ಮಿಸ್ಟರ್ 360 ಬಗ್ಗೆ ಅಭಿಮಾನಿಗಳು ತಿಳಿಯದ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರ

0 4

ಬೆಸ್ಟ್ ಫೀಲ್ಡರ್, ಬೆಸ್ಟ್ ವಿಕೆಟ್ ಕೀಪರ್, ಬೆಸ್ಟ್ ಬ್ಯಾಟ್ಸ್ ಮ್ಯಾನ್ ಎಬಿಡಿ ವಿಲ್ಲರ್ಸ್ ಇವರು ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರರು. ಇವರಿಗೆ ಮಿಸ್ಟರ್ 360 ಎನ್ನುವ ಹೆಸರು ಕೂಡ ಇದೆ. ಇವರಿಗೆ ನಮ್ಮ ಕರ್ನಾಟಕದಲ್ಲಿ ಸೇರಿದಂತೆ ಪ್ರಪಂಚದ ಅತ್ಯಂತ ಅಭಿಮಾನಿಗಳು ಇದ್ದಾರೆ. ಕರ್ನಾಟಕದಲ್ಲಿ ಇವರಿಗೆ ಅಭಿಮಾನಿಗಳು ಇರಲು ಕಾರಣ ಆರ್ಸಿಬಿ. ಆರ್ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲ್ಲರ್ಸ್ ಅವರ ಆಟ ತುಂಬಾ ಚೆನ್ನಾಗಿರುತ್ತದೆ. ಎಬಿಡಿ ವಿಲ್ಲರ್ಸ್ ಅವರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ಎಬಿಡಿ ವಿಲ್ಲರ್ಸ್ ಇವರ ಪೂರ್ತಿ ಹೆಸರು ಅಬ್ರಹಮ್ ಬೆಂಜಮಿನ್ ಡಿವೆಲರ್ಸ್. ಇವರು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ 1984, ಫೆಬ್ರುವರಿ17 ರಲ್ಲಿ ಜನಿಸುತ್ತಾರೆ. ತಂದೆ ಅಬ್ರಹಂ ಬಿ ಡೆವಿಲ್ಲರ್ಸ್, ತಾಯಿ ಮೇಲಿ ಡಿ ವೆಲರ್ಸ್. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದ ಆಫ್ರಿಕನ್ ಶಾಲೆಯಲ್ಲಿ ತಮ್ಮ ಮಾಡುತ್ತಾರೆ. ಇವರ ತಂದೆಗೆ ಸ್ಪೋರ್ಟ್ಸ್ ನಲ್ಲಿ ತುಂಬಾ ಆಸಕ್ತಿ. ಹಾಗಾಗಿ ಸ್ಪೋರ್ಟ್ಸ್ ನಲ್ಲಿ ತುಂಬಾ ಪ್ರೋತ್ಸಾಹ ನೀಡುತ್ತಾರೆ. ಎಬಿಡಿ ಅವರಿಗೆ ಗಲ್ಫ್, ಟೆನಿಸ್ ಆಟಗಳಲ್ಲಿ ಬಹಳಷ್ಟು ಆಸಕ್ತಿ ಹಾಗಾಗಿ ಅನೇಕ ಪಂದ್ಯಗಳಲ್ಲಿ ಸಹ ಆಡಿದ್ದಾರೆ. ನಂತರ ಕ್ರಿಕೆಟ್ ಜಗತ್ತಿಗೆ ಕಾಲಿಡುತ್ತಾರೆ ಇವರು ಒಬ್ಬ ರೈಟ್’ಹ್ಯಾಂಡ್ ಬ್ಯಾಟ್ಸ್ ಮ್ಯಾನ್. ದಕ್ಷಿಣಾಫ್ರಿಕಾದ ಯು ನೈನ್ಟೀನ್ ತಂಡದ ಪರೀಕ್ಷೆಯ ನಂತರ 2003 ರಲ್ಲಿ ಟೈಟನ್ಸ್ ಟೀಮಿಗೆ ಆಯ್ಕೆಯಾಗುತ್ತಾರೆ. ನಂತರ 2004ರಲ್ಲಿ ಟೆಸ್ಟ್ ಇಂಗ್ಲೆಂಡ್ ವಿರುದ್ಧ ಆಟ ಆಡುತ್ತಾರೆ. ಆಗವರ ವಯಸ್ಸು 20 ವರ್ಷ ಮಾತ್ರವಾಗಿತ್ತು. ಈ ರೀತಿಯಾಗಿ ಅವರು ಕ್ರಿಕೆಟ್ ಜಗತ್ತಿಗೆ ಪಾದರ್ಪಣೆ ಮಾಡುತ್ತಾರೆ.

ಇವರು ಅತಿವೇಗವಾಗಿ ಸಾವಿರ ರನ್ ಗಡಿಯನ್ನು ದಾಟಿದ ದಕ್ಷಿಣ ಆಫ್ರಿಕಾದ ಎರಡನೇ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ನಂತರದಲ್ಲಿ ಅವರು ಅನೇಕ ಕ್ರಿಕೆಟ್ ಬಂದುಗಳಲ್ಲಿ ಆಟವಾಡಿ ಅವರ ದೇಶಕ್ಕೆ ಹೆಸರನ್ನು ತಂದು ಕೊಡುತ್ತಾರೆ. ಅಷ್ಟೇ ಅಲ್ಲದೆ ಇವರಿಗೆ ಏಕದಿನ ಹಲೋ ಟಿ-ಟ್ವೆಂಟಿ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾದ ಕಡೆಯಿಂದ ನಾಯಕನ ಪಟ್ಟ ಸಹ ದೊರೆಯುತ್ತದೆ. ಇವರ ನಾಯಕತ್ವದಲ್ಲಿ ಯಶಸ್ಸನ್ನು ಸಹ ಕಂಡಿದ್ದಾರೆ. ಇವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾವು ಅನೇಕ ಪಂದ್ಯಗಳನ್ನು ಸಹ ಗೆದ್ದಿತ್ತು. ದಕ್ಷಿಣ ಆಫ್ರಿಕಾದ ಎಲ್ಲ ಬ್ಯಾಟ್ಸ್ಮನ್ಗಳು ಮಾಡಿರುವ ರನ್ಗಳ ಸಾಲಿನಲ್ಲಿ ಇವರು ಒಟ್ಟು ರನ್ಗಳ ಮೊತ್ತ ಎರಡನೇಯದಾಗಿದೆ.

