ಪ್ರಪಂಚದ ಅತಿ ದೊಡ್ಡ ಶ್ರೀಮಂತ ವ್ಯಕ್ತಿಯಾದ ಬಿಲ್ ಗೇಟ್ಸ್ ಅವರು, ಎಷ್ಟು ಸರಳತೆಯಿಂದ ಇರ್ತಾರೆ ಗೊತ್ತೇ?

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಬಿಲ್ ಗೇಟ್ಸ್ ಪ್ರಪಂಚದ ಅತಿ ದೊಡ್ಡ ಶ್ರೀಮಂತ ವ್ಯಕ್ತಿ . ಸಾಫ್ಟ್ವೇರ್ ಸಾಮ್ರಾಜ್ಯವನ್ನೇ ಸೃಷ್ಟಿಸಿದ ರಾಜ. ಒಂದಲ್ಲ ಎರಡಲ್ಲ 18ವರ್ಷಗಳಿಂದ ಪ್ರಪಂಚದ ಅತಿ ದೊಡ್ಡ ಧನವಂತರ ಸಾಲಿನಲ್ಲಿ ಮೊದಲನೇ ಸ್ಥಾನ ಪಡೆದಿರುವ ವ್ಯಕ್ತಿ. ಇವರು ಒಂದು ದಿನಕ್ಕೆ ಆರು ಕೋಟಿಯನ್ನು ಕರ್ಚು ಮಾಡಲು ಆರಂಭಿಸಿದರೂ ಅವರ ಒಟ್ಟು ಆಸ್ತಿ ಯನ್ನು ಖರ್ಚುಮಾಡಲು 218 ವರ್ಷ ಬೇಕಂತೆ. 5 ಲಕ್ಷ 76 ಸಾವಿರ ಕೋಟಿ ಆಸ್ತಿ ಇಂದ ಈಗಲೂ ಸಹ ಇವರು ಪ್ರಪಂಚದ ಅತಿ ದೊಡ್ಡ ಧನವಂತರ ಸಾಲಿನಲ್ಲಿ ಮೊದಲಿಗರಾಗಿದ್ದಾರೆ. ಇಂತಹ ವ್ಯಕ್ತಿಯ ಜೀವನಗಾಥೆಯನ್ನು ನಾವಿಂದು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬಿಲ್ ಗೇಟ್ಸ್ 1950 ಅಕ್ಟೋಬರ್ 28ರಂದು ಅಮೆರಿಕದ ವಾಷಿಂಗ್ಟನ್ ನಲ್ಲಿ ಜನಿಸುತ್ತಾರೆ. ಚಿಕ್ಕಂದಿನಿಂದಲೂ ಬಿಲ್ ಗೇಟ್ಸ್ ಗಣಿತ ಮತ್ತು ಕಂಪ್ಯೂಟರ್ ಅಂದರೆ ತುಂಬಾ ಇಷ್ಟ. ತನ್ನ 13 ವರ್ಷ ವಯಸ್ಸಿನಲ್ಲಿ ಒಂದು ಗೇಮಿನ ಸಲುವಾಗಿ ಅದಕ್ಕೆ ಪ್ರೋಗ್ರಾಮನ್ನು ಬರೆಯುತ್ತಾರೆ. ಹೈಸ್ಕೂಲಿನಲ್ಲಿ ಓದುತ್ತಿರುವಾಗ ಪಾಲ್ ಅನೇಲಿಯನ್ ಎಂಬ ವ್ಯಕ್ತಿಯ ಜೊತೆಗೆ ಸ್ನೇಹ ಆರಂಭವಾಗುತ್ತದೆ ಈತನಿಗೂ ಸಹ ಕಂಪ್ಯೂಟರ್ ಅಂದ್ರೆ ತುಂಬಾ ಇಷ್ಟವಾಗಿದ್ದು ಇಬ್ಬರೂ ಕೂಡ ಕಂಪ್ಯೂಟರ್ನ ಬಗ್ಗೆ ಹೆಚ್ಚು ಆಲೋಚನೆ ನಡೆಸುತ್ತಿರುತ್ತಾರೆ. ಹೀಗೆ ಇಬ್ಬರು ಸೇರಿ ಕೆಲವೊಂದಿಷ್ಟು ಕಂಪ್ಯೂಟರ್ ಗಳಿಗೆ ಸಂಬಂಧಿಸಿದ ಪ್ರೋಗ್ರಾಂಗಳನ್ನು ಸಹ ಬರೆಯುತ್ತಿರುತ್ತಾರೆ. ಬಿಲ್ ಗೇಟ್ಸ್ ತಂದೆ-ತಾಯಿಗೆ ಅವರನ್ನು ವಕೀಲರನ್ನಾಗಿ ಮಾಡುವ ಆಸೆ ಆದರೆ ಬಿಲ್ ಗೇಟ್ಸ್ ಗೆ ಕಂಪ್ಯೂಟರ್ ಅಂದರೆ ಪ್ರಾಣವಾಗಿತ್ತು. ಅದರ ತಂದೆ-ತಾಯಿಯ ಆಸೆಯ ಮೇರೆಗೆ ಹಾರ್ವರ್ಡ್ ಯೂನಿವರ್ಸಿಟಿ ಸೇರಿಕೊಳ್ಳುತ್ತಾರೆ. ಆದರೆ ಒಂದು ದಿನ ಆಕಸ್ಮಿಕವಾಗಿ ಪಾಪುಲರ್ ಎಲೆಕ್ಟ್ರಾನಿಕ್ಸ್ ಎಂಬ ಒಂದು ಮ್ಯಾಗಜೀನನ್ನು ನೋಡಿ ಅದರ ಮೇಲೆ ಆಲ್ಟೊ 800 ಕಂಪ್ಯೂಟರ್ ಜಾಹಿರಾತನ್ನು ನೋಡುತ್ತಾರೆ.

