ.

Leave A Reply

Your email address will not be published.