ಸಾಮಾನ್ಯವಾಗಿ ಮುದ್ದೆ ತಿನ್ನೋದು ಇಷ್ಟ ನುಂಗೋದು ಕಷ್ಟ ಎನ್ನುತ್ತಾರೆ. 4-5 ನಿಮಿಷದಲ್ಲಿ ಸಾಫ್ಟ್ ಆದ ಮುದ್ದೆಯನ್ನು ಮಾಡುವುದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ. ಒಂದು ಲೋಟ ರಾಗಿಹಿಟ್ಟು ಅಷ್ಟೆ ಅಳತೆಯ ನೀರನ್ನು ತೆಗೆದುಕೊಳ್ಳಬೇಕು ಪ್ರತ್ಯೇಕವಾಗಿ ಒಂದು ಕಪ್ ನಲ್ಲಿ 50m.l ನಷ್ಟು ನೀರನ್ನು ಮತ್ತು ಇನ್ನೊಂದು ಕಪ್ ನಲ್ಲಿ ಒಂದು ಸ್ಪೂನ್ ರಾಗಿಹಿಟ್ಟನ್ನು ತೆಗೆದುಕೊಳ್ಳಬೇಕು. ಒಲೆಯ ಮೇಲೆ ಪಾತ್ರೆಯನ್ನಿಟ್ಟು ಒಂದು ಗ್ಲಾಸ್ ನೀರನ್ನು ಹಾಕಬೇಕು ನೀರು ಚೆನ್ನಾಗಿ ಕುದಿಯಬೇಕು. ತೆಗೆದುಕೊಂಡ 50m.l ನೀರಿಗೆ ಒಂದು ಸ್ಪೂನ್ ರಾಗಿಹಿಟ್ಟನ್ನು ಹಾಕಿ ಗಂಟಿಲ್ಲದ ಹಾಗೆ ಮಿಕ್ಸ್ ಮಾಡಬೇಕು ಇದನ್ನು ಕುದಿಯುತ್ತಿರುವ ನೀರಿಗೆ ಬೆರೆಸಬೇಕು ಹೀಗೆ ಮಾಡಿದರೆ ಮುದ್ದೆಯಲ್ಲಿ ಗಂಟು ಆಗುವುದಿಲ್ಲ.

ಮಿಶ್ರಣ ಸೇರಿಸಿದ ನಂತರ ಚೆನ್ನಾಗಿ ಕುದಿದು ಉಕ್ಕಿಬರುತ್ತದೆ ಅದಕ್ಕೆ ಒಂದು ಲೋಟ ರಾಗಿಹಿಟ್ಟನ್ನು ಸೇರಿಸಿ 30 ಮಿನಿಟ್ಸ್ ಬಿಡಬೇಕು ನಂತರ ವುಡನ್ ಸ್ಪೂನ್ ನಿಂದ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಕಡಿಮೆ ಉರಿಯಲ್ಲಿ ಅದರ ಮೇಲೆ ಪ್ಲೇಟ್ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿದ ನಂತರ ಪ್ಲೇಟ್ ತೆಗೆಯಬೇಕು ಮುದ್ದೆಗೆ ಬೇಕಾದ ಮಿಶ್ರಣ ತಯಾರಾಗುತ್ತದೆ ಇದನ್ನು ಬೇರೆ ಪಾತ್ರೆಗೆ ಹಾಕಿಕೊಂಡು ಪಕ್ಕದಲ್ಲಿ ಒಂದು ಪಾತ್ರೆಯಲ್ಲಿ ತಣ್ಣೀರನ್ನು ಇಟ್ಟುಕೊಳ್ಳಬೇಕು ಮಿಶ್ರಣ ಬಿಸಿಯಿರುವುದರಿಂದ ತಣ್ಣಿರಲ್ಲಿ ಕೈಯನ್ನು ಅದ್ದಿ ಮಿಶ್ರಣವನ್ನು ಚೆನ್ನಾಗಿ ಕಲಸಿ ಮುದ್ದೆಯನ್ನು ಮಾಡಬೇಕು ಹೀಗೆ ಮುದ್ದೆಯನ್ನು ಸುಲಭವಾಗಿ ಮಾಡಬಹುದು. ಮುದ್ದೆ ಸಾಫ್ಟ್ ಆಗಿ ಮತ್ತು ಯಾವುದೇ ರೀತಿಯ ಗಂಟುಗಳಾಗುವುದಿಲ್ಲ. ಎಲ್ಲ ವಯಸ್ಸಿನವರಿಗೂ ಈ ಮುದ್ದೆಯನ್ನು ಸೇವಿಸುವುದರಿಂದ ಆರೋಗ್ಯಕರವಾಗಿರಬಹುದು. ಯೋಗ್ಯರಾಗಿ, ಭೋಗ್ಯರಾಗಿ, ರಾಗಿ ಮುದ್ದೆ ತಿಂದು ಆರೋಗ್ಯವಂತರಾಗಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಅದರಲ್ಲೂ ಗೃಹಿಣಿಯರಿಗೆ ತಿಳಿಸಿ ಮುದ್ದೆ ಮಾಡಿಕೊಂಡು ಸವಿದು ಆರೋಗ್ಯವಾಗಿರಿ.

Leave a Reply

Your email address will not be published. Required fields are marked *