ಹಣವಿಲ್ಲದೆ ಪಾನಿಪುರಿ ಮಾರುತ್ತಿದ್ದವ ಇಂದು ಭಾರತದ ಕ್ರಿಕೆಟ್ ಟೀಮಿನ ಒಬ್ಬ ಅತ್ಯುತ್ತಮ ಆಟಗಾರ!

0 0

ಪಾನಿಪುರಿ ಮಾರಿ ಮತ್ತು ಹಾಲಿನ ಡೈರಿಯಲ್ಲಿ ಕೆಲಸ ಮಾಡಿ ಇಂದು ಒಬ್ಬ ಯಶಸ್ವಿ ಸ್ಟಾರ್ ಕ್ರಿಕೆಟ್ ಆಟಗಾರನಾದ ಯಶಸ್ವಿ ಜಯಸ್ವಾಲ್ ಅವರ ಜೀವನದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ . ಯಶಸ್ವಿ ಜಯಸ್ವಾಲ್ ಅಂಡರ್ 19 ವರ್ಲ್ಡ್ ಕಪ್ ನಲ್ಲಿ ತನ್ನದೇ ಆದ ಆಲ್ ರೌಂಡರ್ ಪ್ರದರ್ಶನ ನೀಡಿ ಮಿಂಚಿದ ಈತ ಎಲ್ಲರ ಗಮನ ಸೆಳೆದಿದ್ದ. ಒಂದು ಕಾಲದಲ್ಲಿ ಯಶಸ್ವಿ ಗೆ ಇರೋಕೆ ಜಾಗ ಇಲ್ಲದೆಯೇ ಗ್ರೌಂಡ್ ಟೆಂಟ್ ನಲ್ಲಿಯೇ ಮಲಗಿ ಹಣದ ಕೊರತೆ ಇಂದಾಗಿ ಸಂಜೆ ಸಮಯದಲ್ಲಿ ಪಾನಿ ಪುರಿ ಮಾರಾಟ ಮಾಡುತ್ತಿದ್ದ. ಇಂದು IPL ನಲ್ಲೂ ಉತ್ತಮ ಆಟಗಾರನಾಗಿ ಹೊರ ಹೊಮ್ಮಿದ ಯಶಸ್ವಿ ಜಯಸ್ವಾಲ್ ಅವರ ಜೀವನ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಯಶಸ್ವಿ ಜಯಸ್ವಾಲ್ ಇವರು 28 ಡಿಸೇಂಬರ್ 2001 ರಲ್ಲಿ ಉತ್ತರಪ್ರದೇಶದ ಭದೋಹಿಯಲ್ಲಿ ಜನಿಸಿದರು. ತಂದೆ ಉಪೇಂದ್ರ ಜಯಸ್ವಾಲ್. ಇವರು ಒಂದು ಸಣ್ಣ ಹಾರ್ಡ್ವೇರ್ ಅಂಗಡಿಯನ್ನು ನಡೆಸುತ್ತಿದ್ದರು. ತಾಯಿ ಕಾಂಚನ ಜಯಸ್ವಾಲ್. ಇವರ 6 ಮಕ್ಕಳಲ್ಲಿ ಯಶಸ್ವಿ 4ನೆಯವರಾಗಿರುತ್ತಾರೆ.

