ಈಗಿನ ಕಲುಷಿತ ನೀರು, ಆಹಾರ ಸೇವನೆಯಿಂದ ರಕ್ತಹೀನತೆ ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತದೆ ಮನೆ ಔಷಧಿಯಿಂದಲೆ ರಕ್ತಹೀನತೆ ಕಡಿಮೆ ಮಾಡಿಕೊಳ್ಳುವುದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ.

ಪ್ರತಿದಿನ ಊಟ ಮಾಡುತ್ತೇವೆ ತರಕಾರಿಗಳನ್ನು ತಿನ್ನುತ್ತೇವೆ ಆದರೂ ಯಾವಾಗಲೂ ಬೇಜಾರು, ಕೆಲಸ ಮಾಡಲು ಮನಸ್ಸಿರುವುದಿಲ್ಲ, ನಿದ್ದೆ ಸರಿಯಾಗಿ ಬರುವುದಿಲ್ಲ, ಸೊಂಟ, ಬೆನ್ನು ನೋವು, ತಲೆ ನೋವು, ಸಿಟ್ಟು ಬರುವುದು, ಮುಖದಲ್ಲಿ ಕಳೆ ಇರುವುದಿಲ್ಲ, ಬೆಳಗ್ಗೆ ಎದ್ದ ಕೂಡಲೇ ತಲೆ ಸುತ್ತಿ ಬರುವುದು, ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುವುದು, ಕಾಲಲ್ಲಿ ಜೊಂ ಹಿಡಿಯುವುದು ಈ ರೀತಿ ಆಗಲು ಕಾರಣ ರಕ್ತ ಹೀನತೆ, ರಕ್ತದಲ್ಲಿ R.B.C ಕೌಂಟ್ ಕಡಿಮೆಯಾದಾಗ ಹೀಗೆಲ್ಲಾ ಆಗುತ್ತದೆ. ರಕ್ತ ಹೀನತೆ ಪೋಷಕಾಂಶಗಳ ಕೊರತೆಯಿಂದ ಆಗುತ್ತದೆ.

ರಕ್ತ ಹೀನತೆಯಿಂದ ಹೆಚ್ಚಿನ ರೋಗಗಳಿಗೆ ದಾರಿ ಮಾಡಿಕೊಡದೆ ರಕ್ತ ಹೀನತೆಯನ್ನು ಕಡಿಮೆ ಮಾಡಿಕೊಂಡು ಯಾವಾಗಲೂ ಖುಷಿಯಾಗಿರಲು ಮನೆಮದ್ದು ಇದೆ ಅದೇನೆಂದರೆ ಒಂದು ಬೌಲ್ ಆಕ್ರೋಟ ಅಥವಾ ವಾಲನಟ್ ಇದನ್ನು ಹೆಚ್ಚು ಎಲ್ಲರೂ ಬಳಸಬೇಕು ಇದರಲ್ಲಿ ಕಾಪರ್, ಪ್ರೋಟೀನ್, ಮೆಗ್ನೀಷಿಯಂ ಇದೆ. ಮಹಿಳೆಯರು ಇದನ್ನು ಹೆಚ್ಚು ಉಪಯೋಗಿಸುವುದರಿಂದ ಕ್ಯಾನ್ಸರ್ ನಿಂದ ದೂರವಿರಬಹುದು. ಎಲ್ಲ ವಯಸ್ಸಿನವರು ಆಕ್ರೋಟ ಬಳಸಬೇಕು ಇದರಿಂದ ಬುದ್ಧಿ ಚುರುಕಾಗುತ್ತದೆ. ಒಂದು ಬೌಲ್ ಬಿಳಿಎಳ್ಳು ಬಿಳಿಎಳ್ಳಿನಲ್ಲಿ ಮೆಗ್ನೀಷಿಯಂ, ಐರನ್, ಕ್ಯಾಲ್ಶಿಯಂ ಇರುತ್ತದೆ. ಬಿಳಿಎಳ್ಳಿನ ಬದಲು ಕರಿಎಳ್ಳನ್ನು ತೆಗೆದುಕೊಳ್ಳಬಹುದು. ಒಂದು ಬೌಲ್ ಪುಡಿ ಮಾಡಿದ ಬೆಲ್ಲ ಮೊದಲಿಗೆ ಎಳ್ಳನ್ನು ಹುರಿದು ತಣ್ಣಗಾದ ನಂತರ ಪುಡಿ ಮಾಡಿಕೊಳ್ಳಬೇಕು ಈ ಪುಡಿಗೆ ಆಕ್ರೋಟನ್ನು ಹಾಕಿ ಮಿಕ್ಸಿಯಲ್ಲಿ ಪೌಡರ್ ಮಾಡಬೇಕು ಇದಕ್ಕೆ ಬೆಲ್ಲ ಮತ್ತು ಎರಡು ಸ್ಪೂನ್ ಶುದ್ಧವಾದ ಮತ್ತು ತಾಜಾ ತುಪ್ಪವನ್ನು ಹಾಕಿ ಕಲಸಿ ಉಂಡೆ ಮಾಡಬೇಕು ಈ ಉಂಡೆಯನ್ನು ತಿನ್ನುವುದರಿಂದ ನಿಶ್ಯಕ್ತಿ ಹೋಗುತ್ತದೆ ಮತ್ತು ಮುಖದಲ್ಲಿ ಕಳೆ ಬರುತ್ತದೆ ದೇಹಕ್ಕೆ ಶಕ್ತಿ ಬರುತ್ತದೆ.

ಈ ಉಂಡೆಯನ್ನು ಪ್ರತಿದಿನ ಒಂದು ಉಂಡೆ ತಿಂದು ಹಾಲು ಕುಡಿಯಬೇಕು ದಿನದಲ್ಲಿ ಯಾವಾಗಲಾದರೂ ತಿನ್ನಬಹುದು ಬೆಳಿಗ್ಗೆ ತಿನ್ನುವುದರಿಂದ ಸರಿಯಾಗಿ ಜೀರ್ಣವಾಗುತ್ತದೆ. ಆರೋಗ್ಯವಾಗಿದ್ದವರು ಈ ಉಂಡೆಯನ್ನು ತಿನ್ನಬಹುದು. ಇದಲ್ಲದೆ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ತಿನ್ನಬಹುದು. ದಾಳಿಂಬೆ ಜ್ಯೂಸ್ ಮಾಡಿಕೊಂಡು ಕುಡಿಯಬಹುದು. ಅಂಜೂರವನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ತಿನ್ನಬಹುದು. ಮೊಳಕೆಯೊಡೆದ ಕಾಳುಗಳನ್ನು ತಿನ್ನಬೇಕು ಈ ರೀತಿ ಮಾಡುವುದರಿಂದ ರಕ್ತಹೀನತೆ ಕಡಿಮೆಯಾಗಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *