Bar Business Idea For Kannada information: ನಮ್ಮ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಆದರೆ ಉದ್ಯೋಗಗಳ ಸೃಷ್ಟಿ ಕಡಿಮೆಯಾಗುತ್ತಿದೆ. ಬಾರ್ ಪ್ರಾರಂಭಿಸುವುದು ಒಂದು ಪ್ರಮುಖ ಬಿಸಿನೆಸ್ (Business)ಎಂದು ಹೇಳಬಹುದು. ಬಾರ್ ಪ್ರಾರಂಭಿಸಲು ಲೈಸೆನ್ಸ್ ಪಡೆಯಬೇಕು. ಲೈಸೆನ್ಸ್ (License) ಹೇಗೆ ಪಡೆಯುವುದು, ಅದಕ್ಕೆ ಏನೇನು ದಾಖಲೆಗಳು ಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಬಾರ್ ಗಳಲ್ಲಿ ಹಲವು ವಿಧಗಳಿವೆ. ಸಿಎಲ್ 1, ಸಿಎಲ್ 2, 4,5,6a,7,9,11. ಸಿಎಲ್ 1 ಎಂದರೆ ಹೋಲ್ ಸೇಲ್ ಬಾರ್, ಸಿಎಲ್ 2 ಎಂದರೆ ರಿಟೇಲರ್ ಬಾರ್. ಸಿಎಲ್ 4 ಎಂದರೆ ಕ್ಲಬ್ ಬಾರ್. ಸಿಎಲ್ 6a ಎಂದರೆ ಸ್ಟಾರ್ ಹೋಟೆಲ್ ಬಾರ್. ಸಿಎಲ್ 7 ಎಂದರೆ ಹೋಟೆಲ್ ಅಂಡ್ ಬೋರ್ಡಿಂಗ್ ಹೌಸ್. ಸಿಎಲ್ 9 ಎಂದರೆ ಬಾರ್ ಎಂಡ್ ರೆಸ್ಟೋರೆಂಟ್. ಬಾರ್ ಪ್ರಾರಂಭಿಸಲು ಲೈಸೆನ್ಸ್ ಪಡೆಯಲು ಫೀಸ್ ಕೊಡಬೇಕಾಗುತ್ತದೆ. ಇದರಲ್ಲಿ ಐದು ರೀತಿ ಇರುತ್ತದೆ.

20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದರೆ, ಅದರ್ ಕಾರ್ಪೊರೇಷನ್, ಸಿಎಮ್ಇ, ಟಿಎಂಸಿ, ಕೊನೆಯದಾಗಿ ಅದರ್ಸ್ ಸಿಎಲ್ 1 ಬಾರ್ ಪ್ರಾರಂಭಿಸಬೇಕು ಎಂದರೆ 5,75,000- 7,25,000 ರೂಪಾಯಿಯವರೆಗೆ ಫೀಸ್ ತುಂಬಬೇಕಾಗುತ್ತದೆ. ಸಿಎಲ್ 1 ಪ್ರಾರಂಭಿಸಲು 2006ರವರೆಗೆ ಲೈಸೆನ್ಸ್ ಕೊಟ್ಟಿದ್ದಾರೆ ನಂತರ ಕೊಟ್ಟಿಲ್ಲ. ಸಿಎಲ್ 2 ಬಾರ್ ಎಂದರೆ ರೀಟೇಲ್ ಶಾಪ್ ಇದನ್ನು ಪ್ರಾರಂಭಿಸಲು 4 ಲಕ್ಷದಿಂದ 5 ಲಕ್ಷದವರೆಗೆ ಫೀಸ್ ತುಂಬಬೇಕಾಗುತ್ತದೆ. ಸಿಎಲ್4 ಕ್ಲಬ್ ಬಾರ್ ಈ ಬಾರ್ ಪ್ರಾರಂಭಿಸಲು 2016-18ರವರೆಗೆ 5 ಲಕ್ಷದಿಂದ 6 ವರೆಲಕ್ಷದವರೆಗೆ ಫೀಸ್ ತುಂಬಬೇಕಾಗಿತ್ತು.

ಸಿಎಲ್ 5 ಎಂದರೆ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸೇಂದಿ ಲೈಸೆನ್ಸ್ ಆಗಿದೆ. ಈ ಲೈಸೆನ್ಸ್ ಪಡೆಯಲು 50 ಸಾವಿರದವರೆಗೆ ಫೀಸ್ ತುಂಬಬೇಕಾಗುತ್ತದೆ. ಸಿಎಲ್ 6a ಸ್ಟಾರ್ ಹೊಟೆಲ್ ಲೈಸೆನ್ಸ್ ಪಡೆಯಲು 10 ಲಕ್ಷದಿಂದ ಪ್ರಾರಂಭವಾಗುತ್ತದೆ. ಸಿಎಲ್ 7 ಈ ಲೈಸೆನ್ಸ್ ಪಡೆಯಲು 6 ವರೆಲಕ್ಷದವರೆಗೆ ಫೀಸ್ ತುಂಬಬೇಕಾಗುತ್ತದೆ. ಸಿಎಲ್ 9 ಬಾರ್ ಎಂಡ್ ರೆಸ್ಟೋರೆಂಟ್ ಪ್ರಾರಂಭಿಸಬೇಕಾದರೆ ಲೈಸೆನ್ಸ್ ಪಡೆಯಲು ಪ್ರದೇಶದ ಜನಸಂಖ್ಯೆಯ ಮೇಲೆ ಫೀಸ್ ಇರುತ್ತದೆ.

ಕಡಿಮೆಯೆಂದರೂ 7 ಲಕ್ಷ ಇರುತ್ತದೆ. ಕೆಲವು ಲೈಸೆನ್ಸ್ ನ ಫೀಸ್ ಆಯಾ ಪ್ರದೇಶದ ಜನಸಂಖ್ಯೆಯ ಮೇಲೆ ನಿರ್ಧಾರವಾಗುತ್ತದೆ ಬಾರ್ ಲೈಸೆನ್ಸ್ ಪಡೆಯಲು ಮೊದಲು ರಾಜ್ಯ ಅಬಕಾರಿ ಇಲಾಖೆ ಅಥವಾ ಜಿಲ್ಲಾ ಅಬಕಾರಿ ಇಲಾಖೆಯ ಭೇಟಿ ನೀಡಿ ಮಾಹಿತಿ ಕೊಡಬೇಕಾಗುತ್ತದೆ. ಯಾವ ಜಾಗದಲ್ಲಿ ಬಾರ್ ಪ್ರಾರಂಭಿಸುತ್ತೇವೆ ಆ ಜಾಗದ ಬಗ್ಗೆ ಮಾಹಿತಿ ಕೊಡಬೇಕಾಗುತ್ತದೆ. ಅವರು ಒಪ್ಪಿಕೊಂಡ ನಂತರ ಸ್ವಲ್ಪ ಫೀಸ್ ಕಟ್ಟಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಅರ್ಜಿ ಹಾಕುವಾಗ ಡಿಪಾರ್ಟ್ಮೆಂಟ್ ಸಲಹೆ ಪಡೆದು ಅರ್ಜಿ ಸಲ್ಲಿಸಬೇಕು. ನಂತರ ಪರಿಶೀಲನೆ ಮಾಡುತ್ತಾರೆ, ಪೊಲೀಸ್ ಇಲಾಖೆ ಮೂಲಕ ಸ್ಥಳ ತಪಾಸಣೆ ಮಾಡುತ್ತಾರೆ. ಶುಲ್ಕ ಎಷ್ಟು ತುಂಬಬೇಕು ಎಂಬುದನ್ನು ಹೇಳುತ್ತಾರೆ ಅದರಂತೆ ಶುಲ್ಕ ಪಾವತಿಸಬೇಕು. ಬಾರ್ ಪ್ರಾರಂಭಿಸಲು ಕೆಲವು ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ ಆಧಾರ್ ಕಾರ್ಡ್, ಐಡಿ ಕಾರ್ಡ್, ಅಡ್ರೆಸ್ ಪ್ರೂಫ್ ಗಳನ್ನು ಸಲ್ಲಿಸಬೇಕು. ಬಾಡಿಗೆಗೆ ಶಾಪ್ ತೆಗೆದುಕೊಳ್ಳುವುದಾದರೆ ಅದಕ್ಕೆ ಸಂಬಂಧಿಸಿದ ದಾಖಲಾತಿ ಬೇಕಾಗುತ್ತದೆ.

ಬಾರ್ ಪ್ರಾರಂಭಿಸುವವರಿಗೆ ಕೆಲವು ಅರ್ಹತೆಗಳಿರಬೇಕು ಅದೇನೆಂದರೆ 21 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬೇಕು. ಭಾರತೀಯ ಪ್ರಜೆಯಾಗಿರಬೇಕು. ಸರಿಯಾದ ದಾಖಲಾತಿಗಳನ್ನು ಸಲ್ಲಿಸಿದಲ್ಲಿ 10ರಿಂದ 15 ದಿನಗಳೊಳಗೆ ಲೈಸೆನ್ಸ್ ಸಿಗುತ್ತದೆ. 2018 ರ ನಂತರ ಬಾರ್ ಲೈಸೆನ್ಸ್ ಕೊಡುತ್ತಿಲ್ಲ ನಂತರದ ದಿನಗಳಲ್ಲಿ ಕೊಡಬಹುದು.

ಒಂದು ಬಾರ್ ಪ್ರಾರಂಭಿಸಲು ಲೈಸೆನ್ಸ್ ಜೊತೆಗೆ ಶಾಪ್ ಎಸ್ಟಾಬ್ಲಿಷ್ಮೆಂಟ್ ಲೈಸೆನ್ಸ್, ಪೋಲಿಸ್ ಹೌಸ್ ಲೈಸೆನ್ಸ್, ಎಪ್ಎಸ್ಎಸ್ಎಐ ಲೈಸನ್ಸ್, ಜಿಎಸ್ಟಿ ಲೈಸೆನ್ಸ್, ಮುನ್ಸಿಪಾಲಿಟಿ ಲೈಸೆನ್ಸ್ ಇರಬೇಕಾಗುತ್ತದೆ. ಈ ಎಲ್ಲಾ ಲೈಸೆನ್ಸ್ ಪಡೆಯಲು 6 ಲಕ್ಷ ರೂಪಾಯಿ ಖರ್ಚಾಗುತ್ತದೆ. ಬಾರ್ ಇಂಟೀರಿಯರ್, ಡಿಸೈನ್, ಕಾರ್ಮಿಕರು ಹೀಗೆ ಒಂದು ಬಾರ್ ಪ್ರಾರಂಭಿಸಲು 50ರಿಂದ 70 ಲಕ್ಷ ಖರ್ಚಾಗುತ್ತದೆ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!