ನಮ್ಮ ರಾಜ್ಯದಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ ಹಲವು ಪ್ರತಿಭೆಗಳು ತನ್ನ ಕಲೆಯಿಂದ ಸ್ಥಳಿಕವಾಗಿ ಹಾಗೂ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಬಹಳಷ್ಟು ಪ್ರತಿಭೆಗಳು ತಮಗೆ ವೇದಿಕೆ ಸಿಗದೇ ಹಾಗೆ ಉಳಿದಿರುವಂತವರು ಸುಮಾರು ಜನ ಇದ್ದಾರೆ. ಅಂತವರಿಗೆ ಒಂದು ವೇದಿಕೆ ಮಾಡಿಕೊಡುವ ಕೆಲಸ ಆಗಬೇಕು.

ವಿಷ್ಯಕ್ಕೆ ಬರೋಣ ಈ ಕನ್ನಡಿಗ ನಿರಂಜನ್ ನವರ ಕೈ ಚಳಕದಿಂದ ಕಡಿಮೆ ಬೆಲೆಗೆ ಫ್ರಿ ಫಿಲ್ಟರ್ ತಯಾರಾಗಿದ್ದು ಇದೀಗ ಇವರು ಕಂಡುಹಿಡಿದಿರುವಂತ ಫ್ರೀ ಫಿಲ್ಟರ್ ಸಾಧನ ಹೇಗೆ ಕಾರ್ಯ ನಿರ್ವಹಿಸುತ್ತದೆ ಅನ್ನೋದನ್ನ ಈ ಮೂಲಕ ತಿಳಿಯೋಣ. ನಿಮ್ಮಲಿ ಈ ಪ್ರಶ್ನೆ ಮೂಡಬಹುದು ಬರಿ 30 ರೂಪಾಯಿಯಲ್ಲಿ ವರ್ಲ್ಡ್ ಫೇಮಸ್ ಆಗುವಂತ ಫ್ರೀ ಫಿಲ್ಟರ್ ಸಾಧನ ಕಂಡು ಹಿಡಿಯಲು ಹೇಗೆ ಸಾಧ್ಯ ಎಂಬುದಾಗಿ. ಹೌದು ಬೆಳಗಾವಿಯ ನಿರಂಜನ್ ಅದನ್ನು ಸಾಧ್ಯವಾಗಿಸಿದ್ದಾರೆ.

ಈ ಸಾಧನವನ್ನು ನಿರಂಜನ್ ಅವರು ಎಂಜಿನಿಯರಿಂಗ್ ಅಂತಿಮ ವರ್ಷದ ಪ್ರಾಜೆಕ್ಟ್ ವೇಳೆ ತಯಾರಿಸಲು ಹೋದಾಗ ಅದು ರಿಜೆಕ್ಟ್ ಆಗಿತ್ತು, ಆದ್ರೆ ಈಗ ಈ ಪ್ರಾಜೆಕ್ಟ್ ಗೆ ರಾಜ್ಯ ಸರ್ಕಾರದ ಇಲೆವೆಂಟ್ 100 ಸಮಾವೇಶದಲ್ಲಿ ಪ್ರಶಸ್ತಿ ಕೂಡ ಲಭಿಸಿದೆ. ಯಾವುದೇ ಒಂದು ಯಶಸ್ಸು ಸುಲಭವಾಗಿ ಸಿಗೋದಿಲ್ಲ, ಅದಕ್ಕೆ ಸತತ ಪ್ರಯತ್ನ ಇರಬೇಕು ಹಾಗೆಯೆ ಇವರು ಕೂಡ ಮೊದಲ ಬಾರಿಗೆ ಸೋತು ನಂತರ ಯಶಸ್ಸು ಕಂಡಿದ್ದಾರೆ.

ಇನ್ನು ಇವರು ಕಂಡು ಹಿಡಿದಿರುವಂತ ಸಾಧನವನ್ನು ಮೋದಿಯವರ ಸರ್ಕಾರದ ಸ್ಟಾರ್ಟ್ ಅಪ್‌ ಸಹಾಯಧನ ಕೊಡ ಮಂಜೂರು ಮಾಡಲಾಗಿದ್ದು ಇವರು ಮಾಡಿರುವಂತ ಪ್ರಾಜೆಕ್ಟ್ ಬರಿ ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶ ವಿದೇಶದಲ್ಲೂ ತಲುಪಿದೆ ಭಾರತೀಯ ಸೇನೆ ಈ ಪ್ರತಿಭೆಯನ್ನು ಗುರುತಿಸಿ ಸಾವಿರ ಫಿಲ್ಟರ್‌ ಅನ್ನು ಖರೀದಿಸಿ ಪ್ರೋತ್ಸಾಹಿಸಿದೆ

ನಿರಂಜನ್ ಅವರು ಮಾಡಿರುವಂತ ಫ್ರೀ ಫಿಲ್ಟರ್ ಹೇಗೆ ಸಹಕಾರಿ? ಇದನ್ನು ಅಲ್ಟ್ರಾ ಫಿಲ್ಟರೇಶನ್ ಮೆಮರಿನ್ ತಂತ್ರಜ್ಞಾನದಲ್ಲಿ ಈ ‘ಫ್ರೀ ಫಿಲ್ಟರ್‌’ ತಯಾರಿಸಲಾಗಿದೆ. ಇದು ನೀರನ್ನು ಶುದ್ಧ ಮಾಡುವ ಜತೆಗೆ 80% ಬ್ಯಾಕ್ಟಿರಿಯಾಗಳನ್ನು ತಡೆಯುತ್ತದೆ. ಈ ಸಾಧನವನ್ನು ಹೇಗೆ ಬಳಸಬಹುದು ಅನ್ನೋದನ್ನ ನೋಡುವುದಾದರೆ ಬೆರಳಿನ ಗಾತ್ರದ ಈ ಸಾಧನವನ್ನು ಸಾಮಾನ್ಯ ನೀರಿನ ಬಾಟಲಿಯ ಬಾಯಿಗೆ ಅಳವಡಿಸಿ ಶುದ್ಧ ನೀರು ಪಡೆಯಬಹುದು ಒಂದು ‘ಫಿಲ್ಟರ್‌’ ಸಾಧನ 100 ಲೀ. ನೀರು ಶುದ್ಧ ಮಾಡುತ್ತದೆ. ಈ ಸಾಧನಕ್ಕೆ ಒಮ್ಮೆ ನೀರು ತಾಗಿಸಿದರೆ ಗರಿಷ್ಠ ಎರಡು ತಿಂಗಳು ಬಳಸಬಹುದಂತೆ.

Leave a Reply

Your email address will not be published. Required fields are marked *