ಹಬ್ಬಗಳ ಸಾಲು ಬಂದಾಗ ಪೂಜಾ ಸಾಮಗ್ರಿಗಳನ್ನು ತೊಳೆಯುವುದು ಹೆಚ್ಚಿರುತ್ತದೆ. ಪಾತ್ರೆಗಳನ್ನು ಸುಲಭವಾಗಿ ಹೊಳೆಯುವಂತೆ ತೊಳೆಯುವುದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ.

ಒಂದು ಪಾತ್ರೆ ಬಿಸಿನೀರಿಗೆ ಹುಣಸೆಹಣ್ಣನ್ನು ಹಾಕಿ ಕುದಿಸಬೇಕು ಬಣ್ಣ ಬಿಡುತ್ತದೆ ನೀರು ಕಪ್ಪಾಗುತ್ತದೆ. ಆ ನೀರಿಗೆ ಹಿತ್ತಾಳೆ ಪೂಜಾ ಸಾಮಗ್ರಿಗಳನ್ನು ಹಾಕಿ 2 ಚಮಚ ವೈಟ್ ವಿನೆಗರ್ ನ್ನು ಹಾಕಬೇಕು ವಿನೆಗರ್ ಇಲ್ಲವೆಂದರೆ ನಿಂಬೆ ರಸವನ್ನು ಹಾಕಬಹುದು ನಂತರ 10 ನಿಮಿಷ ಕುದಿಯಲು ಬಿಡಬೇಕು ಆಗ ಜಿಡ್ಡಿನಂಶ ಬಿಡುತ್ತದೆ. ಬೆಳ್ಳಿ ಪಾತ್ರೆಗಳನ್ನು ಇನ್ನೊಂದು ಪಾತ್ರೆಯಲ್ಲಿ ಕುದಿಯುವ ನೀರಿಗೆ ಸಿಲ್ವರ್ ಪೊಯ್ಲನ್ನು ಹಾಕಿ ಒಂದು ಸ್ಪೂನ್ ಬಿಳಿ ಉಪ್ಪು ಮತ್ತು ಒಂದು ಸ್ಪೂನ್ ಅಡುಗೆ ಸೋಡಾವನ್ನು ಹಾಕಿ ಬೆಳ್ಳಿ ಪೂಜಾ ಸಾಮಗ್ರಿಗಳನ್ನು ಹಾಕಬೇಕು 10 ನಿಮಿಷ ಕುದಿಯಲು ಬಿಡಬೇಕು ಆಗ ಪಾತ್ರೆಯ ಜಿಡ್ಡು ಮತ್ತು ಕುಂಕುಮ ಅರಿಶಿಣ ಬಿಡುತ್ತದೆ. ಕುದಿದ ನಂತರ ಹೆಚ್ಚು ಕೊಳೆಯಾಗಿರುವ ಪಾತ್ರೆಗಳನ್ನು ಮಾತ್ರ ಉಜ್ಜಬೇಕು ಪೇಸ್ಟನ್ನು ಹಚ್ಚಿ ಬ್ರಶ್ ನಿಂದ ಉಜ್ಜಿದರೆ ಸಂದಿಯಲ್ಲಿರುವ ಕೊಳೆ ಹೋಗುತ್ತದೆ ನಂತರ ನೀರಿನಲ್ಲಿ ತೊಳೆದು ಬಟ್ಟೆಯಲ್ಲಿ ವರೆಸಿದಾಗ ಪಾತ್ರೆ ಹೊಳೆಯುತ್ತದೆ ಮತ್ತು ಜಿಡ್ಡು, ಸಂದಿಯಲ್ಲಿ ಕುಳಿತ ಕುಂಕುಮ ಮತ್ತು ಅರಿಶಿಣ ಬಿಡುತ್ತದೆ. ಅಂಗಡಿಯಲ್ಲಿ ಕೊಟ್ಟು ಕೆಮಿಕಲ್ ವಾಷ್ ಮಾಡುವುದಕ್ಕಿಂತ ಮನೆಯಲ್ಲೆ ಸುಲಭವಾಗಿ ಕ್ಲೀನ್ ಮಾಡಬಹುದು.

ಇನ್ನೊಂದು ವಿಧಾನವೆಂದರೆ ಬಿಳಿ ಉಪ್ಪಿನ ಪುಡಿ ಮತ್ತು ವಿನೆಗರ್ ನ್ನು ಹಾಕಿ ಹಚ್ಚುವುದರಿಂದ ಕೊಳೆ ಹೋಗಿ ಹೊಳೆಯುತ್ತದೆ. ಸಂದಿಗಳಲ್ಲಿ ಕೊಳೆ ಜಾಸ್ತಿ ಇರುವ ಕಡೆ ಬ್ರಶ್ ನಿಂದ ಉಜ್ಜಬೇಕು. ಹಿತ್ತಾಳೆ ಪಾತ್ರೆಯಲ್ಲಿ ನೀರು ಹಾಕುವುದಾದರೆ ಒಳಗಡೆ ವಾಸನೆ ಬರುತ್ತಿರುತ್ತದೆ ಅದಕ್ಕಾಗಿ ಉಪ್ಪು ಮತ್ತು ವಿನೆಗರ್ ನ್ನು ನೀರಿನೊಂದಿಗೆ ಹಾಕಿ ಶೇಕ್ ಮಾಡುವುದರಿಂದ ವಾಸನೆ ಹೋಗುತ್ತದೆ. ಪೀತಾಂಬರಿಯಿಂದನು ಪಾತ್ರೆಯನ್ನು ತೊಳೆಯುವುದರಿಂದ ಕೊಳೆ ಹೋಗಿ ಹೊಳೆಯುತ್ತದೆ ದೇವರ ಪೂಜೆಗೆ ಬಳಸುವ ಪಾತ್ರೆಗಳನ್ನು ದೇವರ ಕೋಣೆಯಲ್ಲಿ ಇಟ್ಟಾಗ ನೋಡಲು ಸುಂದರವಾಗಿ ಕಾಣುತ್ತದೆ.

By

Leave a Reply

Your email address will not be published. Required fields are marked *