ಕಷ್ಟ ಬಂದಾಗ ಹಿಂದೆ ಸರಿಯುವ ಮುನ್ನ, 17 ಸಾವಿರ ಪಿಜ್ಜಾ ಸ್ಟೋರ್ ತೆರೆದ ಮಾಲೀಕನ ಸ್ಫೂರ್ತಿಧಾಯಕ ಕಥೆಯನ್ನೊಮ್ಮೆ ಓದಿ..

0 4

ಕಷ್ಟಗಳು ಬಂದಾಗ ಎದುರಿಸಲು ಆಗದೆ ಓಡಿಹೋಗುವುದು ತುಂಬಾನೇ ಸುಲಭ. ಆದರೆ ಇದರಿಂದ ನಾವು ಏನನ್ನೂ ಸಾಧಿಸೋಕೆ ಆಗಲ್ಲ. ಇದೆ ಕಷ್ಟಗಳ ಎದುರು ನಿಂತು ಧೈರ್ಯವಾಗಿ ಎದುರಿಸಿ ಸಾಧಿಸಿದಾಗ ಎಂತಹ ದೊಡ್ಡ ದೊಡ್ಡ ಗುರಿಯೇ ಇದ್ದರೂ ಸಹ ಅದನ್ನು ಗೆಲ್ಲುತ್ತೇವೇ. ಅದೇ ರೀತಿ ಡಾಮಿನೊಸ್ ಪಿಜ್ಜಾ ಕಂಪನಿಯ ಸ್ಥಾಪಕರ ಕಥೆಯೂ ಕೂಡಾ ಹೀಗೆ ಇದೆ. ಅವರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಡಾಮಿನೊಸ್ ಪಿಜ್ಜಾ ಕಂಪನಿಯಯನ್ನು ಥಾಮ್ ಮನಾಗನ್ ಎನ್ನುವವರು ಸ್ಥಾಪಿಸಿದರು. ಇವರ ಜೀವನದಲ್ಲಿ ಸಹ ಹಲವಾರು ಏಳು ಬೀಳುಗಳು ಇದ್ದವು ಆದರೆ ಇವರು ಅದನ್ನೆಲ್ಲ ಎದುರಿಸಿ ಯಶಸ್ವಿಯಾಗಿ ಇವತ್ತಿಗೆ ಡೊಮಿನಾಸ್ ಅನ್ನು ಒಂದು ದೊಡ್ಡ ಬ್ರಾಂಡ್ ಆಗಿ ನಿಲ್ಲಿಸಿದ್ದಾರೆ. ಥಾಮ್ ಮನಾಗನ್ 25 ಮಾರ್ಚ್, 1937 ರಲ್ಲಿ ಅಮೆರಿಕಾದಲ್ಲಿ ಜನಿಸುತ್ತಾರೆ. ತನ್ನ ಅತೀ ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಕೆಲವೊಂದು ಬಾರಿ ತಮ್ಮ ಸಂಬಂಧಿಕರ ಮನೆಯಲ್ಲಿ ಹಾಗೂ ಅನಾಥಾಶ್ರಮಗಳಲ್ಲೂ ವಾಸಿಸುತ್ತಾರೆ. ಇಂಥಹ ಸಂದರ್ಭದಲ್ಲಿ ಕೂಡಾ ತಮ್ಮ ಶಿಕ್ಷಣಕ್ಕೆ ಬೇಕಾದ ಹಣವನ್ನು ಒದಗಿಸಿಕೊಂಡು ಕಾಲೇಜು ಶಿಕ್ಷಣವನ್ನು ಮುಗಿಸುತ್ತಾರೆ. ತಾವೇನಾದರೂ ದೊಡ್ಡ ವ್ಯಕ್ತಿ ಆಗಬೇಕು ಅಂದರೆ ಅದಕ್ಕೆ ನಮ್ಮ ಸ್ವಂತ ಪರಿಶ್ರಮ ಮಾತ್ರದಿಂದಲೇ ಸಾಧ್ಯ ಎಂದು ತಿಳಿದು , ತಮ್ಮ ಕಾಲೇಜು ಮುಗಿದ ನಂತರದ ದಿನಗಳಲ್ಲಿ ತಾವೇ ಹಲವಾರು ಬೇರೆ ಬೇರೆ ರೀತಿಯ ಕೆಲಸಗಳನ್ನು ಮಾಡಿ ಹಣ ಸಂಪಾದನೆ ಮಾಡಿ ಕೂಡಿಡಲು ಆರಂಭಿಸುತ್ತಾರೆ.

