ಒಬ್ಬ ಬಡ ಹುಡುಗ ಟಿವಿ ಚಾನಲ್ ಮಾಡಿ ಗೆಲ್ಲೋದು ಸಾಧ್ಯನಾ?

0 0

ನ್ಯೂಸ್ ಜಗತ್ತು ಎನ್ನುವುದೆ ಒಂದು ರೋಮಾಂಚನ. ನ್ಯಾಯಪರ, ಪ್ರಾಮಾಣಿಕವಾಗಿ ಅನ್ಯಾಯದ ವಿರುದ್ಧ ಪ್ರಶ್ನೆಗಳನ್ನು ಕೇಳುವುದು ಅಷ್ಟು ಸುಲಭವಲ್ಲ. ಆದರೆ ಪಬ್ಲಿಕ್ ಟಿವಿಯಲ್ಲಿ ಪಾರದರ್ಶಕವಾದ ನ್ಯೂಸ್ ನೋಡಬಹುದು.‌ ಇಂತಹ ಪಬ್ಲಿಕ್ ಟಿವಿಯ ಸ್ಥಾಪಕ ರಂಗನಾಥ್. ಅವರು ಹೇಗೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದರು, ಪಬ್ಲಿಕ್ ಟಿವಿಯ ಸ್ಥಾಪನೆ ಹೇಗಾಯಿತು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಪಬ್ಲಿಕ್ ಟಿವಿ ಎಚ್ .ಆರ್ ರಂಗನಾಥ್ ಅವರು ಪಬ್ಲಿಕ್ ರಂಗಣ್ಣ ಎಂದೇ ಚಿರಪರಿಚಿತರಾಗಿದ್ದಾರೆ. ಎಚ್. ಆರ್ ರಂಗನಾಥ್ ಇವರ ಪೂರ್ತಿ ಹೆಸರು ಹೆಬ್ಬಾಳೆ ರಾಮಕೃಷ್ಣಯ್ಯ ರಂಗನಾಥ್. ಮೈಸೂರಿನಲ್ಲಿ ಹುಟ್ಟಿದ ಇವರು ರಾಮಕೃಷ್ಣಯ್ಯ ಹಾಗೂ ಲೀಲಾ ದಂಪತಿಗೆ ಆರು ಮಕ್ಕಳಲ್ಲಿ ಒಬ್ಬರು. ಅವರ ಕುಟುಂಬದಲ್ಲಿ ಬಹಳ ಜನರಿದ್ದರು ಹಾಗೂ ಬಡ ಕುಟುಂಬವಾಗಿತ್ತು. ಅವರ ಕಾಲೇಜು ಶಿಕ್ಷಣ ಮುಗಿದಿದ್ದು ಮೈಸೂರಿನಲ್ಲಿ. ಅವರು ಚಿಕ್ಕವಯಸ್ಸಿನಿಂದಲೂ ಬುದ್ಧಿವಂತ, ನೇರ ನಡೆಯ, ಹಠ ಸ್ವಭಾವದವನಾಗಿದ್ದ. ಅಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರಾಮಾಣಿಕ ವ್ಯಕ್ತಿತ್ವ, ನ್ಯಾಯಪರ ನಿಲುವು ಹೊಂದಿದ್ದರು.

