ನಾಡಕಚೇರಿಯಲ್ಲಿ ಜಾ’ತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಗಂಟೆ ಗಟ್ಟಲೆ ಕಾಯೋದಕ್ಕಿಂತ, 5 ನಿಮಿಷದಲ್ಲಿ ಆನ್ಲೈನ್ ಅರ್ಜಿ ಸಲ್ಲಿಸುವ ಸುಲಭ ವಿಧಾನ

0 1,662

ನಾವಿಂದು ನಿಮಗೆ ತಿಳಿಸುತ್ತಿರುವ ಮಾಹಿತಿ ಯಾವುದು ಎಂದರೆ ನಾಡಕಚೇರಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯುವುದಕ್ಕೆ ಯಾವ ರೀತಿಯಾಗಿ ಸುಲಭವಾಗಿ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತಾಗಿ ತಿಳಿಸಿಕೊಡುತ್ತೇವೆ. ಮೊದಲಿಗೆ ನೀವು ಯಾವುದಾದರೂ ಒಂದು ವೆಬ್ ಬ್ರೌಸರ್ ಅನ್ನು ಓಪನ್ ಮಾಡಿಕೊಂಡು ಅಲ್ಲಿ ನಾಡಕಚೇರಿಯ ಆಫೀಸಿಯಲ್ ವೆಬ್ಸೈಟ್ ಓಪನ್ ಮಾಡಬೇಕು. ನಿಮ್ಮ ಮುಂದೆ ಒಂದು ಪುಟ ತೆರೆದುಕೊಳ್ಳುತ್ತದೆ ಅಲ್ಲಿ ಮೊದಲಿಗೆ ನೀವು ನಿಮ್ಮ ಮೊಬೈಲ್ ನಂಬರನ್ನು ಹಾಕಬೇಕು ನಂತರ ಗೆಟ್ ಟು ಓಟಿಪಿ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು.

ನಂತರ ನಿಮ್ಮ ಮೊಬೈಲ್ಗೆ ಒಂದು ಓಟಿಪಿ ಬರುತ್ತದೆ ಅದನ್ನು ಅಲ್ಲಿ ಹಾಕಬೇಕು ನಂತರ ಲಾಗಿನ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ನಿಮ್ಮ ಮುಂದೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ ಅದರಲ್ಲಿ ವೀವ್ ರಿಕ್ವೆಸ್ಟ್ ಎನ್ನುವುದು ಕಾಣಿಸುತ್ತದೆ ಅಲ್ಲಿ ಹೋದಾಗ ಕೆಲವೊಂದಿಷ್ಟು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.

ಅದರಲ್ಲಿ ಜಾತಿ ಸರ್ಟಿಫಿಕೇಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ಆಗ ಅಲ್ಲಿ ನಿಮ್ಮ ಮುಂದೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ ಅಲ್ಲಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ಅಲ್ಲಿ ಒಂದಿಷ್ಟು ಮಾಹಿತಿಗಳನ್ನು ಕೇಳುತ್ತದೆ ನಿಮ್ಮ ಜಿಲ್ಲೆ ತಾಲೂಕು ಊರು ಅವುಗಳನ್ನು ತುಂಬಬೇಕು ಅಲ್ಲಿ ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಇರುತ್ತದೆ.

ನಂತರ ಆಧಾರ್ ಕಾರ್ಡ್ನಲ್ಲಿ ಇರುವ ರೀತಿಯಲ್ಲಿ ನಿಮ್ಮ ಹೆಸರನ್ನು ಹಾಕಬೇಕು ಅರ್ಜಿದಾರರ ತಂದೆಯ ಹೆಸರನ್ನು ಹಾಕಬೇಕು ನಂತರ ನಿಮ್ಮ ಜಾತಿ ಯಾವುದು ಎನ್ನುವುದನ್ನು ಆಯ್ಕೆಮಾಡಿಕೊಳ್ಳಬೇಕು. ನಂತರ ಕೆಳಗಡೆ ಪ್ರಿಂಟ್ ಕನ್ಸಂಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಮುಂದೆ ಒಂದು ಫಾರ್ಮೆಟ್ ಕಾಣಿಸುತ್ತದೆ ಅದನ್ನು ನೀವು ಸೇವ್ ಮಾಡಿ ಅಥವಾ ಪ್ರಿಂಟ್ ತೆಗೆದುಕೊಳ್ಳಬಹುದು.

ಈಗಾಗಲೇ ನೀವು ಜಾತಿ ಅಥವಾ ಆದಾಯ ಪ್ರಮಾಣ ಪತ್ರವನ್ನು ಹೊಂದಿದ್ದರೆ ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ ಬರುವುದಿಲ್ಲ. ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ಅಭ್ಯರ್ಥಿಯ ಜಾತಿ ಮತ್ತು ಆದಾಯ ಸರ್ಟಿಫಿಕೇಟ್ ಇದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಕೆಳಗೆ ಆಧಾರ್ ಕನ್ಸೆಂಟ್ ಫಾರ್ಮ್ ಎಂಬುದು ಕಾಣಿಸುತ್ತದೆ ಅದನ್ನು ಆಯ್ಕೆಮಾಡಿಕೊಂಡು ಕೆಳಗಡೆ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ ವ್ಯಕ್ತಿಯ ಈಗಾಗಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿದ್ದಾನೆ ಇಲ್ಲವೇ ಎಂಬುದು ತಿಳಿಯುತ್ತದೆ ಅಲ್ಲಿ ಓಕೆ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಮುಂದೆ ಒಂದು ಅರ್ಜಿ ಕಾಣಿಸುತ್ತದೆ ಅದರಲ್ಲಿ ಕೇಳಿರುವಂತಹ ಮಾಹಿತಿಗಳನ್ನು ಸರಿಯಾಗಿ ತುಂಬಬೇಕು. ನಂತರ ಕೆಲವೊಂದು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅದನ್ನು ಅಪ್ಲೋಡ್ ಮಾಡಬೇಕು.

ಅಪ್ಲೋಡ್ ಮಾಡಿದ ನಂತರ ಸೇವ್ ಎನ್ನುವುದನ್ನು ಕ್ಲಿಕ್ ಮಾಡಬೇಕು. ನಂತರ ಕೆಳಗಡೆ ಕಾಣಿಸುವ ಕ್ಯಾಪ್ಚಾ ಕೋಡ್ ಅನ್ನು ಎಂಟ್ರಿ ಮಾಡಿ ಸೇವ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಒಂದು ಆರ್ ಡಿ ನಂಬರ್ ಸಿಗುತ್ತದೆ ಅದನ್ನು ನೀವು ತೆಗೆದುಕೊಳ್ಳಬೇಕು. ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಪಡೆಯುವುದಕ್ಕೆ ಅರ್ಜಿ ಸಲ್ಲಿಸುವುದಕ್ಕೆ ನೀವು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ರೀತಿಯಾಗಿ ನೀವು ಬಹಳ ಸುಲಭವಾಗಿ ನಿಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರಲ್ಲಿ ಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.