ಈ ಹಣವನ್ನೆಲ್ಲ ಸೇರಿಸಿ ಹಾಗೂ ಸ್ವಲ್ಪ ಸಾಲ ಪಡೆದು ಥಾಮ್ ಅವರು ತನ್ನ ಸಹೋದರನ ಜೊತೆ ಸೇರಿ ಒಂದು ಸಣ್ಣ ಪಿಜ್ಜಾ ಅಂಗಡಿಯನ್ನು ಆರಂಭಿಸಿ ಅದರ ಹೆಸರನ್ನು ಡೊಮಿನಿಕ್ಸ್ ಎಂದು ಇಟ್ಟರು. ಮುಂದೆ ಇವರ ಸಹೋದರ ಇವರ ಜೊತೆ ಕೆಲಸ ಮಾಡುವುದನ್ನ ಬಿಟ್ಟು ಬೇರೆ ಹೋಗುತ್ತಾರೆ. ಸಹೋದರ ಜೇಮ್ಸ್ ಕೆಲಸ ಬಿಟ್ಟ ನಂತರ ಥಾಮ್ ಅವರಿಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೂ ಕುಗ್ಗದೇ ಎಲ್ಲಾ ಸಮಸ್ಯೆಗಳನ್ನು ಎದುರಿಸುವುದನ್ನ ಕಲಿತು ಮುಂದೆ ತಾವೇ ಮನೆ ಮನೆಗೂ ಹೋಗಿ ಪಿಜ್ಜಾ ಕೊಡುವುದನ್ನು ಸಹ ಮಾಡುತ್ತಿದ್ದರು.

ಇದರಿಂದಾಗಿ ಥಾಮ್ ಅವರಿಗೆ ಮೊದಲಿಗಿಂತ ಎಂಟು ಪಟ್ಟು ಹೆಚ್ಚು ಆರ್ಡರ್ ಗಳು ಬರೋಕೆ ಆರಂಭ ಆಗುತ್ತವೆ. ಹಾಗಾಗಿ ಪಿಜ್ಜಾ ಗಳಲ್ಲಿ ಹಲವಾರು ಬಗೆಯ ಪಿಜ್ಜಾಗಳನ್ನು ತಯಾರಿಸುತ್ತಾರೆ. ಹೀಗೆ ಅವರ ಆರ್ಡರ್ ಗಳು ಹೆಚ್ಚುತ್ತಾ ಹೋದಂತೆ ಪ್ಯಾಕಿಂಗ್ ಗಳಲ್ಲಿ, ಗುಣಮಟ್ಟದಲ್ಲಿ ಹೀಗೆ ಹಲವಾರು ರೀತಿಯ ಬದಲಾವಣೆಗಳನ್ನು ತರುತ್ತಾರೆ. 1963 ರಲ್ಲಿ ಈ ಎಲ್ಲಾ ಬದಲಾವಣೆಗಳ ಜೊತೆಗೆ ತಮ್ಮ ಕಂಪನಿಯ ಹೆಸರನ್ನು ಡಾಮಿನೊಜ್ ಪಿಜ್ಜಾ ಎಂದು ಮರು ನಾಮಕರಣ ಮಾಡುತ್ತಾರೆ. ಅದೇ ವರ್ಷದಲ್ಲಿ ಮತ್ತೆ ಎರಡು ಪಿಜ್ಜಾ ಅಂಗಡಿಗಳನ್ನು ತೆರೆದು ತಮ್ಮ ಈ ಮೂರು ಪಿಜ್ಜಾ ಅಂಗಡಿಗಳ ಲೋಗೋವನ್ನು 3 ಡಾಟ್ ಗಳಲ್ಲಿ ತೋರಿಸುತ್ತಾರೆ. ಮುಂದೆ ಹೇಗೆಲ್ಲ ಇವರ ಪಿಜ್ಜಾ ಅಂಗಡಿಗಳು ಹೆಚ್ಚುತ್ತಾ ಹೋಗುತ್ತಾ ಹಾಗೆ ಈ ಡಾಟ್ ಗಳು ಕೂಡಾ ಏರುತ್ತಾ ಹೋಗಬೇಕು ಎಂದಾಗಿತ್ತು.

ಮುಂದೆ ಪಿಜ್ಜಾ ಅಂಗಡಿಗಳು ಅವರ ಲೋಗೋದಲ್ಲಿ ಡಾಟ್ ಗಳು ಇರಲು ಜಾಗ ಇಲ್ಲದಷ್ಟು ಮಟ್ಟಿಗೆ ಬೆಳೆಯುತ್ತಾ ಹೆಚ್ಚುತ್ತಾ ಹೋಯಿತು. ಮುಂದೆ 1968 ರಲ್ಲಿ ಅವರ ಮುಖ್ಯ ಘಟಕದಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮವಾಗಿ ಲಾಸ್ ಆಗಿ ಇವರ ಕಂಪೆನಿಯನ್ನೆಲ್ಲ ಬ್ಯಾಂಕ್ ನವರು ಜಪ್ತಿ ಮಾಡುತ್ತಾರೆ. ಬ್ಯಾಂಕ್ ನವರ ಮರು ಮಾರಾಟ ಬೆಲೆಗೆ ಇವರ ಕಂಪನಿಯನ್ನು ಬೇರೆ ಯಾರು ಸಹ ಕೊಂಡುಕೊಳ್ಳಲು ಮುಂದೆ ಬರಲ್ಲ ಆಗ ಥಾಮ್ ಅವರು ಬ್ಯಾಂಕಿನ ಜೊತೆ ನನ್ನ ಸಾಲ ತೀರುವವರೆಗೆ ನಾನು ನನ್ನ ಪಿಜ್ಜಾ ಸ್ಟೋರ್ ನಲ್ಲಿ ಕೆಲಸ ಮಾಡುತ್ತೇನೆ. ಬಂದ ಲಾಭದಲ್ಲಿ ನನಗೆ ಸಂಬಳದ ರೂಪದಲ್ಲಿ ಇಂತಿಷ್ಟು ಎಂದು ಹಣವನ್ನು ನೀಡಿ ಮತ್ತು ಸಂಪೂರ್ಣವಾಗಿ ಸಾಲ ತೀರಿದ ನಂತರವೇ ತನಗೆ ಕಂಪನಿಯನ್ನು ಹಸ್ತಾoತರಿಸಲು ಕೇಳುತ್ತಾರೆ ಹಾಗೆ ಬ್ಯಾಂಕ್ ನವರು ಸಹ ಇದಕ್ಕೆ ಒಪ್ಪುತ್ತಾರೆ. ತಾವೇ ಸ್ಥಾಪಿಸಿದ ಕಂಪನಿಯಲ್ಲಿ ಥಾಮ್ ಕೆಲವು ತಿಂಗಳುಗಳ ಕಾಲ ಕೆಲಸಗಾರನಾಗು ಸಹ ದುಡಿಯುತ್ತಾರೆ. ಹಗಲು ರಾತ್ರಿ ಎನ್ನದೇ ಕಷ್ಟ ಪಟ್ಟು ದುಡಿದು , ತಮ್ಮ ಸಾಲವನ್ನು ತೀರಿಸಿ ಪುನಃ ತಮ್ಮ ಕಂಪನಿಯನ್ನು ಹಿಂದೆ ಪಡೆಯುತ್ತಾರೆ. ಅದೇ ವರ್ಷದಲ್ಲಿ ಇನ್ನೂ 5 ಹೊಸ ಪಿಜ್ಜಾ ಸ್ಟೋರ್ ಗಳನ್ನು ತೆರೆದು 1970ರಲ್ಲಿ ಇವರ ಡಾಮಿನೊಸ್ ಪಿಜ್ಜಾ ಮಾರಾಟ ಕೂಡಾ ಕಡಿಮೆ ಆಗತ್ತೆ ಹಾಗೂ ಥಾಮ್ ಅವರು ಕೆಲವು ಕಾನೂನಿನ ಚಟುವಟಿಕೆಯಲ್ಲಿ ಇದ್ದಾಗ ಅವರ ಡಾಮಿನೊಸ್ ಕಂಪನಿಯು ನಷ್ಟವನ್ನು ಅನುಭವಿಸಿ ಕೆಳಗೆ ಬೀಳುವ ಸಂದರ್ಭ ಬರುತ್ತದೆ. ಆದರೆ ಥಾಮ್ ಇಂತವುದಕ್ಕೆ ಎಲ್ಲ ಕುಗ್ಗದೇ ತಮ್ಮ ಕಾನೂನು ಚಟುವಟಿಕೆಗಳಿಂದ ಮುಕ್ತಿ ಪಡೆದು ಮತ್ತೆ ತಮ್ಮ ಕಂಪನಿಯನ್ನು ಬೆಳೆಸಲು ನಿಲ್ಲುತ್ತಾರೆ.

ಇದಕ್ಕಾಗಿ ಇವರು 1973 ರಲ್ಲಿ 30 ನಿಮಿಷಗಳಲ್ಲಿ ಗ್ಯಾರಂಟಿ ಡಿಲೆವರಿ ಅನ್ನುವುದನ್ನು ಜಾರಿಗೆ ತರುತ್ತಾರೆ. ಈ ಕಲ್ಪನೆಯಿಂದಾಗಿ ಡಾಮಿನೊಸ್ ಪಿಜ್ಜಾ ಕಂಪನಿಯು ಅತ್ಯಂತ ಸುಧಾರಣೆಯನ್ನು ಕಂಡು ಉನ್ನತ ಮಟ್ಟದಲ್ಲಿ ಬೆಳೆಯುತ್ತದೆ. 1979 ರವರೆಗೆ 200 ಡಾಮಿನೊಸ್ ಪಿಜ್ಜಾ ಕಂಪನಿಗಳು ಆದವು. ತಮ್ಮ ಮೊದಲ ಇಂಟರ್ನ್ಯಾಷನಲ್ ಡಾಮಿನೊಸ್ ಸ್ಟೋರ್ ಅನ್ನು 1983 ರಲ್ಲಿ ಕೆನಡಾ ದಲ್ಲಿ ತೆರೆಯುತ್ತಾರೆ. ಇಂದು ಡಾಮಿನೊಸ್ ಪಿಜ್ಜಾ ಅಂಗಡಿಗಳ ಸಂಖ್ಯೆಯನ್ನು ನೋಡುವುದಾದರೆ 90 ದೇಶಗಳಲ್ಲಿ 17,000 ಸ್ಟೋರ್ ಗಳು ಇವೆ. ಪ್ರತೀ ದಿನ ಸುಮಾರು 30 ಲಕ್ಷ ಪಿಜ್ಜಾ ಮಾರಾಟ ಆಗುತ್ತದೆ. ಥಾಮ್ ಮನಾಗನ್ ಅವರು ಒಂದು ಸಣ್ಣ ಅಂಗಡಿಯಿಂದ ಅವರ ವ್ಯಾಪಾರ ಆರಂಭಿಸಿ ಇಂದು ವಿಶ್ವದಾದ್ಯಂತ ಸಾವಿರಾರು ಡಾಮಿನೊಸ್ ಪಿಜ್ಜಾ ಸ್ಟೋರ್ ಗಳನ್ನು ಹೊಂದಿದ್ದಾರೆ.

Leave A Reply

Your email address will not be published.