ಕೂದಲಿನ ನಾನಾ ಸಮಸ್ಯೆಗೆ ಮನೆಯಲ್ಲೇ ಇದೆ ಈರುಳ್ಳಿ ಮದ್ದು

0 3

ಈರುಳ್ಳಿ ಅನ್ನೋದು ಪ್ರತಿಯೊಬ್ಬರ ಮನೆಯಲ್ಲಿ ಸಾಮಾನ್ಯವಾಗಿ ಸಿಗುವಂತಾಗಿದೆ, ಈರುಳ್ಳಿ ಬರಿ ಅಡುಗೆಗೆ ಅಷ್ಟೇ ಅಲ್ಲ ನಾನಾ ರೀತಿಯ ಆರೋಗ್ಯಕರ ಗುಣಗಳನ್ನು ಹೊಂದಿದೆ, ಇದೆ ಈರುಳ್ಳಿಯನ್ನು ಬಳಸಿ ತಲೆಕೂದಲು ಉದುರುವ ಸಮಸ್ಯೆಗೆ ಹಾಗು ಕೂದಲಿನ ಆರೈಕೆಗೆ ಹೇಗೆ ಬಳಸಿಕೊಳ್ಳಬಹುದು ಅನ್ನೋದನ್ನ ಈ ಮೂಲಕ ತಿಳಿಯೋಣ. ಈರುಳ್ಳಿ ಘಾಟು ಹೆಚ್ಚಿನವರಿಗೆ ಆಗಿಬರುವುದಿಲ್ಲ ಇದರಿಂದ ಆದಷ್ಟು ದೂರ ಹೋಗಲು ಪ್ರತಿಯೊಬ್ಬರು ಪ್ರಯತ್ನಿಸುವರು. ಆದರೆ ಈರುಳ್ಳಿ ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲಿಗೂ ತುಂಬಾ ಉಪಯೋಗಕಾರಿ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಕೂದಲಿನ ಆರೈಕೆಯಲ್ಲಿ ಈರುಳ್ಳಿ ಬಳಸುವುದು ಹೇಗೆ ಎಂದು ಹೆಚ್ಚಿನವರಿಗೆ ಅಚ್ಚರಿಯಾಗಬಹುದು. ಕೂದಲಿಗೆ ಇದರ ರಸ ಹಾಕಿದರೆ ವಾಸನೆಯಿಂದ ಹತ್ತಿರವಿರುವವರು ದೂರ ಓಡಬಹುದು ಎಂದು ಭಾವಿಸಬಹುದು ಇದು ಮೂಗಿಗೆ ತುಂಬಾ ವಾಸನೆ ಆದರೂ ಇದರಿಂದ ಹಲವಾರು ರೀತಿಯ ಲಾಭಗಳು ಕೂದಲಿಗೆ ಆಗಲಿದೆ. ಕೂದಲು ಉದುರುವ ಸಮಸ್ಯೆ ಇದ್ದರೆ ಈರುಳ್ಳಿಯನ್ನು ಬಳಸಿಕೊಳ್ಳಲು ಮರೆಯಬೇಡಿ. ತುಂಬ ದುಬಾರಿಯಾಗಿರುವ ಕೆಲವು ಚಿಕಿತ್ಸೆ ಮಾಡಿಕೊಳ್ಳುವ ಬದಲು ಮನೆಯಲ್ಲಿ ಕೂದಲಿಗೆ ಚಿಕಿತ್ಸೆ ನೀಡಿದರೆ ತುಂಬಾ ಒಳ್ಳೆಯದು ಕೂದಲು ಉದುರುವ ಸಮಸ್ಯೆಗೆ ಈರುಳ್ಳಿ ಬಳಸಿಕೊಳ್ಳುವುದು ಹೇಗೆ ಎಂದು ನಿವು ತಿಳಿಯಿರಿ.

