Home remedy for hemorrhoids: ಪೈಲ್ಸ್ ಸಮಸ್ಯೆ ಖಾಸಗಿ ಭಾಗದಲ್ಲಿ ಸಂಭವಿಸುವ ಗಂಭೀರ ಸಮಸ್ಯೆ ಆಗಿದೆ. ಪ್ರತಿ ನಾಲ್ಕು ವಯಸ್ಕರರಲ್ಲಿ ಮೂವರಲ್ಲಿ ಇದು ಕಾಲ ಕಾಲಕ್ಕೆ ಸಂಭವಿಸುತ್ತದೆ ಎಂದು ಮೇಯೊ ಕ್ಲಿನಿಕ್ (Mayo Clinic) ತಿಳಿಸುತ್ತದೆ. ನಿಮ್ಮ ಗುದದ್ವಾರ ಮತ್ತು ಕೆಳಗಿನ ಗುದನಾಳದಲ್ಲಿನ ರಕ್ತನಾಳಗಳಲ್ಲಿ ಊತದ ಸ್ಥಿತಿ ಉಂಟಾಗುತ್ತದೆ.

ಹೆಮೊರೊಯಿಡ್ಸ್ ಗುದನಾಳದ ಒಳಗೆ ಅಥವಾ ಗುದದ ಸುತ್ತ ಚರ್ಮದ ಅಡಿಯಲ್ಲಿ ಸಂಭವಿಸುತ್ತದೆ. ತೀವ್ರವಾದ ನೋವಿನೊಂದಿಗೆ ಗುದನಾಳದಲ್ಲಿ ನರಹುಲಿಗಳು ಮತ್ತು ರಕ್ತಸ್ರಾವದ ಶೇಖರಣೆಯ ಸಮಸ್ಯೆ ಉಂಟಾಗುತ್ತದೆ. ಇದರಿಂದಾಗಿ ವ್ಯಕ್ತಿ ನಡೆಯಲು ಮತ್ತು ಕುಳಿತುಕೊಳ್ಳಲು ತುಂಬಾ ಕಷ್ಟ ಪಡಬೇಕಾದ ಸ್ಥಿತಿ ಉಂಟಾಗುತ್ತದೆ. ತಜ್ಞರು ಹೇಳುವಂತೆ ಪೈಲ್ಸ್‌ಗೆ ಹಲವು ಕಾರಣಗಳಿವೆ.

ಅನೇಕ ಸಂದರ್ಭಗಳಲ್ಲಿ ಪೈಲ್ಸ್ ಉಂಟಾಗಲು ಕಾರಣ ಏನೆಂಬುದು ತಿಳಿಯುವುದೇ ಇಲ್ಲ. ಆದರೆ ನಿಮ್ಮ ಆಹಾರ ಮತ್ತು ಜೀವನಶೈಲಿಯು ಪೈಲ್ಸ್ ಉಂಟಾಗಲು ಪ್ರಮುಖ ಕಾರಣ ಆಗಿದೆ. ಸಾಮಾನ್ಯವಾಗಿ, ಮೂಲವ್ಯಾಧಿ ಕೆಲವೇ ದಿನಗಳಲ್ಲಿ ತಾನಾಗಿಯೇ ಸರಿ ಹೋಗುತ್ತದೆ. ಆದರೆ ಕೆಲವರಲ್ಲಿ ಈ ಸಮಸ್ಯೆ ದೀರ್ಘ ಕಾಲದವರೆಗೆ ಇರುತ್ತದೆ ಮತ್ತು ಸಮಸ್ಯೆ ದೀರ್ಘಕಾಲದವರೆಗೆ ಇದ್ದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅನಿವಾರ್ಯತೆ ಕೂಡ ಉಂಟಾಗುತ್ತದೆ.