ಈ ಕಂಪ್ಯೂಟರ್ ಸಲುವಾಗಿ ಸಾಫ್ಟ್ವೇರ್ ಅನ್ನು ಹುಡುಕುತ್ತಿರುವ ವಿಷಯ ಬಿಲ್ಗೆಟ್ಸ್ ಗೆ ತಿಳಿಯುತ್ತದೆ. ಆಗಪ್ಪ ಅಲೆನ್ ಮತ್ತು ಬಿಲ್ಗೆಟ್ಸ್ ಇಬ್ಬರು ಸೇರಿ ಆಲ್ಟ್ ಕಂಪನಿಗೆ ಭೇಟಿ ನೀಡಿ ತಾವು ಸಾಫ್ಟ್ವೇರ್ ನೀಡುವುದಾಗಿ ತಿಳಿಸುತ್ತಾರೆ ಹಾಗೆ ಸ್ನೇಹಿತರಿಬ್ಬರು ಸೇರಿ ಹಾರ್ವರ್ಡ್ ಯೂನಿವರ್ಸಿಟಿ ಕಂಪ್ಯೂಟರ್ನಲ್ಲಿ ಹಗಲು-ರಾತ್ರಿ ಏನದೆ ಎರಡು ತಿಂಗಳುಗಳ ಕಾಲ ಶ್ರಮಿಸಿ ಸಾಫ್ಟ್ವೇರ್ ಅನ್ನು ರೆಡಿ ಮಾಡುತ್ತಾರೆ. ಪಿ ಯು ಸಾಫ್ಟ್ವೇರ್ ಅವರನ್ನು ಕಂಪ್ಯೂಟರ್ನಲ್ಲಿ ಬಹಳಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಸ್ವಲ್ಪ ದಿನಗಳಲ್ಲಿ ಇದು ಬಹಳಷ್ಟು ಪ್ರಖ್ಯಾತಿಯನ್ನು ಪಡೆದು ಇಬ್ಬರು ಸ್ನೇಹಿತರು ಸಹ ಒಳ್ಳೆ ಹೆಸರನ್ನು ಪಡೆದುಕೊಳ್ಳುತ್ತಾರೆ.