ಈರುಳ್ಳಿ ರಸ ಪಡೆಯುವುದು ತುಂಬಾ ಕಷ್ಟಕರ ಕೆಲಸವೆಂದು ನಿಮಗೆ ಅನಿಸುತ್ತಿರಬಹುದು. ಆದರೆ ಈರುಳ್ಳಿ ರಸ ತೆಗೆಯುವುದು ತುಂಬಾ ಸುಲಭ ಈರುಳ್ಳಿಯನ್ನು ಮಿಕ್ಸಿಗೆ ಹಾಕಿ ಸರಿಯಾಗಿ ರುಬ್ಬಿಕೊಳ್ಳಬೇಕು ಈರುಳ್ಳಿಯನ್ನು ಸರಿಯಾಗಿ ಕತ್ತರಿಸಿಕೊಂಡರು ಅದರಿಂದ ಹೆಚ್ಚಿನ ರಸ ಸಿಗುವುದು. ತಲೆಬುರುಡೆಯ ರಂದ್ರಗಳನ್ನು ತೆರೆಯಲು ಬಿಸಿ ಎಣ್ಣೆ ಬಳಸುವುದು ಸಾಮಾನ್ಯ. ಆದರೆ ಈರುಳ್ಳಿ ರಸವನ್ನು ಬಿಸಿ ಮಾಡುವ ಅಗತ್ಯವಿಲ್ಲ. ಈರುಳ್ಳಿಯ ರಸ ಹಚ್ಚಿಕೊಳ್ಳುವ ಅರ್ಧಗಂಟೆ ಮೊದಲು ಬಿಸಿ ಟವೆಲ್ ಅನ್ನು ತಲೆಗೆ ಕಟ್ಟಿಕೊಂಡರೆ ರಸವು ಚೆನ್ನಾಗಿ ಇರಲ್ಪಡುವುದು

ಈರುಳ್ಳಿ ರಸ ಮತ್ತು ಜೇನು ತುಪ್ಪ:ಈರುಳ್ಳಿ ರಸವನ್ನು ಸುಮಾರು ಹದಿನೈದು ನಿಮಿಷ ಕಾಲ ತಲೆಯಲ್ಲಿ ಆಗೆ ಬಿಡುವುದು ಅತೀ ಅಗತ್ಯ. ಇದರ ಬಳಿಕ ಶಾಂಪು ಹಾಕಿಕೊಂಡು ತೊಳೆಯಿರಿ ಇದು ಸ್ವಲ್ಪಮಟ್ಟಿಗೆ ತ್ರಾಸ ನೀಡುತ್ತಿದ್ದರು ಬೇರೆ ವಿಧಾನ ಬಳಸಿಕೊಳ್ಳಬಹುದು.ಸ್ವಲ್ಪ ಈರುಳ್ಳಿ ರಸಕ್ಕೆ ಜೇನುತುಪ್ಪ ಹಾಕಿಕೊಂಡು ಸರಿಯಾದ ಜೆಲ್ ಮಾಡಿಕೊಳ್ಳಿ ಇದರಿಂದ ವಾಸನೆ ಕೂಡ ಕಡಿಮೆಯಾಗುವುದು ಮಾತ್ರವಲ್ಲದೆ, ಇದು ಕೂದಲಿಗೆ ತುಂಬಾ ಒಳ್ಳೆಯದು

