ಅಂದು ಹೆಂಡತಿಯಿಂದ ಬರಿ ಹತ್ತು ಸಾವಿರ ರೂಪಾಯಿ ಪಡೆದು ಇಂದು ವಿಶ್ವವೇ ಕಣ್ಣೆತ್ತಿ ನೋಡುವಂತೆ ಮಾಡಿದ ಇನ್ಫೋಸಿಸ್ ಯಶಸ್ಸಿನ ಕಥೆ.!

0 3,214

ಹಲವಾರು ಕಂಪನಿಗಳು ನಮ್ಮ ಭಾರತವನ್ನು ವಿಶ್ವವೇ ಕಣ್ಣೆತ್ತಿ ನೋಡುವಂತೆ ಮಾಡಿವೆ. ಅವುಗಳಲ್ಲಿ ಹಲವಾರು ಕಂಪನಿಗಳು ಇವೆ. ಅದರಲ್ಲಿ ಇನ್ಫೋಸಿಸ್ ಕೂಡ ಒಂದು. ಈ ಕಂಪನಿಯ ಸ್ಥಾಪಕರು ನಾರಾಯಣ್ ಮೂರ್ತಿ ಅವರು. ಇದು ತುಂಬಾ ಹೆಸರು ಮಾಡಿದೆ. ಆದ್ದರಿಂದ ನಾವು ಇಲ್ಲಿ ಇನ್ಫೋಸಿಸ್ ಕಂಪನಿಯ ಉಗಮದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

1981ರಲ್ಲಿ ನಾರಾಯಣಮೂರ್ತಿ ಅವರು ಒಂದು ಕಟ್ಟಡದಲ್ಲಿ ಕುಳಿತು ಸ್ನೇಹಿತರ ಜೊತೆ ಮಾತನಾಡುತ್ತಿದ್ದರು. ಆಗ ಕಂಪನಿಯನ್ನು ಸ್ಥಾಪಿಸುವ ಬಗ್ಗೆ ಹೇಳಿದರು. ಇದಾಗಿ ಆರು ತಿಂಗಳ ನಂತರ ಅಂದರೆ ಜುಲೈನಲ್ಲಿ ಇದರ ಸ್ಥಾಪಕರಾದ ರಾಘವಾಂಕರ್ ಅವರ ಮನೆ ಈ ಕಂಪನಿಯ ಆಫೀಸ್ ಆಯಿತು. ಇದಕ್ಕೆ ಆರು ಜನ ಕೈಗೂಡಿಸಿದರು. 250ಡಾಲರ್ ನಿಂದ ಕಂಪನಿಯನ್ನು ಶುರುಮಾಡಿದರು. ನಾರಾಯಣ್ ಮೂರ್ತಿ ಅವರ ಹತ್ತಿರ ಹಣವಿರಲಿಲ್ಲ. ಸುಧಾಮೂರ್ತಿಯವರು ಇವರಿಗೆ ಸುಮಾರು ನಾಲ್ಕು ಸಾವಿರ ಸಾಲವನ್ನು ನೀಡಿದ್ದರು.

ನಂತರದಲ್ಲಿ ಸುಧಾಮೂರ್ತಿಯವರು ನಾರಾಯಣಮೂರ್ತಿ ಅವರನ್ನು ವಿವಾಹವಾದರು. ಹಾಗೆಯೇ ಇಲ್ಲಿನ ಕೇಂದ್ರ ಕಚೇರಿಯನ್ನು ಪುಣೆಯಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ಪ್ರಾರಂಭದಲ್ಲಿ ಒಂದು ಟೆಲಿಫೋನ್ ಕೂಡ ಇರದೆ ಕಷ್ಟಪಟ್ಟಿದ್ದರು. ಪ್ರಾರಂಭವಾದ ಎಂಟು ವರ್ಷ ಎಲ್ಲವನ್ನು ಕಳೆದುಕೊಂಡಿತು. ನಂತರ ಇದು ಒಳ್ಳೆಯ ಯಶಸ್ಸನ್ನು ಕಂಡಿತು. ಈಗ ಸುಮಾರು 300 ಕಂಪನಿಗಳು ಇದರ ಸೇವೆಯನ್ನು ಪಡೆಯುತ್ತಿವೆ.

ಕಳೆದ 25 ವರ್ಷಗಳಿಂದ ಈ ಕಂಪನಿಯು ಬೆಳೆಯಿತು. ಹಾಗೆಯೇ ಈಗಲೂ ಕೂಡ ಬೆಳೆಯುತ್ತಲೇ ಇದೆ. ಎಷ್ಟೋ ಜನರಿಗೆ ಇದು ಉದ್ಯೋಗವನ್ನು ನೀಡಿದೆ. ಈಗ ಭಾರತದ ಎರಡನೇ ದೊಡ್ಡ ಸಾಫ್ಟ್ವೇರ್ ಎಕ್ಸ್ಪೋರ್ಟ್ ಕಂಪನಿ ಆಗಿದೆ. ಈಗ ಇವರ ಆಸ್ತಿ ಸುಮಾರು 8950ಕೋಟಿಗಳು. ಏನೇ ಕಷ್ಟ ಬಂದರೂ ಎದೆಗುಂದಬಾರದು. ಯಾವುದೇ ಭಯವಿಲ್ಲದೆ ಧೈರ್ಯದಿಂದ ಮುನ್ನುಗ್ಗಬೇಕು. ಆಗ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ ಎಂದು ಹೇಳಬಹುದು.

Leave A Reply

Your email address will not be published.