ಮೂಲವ್ಯಾಧಿಗೆ ಚಿಕಿತ್ಸೆ ನೀಡಲು ಹಲವು ಆಯ್ಕೆಗಳಿವೆ. ಅದೇ ವೇಳೆ ಪೈಲ್ಸ್‌ಗೆ ಮನೆಮದ್ದುಗಳೊಂದಿಗೆ ಜೀವನಶೈಲಿಯನ್ನು ಸುಧಾರಿಸುವ ಮೂಲಕ ಅನೇಕ ಜನರು ಅದನ್ನು ತೊಡೆದು ಹಾಕುತ್ತಾರೆ. ಸಾಕಷ್ಟು ನೀರು ಕುಡಿಯದೇ ಇರುವುದು ಮತ್ತು ಕಳಪೆ ಜೀರ್ಣಕ್ರಿಯೆ ಮಲಬದ್ಧತೆಗೆ ಪ್ರಮುಖ ಕಾರಣವಾಗಿದೆ. ಮೂಲವ್ಯಾಧಿಗೆ ಮಜ್ಜಿಗೆ ಉತ್ತಮ ಮನೆ ಮದ್ದು. ಆದ್ರೆ ಕೇವಲ ಮಜ್ಜಿಗೆಯಿಂದ ಮಾತ್ರ ಮೂಲವ್ಯಾಧಿ ಕಡಿಮೆಯಾಗುವುದಿಲ್ಲ. ಮಜ್ಜಿಗೆಯ ಜೊತೆ ಕೆಲವೊಂದು ಸತ್ವಗಳನ್ನು ಸೇರಿಸಿಕೊಳ್ಳಬೇಕು.

ಚಿಪ್ಪಳ್ಳಿ, ಚಿತ್ರಮೂಲ, ವಿಡಂಗ, ಶುಂಠಿ, ಅಳಲೆಕಾಯಿ ಸಿಪ್ಪೆ ತೆಗೆದುಕೊಂಡು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಬಿಳಿ ವಸ್ತ್ರದಲ್ಲಿ ಈ ಪುಡಿಯನ್ನು ಶೋಧಿಸಿಕೊಳ್ಳಬೇಕು. ಹೀಗೆ ಶೋಧಿಸಿದ ಪುಡಿಯನ್ನು ಮಜ್ಜಿಗೆಯ ಜೊತೆ ಸೇರಿಸಿ ಬೆಳಗ್ಗೆ ಮತ್ತು ಸಾಯಂಕಾಲ ಕುಡಿಯಬೇಕು. ಇದು ರಕ್ತಮೂಲವ್ಯಾಧಿ, ಇನ್​ಫೆಕ್ಷನ್​​​​ ಅನ್ನು ಕಡಿಮೆ ಮಾಡುತ್ತದೆ.

ಮಲವಿಸರ್ಜನೆ ಮಾಡುವಾಗ ಮಲ ತುಂಬಾ ಗಟ್ಟಿಯಾಗಿ ಬರುತ್ತಿದ್ದರೆ ಅಥವಾ ಒತ್ತಡದಿಂದ ಮಲ ವಿಸರ್ಜನೆಯಾಗುತ್ತದೆ ಎಂದರೆ ಅದು ಮಲಬದ್ಧತೆಯ ಮುಖ್ಯಲಕ್ಷಣ ಈ ಲಕ್ಷಣ ಇದ್ದರೆ ಆಯಸ ಎದೆನೋವು ಅಸಿಡಿಟಿ ಗ್ಯಾಸ್ಟ್ರಿಕ್ ಸಮಸ್ಯೆ ಅಥವಾ ಹುಳಿತೇಗು ದೇಹದ ಭಾರದ ಅನುಭವವಿರುತ್ತದೆ ಈ ಮೂಲವ್ಯಾಧಿ ಗಳಿಗೆ ಮನೆಮದ್ದುಗಳಿವೆ ದಿನದಲ್ಲಿ ಒಂದು ಬಾರಿಯಾದರೂ ಒಣದ್ರಾಕ್ಷಿಯನ್ನು ತಿನ್ನಬೇಕು ಹಿಂದಿನ ದಿನ ಹತ್ತರಿಂದ ಹದಿನೈದು ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ತುಪ್ಪ ಬಳಸಬೇಕು ಯಾವಾಗ ನಮ್ಮ ದೇಹದಲ್ಲಿ ನೀರು ಅಥವಾ ಆರೋಗ್ಯಕರವಾದ ