Ultimate magazine theme for WordPress.

ಬಡವರು ಖಾಲಿಜಾಗ ಇದ್ದು ಸರ್ಕಾರದಿಂದ ಉಚಿತ ಮನೆಕಟ್ಟಿಸಲು ಆನ್ಲೈನ್ ಅರ್ಜಿ ಸಲ್ಲಿಸೋದು ಹೇಗೆ? ಸಂಪೂರ್ಣ ಮಾಹಿತಿ

0 5,111

ನಾವಿಂದು ನಿಮಗೆ ತಿಳಿಸುತ್ತಿರುವ ವಿಷಯ ಯಾರ ಬಳಿ ಖಾಲಿ ಜಾಗ ಇರುತ್ತದೆ ಅಂಥವರಿಗೆ ಖಾಲಿ ಜಾಗದಲ್ಲಿ ಮನೆಯನ್ನು ಕಟ್ಟಿಸಿಕೊಳ್ಳುವುದಕ್ಕೆ ಹಣವನ್ನು ನೀಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣವಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಯಾವ ದಿನಾಂಕದೊಳಗೆ ಸಲ್ಲಿಸಬೇಕು ಅದಕ್ಕೆ ಎಲ್ಲ ಅರ್ಹತೆಯನ್ನು ಹೊಂದಿರಬೇಕು ಎಂಬುದರ ಕುರಿತಾಗಿ ತಿಳಿಸಿಕೊಡುತ್ತೇವೆ. ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಡೆಯಿಂದ ಯಾರಿಗೆ ಕಾಲಿ ಜಾಗ ಇರುತ್ತದೆ ಅಂತಹ ಖಾಲಿ ಜಾಗದಲ್ಲಿ ನಿಮಗೆ ಮನೆಯನ್ನು ಕಟ್ಟಿಸಿ ಕೊಳ್ಳುವುದಕ್ಕೆ ಹಣವನ್ನು ನೀಡಲಾಗುತ್ತದೆ.

ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳುವುದಕ್ಕೆ ಅಭ್ಯರ್ಥಿಗಳು ಆನ್ಲೈನ್ ಮತ್ತು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಎಂಬುದನ್ನು ನೋಡುವುದಾದರೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಡಿಯಲ್ಲಿ ಬರುವಂತಹ ಪರಿಶಿಷ್ಟ ಜಾತಿಯವರು ಅಲೆಮಾರಿ ಜನಾಂಗದವರು ಅರೆ ಅಲೆಮಾರಿ ಜನಾಂಗದವರು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜನಾಂಗದವರು ಇವರು ಖಾಲಿ ಜಾಗವನ್ನು ಹೊಂದಿದ್ದರೆ ಆ ಜಾಗದಲ್ಲಿ ಮನೆಯನ್ನು ಕಟ್ಟಿಕೊಳ್ಳುವುದಕ್ಕೆ ಹಣವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಅರ್ಹ ಅಭ್ಯರ್ಥಿಗಳು ಮಾರ್ಚ್ 20 2022ರ ವರೆಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಡಾಕ್ಟರ್ ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಆಫೀಸಿಯಲ್ ವೆಬ್ಸೈಟನ್ನು ಓಪನ್ ಮಾಡಿಕೊಳ್ಳಬೇಕು.

ಆಗ ಅಲ್ಲಿ ಆನ್ಲೈನ್ ಅಪ್ಲಿಕೇಶನ್ ಎನ್ನುವುದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಆನ್ಲೈನ್ ಮತ್ತು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಎನ್ನುವ ಆಯ್ಕೆಗಳು ಕಾಣಿಸುತ್ತದೆ ಮೊದಲಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದರ ಬಗ್ಗೆ ತಿಳಿದುಕೊಳ್ಳೋಣ. ಹಾಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮಗೆ ಆನ್ಲೈನ್ ಅಪ್ಲಿಕೇಶನ್ ಫಾರಂ ಕಾಣಿಸುತ್ತದೆ ಪರಿಶಿಷ್ಟ ಜಾತಿ ಯವರು ಅಲೆಮಾರಿ ಜನಾಂಗದವರು ಅರೆಅಲೆಮಾರಿ ಜನಾಂಗದವರು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜನಾಂಗದವರು ಇವರು ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದರೆ ಅವರ ಬಳಿ ಖಾಲಿ ಜಾಗವಿದ್ದರೆ ಅವರಿಗೆ ಮನೆಯನ್ನು ಕಟ್ಟಿಸಿ ಕೊಳ್ಳುವುದಕ್ಕೆ ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿ ಹಣವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. ಒಂದು ವೇಳೆ ನೀವು ನಗರ ಪ್ರದೇಶದವರಾಗಿದ್ದರೆ ನಿಮಗೆ ಮನೆಯನ್ನು ಕಟ್ಟಿಸಿ ಕೊಳ್ಳುವುದಕ್ಕೆ ಸಂಪೂರ್ಣವಾಗಿ ಉಚಿತವಾಗಿ ಎರಡು ಲಕ್ಷ ರೂಪಾಯಿ ಹಣವನ್ನು ನೀಡಲಾಗುತ್ತದೆ.

ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳುವ ಮಾಹಿತಿಗಳನ್ನು ಸರಿಯಾಗಿ ತುಂಬಬೇಕು ಜೊತೆಗೆ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಆಧಾರ್ ಕಾರ್ಡ್ ಅಭ್ಯರ್ಥಿಯ ಫೋಟೋ ರೇಷನ್ ಕಾರ್ಡ್ ಇವುಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಅಲ್ಲಿ ನಿಮ್ಮ ಬ್ಯಾಂಕ್ ಮಾಹಿತಿಯನ್ನು ಸರಿಯಾಗಿ ಹಾಕಬೇಕು ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಹಾಗಾಗಿ ಬ್ಯಾಂಕ್ ಪಾಸ್ ಬುಕ್ ಅನ್ನು ಕೂಡ ಅಪ್ಲೋಡ್ ಮಾಡಬೇಕಾಗುತ್ತದೆ.

ನಿಮ್ಮ ಕುಟುಂಬದಲ್ಲಿರುವ ಎಲ್ಲಾ ಸದಸ್ಯರ ಮಾಹಿತಿಯನ್ನು ಕೂಡ ಒದಗಿಸಬೇಕಾಗುತ್ತದೆ. ನಂತರ ಕೆಳಗಡೆ ಒಂದು ಬಾಕ್ಸ್ ಕಾಣಿಸುತ್ತದೆ ಅಲ್ಲಿ ಟಿಕ್ ಮಾಡಬೇಕು ನಂತರ ಅರ್ಜಿ ಸಲ್ಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಅದರ ಅಕ್ನೊಲೆಜ್ಮೆಂಟ್ ಪ್ರತಿಯನ್ನು ನೀವು ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಿಮ್ಮ ಅರ್ಜಿಯ ಪರಿಶೀಲನೆ ಮಾಡುವುದಕ್ಕೆ ಉಪಯೋಗವಾಗುತ್ತದೆ.

ಇನ್ನು ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವವರು ವೆಬ್ಸೈಟನ್ನು ಓಪನ್ ಮಾಡಿದಾಗ ಅಲಿ ಡೌನ್ಲೋಡ್ ಫಾರಂ ಎನ್ನುವುದು ಕಾಣಿಸುತ್ತದೆ ಅದರ ಕೆಳಗೆ ವಸತಿ ಯೋಜನೆ ಎಂದಿರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಅಪ್ಲಿಕೇಶನ್ ಫಾರ್ಮ್ ಕಾಣಿಸುತ್ತದೆ ಅದರ ಪ್ರಿಂಟನ್ನು ತೆಗೆದುಕೊಳ್ಳಬೇಕು ಅದರಲ್ಲಿ ಕೇಳಿರುವ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು. ನಂತರ ಕೆಲವು ದಾಖಲೆಗಳನ್ನು ಲಗತ್ತಿಸಿ ಅದನ್ನು ಡಾಕ್ಟರ್ ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಸಲ್ಲಿಸಬೇಕು.

ನೀವು ಕೂಡ ಪರಿಶಿಷ್ಟಜಾತಿ ಅಲೆಮಾರಿ ಜನಾಂಗ ಅರೆ ಅಲೆಮಾರಿ ಜನಾಂಗ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜನಾಂಗಕ್ಕೆ ಸೇರಿದವರಾಗಿದ್ದು ನಿಮ್ಮ ಬಳಿ ಮನೆ ಕಟ್ಟಿಸಿಕೊಳ್ಳುವುದಕ್ಕೆ ಕಾಲಿ ಜಾಗಾವಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಣವನ್ನು ಪಡೆಯಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.

Leave A Reply

Your email address will not be published.