ಮನುಷ್ಯನು ನಿದ್ರೆ ಮಾಡುವುದು ಸಹಜ. ಹಾಗೆಯೇ ನಿದ್ರೆ ಮಾಡಿದಾಗ ಕನಸು ಬೀಳುವುದು ಸಹಜ. ಕೆಲವೊಮ್ಮೆ ಕೆಟ್ಟ ಕನಸುಗಳು ಬೀಳುತ್ತದೆ. ಯಾರಾದರೂ ಸತ್ತವರು ಬದುಕಿದ ಹಾಗೆ. ಹಾಗೆಯೇ ಯಾರಾದರೂ ಬದುಕಿದವರು ಸತ್ತ ಹಾಗೆ. ಇಲ್ಲಿ ನಾವು ಸತ್ತವರು ಕನಸಿನಲ್ಲಿ ಬಂದರೆ ಏನಾಗುತ್ತದೆ ಎಂದು ತಿಳಿಯೋಣ.

ಸತ್ತವರು ಕನಸಿನಲ್ಲಿ ಬಂದರೆ ಕೆಲವರು ಭಯ ಭೀತರಾಗುತ್ತಾರೆ. ಕೆಲವರು ತುಂಬಾ ಡಿಪ್ರೆಶನ್ ಗೆ ಹೋಗುತ್ತಾರೆ. ಸತ್ತ ವ್ಯಕ್ತಿಗಳು ಕನಸಿನಲ್ಲಿ ಬಂದರೆ ಸಹಜತೆ ಅಲ್ಲ. ಅದಕ್ಕೆ ಒಂದು ಅರ್ಥ ಇರುತ್ತದೆ. ಕೆಲವರು ಕನಸಿನಲ್ಲಿ ಸತ್ತವರು ಬಂದರೆ ಮರೆತುಬಿಡುತ್ತಾರೆ.ಇನ್ನು ಕೆಲವರು ಬೇರೆಯವರ ಹತ್ತಿರ ಹೇಳಬೇಕೋ ಬೇಡವೋ ಎಂದು ತುಂಬಾ ಗೊಂದಲದಲ್ಲಿರುತ್ತಾರೆ.

ಸತ್ತ ವ್ಯಕ್ತಿಗಳು ದೇಹದ ಮೇಲೆ ಪ್ರವೇಶ ಆಗುವುದು ಮತ್ತು ಕನಸಿನಲ್ಲಿ ಬಂದರೆ ಒಳ್ಳೆಯ ಪರಿಣಾಮಗಳಲ್ಲ. ನಮ್ಮ ಜೀವನದ ಮುಂದಿನ ಕಂಟಕಗಳನ್ನು ಸೂಚಿಸುವಂತಹ ಮಾರ್ಗ ಇದಾಗಿದೆ.ವ್ಯಕ್ತಿಗಳ ಕನಸಿನಲ್ಲಿ ಬರುತ್ತಾರೆ ಎಂದರೆ ಅವರ ಮೇಲೆ ಇಟ್ಟ ಅಭಿಮಾನ,ಪ್ರೀತಿ,ವಿಶ್ವಾಸ ಇರುವವರಾಗಿರಬಹುದು. ಸಂಬಂಧಿಕರಾಗಿರಬಹುದು.ಸತ್ತವರು ಕನಸಿನಲ್ಲಿ ಬಂದು ಸೂಚನೆಗಳನ್ನು ಕೊಡುತ್ತಾರೆ.ಒಳ್ಳೆಯದು ಎಷ್ಟು ಉತ್ತಮವಾಗಿರುತ್ತದೆಯೋ ಕೆಟ್ಟದ್ದು ಅಷ್ಟೇ ನೀಚ ತತ್ವದಲ್ಲಿರುತ್ತದೆ. ಹಾಗಾಗಿ ನಿಮ್ಮ ರಕ್ತ ಸಂಬಂಧಿಗಳು ಸತ್ತವರು ಯಾರಾದರೂ ಕನಸಿನಲ್ಲಿ ಬಂದರೆ ಅದು ಒಳ್ಳೆಯ ಸೂಚನೆಗಳು ಆಗಿರುತ್ತದೆ.

ಹೊರಗಿನವರು ಸತ್ತವರು ಯಾರಾದರೂ ಕನಸಿನಲ್ಲಿ ಬಂದರೆ ಅದರಿಂದ ಆಗುವ ಸಮಸ್ಯೆಗಳು, ಗೊಂದಲಗಳು, ಕಂಟಕಗಳು, ದರಿದ್ರಗಳಿಂದ ನರಳುವ ಮುನ್ಸೂಚನೆ ನೀಡಲು ಬಂದಿರುತ್ತಾರೆ.
ಇಂತಹ ಕನಸುಗಳು ಬೀಳುವುದರಿಂದ ಮನಸಿನ ಶಾಂತಿ ನಾಶ ಆಗುತ್ತದೆ. ಮುಖದಲ್ಲಿ ಕಳೆ ಹೋಗುತ್ತದೆ. ಮಂದತ್ವ ಹೆಚ್ಚಾಗುತ್ತದೆ. ಇದರಿಂದ ಮನೆಯ ವಾತಾವರಣ ಸ್ಮಶಾನ ಮೌನವಾಗಿ ಇರುತ್ತದೆ. ಆ ಜಾಗದಲ್ಲಿ ಯಾವುದೂ ಒಳ್ಳೆಯದಾಗುವುದಿಲ್ಲ. ಆತ್ಮದ ದೃಷ್ಟಿ ದೇಹದ ಒಳಗಿದ್ದು ದೇಹದಿಂದ ನಾವು ಮನೆಯೊಳಗೆಲ್ಲ ಓಡಾಡುವುದರಿಂದ ಒಳ್ಳೆಯದಾಗುವುದಿಲ್ಲ.

Leave a Reply

Your email address will not be published. Required fields are marked *