ಗಡಿಯಾರವಿಲ್ಲದ ಮನೆಯು ಸೂರ್ಯನಿಲ್ಲದ ಭೂಮಿಯಂತೆ ಯಾಕಂದ್ರೆ ನಮ್ಮ ಜಗತ್ತನ್ನು ಬೆಳಗಲು ಮುಂಜಾನೆ ಸೂರ್ಯನು ಬೆಳಿಗ್ಗೆ ಎಲ್ಲರಿಗಿಂತ ಮುಂಚೆಯೇ ಎದ್ದು ನಮ್ಮ ಜನರನ್ನು ಎಚ್ಚರಿಸುತ್ತಾನೆ ಹಿಂದಿನ ಕಾಲದಲ್ಲಿ ನಾವು ಸಮಯವನ್ನು ತಿಳಿಯಲು ಗಡಿಯಾರದಂತಹ ಉಪಕರಣಗಳು ಇರಲಿಲ್ಲವಾದ್ದರಿಂದ ಸೂರ್ಯನೇ ಸಮಯವನ್ನು ನೋಡುವ ಸಾಧನಾವಾಗಿದ್ದ ಆದರೆ ಇಂದು ಜಗತ್ತಿನಲ್ಲಿ ಸೂರ್ಯನು ಹೇಗೋ ಮನೆಯಲ್ಲಿ ಗಡಿಯಾರವೂ ಕೂಡ ಹಾಗೆ ಗಡಿಯಾರವಿಲ್ಲದ ಮನೆಯೇ ಇಲ್ಲ ಅಲ್ಲದೇ ಗಡಿಯಾರವನ್ನು ಸಮಯವನ್ನು ತಿಳಿಯಲು ಮಾತ್ರವಲ್ಲದೆ ಮನೆಯ ಗೋಡೆಯ ಅಲಂಕಾರದ ವಸ್ತುವಾಗಿಯೂ ಬಗೆಬಗೆಯ ಗಡಿಯಾರಗಳನ್ನು ಬಳಸಲಾಗುತ್ತದೆ ಮನೆಯ ಅಲಂಕಾರದ ದೃಷ್ಟಿಯಿಂದ ಗಡಿಯಾರವು ಚಂದವಾಗಿ ಕಂಡರೂ ಸಹ ಕೆಲವೊಂದು ದಿಕ್ಕಿನ ಗೋಡೆಗಳಿಗೆ ಗಡಿಯಾರವನ್ನು ನೇತುಹಾಕುವುದು ವಾಸ್ತು ಶಾಸ್ತ್ರದ ಪ್ರಕಾರ ಸೂಕ್ತವಲ್ಲ ಮತ್ತು ಈ ರೀತಿ ಮಾಡುವುದು ಮನೆಯ ಶ್ರೇಯಸ್ಸಿನ ದೃಷ್ಟಿಯಿಂದ ಒಳಿತಲ್ಲ
ಹಾಗಾದ್ರೆ ಮನೆಯ ಯಾವ ದಿಕ್ಕಿನಲ್ಲಿ ಗಡಿಯಾರವನ್ನು ನೇತುಕಾಹಬಾರದು ಅದರಿಂದಾಗುವ ಕೆಡುಕುಗಳೇನು ಮತ್ತು ಯಾವ ಯಾವ ದಿಕ್ಕಿನಲ್ಲಿ ಹಾಕುವುದು ಒಳಿತು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಮನೆಯಲ್ಲಿ ಗಡಿಯಾರವು ಸೂರ್ಯನ ಪ್ರತಿಕವಾಗಿದೆ ಮತ್ತು ಇದು ಮನುಷ್ಯನ ಜೀವನದ ಪ್ರತಿಬಿಂಬವೂ ಆಗಿದೆ ಆದ್ದರಿಂದ ಗಡಿಯಾರವನ್ನು ಯಾವುದೇ ಕಾರಣಕ್ಕೂ ಅಪ್ಪಿ ತಪ್ಪಿಯೂ ಕೂಡ ಮನೆಯ ದಕ್ಷಿಣದ ಗೋಡೆಗೆ ಹಾಕಬಾರದು ಪುರಾಣಗಳ ಪ್ರಕಾರ ಯಮರಾಜನು ದಕ್ಷಿಣ ದಿಕ್ಕಿನ ಅಧಿಪತಿಯಾಗಿದ್ದಾನೆ ಆದ್ದರಿಂದಲೇ ಗಡಿಯಾರವನ್ನು ಮನೆಯಲ್ಲಿ ದಕ್ಷಿಣ ದಿಕ್ಕಿನ ಗೋಡೆಗೆ ಹಾಕಬಾರದು ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ ಹೀಗೆ ಮಾಡುವುದು ಮನೆಗೆ ಕೆಟ್ಟ ಕಾಲ ಆರಂಭವಾದಂತೆಯೇ ಸರಿ ಅಲ್ಲದೇ ಈ ರೀತಿ ಮಾಡುವುದರಿಂದ ಆ ಮನೆಯಲ್ಲಿರುವ ದಂಪತಿಗಳಿಬ್ಬರ ನಡುವಣ ಸಂಬಂದದಲ್ಲಿ ಕಲಹಗಳು ಹೆಚ್ಚಾಗುತ್ತವೆ ಅಲ್ಲದೇ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ

ಅಂತೆಯೇ ಮನೆಯ ಮುಖ್ಯ ದ್ವಾರದ ಮೇಲೆ ಯಾವುದೇ ಕಾರಣಕ್ಕೂ ಗಡಿಯಾರವನ್ನು ನೇತುಹಾಕುವುದು ಸರಿಯಲ್ಲ ಹೀಗೆ ಮಾಡುವುದು ನಾವು ಯಾವಾಗಲಾದರೂ ಸರಿಯೇ ನಮ್ಮ ಮುಖ್ಯ ಕೆಲಸಗಳಿಗೆ ಮನೆಯ ಹೊರಗೆ ಹೋಗುವುದು ಮತ್ತು ಮನೆಯ ಒಳಗೆ ಬರುವುದು ಮಾಡುವಂತಹ ಸಂದರ್ಭದಲ್ಲಿ ಅದು ನಮ್ಮ ತಲೆಯ ಮೇಲೆಯೇ ಇರುವಂತಿರುತ್ತದೆ ಮತ್ತು ಹೀಗೆ ಮಾಡುವುದರಿಂದ ಇದು ನಮ್ಮ ಮನಸ್ಸಿನ ಮೇಲೆ ಕೆಟ್ಟ ಪ್ರಭಾವವನ್ನು ಬೀರುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಮನೆಯ ಮುಖ್ಯ ದ್ವಾರದ ಮೇಲೆ ಗಡಿಯಾರವನ್ನು ಹಾಕಬಾರದು

ಅಲ್ಲದೇ ಯಾವುದೇ ಕಾರಣಕ್ಕೂ ಯಾರಿಗೂ ಗಡಿಯಾರವನ್ನು ಉಡುಗೊರೆಯಾಗಿ ಕೊಡಬಾರದು ಮತ್ತು ಯಾರಿಂದಲೂ ಸಹ ಗಡಿಯಾರವನ್ನು ಉಡುಗೊರೆಯಾಗಿ ಪಡೆಯಲೂ ಬಾರದು ಗಡಿಯಾರವನ್ನು ಉಡುಗೊರೆಯಾಗಿ ಪಡೆಯುವುದರಿಂದ ಆ ಗಡಿಯಾರವನ್ನು ಉಡುಗೊರೆಯಾಗಿ ನೀಡುವ ವ್ಯಕ್ತಿಯ ಸಮಯ ಕೆಟ್ಟದ್ದಾಗಿದ್ದಾರೆ ಅದರಿಂದ ನಿಮಗೂ ಕೂಡಾ ಕೆಡುಕುಂಟಾಗುವುದು ಆದ್ದರಿಂದ ಗಡಿಯಾರಗಳನ್ನು ಉಡುಗೊರೆಯಾಗಿ ಪಡೆಯುವುದು ಮತ್ತು ಕೊಡುವುದು ಸೂಕ್ತವಲ್ಲ

ಮನೆಯಲ್ಲಿ ಎಂದಿಗೂ ಸಹ ಗಡಿಯಾರವು ನಿಲ್ಲದಂತೆ ನೋಡಿಕೊಳ್ಳಬೇಕು ಮತ್ತು ನಿಂತ ಗಡಿಯಾರವನ್ನು ಮನೆಯಲ್ಲಿ ಇಡಬಾರದು, ಇನ್ನು ಮನೆಯ ಪುರ್ವ ಮತ್ತು ಉತ್ತರ ದಿಕ್ಕಿನಲ್ಲಿ ಗಡಿಯಾರವನ್ನು ನೇತುಹಾಕುವುದರಿಂದ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿಗಳು ಹೆಚ್ಚಾಗುತ್ತವೆ ದಂಪತಿಗಳ ನಡುವೆ ಇರುವ ಕಲಹಗಳು ದೂರಾಗುತ್ತವೆ ಮತ್ತು ಮನೆಯು ನಂದಗೋಕುಲವಾಗುತ್ತದೆ

Leave a Reply

Your email address will not be published. Required fields are marked *