ಹಾಗೆ ಇಬ್ಬರು ಸ್ನೇಹಿತರು ಸೇರಿ 1975 ರಲ್ಲಿ ಮೈಕ್ರೋಸಾಫ್ಟ್ ಕಂಪನಿಯನ್ನು ಆರಂಭಿಸುತ್ತಾರೆ ಆಗ ಬಿಲ್ಗೇಟ್ ವಯಸ್ಸು ಕೇವಲ 19 ವರ್ಷ ಮಾತ್ರವಾಗಿತ್ತು. ಆಗಿನಕಾಲದಲ್ಲಿ ಹೆಚ್ಚು ಕಂಪ್ಯೂಟರುಗಳನ್ನು ಒದಗಿಸುತ್ತಿದ್ದ ಐಬಿಎಂ ಕಂಪನಿ ಅವರು ಬಿಡುಗಡೆಮಾಡುವ ಪರ್ಸನಲ್ ಕಂಪ್ಯೂಟರ್ ಗೆ ಒಂದು ಆಪರೇಟಿಂಗ್ ಸಿಸ್ಟಮ್ ಬೇಕು ಎಂದು ಬಿಲ್ ಗೇಟ್ಸ್ ಕೇಳಿದಾಗ ಬಿಲ್ಗೆಟ್ಸ್ ಆಗ ರನಿಂಗ್ ಅಲ್ಲಿ ಇರುವಂತಹ ಆಪರೇಟಿಂಗ್ ಸಿಸ್ಟಮನ್ನು ಅವರಿಗೆ 50 ಸಾವಿರ ಡಾಲರ್ಗೆ ಖರೀದಿ ಮಾಡಿ ಅದನ್ನು ಮತ್ತಷ್ಟು ಅಭಿವೃದ್ಧಿ ಮಾಡಿ ಮೈಕ್ರೋಸಾಫ್ಟ್ ms-dos ಎಂಬ ಹೆಸರಿನಲ್ಲಿ ಅಲ್ಲಿ ಎಂಗೆ ನೀಡುತ್ತಾರೆ. ಹೇಗೆ ಮೈಕ್ರೋಸಾಫ್ಟ್ ಬೆಳೆಯುತ್ತ ಮಿಲಿಯನ್ ಡಾಲರ್ ಕಂಪನಿ ಆಗುತ್ತದೆ. ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಕಂಪನಿಯ ಸಲುವಾಗಿ ಹಾರ್ವರ್ಡ್ ಯೂನಿವರ್ಸಿಟಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. 1986 ರಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ ಅನ್ನು ಮಾರ್ಕೆಟಿಗೆ ತರುತ್ತಾರೆ. ವಿಂಡೋಸ್ ಬಿಡುಗಡೆ ನಂತರ ಸಾಫ್ಟ್ವೇರ್ ಸಾಮ್ರಾಜ್ಯವನ್ನು ತಮ್ಮ ಸ್ವಂತ ಮಾಡಿಕೊಳ್ಳುತ್ತಾರೆ.

ಬಿಲ್ ಗೇಟ್ಸ್ ಗೇಮ್ 30 ವರ್ಷದ ಒಳಗೆ ಮಿಲೇನಿಯರ್ ಆಗುವ ಆಸೆ. ಅದರ 31 ವರ್ಷಕ್ಕೆ ಬಿಲೇನಿಯರ್ ಆಗುತ್ತಾರೆ . ಆಗಿನ ಕಾಲದಲ್ಲಿ 95 ಪರ್ಸೆಂಟ್ ಆಪರೇಟಿಂಗ್ ಸಿಸ್ಟಮ್ ಮೈಕ್ರೋಸಾಫ್ಟ್ ಕೈಯಲ್ಲಿತ್ತು. ಬಿಲ್ ಗೇಟ್ಸ್ ಮಾರ್ಕೆಟಿನಲ್ಲಿ ಮೈಕ್ರೋಸಾಫ್ಟ್ ಅನ್ನು ಬಿಟ್ಟು ಬೇರೆ ಯಾವುದೇ ಸಾಫ್ಟ್ವೇರ್ ಗಳು ಬರದೇ ಇರುವ ಹಾಗೆ ಮಾಡುತ್ತಿದ್ದಾರೆ ಎಂದು ಬೇರೆ ಹಲವಾರು ಕಂಪನಿಗಳು ಕೋರ್ಟಿನ ಮೆಟ್ಟಿಲು ಏರುತ್ತವೆ. ಇದರ ಕುರಿತಾಗಿ ಬಹಳಷ್ಟು ದಿನಗಳ ಕಾಲ ಕೇಸ್ ನಡೆದರು ಬಿಲ್ಗೆಟ್ಸ್ ಇದ್ಯಾವುದಕ್ಕೂ ಭಯ ಬೀಳುವುದಿಲ್ಲ. ಆಗ ಹೊಸದಾಗಿ ಜನರಿಗೆ ಇಂಟರ್ ನೆಟ್ ಪರಿಚಯ ಆಗುವ ದಿನಗಳು ಆ ಸಮಯದಲ್ಲಿ ಹೊಸದಾಗಿ ಇಂಟರ್ನೆಟ್ ಎಕ್ಸ್ಪ್ಲೋರರ್ ಎಂಬ ಹೊಸ ಸರ್ಚ್ ಇಂಜಿನ್ ಅನ್ನು ಆರಂಭಿಸುತ್ತಾರೆ. ಈ ರೀತಿ ಕಾಲಕ್ಕೆ ತಕ್ಕಂತೆ ಮೈಕ್ರೋಸಾಫ್ಟ್ ಕಂಪನಿಯನ್ನು ಅಭಿವೃದ್ಧಿಪಡಿಸುತ್ತಾ ಬರುತ್ತಾರೆ. ಹೇಗೆ 1994 ರಲ್ಲಿ ಮೈಕ್ರೋಸಾಫ್ಟ್ ನಲ್ಲಿ ಕೆಲಸ ಮಾಡುವ ಮಿಲಿಂಡ ರನ್ನು ವಿವಾಹವಾಗುತ್ತಾರೆ. ಕಾಲಕ್ಕೆ ತಕ್ಕಂತೆ ಅವರು ಮಾಡುವ ಕೆಲಸದ ಹಾಗೆ ಅವರ ಆಸ್ತಿಯು ಕೂಡ ಬೆಳೆಯುತ್ತ ಬರುತ್ತದೆ ಅದು ಹೇಗೆಂದರೆ 23 ವರ್ಷಗಳಲ್ಲೇ 18 ಬಾರಿ ಪ್ರಪಂಚದ ಅತಿ ದೊಡ್ಡ ಧನವಂತ ವ್ಯಕ್ತಿ ಎಂದು ಹೆಸರು ಗಳಿಸುವಷ್ಟು. ಈ ವರ್ಷ ಕೂಡ 88.9 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದುವ ಮೂಲಕ ಪ್ರಪಂಚದ ಅತಿ ದೊಡ್ಡ ಮೊದಲ ಶ್ರೀಮಂತ ವ್ಯಕ್ತಿ ಆಗಿದ್ದಾರೆ.

ಇವರಿಗೆ ಸಂಪಾದನೆ ಒಂದು ದಾರಿಯಾದರೆ ಜನರ ಸೇವೆ ಮಾಡುವುದು ಇನ್ನೊಂದು ದಾರಿ. ತಾನು ಮಾಡುವ ಸಂಪಾದನೆ ಜನರಿಗೆ ಯಾವುದಾದರೂ ಒಂದು ಮೂಲಕ ಸಹಾಯವಾಗುವುದು ಆದರೆ ಅಷ್ಟೇ ತಾನು ಮಾಡಿದ ಸಂಪಾದನೆಗೆ ಒಂದು ಅರ್ಥ ಎಂದು ಭಾವಿಸಿ ಬಿಲ್ಲ ಅಂಡ್ ಮಿಲಿಂಡ ಗೇಟ್ಸ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಆರಂಭಿಸುತ್ತಾರೆ. ಪ್ರಪಂಚದ ಅತ್ಯಂತ ಬಡತನ ಹಸಿವು ವ್ಯವಸಾಯ ಅಭಿವೃದ್ಧಿ ಮುಂತಾದವುಗಳಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಇವರು ಫೌಂಡೇಶನ್ ಗೆ 28 ಬಿಲಿಯನ್ ಡಾಲರ್ ಅಂದರೆ 1 ಲಕ್ಷ 80 ಸಾವಿರ ಕೋಟಿ ರೂಪಾಯಿಯನ್ನು ದಾನಮಾಡಿದ್ದಾರೆ.

ಈ ರೀತಿಯಾಗಿ ಪ್ರಪಂಚದ ಎಷ್ಟೋ ಜನರ ಬಾಳಿನಲ್ಲಿ ಬೆಳಕಾಗುತ್ತಾರೆ. 2035 ರ ಒಳಗೆ ಪ್ರಪಂಚದ ಎಲ್ಲ ದೇಶಗಳಲ್ಲಿ ಬಡತನ ನಿರ್ಮೂಲನೆ ಮಾಡಬೇಕು ಎನ್ನುವುದು ಅವರ ಆಶಯ. ನಮ್ಮಲ್ಲಿ ಬಹಳಷ್ಟು ಜನ ತಮ್ಮ ಮುಂದಿನ ಪೀಳಿಗೆಗಾಗಿ ಬಹಳಷ್ಟು ಆಸ್ತಿಯನ್ನು ಮಾಡಬೇಕು ಎಂದುಕೊಳ್ಳುತ್ತಾರೆ ಆದರೆ ಬಿಲ್ ಗೇಟ್ಸ್ ತನ್ನ ಬಳಿ ಲಕ್ಷಾಂತರ ಕೋಟಿ ಆಸ್ತಿ ಇದ್ದರೂ ಸಹ ತನ್ನ ಮೂವರು ಮಕ್ಕಳಿಗೆ ಒಬ್ಬರಿಗೆ 10 ಮಿಲಿಯನ್ ಡಾಲರ್ ಆಸ್ತಿ ಮಾತ್ರ ಸಿಗುವ ಹಾಗೆ ವಿಲ್ ಬರೆಯುತ್ತಾರೆ. ಉಳಿದ ಹಣವನ್ನು ಬಿಲ್ ಅಂಡ್ ಮಿಲಿಂಡ ಫೌಂಡೇಶನ್ ಗೆ ಬರೆಯುತ್ತಾರೆ. ಯಾಕೆಂದರೆ ಅವರ ಮಕ್ಕಳು ಅವರ ಸ್ವಂತ ಬುದ್ಧಿಯಿಂದ ಆಸ್ತಿ ಮಾಡಬೇಕು ಹಾಗೂ ತಮ್ಮ ಸ್ವಂತ ಕಾಲ ಮೇಲೆ ನಿಲ್ಲಬೇಕು ಎನ್ನುವ ಆಸೆ. ಅಷ್ಟೇ ಅಲ್ಲದೆ ಬಿಲ್ ಗೇಟ್ಸ್ ತನ್ನ ಸ್ನೇಹಿತನಾದ ಹಾಗೂ ಪ್ರಪಂಚದ ಎರಡನೇ ಶ್ರೀಮಂತ ವ್ಯಕ್ತಿಯಾದ ವಾರನ್ ಬಫೆಟ್ ಜೊತೆ ಸೇರಿದ ಗಿವಿಂಗ್ ಪ್ಲೆಡ್ಜ್ ಎಂಬ ಒಂದು ಆರ್ಗನೈಸೇಷನ ಆರಂಭಿಸುತ್ತಾರೆ.

ಈ ರೀತಿ ಪ್ರಪಂಚದ ಎಲ್ಲ ಧನವಂತ ವ್ಯಕ್ತಿಗಳನ್ನು ಈ ಸೇವಾ ಸಂಸ್ಥೆಗೆ ಸಹಾಯ ಮಾಡಲು ಕರೆಯುತ್ತಾರೆ. ಆಗ 170 ಜನರಿಗೂ ಹೆಚ್ಚು ಜನ ಸೇವಾ ಸಂಸ್ಥೆಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ಈ ರೀತಿ ಹಾರ್ವರ್ಡ್ ಯುನಿವರ್ಸಿಟಿ ವಿದ್ಯಾಭ್ಯಾಸದಲ್ಲಿ ಅರ್ಧಕ್ಕೆ ಬಿಟ್ಟ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಅಂವ ಸಾಫ್ಟ್ವೇರ್ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿ ಪ್ರಪಂಚದ ಅತಿ ದೊಡ್ಡ ಧನವಂತ ವ್ಯಕ್ತಿಯಾಗುತ್ತಾರೆ. ನಾವು ಮಾಡುವ ಕೆಲಸವನ್ನು ಇಷ್ಟಪಟ್ಟು ಮಾಡಬೇಕು ಇಷ್ಟಪಟ್ಟು ಮಾಡುವ ಕೆಲಸ ಎಷ್ಟೇ ಕಷ್ಟ ಆದರೂ ಅದರಲ್ಲಿ ಇರುವ ಶ್ರಮ ನಮಗೆ ತಿಳಿಯುವುದಿಲ್ಲ ಹಾಗೆಯೇ ಇಷ್ಟ ಇಲ್ಲದೆ ಇರುವ ಕೆಲಸವನ್ನು ಎಷ್ಟೇ ಮಾಡಿದರೂ ಸಹ ಅದರ ಪ್ರತಿಫಲ ನಮಗೆ ಸಿಗುವುದಿಲ್ಲ. ತುಂಬಾ ಜನ ತಂದೆತಾಯಿಯರು ತಮ್ಮ ಮಕ್ಕಳನ್ನು ಡಾಕ್ಟರ್ ಇಂಜಿನಿಯರ್ ಮಾಡಬೇಕು ಎಂಬ ಆಸೆ ಪಡುತ್ತಾರೆಆದರೆ ಅದು ಮಕ್ಕಳಿಗೆ ಇಷ್ಟ ಇರುವುದಿಲ್ಲ ಮಕ್ಕಳಿಗೆ ಇಷ್ಟ ಇರುವಂತಹ ಕೆಲಸವನ್ನು ಮಾಡಲು ಪ್ರೋತ್ಸಾಹ ಕೊಟ್ಟರೆ ಒಂದಲ್ಲ ಒಂದು ದಿನ ಅವರು ಗೆಲುವು ಸಾಧಿಸುತ್ತಾರೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *