ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಬೇಕಾದರೆ ಮನೆಯ ಹೆಣ್ಣುಮಕ್ಕಳು ಹೇಗಿರಬೇಕೆಂದು ಯಾವ ಕೆಲಸ ಮಾಡಬೇಕೆಂದು ಈ ಲೇಖನದ ಮೂಲಕ ತಿಳಿಯೋಣ. ಹೆಣ್ಣುಮಕ್ಕಳು ಅಪ್ಪಿತಪ್ಪಿಯೂ ಪೊರಕೆಯ ಮೇಲೆ ಕಾಲನ್ನು ಇಡಬಾರದು ಅಥವಾ ಕಾಲಿನಿಂದ ಒದೆಯಬಾರದು. ಪೊರಕೆಯೆಂದರೆ ಸಾಕ್ಷಾತ್ ಮಹಾಲಕ್ಷ್ಮೀದೇವಿಯ ಸ್ವರೂಪ ಅದಕ್ಕೆ ಅದರದ್ದೇ ಆದ ವಿಶೇಷತೆಯಿದೆ ಆದ್ದರಿಂದ ಗೊತ್ತೋ ಗೊತ್ತಿಲ್ಲದೆನೋ ಕಾಲಿನಿಂದ ಪೊರಕೆಯನ್ನು ಒದೆಯಬಾರದು. ಯಾವುದೇ ಕಾರಣಕ್ಕೂ ಬಾಗಿಲನ್ನು ಕಾಲಿನಿಂದ ಒದೆಯಬಾರದು ಅಥವಾ ತಳ್ಳಬಾರದು. ಮನೆಯ ಬಾಗಿಲು ಅಥವಾ ಹೊಸ್ತಿಲಲ್ಲಿ ಮಹಾಲಕ್ಷ್ಮೀ ದೇವಿಯು ನೆಲೆಸಿರುತ್ತಾಳೆ. ಬಾಗಿಲಿಗೆ ನಾವು ದೇವರ ಸ್ವರೂಪ ನೀಡುತ್ತೇವೆ ಆದ್ದರಿಂದ ಮನೆಯ ಬಾಗಿಲು ಆಗಬಹುದು ದೇವರ ಮನೆಯ ಬಾಗಿಲು ಆಗಿರಬಹುದು ಕಾಲಿನಿಂದ ಒದೆಯಬಾರದು. ಬಾಗಿಲಿಗೆ ಒರಗಿ ಅಥವಾ ಬಾಗಿಲ ಬಳಿ ಕುಳಿತು ಊಟ ಮಾಡಬಾರದು. ಓಡಾಡುವ ಜಾಗದಲ್ಲಿ ಊಟ ಮಾಡುವ ಅಭ್ಯಾಸವಿದ್ದರೆ ಅದನ್ನು ಬಿಡಬೇಕು. ರಾತ್ರಿಯ ವೇಳೆ ಎಂಜಲು ಪಾತ್ರೆಯಿದ್ದರೆ ಅವುಗಳನ್ನು ಸ್ವಚ್ಛ ಮಾಡಿ ಮಲಗಬೇಕು ಹಾಗೆಯೇ ಮಲಗಬಾರದು ಹಾಗೆಯೆ ಮಲಗಿದರೆ ದಾರಿದ್ರ ಲಕ್ಷ್ಮೀ ನೆಲೆಸುತ್ತಾಳೆ. ಮನೆಗೆ ಲಕ್ಷ್ಮೀ ಬರುವ ಸಮಯವಾಗಿರುತ್ತದೆ ಆದ್ದರಿಂದ ಉಪಯೋಗ ಮಾಡಿದ ಪಾತ್ರೆಗಳನ್ನು ಸ್ವಚ್ಛ ಮಾಡಿಯೇ ಮಲಗಬೇಕು ಇಲ್ಲದಿದ್ದರೆ ಮನೆಗೆ ಒಳ್ಳೆಯದಲ್ಲ ಹಣಕಾಸಿನ ತೊಂದರೆಯಾಗುತ್ತದೆ. ಲಕ್ಷ್ಮೀದೇವಿ ನೆಲೆಸುವುದಿಲ್ಲ. ಮುಸ್ಸಂಜೆ ವೇಳೆಯಲ್ಲಿ ಯಾವುದೇ ಕಾರಣಕ್ಕೂ ಕಸ ಗುಡಿಸಬಾರದು. ಸಂಜೆ 6 ಗಂಟೆಯ ನಂತರ ಕಸ ಗುಡಿಸಬಾರದು. ಮುಸ್ಸಂಜೆ ವೇಳೆಯಲ್ಲಿ ಹಾಲು,ಮೊಸರು,ಉಪ್ಪು ಅರಿಶಿಣವನ್ನು ಇನ್ನೊಬ್ಬರಿಗೆ ಕೊಡಬಾರದು. ಕೊಟ್ಟರೆ ನಿಮ್ಮಲ್ಲಿರುವ ಮಹಾಲಕ್ಷ್ಮೀಯನ್ನು ಬೇರೆಯವರ ಮನೆಗೆ ಕೊಟ್ಟಂತಾಗುತ್ತದೆ. ಮನೆಯಲ್ಲಿ ದುಡ್ಡು ಉಳಿಯುವುದಿಲ್ಲ.