ಈರುಳ್ಳಿ & ಬಿ ಯರ್ ಹೇರ್:ಕೂದಲು ಉದುರುವ ಸಮಸ್ಯೆಯೊಂದಿಗೆ ಕೂದಲಿನ ಕಾಂತಿ ಹೆಚ್ಚಿಸುವಂತಹ ಹೇರ್ ಪ್ಯಾಕ್ ಇದ್ದರೆ ತುಂಬಾ ಒಳ್ಳೆಯದು. ದಪ್ಪ ಕೂದಲು ರೇಷ್ಮೆಯಂತೆ ಹೊಳೆಯುತ್ತಿದ್ದ ಅದು ನೋಡಲು ಚಂದ ಇಂತಹ ಕೂದಲು ಪಡೆಯಲು ನೀವು ಈ ಪ್ಯಾಕನ್ನು ಯಾವಾಗಲಾದರೂ ಬಳಸಿಕೊಳ್ಳಬೇಕು. ಈರುಳ್ಳಿ ರಸ ತೆಗೆದ ಬಳಿಕ ಅದರ ತಿರುಳು ಹಾಗೆ ಉಳಿದಿರುವುದು. ಇದನ್ನ ತಂಗಿನ ಎಣ್ಣೆ ಜೊತೆ ಸೇರಿಸಿ ಪೇಸ್ಟ್ ಮಾಡಿ ಈಗ ಇದಕ್ಕೆ ಬಿಯರ್ ಹಾಕಿ ಬಿಯರ್ ನೊಂದಿಗೆ ಈರುಳ್ಳಿಯು ಕೂದಲಿಗೆ ನೈಸರ್ಗಿಕ ಕಾಂತಿ ನೀಡುವುದು. ತೆಂಗಿನೆಣ್ಣೆಯ ಕೂದಲಿನ ಬುಡಕ್ಕೆ ಪೋಷಣೆ ನೀಡುವುದು.

ಈರುಳ್ಳಿ ರಸ ಮತ್ತು ತೆಂಗಿನೆಣ್ಣೆ:ನಿಮಗೆ ತಿಳಿದಿರುವ ಹಾಗೆ ತೆಂಗಿನ ಎಣ್ಣೆಯು ಸಾಮಾನ್ಯವಾಗಿ ಕೇಶಕ್ಕೆ ಹಚ್ಚುವ ಎಣ್ಣೆ ಆಗಿದ್ದು, ಕೂದಲು ಉದುರುವ ಸಮಸ್ಯೆಗೆ ನೆರವಾಗುತ್ತದೆ. ಈ ಎಣ್ಣೆಯನ್ನುಈರುಳ್ಳಿ ರಸದ ಜೊತೆ ಬಳಸಿದರೆ ಈ ಸಮಸ್ಯೆಯನ್ನು ಇನ್ನೂ ಪರಿಣಾಮಕಾರಿಯಾಗಿ ನಿವಾರಣೆ ಮಾಡಬಹುದಾಗಿದ್ದು, ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 2 ಚಮಚ ತೆಂಗಿನ ಎಣ್ಣೆಯನ್ನು ಒಂದು ಚಮಚ ಈರುಳ್ಳಿ ರಸದೊಂದಿಗೆ ಬೆರೆಸಿ ಕೆಶಕ್ಕೆ ಹೆಚ್ಚಿಕೊಳ್ಳಿ ಸ್ವಲ್ಪ ಸಮಯದ ನಂತರ ಸ್ವಚ್ಚಗೊಳಿಸಿ ವ್ಯತ್ಯಾಸ ನಿಮಗೆ ತಿಳಿಯುತ್ತದೆ.

ಈರುಳ್ಳಿ ರಸ&ಬಿಸಿ ನೀರು:ಕೇಶದ ಸಮಸ್ಯೆಗೆ ಈರುಳ್ಳಿ ರಸವನ್ನು ಬಿಸಿ ನೀರಿನೊಂದಿಗೆ ಸಹ ಬಳಸಬಹುದು. ಅಗತ್ಯದಷ್ಟು ಬಿಸಿ ನೀರಿನೊಂದಿಗೆ ಈರುಳ್ಳಿ ರಸವನ್ನು ಬೆರೆಸಿ ಕೊಳ್ಳಿ ಈ ಮಿಶ್ರಣವನ್ನು ಶ್ಯಾಂಪೂ ಬಳಸಿದ ಮೇಲೆ ಸ್ನಾನದ ಕೊನೆಯ ಹಂತದಲ್ಲಿ ಬಳಸಿ. ಒಂದೇ ತಿಂಗಳಲ್ಲಿ ಅದರ ವ್ಯತ್ಯಾಸ ನಿಮಗೆ ತಿಳಿಯುತ್ತದೆ. ಧನ್ಯವಾದಗಳು

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.