ನಾವು ಎಷ್ಟೋ ವಿಷಯಗಳನ್ನು ತಿಳಿದಿರುತ್ತೇವೆ. ಆದರೆ ಇನ್ನೆಷ್ಟೋ ವಿಷಯಗಳನ್ನು ತಿಳಿದಿರುವುದಿಲ್ಲ. ನಮ್ಮ ಈ ಪ್ರಪಂಚವು ಅನೇಕ ವಿಸ್ಮಯಕಾರಿ ಸಂಗತಿಗಳನ್ನು ಒಳಗೊಂಡಿದೆ. ಆದರೆ ಇವುಗಳು ಎಲ್ಲರಿಗೂ ತಿಳಿದಿರುವುದೇ ಇಲ್ಲ. ಏಕೆಂದರೆ ಅವರವರ ಆಸಕ್ತಿಯ ಮೇಲೆ ಅಥವಾ ಅವರವರ ಕೆಲಸಗಳ ಮೇಲೆ ಜ್ಞಾನವನ್ನು ಪಡೆಯುವವರು ಜಾಸ್ತಿ. ಆದ್ದರಿಂದ ನಾವು ಇಲ್ಲಿ ನಮ್ಮ ಪ್ರಪಂಚದಲ್ಲಿ ಇರುವ ಅನೇಕ ವಿಸ್ಮಯಕಾರಿ ಸಂಗತಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸುಮಾರು 1970ರಲ್ಲಿ ಕಲರ್ ಟಿವಿಗಳು ಆವಿಷ್ಕಾರಗೊಂಡವು. ಅದಕ್ಕಿಂತ ಮೊದಲು ಬ್ಲಾಕ್ ಆಂಡ್ ವೈಟ್ ಟಿವಿ ಇತ್ತು. ವಿಚಿತ್ರ ಎಂದರೆ ಕಲರ್ ಟಿವಿ ಬರುವ ಮೊದಲು ಬೀಳುವ ಕನಸುಗಳು ಸಹ ಬ್ಲಾಕ್ ಆಂಡ್ ವೈಟ್ ಆಗಿದ್ದವು. ಕಲರ್ ಟಿವಿ ಬಂದ ನಂತರ ಬೀಳುವ ಕನಸುಗಳು ಕಲರ್ ಆದವು. ಹಾಗೆಯೇ ನಾವು ಹೇಗೆ ಬೇರೆಯವರ ಹತ್ತಿರ ನಮ್ಮ ಭಾವನೆಗಳನ್ನು ಹೇಳಿಕೊಳ್ಳುತ್ತೇವೆಯೋ ಹಾಗೆಯೇ ಹಸುಗಳು ಕೂಡ ಅವರದೇ ಆದ ಭಾಷೆಯಲ್ಲಿ ತಮ್ಮ ಭಾವನೆಗಳನ್ನು ಹಸುಗಳಲ್ಲಿ ಹೇಳಿಕೊಳ್ಳುತ್ತವೆ. ಹೇಗೆ ನಮ್ಮ ಭಾಷೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬದಲಾವಣೆ ಹೊಂದಿದೆಯೋ ಹಾಗೆಯೇ ಹಸುಗಳ ಭಾಷೆಗಳಲ್ಲೂ ಕೂಡ ಬದಲಾವಣೆ ಇವೆ.

ಅರೇಬಿಯಾ ಎಂದ ತಕ್ಷಣ ನೆನಪಾಗುವುದು ಮರುಭೂಮಿ ಮತ್ತು ತೈಲ ಉತ್ಪಾದನೆ ಆಗಿದೆ. ಆದರೆ ಸೌದಿ ಅರೇಬಿಯಾದಲ್ಲಿ ಒಂಟೆಗಳ ಸಂಖ್ಯೆ ಬಹಳ ಕಡಿಮೆ ಇದೆ. ಆದ್ದರಿಂದ ಆಸ್ಟ್ರೇಲಿಯಾದಿಂದ ಒಂಟೆಗಳನ್ನು ಆಮದು ಮಾಡಿಕೊಳ್ಳಲಾಯಿತು. ಉಳಿದ ಒಂಟೆಗಳು ಇವರ ವಂಶಜರು ಎಂದು ಹೇಳಬಹುದು. ಹಾಗೆಯೇ ನೀರು ಭೂಮಿಯಲ್ಲಿ ಶೇಕಡಾ 71ರಷ್ಟು ಭಾಗವನ್ನು ಆವರಿಸಿಕೊಂಡಿದೆ. ನೀರಿನ ನಂತರದಲ್ಲಿ ಮೋಡಗಳು ಅತಿ ಹೆಚ್ಚು ಅವರಿಸಿಕೊಂಡಿರುತ್ತವೆ. ವಾಂಬಾಕ್ ಎನ್ನುವ ಪ್ರಾಣಿ ನೋಡಲು ಚಿಕ್ಕದಾಗಿ ಇದ್ದರೂ ಮನುಷ್ಯನ ಪ್ರಾಣವನ್ನು ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ.

ನಮ್ಮ ಈ ಪ್ರಪಂಚದಲ್ಲಿ ಹಲವಾರು ಜಾತಿಯ ಹಣ್ಣುಗಳು ಇವೆ. ಸಾಮಾನ್ಯವಾಗಿ ಅತಿ ಚಿಕ್ಕ ಹಣ್ಣು ಎಂದರೆ ಲಿಚಿಹಣ್ಣು ಎಂದು ಹೇಳುತ್ತಾರೆ. ಆದರೆ ಅತಿ ಚಿಕ್ಕ ಹಣ್ಣು ಯುಟ್ರಿಕಲ್. ಇದು ಸಾಮಾನ್ಯವಾಗಿ ನೀರಿನಲ್ಲಿ ಬೆಳೆಯುತ್ತದೆ. ಹಾಗೆಯೇ ಸೇಬುಹಣ್ಣಿನಲ್ಲಿ 7000ಕ್ಕೂ ಹೆಚ್ಚಿನ ವಿಧಗಳಿವೆ. ಹಾಗೆಯೇ ಎಷ್ಟು ದೊಡ್ಡದಿರುತ್ತದೆಯೋ ಅಷ್ಟೇ ದುಬಾರಿ ಇರುತ್ತದೆ. ನಾಯಿಗಳು ಮತ್ತು ಇನ್ನೂ ಹಲವು ಪ್ರಾಣಿಗಳು ತಮ್ಮ ನಾಲಿಗೆಯನ್ನು ಹೊರ ಹಾಕುತ್ತವೆ. ಆದರೆ ಮೊಸಳೆ ಎಂದಿಗೂ ತನ್ನ ನಾಲಿಗೆಯನ್ನು ಹೊರ ಹಾಕುವುದಿಲ್ಲ. ಹಾಗೆಯೇ ಹಿಮ ಕರಡಿಗಳು ಎಲ್ಲಾ ಕೆಲಸಗಳಿಗೆ ಮೊದಲು ಎಡಗೈಯನ್ನು ಉಪಯೋಗ ಮಾಡುತ್ತವೆ. ಹಾಗೆಯೇ ಇನ್ನೂ ವಿಚಿತ್ರಗಳನ್ನು ನಮ್ಮ ಪ್ರಪಂಚ ಹೊಂದಿದೆ.

Leave a Reply

Your email address will not be published. Required fields are marked *