ಕನ್ನಡಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಇರುತ್ತದೆ. ಕನ್ನಡಿ ಇಲ್ಲದೆ ನಮಗೆ ಮುಖ ನೋಡಿಕೊಳ್ಳುವುದು ಕಷ್ಟ. ಕನ್ನಡಿ ಬೇಕೇ ಬೇಕು. ಆದರೆ ಕನ್ನಡಿಯನ್ನು ಎಲ್ಲಾ ಹೊತ್ತಿನಲ್ಲೂ ನೋಡಬಾರದು.ಪ್ರತಿಯೊಂದು ಕೆಲಸಗಳು ಕಾರ್ಯಗಳು ಅದರದ್ದೇ ಆದ ಸಮಯವನ್ನು ಹೊಂದಿರುತ್ತವೆ. ಹಾಗಾಗಿ ಹಗಲಿನಲ್ಲಿ ಮಾತ್ರ ಕನ್ನಡಿಯನ್ನು ನೋಡಬೇಕು. ರಾತ್ರಿ ಹೊತ್ತು ಕನ್ನಡಿಯನ್ನು ನೋಡಬಾರದು. ಇದರ ಹಿಂದಿರುವ ಕಾರಣವೇನೆಂದು ನಾವು ಇಲ್ಲಿ ತಿಳಿಯೋಣ.

ರಾತ್ರಿ ಹೊತ್ತು ಕನ್ನಡಿಯನ್ನು ನೋಡಬಾರದು ಎಂದು ಹಿಂದಿನ ಕಾಲದ ಹಿರಿಯ ಜನರು ಹೇಳುತ್ತಿದ್ದರು. ಆದರೆ ನಾವು ಯುವಜನಾಂಗ. ಅವುಗಳನ್ನೆಲ್ಲ ನಂಬುವುದಿಲ್ಲ. ಮೂಢನಂಬಿಕೆ ಎನ್ನುತ್ತೇವೆ. ಆದರೆ ಇದರ ಹಿಂದೆ ಬಲವಾದ ಕಾರಣ ಇದೆ.

ರಾತ್ರಿಯ ಸಮಯವು ರಜ, ತಮಾತ್ಮಕ ವಾಯುವಿಗೆ ಸೂಕ್ಷ್ಮವಾಗಿರುತ್ತದೆ.ಅದು ರಜ,ತಮಾತ್ಮಕ ಚಲನ ವಲನಗಳೊಂದಿಗೆ ಮತ್ತು ಕೆಟ್ಟ ಶಬ್ದಗಳೊಂದಿಗೆ ಸ್ಪಂದಿತವಾಗಿ ಇರುತ್ತದೆ.ಕನ್ನಡಿಯಲ್ಲಿ ಕಾಣಿಸುವಂತಹ ದೇಹದ ಪ್ರತಿಬಿಂಬ ಅತೀ ಹೆಚ್ಚು ಪ್ರಮಾಣದಲ್ಲಿ ದೇಹದಿಂದ ಪ್ರಕ್ಷೇಪಿಸುವಂತಹ ದೇಹದ ಸೂಕ್ಷ್ಮ ಲಹರಿಗಳಿಗೆ ಸಂಬಂಧ ಪಟ್ಟಿರುತ್ತದೆ.

ಈ ಪ್ರತಿಬಿಂಬದ ಮೇಲೆ ವಾತಾವರಣದಲ್ಲಿನ ಶಕ್ತಿಶಾಲಿ ಕೆಟ್ಟಶಕ್ತಿಗಳು ಬೇಗನೆ ಹಲ್ಲೆ ಮಾಡಬಹುದು. ದೇಹದಲ್ಲಿ ವಾಯು ಮಂಡಲವು ಸಾತ್ವಿಕ ಲಹರಿಯಿಂದ ತುಂಬಿರುತ್ತದೆ. ಇದರಿಂದ ಬೆಳಕಿನ ಸಮಯದಲ್ಲಿ ಕನ್ನಡಿ ನೋಡುವುದು ಲಾಭದಾಯಕ ಆಗಿದೆ. ಆದ್ದರಿಂದ ನಮ್ಮ ಹಿರಿಯರು ಹೇಳಿದ ಹಾಗೆ ರಾತ್ರಿಯ ಹೊತ್ತು ಕನ್ನಡಿ ನೋಡುವುದು ಬಹಳ ಅಪಾಯಕಾರಿ.ನಿಮ್ಮ ಪ್ರತಿಬಿಂಬದ ಮೇಲೆ ಪರಿಣಾಮ ಬೀರಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!