ಸಂಗಾತಿಯೊಂದಿಗೆ ಸುಖವಾಗಿ ಬಾಳಲು ಮನೆಯಲ್ಲಿ ಹೀಗಿರಲಿ

0 46

ನಮ್ಮ ಜನ್ಮ ನಕ್ಷತ್ರ, ರಾಶಿಚಕ್ರಗಳು ಹಾಗೂ ಕುಂಡಲಿಯಲ್ಲಿರುವ ಗ್ರಹಗಳ ಸ್ಥಾನ ಹಾಗೂ ಬದಲಾವಣೆಗಳು ನಮ್ಮ ಬದುಕಿನ ಮೇಲೆ ಹಿಡಿತವನ್ನು ಹೊಂದಿರುತ್ತವೆ. ಇದು ವೈವಾಹಿಕ ಜೀವನಕ್ಕೂ ಹೊರತಾಗಿಲ್ಲ. ಪ್ರೇಮವಿವಾಹ, ಹಿರಿಯರೇ ನಿಶ್ಚಿಯಿಸಿದ ಮದುವೆಗೂ ಕುಂಡಲಿಯಲ್ಲಿನ ಗ್ರಹಗಳ ಸ್ಥಾನವು ಮುಖ್ಯವಾಗುತ್ತದೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಸರಿಯಾದ ವಯಸ್ಸಿಗೇ ವಿವಾಹ ಆಗುವುದು ಕಡಿಮೆ ಆಗಿದೆ ಎಂದರೂ ತಪ್ಪಾಗಲಾರದು ಹಾಗಿದ್ದರೆ ಮದುವೆಯ ವಯಸ್ಸಿನ ಬಗ್ಗೆ, ತಡವಾಗಿ ಮದುವೆ ಆಗಲು ನಮ್ಮ ಜ್ಯೋತಿಷ್ಯ ಶಾಸ್ತ್ರ ಎನು ಕಾರಣಗಳನ್ನು ನೀಡುತ್ತದೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪ್ರಾಯಕ್ಕೆ ಬಂದ ಪ್ರತಿಯೊಂದು ಜೀವವು ಸಂಗಾತಿಯನ್ನು ಬಯಸುವುದು. ಅದರಲ್ಲೂ ಮನುಷ್ಯನು ತನ್ನ ಸಂಗಾತಿಯ ಆಯ್ಕೆ, ಸಂಗಾತಿಯೊಂದಿಗಿನ ಜೀವನವನ್ನು ಅತ್ಯಂತ ಸಂತೋಷದಿಂದ ಕಳೆಯಲು ಬಯಸುತ್ತಾನೆ. ಇಬ್ಬರೂ ಪರಸ್ಪರ ಉತ್ತಮ ಹೊಂದಾಣಿಕೆಯೊಂದಿಗೆ ಅದ್ಭುತ ಜೀವನವನ್ನು ನಡೆಸಬೇಕು ಎಂದು ಬಯಸುತ್ತಾನೆ. ಆದರೆ ಜೀವನ ಹಾಗೂ ವಿವಾಹ ಯಾವುದೂ ಸಹ ನಾವು ಅಂದುಕೊಂಡಂತೆ ಇರುವುದಿಲ್ಲ. ಮೇಲ್ನೋಟಕ್ಕೆ ಎಲ್ಲವೂ ನಮ್ಮ ನಿರ್ಧಾರ ಹಾಗೂ ಇಚ್ಛೆಯಂತೆ ಕಂಡುಬಂದರೂ ಎಲ್ಲವೂ ಆ ಪರಮಾತ್ಮನ ನಿಯಮದಂತೆ ನಡೆಯುವುದು. ಜೀವನಕ್ಕೆ ಮಹತ್ತರವಾದ ತಿರುವನ್ನು ನೀಡುವ ವಿವಾಹವು ಸಹ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎನ್ನುವ ನಂಬಿಕೆ ಇಂದಿಗೂ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಜನಿಸಿದ ಕ್ಷಣದಲ್ಲಿಯೇ ನಮ್ಮ ಬದುಕಿನ ಭವಿಷ್ಯ ನಿರ್ಧಾರವಾಗಿರುತ್ತದೆ. ಅದಕ್ಕೆ ಅನುಗುಣವಾಗಿಯೇ ನಮ್ಮ ಬೆಳವಣಿಗೆ ಹಾಗೂ ಜೀವನವು ಸಾಗುವುದು ಎಂದು ಹೇಳುತ್ತಾರೆ.

ನಮ್ಮ ಜನ್ಮ ನಕ್ಷತ್ರ, ರಾಶಿಚಕ್ರಗಳು ಹಾಗೂ ಕುಂಡಲಿಯಲ್ಲಿರುವ ಗ್ರಹಗಳ ಸ್ಥಾನ ಹಾಗೂ ಬದಲಾವಣೆಗಳು ನಮ್ಮ ಬದುಕಿನ ಮೇಲೆ ಹಿಡಿತವನ್ನು ಹೊಂದಿರುತ್ತವೆ. ಅವುಗಳ ಪ್ರಭಾವದಿಂದಲೇ ನಮ್ಮ ಸಂಗಾತಿಯು ದೊರೆಯುವುದು. ಅವರೊಂದಿಗೆ ಪ್ರೇಮ ವಿವಾಹವೇ? ಅಥವಾ ಹಿರಿಯರ ಸಮ್ಮುಖದಲ್ಲಿ ವಿವಾಹವೇ? ಹೀಗೆ ಪ್ರೀತಿಯ ಜೀವನ ಮತ್ತು ದಾಂಪತ್ಯ ಜೀವನ ಎಲ್ಲವೂ ಗ್ರಹಗಳ ಪ್ರಭಾವದಿಂದ ಕೂಡಿರುತ್ತದೆ. ಆದರೆ ಕೆಲವರಿಗೆ ಎಷ್ಟೋ ವರ್ಷಗಳ ನಂತರ ತಡವಾಗಿ ವಿವಾಹ ಆಗುವುದೂ ಉಂಟು. ಇದಕ್ಕೆಲ್ಲ ಜ್ಯೋತಿಷ್ಯದಲ್ಲಿ ಪರಿಹಾರವಿದೆ ಆ ಪರಿಹಾರವನ್ನು ಮಾಡಿಸಿಕೊಳ್ಳಬೇಕು ಎಂದು ಕೆಲವರು ಹೇಳುತ್ತಾರೆ. ಕೆಲವರಿಗೆ ಕುಜ ದೋಷ, ಸರ್ಪ ದೋಷ , ಕಾಳ ಸರ್ಪ ದೋಷ ಇವೆಲ್ಲ ಇರುವುದರಿಂದ ವಿವಾಹ ಪ್ರಕ್ರಿಯೆಗೆ ತಡವಾಗುವುದು ಉಂಟು.

ವೈದಿಕ ಜ್ಯೋತಿಷ್ಯದ ಪ್ರಕಾರ ಕುಂಡಲಿಯ 7ನೇ ಮನೆಯು ವಿವಾಹ ಮತ್ತು ಕುಟುಂಬ ಜೀವನವನ್ನು ತಿಳಿಸುವುದು. ಏಳನೇ ಮನೆಯ ಸೂಕ್ತ ವಿಶ್ಲೇಷಣೆಯ ಅನುಸಾರ ವೈವಾಹಿಕ ಜೀವನದ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬಹುದು. ಕೆಲವೊಮ್ಮೆ ಎಷ್ಟೇ ಹುಡುಗ ಹುಡುಗಿಯರನ್ನು ನೋಡಿದರೂ ಸಹ ವರನಿಗೆ ತಕ್ಕ ವಧು ಹಾಗೂ ವಧುವಿಗೆ ತಕ್ಕ ವಾರ ಸಿಗುವುದಿಲ್ಲ. ಈ ಕೆಲವು ಕಾರಣಗಳಿಗೆ ಸರಿಯಾದ ವಯಸ್ಸಿಗೇ , ಸಮಯಕ್ಕೆ ಮದುವೆ ಆಗುವುದಿಲ್ಲ. ಹೀಗೆ ಕಂಕಣ ಭಾಗ್ಯ ಕೂಡಿ ಬರದೇ ಇರುವ ಜನರು ಇನ್ನೂ ಅನೇಕರು ಇದ್ದಾರೆ. ಕುಟುಂಬದ ಜನರೂ ಕೂಡಾ ವಯಸ್ಸು ಮೀರಿ ಹೋಗಿದೆ ಆದಷ್ಟು ಬೇಗ ಮದುವೆ ಆದರೆ ಸಾಕು ಎಂದು ಹಂಬಲಿಸುತ್ತ ಇರುತ್ತಾರೆ. ಹೀಗಿದ್ದಾಗ ಈ ಕೆಲವು ಸರಳ ಪರಿಹಾರಗಳನ್ನು ಅನುಸರಿಸಿದರೆ ಬೇಗ ವಿವಾಹ ಆಗುವ ಸಾಧ್ಯತೆಗಳು ಹೆಚ್ಚಾಗಿ ಇರುವುದು. ಹಾಗಿದ್ದರೆ ಆ ಪರಿಹಾರಗಳು ಏನು ಎನ್ನುವುದನ್ನು ನೋಡುವುದಾದರೆ ,

