Ultimate magazine theme for WordPress.

ಮದುವೆ ಮನೆಯಲ್ಲು ಯಶ್ ಕೆಜಿಎಫ್-2 ಟೀಸರ್ ಹವಾ.!

0 0

ಯಶ್ ಅವರು ಕನ್ನಡ ಚಿತ್ರರಂಗದಲ್ಲಿ ಮೊಗ್ಗಿನ ಮನಸ್ಸು ಎಂಬ ಮೊದಲ ಸಿನೆಮಾವನ್ನು ಮಾಡಿದ್ದರು. ನಂತರದಲ್ಲಿ ಒಂದೊಂದೇ ಸಿನಿಮಾಗಳನ್ನು ಮಾಡುತ್ತಾ ಯಶಸ್ಸನ್ನು ಕಾಣುತ್ತಾ ಹೋದರು. ಅವರಿಗೆ ರಾಕಿಂಗ್ ಸ್ಟಾರ್ ಎಂದು ಬಿರುದನ್ನು ನೀಡಲಾಗಿದೆ. ಕೆ.ಜಿ.ಎಫ್. ಎನ್ನುವ ಸಿನೆಮಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಈಗ ಕೆ.ಜಿ.ಎಫ್-2 ಟ್ರೇಲರ್ ಬಿಡುಗಡೆಯಾಗಿದ್ದು ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕೆಜಿಎಫ್ ಭಾಗ-1 ಸುಮಾರು 100 ದಿನಗಳ ತನಕವೂ ಓಡಿ ಹೆಚ್ಚಿನ ಹೆಸರು ಕಂಡಿದೆ. ಆದ್ದರಿಂದ ಜನರು ಕೆಜಿಎಫ್ ಭಾಗ-2 ಕ್ಕೆ ಕಾಯುತ್ತಿದ್ದಾರೆ. ಕೊರೊನ ಎಂಬ ಮಹಾಮಾರಿ ಬರದೆ ಇದ್ದರೆ ಇಷ್ಟು ಹೊತ್ತಿಗೆ ಕೆಜಿಎಫ್ ಭಾಗ-2 ರಿಲೀಸ್ ಆಗುತ್ತಿತ್ತು. ಹಾಗೆಯೇ ಅನೇಕ ಸಿನಿಮಾಗಳು ಕೊರೋನಾದಿಂದಾಗಿ ರಿಲೀಸ್ ಆಗದೆ ಶೂಟಿಂಗ್ ಆಗದೆ ಹಾಗೆಯೇ ಇವೆ. ಈಗ ಯಶ್ ಅವರ ಹುಟ್ಟುಹಬ್ಬದ ದಿನ ಕೆ.ಜಿ.ಎಫ್ ಭಾಗ-2ರ ಟೀಸರ್ ನ್ನು ರಿಲೀಸ್ ಮಾಡಲಾಗಿದೆ.

ಹಲವಾರು ಸಿನಿಮಾಗಳ ಟೀಸರ್ ಅನ್ನು ಬೇರೆ ಬೇರೆ ಭಾಷೆಗಳಲ್ಲಿ ಸಹ ರಿಲೀಸ್ ಮಾಡಲಾಗುತ್ತದೆ. ಆದರೆ ಇಲ್ಲಿ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ರಿಲೀಸ್ ಮಾಡಲಾಗಿದೆ. ಕೆ.ಜಿ.ಎಫ್. ಭಾಗ-1 ಇದು ಇಡೀ ದೇಶದಲ್ಲಿ ಬಹಳ ಹೆಸರು ಪಡೆದಿತ್ತು. ದೇಶದ ಪ್ರತಿಯೊಂದು ಮನೆಯಲ್ಲೂ ಇದನ್ನು ನೋಡಿದ್ದರು ಎಂದರೂ ತಪ್ಪಿಲ್ಲ. ಹಾಗೆಯೇ ಕೆ.ಜಿ.ಎಫ್. ಚಾಪ್ಟರ್ ಭಾಗ-1 ತಾಯಿಯ ಭಾವನೆಗಳ ಮೂಲಕ ಶುರುವಾಗಿತ್ತು. ಹಾಗೆಯೇ ಕೆ.ಜಿ.ಎಫ್ ಭಾಗ-2 ಇದು ಕೂಡಾ ತಾಯಿಯ ಭಾವನೆಗಳ ಮೂಲಕ ಶುರುವಾಗಲಿದೆ.

ಶಕ್ತಿಶಾಲಿ ಜಾಗದಿಂದ ಶಕ್ತಿಶಾಲಿಗಳು ಬರುತ್ತಾರೆ ಎಂದು ಇತಿಹಾಸ ಹೇಳುತ್ತದೆ. ಆದರೆ ಶಕ್ತಿಶಾಲಿಗಳು ಜಾಗವನ್ನು ಶಕ್ತಿಶಾಲಿಯಾಗಿ ಮಾಡುತ್ತಾರೆ ಎಂದು ಕೆ.ಜಿ.ಎಫ್. ಭಾಗ-2 ತೋರಿಸಲಿದೆ. ಹಾಗೆಯೇ ರಿಲೀಸಾದ ಮೂರು ದಿನಕ್ಕೆ ಟೀಸರ್ ಸುಮಾರು 150 ಮಿಲಿಯನ್ ವ್ಯೂಸ್ ಗಳನ್ನು ಕಂಡಿದೆ. ಆದ್ದರಿಂದ ಕೆ.ಜಿ.ಎಫ್ ಭಾಗ-2 ನೂರು ದಿನಗಳ ಮೇಲೆ ನಡೆಯಬಹುದು ಎಂದು ಊಹಿಸಬಹುದಾಗಿದೆ. ಹಾಗೆಯೇ ಇದು ಅತಿ ಹೆಚ್ಚು ಯಶಸ್ಸನ್ನು ಕಾಣಲಿ ಎಂದು ನಾವೆಲ್ಲರೂ ಹಾರೈಸೋಣ.

Leave A Reply

Your email address will not be published.