ಮೊದಮೊದಲ ಇವರು ಫೀಲ್ಡಿಂಗ್ ಮಾಡುತ್ತಿದ್ದರು ನಂತರ ವಿಕೆಟ್ ಕೀಪಿಂಗ್ ಸಹ ಮಾಡುತ್ತಿದ್ದರು. 2012ರ ತನಕ ತೆಲುಗು ವಿಕೆಟ್ ಕೀಪರ್ ಆಗಿ ಆಡುತ್ತಿದ್ದರು . ಮಾರ್ಕ್ ಬೌಚರ್ ಅವರ ನಿವೃತ್ತಿಯ ನಂತರ ದಕ್ಷಿಣ ಆಫ್ರಿಕಾ ತಂಡದ ಕಾಯಂ ಕೀಪರ್ ಆಗಿ ನೇಮಕವಾಗುತ್ತಾರೆ. ಇವರು ತಮ್ಮ ಮಿಂಚಿನ ಫೀಲ್ಡಿಂಗ್ ನಿಂದ ವಿಶ್ವದ ಅತ್ಯಂತ ಉತ್ತಮ ಫೀಲ್ಡರ್ ಗಳಲ್ಲಿ ಒಬ್ಬರಾಗಿದ್ದಾರೆ. ರೈಟ್ ಹ್ಯಾಂಡ್ ಬ್ಯಾಟ್ಸ್ಮನ್ ಆಗಿದ್ದರೂ ಸಹ ಕೆಲವೊಮ್ಮೆ ಎಲ್ಲಾ ಕಡೆಯಿಂದಲೂ ಆಟವಾಡುತ್ತಿದ್ದರು. ಎಬಿಡಿ ಭಾರತದ ವಿರುದ್ಧ ವಿಶ್ವದಲ್ಲಿ ಎರಡನೇ ಅತಿ ವೇಗದ ಶತಕ ದಾಖಲಿಸಿದ್ದಾರೆ. ಡಿಸೆಂಬರ್ 2012ರಲ್ಲಿ ಕ್ರಿಕೆಟ್ ಟೆಸ್ಟ್ ಹಾಗೂ ಏಕದಿನ ಎರಡರಲ್ಲಿಯೂ ರಾಂಕಿಂಗ್ ನಿಯಮದಂತೆ ಪ್ರಥಮಸ್ಥಾನ ಪಡೆಯುವುದರಲ್ಲಿಯೂ ಜಗತ್ತಿನಲ್ಲಿ ಸಾಧನೆಯನ್ನು ಮಾಡಲು 9ನೆಯ ಬ್ಯಾಟ್ಸ್ಮನ್ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ. ಎಬಿಡಿ ಅವರಿಗೆ 2013ರಲ್ಲಿ ಡೇನಿಯಲ್ ಡೇವಿಲ್ ಅವರೊಂದಿಗೆ ವಿವಾಹವಾಗುತ್ತದೆ 2015ರಲ್ಲಿ ಮಗು ಕೂಡ ಆಗುತ್ತೆ. ಇವರೇ ಓಡಿಐ ನಲ್ಲಿ 16 ಬಾಲ್ 50 ರನ್ 31 ಬಾಲ್ ನೂರು ರನ್, ಅರವತ್ತು ಬಾಲ್ ಗೆ 150 run ಮಾಡಿ ರೆಕಾರ್ಡ್ ಮಾಡಿದ್ದಾರೆ. ಐಪಿಎಲ್ ಮೊದಲು 3 ರೌಂಡ್ ಗಳಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರವಾಗಿ ಆಟವಾಡುತ್ತಾರೆ. ನಂತರದಲ್ಲಿ ಆರ್ ಸಿಬಿ ತಂಡವನ್ನು ಸೇರಿಕೊಳ್ಳುತ್ತಾರೆ. ಕೊನೆಗೆ 23 ಮೇ 2018ರಲ್ಲಿ ತಮ್ಮ ಇಂಟರ್ನ್ಯಾಷನಲ್ ಕ್ರಿಕೆಟ್ ಕೆರಿಯರಿಗೆ ನಿವೃತ್ತಿಯನ್ನು ಘೋಷಿಸುತ್ತಾರೆ. ಆದರೂ ಸಹ ಈ ಬಾರಿ ನಡೆಯುವ ಐಪಿಎಲ್ ನಲ್ಲಿ ನಮ್ಮ ಆರ್ಸಿಬಿ ಟೀಮ್ ಅಲ್ಲಿ ಆಟ ಆಡಲಿದ್ದಾರೆ. ಈ ರೀತಿಯಾಗಿ ಅವರು ಕ್ರಿಕೆಟ್ ಜಗತ್ತಿನಲ್ಲಿ ಹೆಸರು ಮಾಡಿದ್ದಾರೆ .

Leave A Reply

Your email address will not be published.