ಬೇಗ ವಿವಾಹ ಆಗಲು ಕುಜ ದೋಷ ನಿವಾರಣೆ ಮಾಡಿಕೊಳ್ಳಬೇಕು. ತಮ್ಮ ಜಾತಕದಲ್ಲಿ ಇರುವ ಕುಜ ದೋಷ ನಿವಾರಣೆಗೆ ಮನೆಯ ದಕ್ಷಿಣ ದಿಕ್ಕಿಗೆ ದೀಪ ಹಚ್ಚಿ ಆರಾಧನೆ ಮಾಡಿ ಅಂಗಾರಕ ಸ್ತೋತ್ರ ಪಠಿಸಬೇಕು. ಇದರಿಂದ ಕುಜ ದೋಷ ನಿವಾರಣೆ ಆಗುವುದು. ಇನ್ನು ಶುಕ್ಲಪಕ್ಷದ ಮಂಗಳವಾರದಂದು ಆರಂಭಿಸಿ ಹದಿನೆಂಟು ವಾರಗಳ ಕಾಲ ಮಾಡಿ ಆ ದಿನದಂದು ಸಂಜೆಯವರೆಗೂ ಉಪವಾಸ ಮಾಡಿ ನಂತರ ದೀಪಾರಾಧನೆ ಮಾಡಿ ತೊಗರಿ ಬೆಳೆಯಿಂದ ಮಾಡಿದ ಪದಾರ್ಥ ತಿನ್ನುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಕುಜದೋಷ ಬೇಗ ನಿವಾರಣೆಯಾಗಿ ಮದುವೆ ಕೂಡ ಬೇಗ ಆಗುವುದು. ಸ್ತ್ರೀಯರು ಪ್ರತಿ ತಿಂಗಳು ಅವರ ಜನ್ಮದಿನದಂದು ಸುಬ್ರಹ್ಮಣ್ಯಸ್ವಾಮಿಗೆ ಹಾಲಿನ ಅಭಿಷೇಕ ಮಾಡಿಸಬೇಕು. ಮಾಡುವುದರಿಂದ ಕೂಡ ದೋಷ ಪರಿಹಾರವಾಗಿ ಬೇಗ ವಿವಾಹವಾಗುವುದು. 18 ವಾರಗಳ ಕಾಲ ಗೌರಿ ರಥ ಮಾಡಿ ಸುಮಂಗಲಿಯರಿಗೆ ಕೆಂಪುವಸ್ತ್ರ ಗಳು ಹಾಗೂ ಮಂಗಲಕಾರ ವಸ್ತುಗಳನ್ನು ದಾನವಾಗಿ ನೀಡಬೇಕು.

ಈದಿನ ತೊಗರಿಬೇಳೆ ಹಾಗು ತುಪ್ಪದಿಂದ ತಯಾರಿಸಿದ ಪದಾರ್ಥಗಳನ್ನು ಸುಮಂಗಲಿಯರಿಗೆ ನೀಡಿದರೆ ದೋಷಗಳು ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ. ಇಷ್ಟಲ್ಲದೆ ಆರು ಮಂಗಳವಾರಗಳು ಕಾಲ ಬಾಳೆಎಲೆ ಮೇಲೆ ಅಕ್ಕಿ ಹಾಕಿ ಅದರ ಮೇಲೆ ತುಪ್ಪದ ದೀಪ ಹಚ್ಚಿ ದೀಪಾರಾಧನೆ ಮಾಡಬೇಕು. ಸ್ಕಂದ ಕವಚ ಪಾರಾಯಣ ಮಾಡಿ ಆರಾಧನೆ ಮಾಡುವುದರ ಮೂಲಕ ದೋಷದಿಂದ ಮುಕ್ತಿ ಪಡೆಯಬಹುದು. ರಾತ್ರಿ ಮಲಗುವಾಗ ತಾಮ್ರದ ಚೊಂಬಿನಲ್ಲಿ ನೀರನ್ನು ತಲೆಬುಡದಲ್ಲಿ ಇಟ್ಟುಕೊಂಡು ಮಲಗಬೇಕು ಮಾರನೇ ದಿನ ಬೆಳಿಗ್ಗೆ ಆ ನೀರನ್ನು ಗಿಡಗಳಿಗೆ ಹಾಕಬೇಕು. ಈ ಎಲ್ಲಾ ನಿಯಮಗಳನ್ನೂ ಮನಸ್ಸಿನಿಂದ ತಪ್ಪದೆ ಪಾಲಿಸಿದರೆ ನಿಮ್ಮ ಜಾತಕದಲ್ಲಿ ಇರುವ ಕುಜ ದೋಷ ನಿವಾರಣೆ ಆಗುವುದು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.