ಸೂರ್ಯ ಹುಟ್ಟಿದ ನಂತರ ಮನೆಯ ಹೆಣ್ಣುಮಕ್ಕಳು ಮಲಗಿ ನಿದ್ರೆ ಮಾಡಿದರೆ ಅದು ಮನೆಗೆ ಶ್ರೆಯಸ್ಕರವಲ್ಲ. ಮನೆಯಲ್ಲಿ ಮಹಾಲಕ್ಷ್ಮೀ ನೆಲೆಸೋದಿಲ್ಲ. ಮನೆಯ ಹೆಣ್ಣುಮಕ್ಕಳು ಬೆಳಗ್ಗೆ ಎದ್ದು ಅಂಗಳವನ್ನು ಸ್ವಚ್ಛ ಗೊಳಿಸಬೇಕು. ಅಂಗಳಕ್ಕೆ ನೀರು ಹಾಕದೆ ಅಂದಿನ ದಿನವನ್ನು ಶುರು ಮಾಡಿದರೆ ಆ ಮನೆಯ ಯಜಮಾನನಿಗೆ ಶ್ರೇಯಸ್ಕರವಲ್ಲ ನಷ್ಟವಾಗುತ್ತದೆ ಯಾವುದೇ ಕೆಲಸಕ್ಕೆ ಹೋದರೂ ಯಶಸ್ವಿಯಾಗುವುದಿಲ್ಲ. ಆದ್ದರಿಂದ ಮನೆಯ ಅಂಗಳವನ್ನು ಸ್ವಚ್ಛ ಮಾಡಿ ರಂಗೋಲಿ ಹಾಕಿ ಮಹಾಲಕ್ಷ್ಮೀಯನ್ನು ಸ್ವಾಗತಿಸಬೇಕು. ಈ ಎಲ್ಲ ತಪ್ಪುಗಳನ್ನು ಮಾಡುತ್ತಿದ್ದರೆ ಅದನ್ನು ನಿಲ್ಲಿಸಿ ಅದರೊಂದಿಗೆ ಬೇರೆಯವರ ಸಂಸಾರಿನ ಬಗ್ಗೆ ಮಾತಾಡಿದರೆ ಅಥವಾ ಮನೆಯಲ್ಲಿ ವಾದ ವಿವಾದ, ಚರ್ಚೆ ಮಾಡಿದರೆ ಮಹಾಲಕ್ಷ್ಮೀ ಒಂದು ಕ್ಷಣವೂ ಮನೆಯಲ್ಲಿ ನೆಲೆಸುವುದಿಲ್ಲ. ಮನೆಯ ಹೆಂಗಸರು ಬೇರೆಯವರ ಜೊತೆ ಸೇರಿ ಬೇರೆಯವರ ಸಂಸಾರದ ಬಗ್ಗೆ ಮಾತನಾಡಿದರೆ ಮನೆಯ ಯಜಮಾನನಿಗೆ ಒಳ್ಳೆಯದಲ್ಲ. ಮನೆಯ ಹೆಂಗಸರು ಈ ತಪ್ಪುಗಳನ್ನು ಮಾಡದಿದ್ದರೆ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುತ್ತಾಳೆ ಮತ್ತು ಹಣಕಾಸಿನ ತೊಂದರೆ ಬರುವುದಿಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲ ಹೆಣ್ಣುಮಕ್ಕಳಿಗೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!