ಸಿಲಿಂಡರ್ ಗ್ಯಾಸ್ ಈಗ ಹೆಚ್ಚಾಗಿ ಎಲ್ಲರ ಮನೆಯಲ್ಲಿ ಇರುತ್ತದೆ. ಮೋದಿ ಅವರ ಉಜ್ವಲ ಭವಿಷ್ಯ ಯೋಜನೆ ಎಲ್ಲರ ಮನೆಯಲ್ಲಿಯೂ ಸಿಲಿಂಡರ್ ಇರುವಂತೆ ಮಾಡುತ್ತಿದೆ. ಬಿಪಿಎಲ್ ಕಾರ್ಡ್ ಇದ್ದರೆ ಸಾಕು ಯಾವುದೇ ರೀತಿಯ ಹಣವಿಲ್ಲದೆ ಸಿಲಿಂಡರ್ ಗ್ಯಾಸ್ ನ್ನು ಪಡೆಯಬಹುದು. ಹಾಗೆಯೇ ಅದನ್ನು ಸ್ವಲ್ಪ ಹುಷಾರಾಗಿ ನೋಡಿಕೊಳ್ಳಬೇಕು. ಏಕೆಂದರೆ ಇದರಿಂದ ಅನಾಹುತಗಳು ಉಂಟಾಗಬಹುದು. ಆದರೆ ನಾವು ಇಲ್ಲಿ ಒಂದು ವಾರದ ಗ್ಯಾಸ್ ಎರಡು ವಾರ  ಬರುವ ಹಾಗೆ ಹೇಗೆ ನೋಡಿಕೊಳ್ಳಬೇಕು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಸಾಮಾನ್ಯವಾಗಿ ಸಿಲಿಂಡರ್ ಗ್ಯಾಸ್ ಅನ್ನು ಬಳಸುತ್ತಾ ಹೋದಂತೆ ಕಡಿಮೆಯಾಗುತ್ತಾ ಹೋಗುತ್ತದೆ. ಏಕೆಂದರೆ ಇದರಲ್ಲಿ ಆಲೋಚಿಸುವುದು ಪದಾರ್ಥಗಳನ್ನು ಮಾಡುವುದು ಎಲ್ಲವನ್ನು ಮಾಡುತ್ತೇವೆ. ಇದರಿಂದ ತೂತುಗಳಲ್ಲಿ ಕಸಗಳು ಸಿಕ್ಕಿ ಹಾಕಿ ಕೊಳ್ಳುತ್ತವೆ. ಇದರಿಂದ ಗ್ಯಾಸ್ ಸರಿಯಾಗಿ ಬರುವುದಿಲ್ಲ. ಆಗ ಇದನ್ನು ಸರ್ವಿಸ್ ಸೆಂಟರ್ ಗೆ ತೆಗೆದುಕೊಂಡು ಹೋಗಬೇಕು. ಅಲ್ಲಿ ಸ್ವಚ್ಛ ಮಾಡಿಸಿಕೊಂಡು ಬರಬೇಕು. ಇಲ್ಲವಾದಲ್ಲಿ ಮನೆಯಲ್ಲಿ ಸ್ವಚ್ಛ ಮಾಡಿಕೊಳ್ಳಬಹುದು.

ಮೊದಲು ಬರ್ನಾಲ್ ನ್ನು ತೆಗೆದುಕೊಳ್ಳಬೇಕು. ಅದಕ್ಕೆ ಹಾರ್ಪಿಕ್ ನ್ನು ಹಾಕಬೇಕು. ಬರ್ನಾಲ್ ನ ಎರಡೂ ಭಾಗಕ್ಕೂ ಹಾರ್ಪಿಕ್ ನ್ನು ಹಾಕಬೇಕು. ಇದನ್ನು ಹದಿನೈದು ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ಹಾಗೆಯೇ ಬರ್ನಾಲ್ ಕೆಳಗಿನ ಬುರುಡೆಯನ್ನು ತೆಗೆದುಕೊಂಡು ಚೆನ್ನಾಗಿ ಸ್ವಚ್ಛಮಾಡಬೇಕು. 15 ನಿಮಿಷ ಆದಮೇಲೆ ಬರ್ನಲ್ ಅನ್ನು ಕೈಗೆ ಹ್ಯಾಂಡ್ ಗ್ಲೌಸ್ ಹಾಕಿಕೊಂಡು ಬ್ರಷ್ ನಲ್ಲಿ ತಿಕ್ಕಬೇಕು. ಇದನ್ನು ಚೆನ್ನಾಗಿ ತೊಳೆಯಬೇಕು. ನಂತರ ಒಣಗಿದ ಬಟ್ಟೆಯಲ್ಲಿ ಇದನ್ನು ಒರೆಸಬೇಕು.

ಚೆನ್ನಾಗಿ ವರೆಸಿ ಅದನ್ನು ಕೂಡಿಸಬೇಕು. ಈಗ ಒಲೆಯನ್ನು ಹಚ್ಚಿದರೆ ಬಹಳ ದೊಡ್ಡದಾಗಿ ಉರಿಯುತ್ತದೆ. ಮೊದಲಿನ ಉರಿಗೂ ಈಗಿನ ಉರಿಗೂ ಬಹಳ ವ್ಯತ್ಯಾಸ ಇರುತ್ತದೆ. ಹಾಗೆಯೇ ಬೆಂಕಿಯ ಉರಿಯ ಬಣ್ಣ ಕೂಡ ಬದಲಾಗುತ್ತದೆ. ಇದರಿಂದ ಒಂದು ವಾರ ಬರುವ ಗ್ಯಾಸ್ಎರಡು ವಾರ ಬರುತ್ತದೆ. ಈಗ ಸಿಲಿಂಡರ್ ತರಬೇಕು ಎಂದರೆ ಸುಮಾರು 700ರೂಪಾಯಿಗಳಷ್ಟು ಇದೆ. ಹಾಗಾಗಿ ಹೀಗೆ ಮಾಡಿ ಸ್ವಲ್ಪ ಉಳಿತಾಯ ಮಾಡಬಹುದು.

Leave a Reply

Your email address will not be published. Required fields are marked *