ಅವರು ಎಂಟನೇ ಕ್ಲಾಸಿನಲ್ಲಿದ್ದಾಗ ಶಾಲೆ ಸಹಪಾಠಿಗಳನ್ನು ಸೇರಿಸಿ ವೃಂದ ತರಂಗ ಎಂಬ ಆರ್ಕೆಸ್ಟ್ರಾ ಕಟ್ಟಿ ಸಭೆ ನಡೆಸುತ್ತಿದ್ದರು, ಶಾಲಾ ಉತ್ಸವಗಳಲ್ಲಿ ಗಾಯನ ಹಾಡುತ್ತಿದ್ದರು. ಅವರ ಗಾಯನ ಕಲೆಯನ್ನು ಪ್ರೋತ್ಸಾಹಿಸಿದವರು ಮೈಸೂರಿನ ಸಂಗೀತ ಶಿಕ್ಷಕಿ ವಸುಮತಿ. ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯವನ್ನು ಆಯ್ಕೆ ಮಾಡಿಕೊಂಡು ಅದರ ಬಗ್ಗೆ ಕೆಲವು ಅಂಶಗಳನ್ನು ಓದಿ ತಿಳಿದುಕೊಂಡು ನಂತರ ಪತ್ರಿಕೋದ್ಯಮಿಯಾಗಲು ಬೆಂಗಳೂರಿಗೆ ಹೋಗುತ್ತಾರೆ. ಬೆಂಗಳೂರಿನಲ್ಲಿ ಆಗ ಕೆಲವು ಕನ್ನಡ ಪತ್ರಿಕೆಗಳು ಮಾತ್ರ ಒಳ್ಳೆಯ ಸ್ಥಾನದಲ್ಲಿದ್ದು ಅದರಲ್ಲಿ ಕನ್ನಡಪ್ರಭ ಕೂಡ ಒಂದು. ಅದರಲ್ಲಿ ಕ್ರೈಂ ರಿಪೋರ್ಟರ್ ಆಗಿ ಕೆಲಸಕ್ಕೆ ಸೇರುತ್ತಾರೆ ಅಲ್ಲಿ ವಿಶ್ವೇಶ್ವರ ಭಟ್ ಅವರ ಪರಿಚಯವಾಗುತ್ತದೆ. ಅವರು ಸಹ ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದರು. ರಂಗನಾಥ್ ಅವರು ಉತ್ತಮ ವಾಗ್ಮಿ ಹಾಗೂ ಅವರ ಮಾತುಗಳು ಮೊನಚಾಗಿರುತಿತ್ತು ಎಂದು ವಿಶ್ವೇಶ್ವರ ಭಟ್ ಅವರು ರಂಗನಾಥ್ ಅವರ ಬಗ್ಗೆ ಹೇಳಿದ್ದಾರೆ. ರಂಗನಾಥ್ ಅವರು ಯಾವಾಗಲೂ ರಾಜೀನಾಮೆ ಪತ್ರವನ್ನು ತಮ್ಮ ಬಳಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು.‌ ಅವರ ಬುದ್ಧಿವಂತಿಕೆ, ಕೆಲಸದ ಪರಿಪಕ್ವತೆಯಿಂದ ಸಂಪಾದಕ ಹುದ್ದೆಗೆ ಏರುತ್ತಾರೆ.

ನಂತರ ಸುವರ್ಣ ಚಾನೆಲ್ ನಲ್ಲಿ ಚೀಫ್ ಎಡಿಟರ್ ಆಗಿ ಕೆಲಸ ಮಾಡುತ್ತಾರೆ. ಅವರು ನಿಷ್ಠೆಯಿಂದ ಕೆಲಸ ಮಾಡಿದರು ಆದರೆ ಈ ಸಮಯದಲ್ಲಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಆದರೂ ರಂಗನಾಥ್ ಅವರು ಕುಗ್ಗಲಿಲ್ಲ. ರಾಜಕೀಯ ಒತ್ತಡದಿಂದ ಸುವರ್ಣ ಚಾನೆಲ್ ಇಂದ ರಂಗನಾಥ್ ಅವರು ಹೊರಬರಬೇಕಾಯಿತು. ಅವರಿಗೆ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟವಿಲ್ಲದೇ ತಮ್ಮದೇ ಸ್ವಂತ ಸುದ್ದಿ ಮಾಧ್ಯಮವನ್ನು ತೆರೆಯಬೇಕು ಎಂದು ನಿರ್ಧಾರ ಮಾಡಿದರು ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಹೊಸ ನ್ಯೂಸ್ ಚಾನೆಲ್ ಶುರು ಮಾಡಬೇಕಾದರೆ ಸಾಕಷ್ಟು ಬಂಡವಾಳ, ರಾಜಕೀಯ ಬೆಂಬಲ ಅವಶ್ಯಕವಾಗಿತ್ತು. ಅವರ ಬಳಿ ಅಷ್ಟು ಹಣವಿರಲಿಲ್ಲ ಅಲ್ಲದೇ ಭ್ರಷ್ಟ ರಾಜಕೀಯ ಬೆಂಬಲವನ್ನು ಅವರು ಎಂದಿಗೂ ಬಯಸುತ್ತಿರಲಿಲ್ಲ. ರಂಗನಾಥ್ ಅವರಿಗೆ ಅಪಾರ ಜನಬೆಂಬಲ ಹಾಗೂ ಸ್ನೇಹಿತರ ಬಳಗವಿತ್ತು. ಅವರೆಲ್ಲರ ಆಶೀರ್ವಾದದೊಂದಿಗೆ ಯಾವುದೇ ಆಪರೇಷನ್, ಪ್ರಮೋಷನ್ ಶುಲ್ಕವಿಲ್ಲದೆ ಚಾನೆಲ್ ತೆರೆಯುವ ಅವರ ಉದ್ದೇಶಕ್ಕೆ ಹಣದ ಸಹಾಯ ನೀಡಿದವರು ರಾಕ್ ಲೈನ್ ವೆಂಕಟೇಶ್ ಹಾಗೂ ಮನೋಹರ್. ಇವರೆಲ್ಲರ ಸಹಾಯದಿಂದ ರಂಗನಾಥ್ ಅವರು 6-7 ಕೋಟಿಯಲ್ಲಿ ಪಬ್ಲಿಕ್ ಟಿವಿ ಎಂಬ ತಮ್ಮದೇ ಹೊಸ ನ್ಯೂಸ್ ಚಾನೆಲ್ ಅನ್ನು 2012ರಲ್ಲಿ ಲಾಂಚ್ ಮಾಡಿದರು. ಅವರ ಈ ಪರಿಶ್ರಮಕ್ಕೆ ಮೂಲೆ-ಮೂಲೆಯಿಂದ ಜನರ ಮೆಚ್ಚುಗೆ ಸಿಕ್ಕಿತು.

ಅವರು ಪಬ್ಲಿಕ್ ಟಿವಿ ಎಂಬ ಚಾನೆಲ್ ಅನ್ನು ಯಾವುದೇ ಅನ್ಯಾಯದ ಹಣದಿಂದ ಆಗಲಿ, ಭ್ರಷ್ಟ ರಾಜಕೀಯ ಬೆಂಬಲದಿಂದ ಆಗಲಿ ಪ್ರಾರಂಭಿಸುವುದಿಲ್ಲ. ಅವರ ಡಿಟರ್ಮಿನೇಷನ್ ಬಹಳ ನಿಖರ ಹಾಗೂ ಸ್ಪಷ್ಟವಾಗಿತ್ತು, ಅವರು ಬೇಕಾದ ಪೀಠೋಪಕರಣಗಳನ್ನು, ಸಾಮಗ್ರಿಗಳನ್ನು ಚೆನ್ನೈ ಮುಂತಾದ ಕಡೆ ತಿರುಗಿ ಖರೀದಿಸಿದರು. ಆಗತಾನೆ ಪತ್ರಿಕೋದ್ಯಮ ಶಿಕ್ಷಣ ಮುಗಿಸಿ ಬಂದವರಿಗೆ ಉದ್ಯೋಗ ನೀಡಿದರು. 20% ಅನುಭವಿ ಪತ್ರಿಕೋದ್ಯಮರನ್ನು ಆಯ್ಕೆ ಮಾಡಿಕೊಂಡರು. ಪಬ್ಲಿಕ್ ಟಿವಿ ಆರಂಭವಾಗಿ ಇಂದಿಗೆ ಎಂಟು ವರ್ಷಗಳು ಸಂದಿದೆ.

ಈಗಲೂ ಸಹ ಬೆಳಗ್ಗೆ ಮತ್ತು ರಾತ್ರಿ 9ಗಂಟೆಗೆ ಬಿಗ್ ಬುಲೆಟಿನ್ ಮೂಲಕ ರಂಗನಾಥ್ ಅವರು ನಮ್ಮ ಮುಂದೆ ಬರುತ್ತಾರೆ ಹಾಗೆ ಅವರ ಸುದ್ದಿಯನ್ನು ಕೇಳಲು ಕಾತುರದಿಂದ ಜನರು ಕಾಯುತ್ತಿರುತ್ತಾರೆ. ರಂಗನಾಥ್ ಅವರು ಸಾಮಾನ್ಯ ವ್ಯಕ್ತಿಯಾಗಿ ಎಲ್ಲರಲ್ಲೂ ತಾನೊಬ್ಬನಾಗಿ ಸುದ್ದಿಯನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ. ಅವರು ಎಂದಿಗೂ ತಮ್ಮ ಆತ್ಮಸಾಕ್ಷಿಯ ವಿರುದ್ಧ ಕೆಲಸ ಮಾಡಲಿಲ್ಲ, ನ್ಯಾಯದ ಪರವಾಗಿ ಕೆಲಸ ಮಾಡಿದರು ಅದಕ್ಕಾಗಿ ಅವರು ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ರಂಗನಾಥ್ ಅವರು ತಮ್ಮ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಲಿ ಹಾಗೂ ಹೀಗೆಯೇ ಹೆಚ್ಚು ಸ್ಪಷ್ಟವಾದ ಸುದ್ದಿಯನ್ನು ಜನರಿಗೆ ತಲುಪಿಸಲಿ ಎಂದು ಆಶಿಸೋಣ.

Leave A Reply

Your email address will not be published.