ಚಿಕ್ಕಂದಿನಿಂದಲೇ ಕ್ರಿಕೆಟ್ನಲ್ಲಿ ಅತ್ಯಂತ ಒಲವು ಹೊಂದಿದ್ದ ಯಶಸ್ವಿ ತನ್ನ ತಂದೆಯ ಬಳಿ ತಾನು ಕ್ರಿಕೆಟ್ ನಲ್ಲಿ ತನ್ನ ಜೀವನ ಮುಂದುವರೆಸಬೇಕು ಎಂದು ಹೇಳುತ್ತಾರೆ. ಹಾಗಾಗಿ ಯಶಸ್ವಿ ಮುಂಬೈ ಗೆ ಹೋಗಬೇಕಾಗುತ್ತೆ. ಅದಕ್ಕಾಗಿ ಅವರ ತಂದೆ ಯಶಸ್ವಿ ಗೆ ತಮ್ಮ ಸಂಬಂಧಿಕರೊಬ್ಬರ ಮನೆಯಲ್ಲಿ ಇರಿಸಲು ನೋಡುತ್ತಾರೆ. ಆದರೆ ಅವರ ಸಂಬಂಧಿಕರಿಗೆ ಬಡತನ ಹಾಗೂ ಅವರಿಗೆ ಉಳಿಯಲು ಸರಿಯಾದ ಸ್ಥಳ ಇಲ್ಲದ ಕಾರಣ ಯಶಸ್ವಿ ಅವರ ತಂದೆ ಅವರನ್ನ ಕ್ರಿಕೆಟ್ ಗ್ರೌಂಡ್ ಬಳಿ ಇರುವ ಒಂದು ಹಾಲಿನ ಡೈರಿ ಯಲ್ಲಿ ಕೆಲಸಕ್ಕೆ ಸೇರಿಸುತ್ತಾರೆ. ಅಲ್ಲಿ ಯಶಸ್ವಿ ಗೆ ಮುಂಬೈ ನಲ್ಲಿ ಉಳಿಯೋಕೆ ಒಂದು ಜಾಗವೂ ಸಿಕ್ಕಿತು ಹಾಗೆ ಸಾಧ್ಯದ ಜೀವನ ನಡೆಸಲು ಹಣವೂ ಸಿಕ್ಕಹಾಗೆ ಆಯಿತು. ಆಗ ಯಶಸ್ವಿ ಅವರ ವಯಸ್ಸು ಬರೀ 11 ವರ್ಷ. ಡೈರಿ ಯಲ್ಲಿ ಕಸ ಗುಡಿಸುವುದು , ಟೇಬಲ್ ಕ್ಲೀನ್ ಮಾಡುವುದು , ಹಾಲು ಕಾಯಿಸುವುದು ಈ ತರದ ಸಣ್ಣ ಪುಟ್ಟ ಕೆಲಸ ಮಾಡುತ್ತಾ ರಾತ್ರಿ ಸಮಯದಲ್ಲಿ ಅದೇ ಡೈರಿ ಅವರಿಗೆ ಆಶ್ರಯ ಕೂಡಾ ಆಗಿತ್ತು.

ಆಜಾದ್ ಮೈದಾನ ಯಶಸ್ವಿ ಅವರ ಕ್ರಿಕೆಟ್ ಕೋಚಿಂಗ್ ಗ್ರೌಂಡ್ ಆಗಿತ್ತು. ಮುಂದೆ ಹೀಗೆ ಕ್ರಿಕೆಟ್ ಕೋಚಿಂಗ್ ಸಲುವಾಗಿಯೇ ಬೆಳಗ್ಗೆ ಬೇಗ ಹೋಗಿ ಸಾಯಂಕಾಲ ಬರುವುದು ತಡವಾಗುತ್ತಿತ್ತು. ಈ ವೇಳೆಯಲ್ಲಿ ಯಶಸ್ವಿ ಗೆ ಡೈರಿಯಲ್ಲಿ ಹೆಚ್ಚು ಕೆಲಸ ಇಲ್ಲದೆ ಇರುವುದರಿಂದಾಗಿ ಆ ಡೈರಿಯ ಮಾಲೀಕ ಯಶಸ್ವಿಯನ್ನು ಕೆಲಸದಿಂದ ತೆಗೆದು ಹಾಕುತ್ತಾರೆ. ಹಾಗೆ ಯಶಸ್ವಿಯ ಲಗೇಜ್ ಗಳನ್ನು ಹಿರಗೆ ಇತ್ತು ಅಲ್ಲಿಂದ ಹೋಗುವಂತೆ ಹೇಳುತ್ತಾರೆ. ಅಂತಹ ಸಂದರ್ಭದಲ್ಲಿ ಏನು ಮಾಡೋದು ಎಂದು ತೋಚುವುದಿಲ್ಲ. ಈ ಮಾತುಗಳನ್ನ ಯಶಸ್ವಿ ತನ್ನ ಮನೆಯವರಿಗೆ ಹಾಗೂ ಮುಂಬೈ ನಲ್ಲಿ ಇರುವ ಅವರ ಸಂಬಂಧಿಕರಿಗೆ ಸಹ ತಿಳಿಸದೆ ಆಜಾದ್ ಮೈದಾನದಲ್ಲಿ ಇರುವ ಮುಸ್ಲಿಂ ಯುನೈಟೆಡ್ ಕ್ಲಬ್ ನ ಸ್ಥಾಪಕ ಇಮ್ರಾನ್ ಗೆ ಇವೆಲ್ಲದರ ಬಗ್ಗೆ ಯಶಸ್ವಿ ಹೇಳಿದಾಗ ಅವರ ಕಡೆಯಿಂದ ಗ್ರೌಂಡ್ ನಲ್ಲಿ ಇದ್ದ ಒಂದು ಟೆಂಟ್ ನಲ್ಲಿ ಇರಲು ಒಪ್ಪಿಗೆ ಸಿಗತ್ತೆ.

11 ವರ್ಷದ ಯಶಸ್ವಿಗೆ ಆ ಟೆಂಟ್ ನಲ್ಲಿ ತನ್ನ ಅಡುಗೆಯನ್ನು ತಾನೇ ಮಾಡಿಕೊಳ್ಳಬೇಕಾಗಿತ್ತು ಅಲ್ಲಿ ಲೈಟ್ ಕೂಡಾ ಇರ್ತಾ ಇರಲಿಲ್ಲ. ಅದೂ ಅಲ್ಲದೆ ಮಳೆಗಾಲದ ಸಮಯದಲ್ಲಿ ಟೆಂಟ್ ಒಳಗೆಲ್ಲ ನೀರು ಹೊಕ್ಕಿ ನೆಲವೆಲ್ಲ ಒದ್ದೆಯಾಗಿ ನಿದ್ದೆ ಕೂಡಾ ಸರಿಯಾಗಿ ಬರುತ್ತಿರಲಿಲ್ಲ. ಆದರೂ ಹೀಗೆ 3 ವರ್ಷಗಳನ್ನು ಅಲ್ಲಿಯೇ ಕಳೆದರು. ಆದರೂ ತಂದೆ ಕಲಿಸುತ್ತಿರುವ ಹಣ ಸಾಲದೆ ಹೋದಾಗ ಸಂಜೆಯ ಸಮಯದಲ್ಲಿ ಪಾನಿ ಪುರಿ ಮಾರಲು ಸೇರಿಕೊಂಡರು. ಆದರೆ ಕಷ್ಟಗಳು ತುಂಬಾ ದಿನ ಇರಲ್ಲ ಅನ್ನುವ ಹಾಗೆಯೇ ಮೈದಾನದಲ್ಲಿ ಯಶಸ್ವಿಯ ಆಟವನ್ನು ನೋಡಿದ ಜ್ವಾಲಾ ಸಿಂಗ್ ಎಂಬ ಕೋಚ್ ಯಶಸ್ವಿಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಸರಿ ಪಡಿಸುತ್ತಾ ಮುಂದೆ ಕೋಚ್ ಮಾಡುತ್ತಾ ಸಹಾಯ ಮಾಡುತ್ತಾರೆ. ಇದರ ಫಲವಾಗಿ ಯಶಸ್ವಿ 2015 ರಲ್ಲಿ ಅಂಜುಮಾನ್ ಉರ್ದು ಸ್ಕೂಲ್ ಪರವಾಗಿ ಆಟವಾಡಿ ಒಂದು ಮ್ಯಾಚ್ ನಲ್ಲಿ 319 ರನ್ ಗಳಿಸಿ ನಾಟ್ ಔಟ್ ಆಗುತ್ತಾರೆ. ಮತ್ತು ಮ್ಯಾಚ್ ನಲ್ಲಿ 99 ರನ್ ನೀಸಿ 2 ಇನ್ನಿಂಗ್ಸ್ ನಲ್ಲಿ ಒಟ್ಟು 13 ವಿಕೆಟ್ ಗಳನ್ನ ಪಡೆದು ಈ ಸಾಧನೆ ಮಾಡಿದ ಅತೀ ಕಿರಿಯ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ತಮ್ಮ ಹೆಸರನ್ನು ಛಾಪಿಸುತ್ತಾರೆ.

ಇದರಿಂದಾಗಿ ಮುಂದಿನ ಏಷ್ಯಾ ಕಪ್ ಗಾಗಿ ಅಂಡರ್ 19 ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಆ ಟೂರ್ನಮೆಂಟ್ ನಲ್ಲಿ 318 ರನ್ ಗಳಿಸಿ ಹೈಯೆಸ್ಟ್ ರನ್ ಸ್ಕೊರರ್ ಮತ್ತು ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಕೂಡಾ ಆಗ್ತಾರೆ. ಮುಂದೆ ಅಂಡರ್ 19 ವಿಭಾಗದ ಟ್ರೈ ಸೀರೀಸ್ ನಲ್ಲಿ 7 ಮ್ಯಾಚ್ ನಲ್ಲಿ 294 ರನ್ ಬಾರಿಸುತ್ತಾರೆ . ಈ ಪ್ರದರ್ಶನದಿಂದ 2020 ರ ಅಂಡರ್ 19 ಕ್ರಿಕೆಟ್ ನ ವರ್ಲ್ಡ್ ಕಪ್ ಗೆ ಆಯ್ಕೆ ಮಾಡಲಾಗುತ್ತದೆ. ಭಾರತ ಬಾಂಗ್ಲಾದೇಶದ ಜೊತೆ ಸೋಲತ್ತೆ ಆದರೆ ಯಶಸ್ವಿಯು ಆ ಟೂರ್ನಮೆಂಟ್ ನ ಹೈಯೆಸ್ಟ್ ರನ್ ಸ್ಕೊರರ್ ಮತ್ತು ಮ್ಯಾನ್ ಆಫ್ ದ ಸೀರೀಸ್ ಅವಾರ್ಡ್ ಪಡೆಯುತ್ತಾರೆ. ತನ್ನ ಮೊದಲ ಡೇಬ್ಯು ಅನ್ನು 2018 – 19 ರ ರಣಜಿ ಟ್ರೋಫಿ ಯಲ್ಲಿ ಮುಂಬೈ ಪರವಾಗಿ ಆಡುತ್ತಾರೆ. ತ್ರಿಪಲ್ ಸೆಂಚುರಿ ಬಾರಿಸಿದ ಯಶಸ್ವಿ ಅತೀ ಕಿರಿಯ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. IPL ಬೆಟ್ಟಿಂಗ್ ನಲ್ಲಿ ರಾಜಸ್ಥಾನ್ ತಂಡವು ಇವರಿಗೆ 12 ಪಟ್ಟು ಹೆಚ್ಚು ಅಂದರೆ ಒಟ್ಟು 2.4 ಕೋಟಿ ಹಣ ನೀಡಿ ಖರೀದಿಸುತ್ತೆ. ಒಂದು ಕಾಲದಲ್ಲಿ ಪಾನಿಪುರಿ ಮಾರಿ ಮತ್ತು ಹಾಲಿನ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ ಯಶಸ್ವಿ ಇಂದು ಭಾರತದ ಕ್ರಿಕೆಟ್ ಟೀಮಿನ ಒಬ್ಬ ಅತ್ಯುತ್ತಮ ಆಟಗಾರ.

Leave A Reply

Your email address will not be published.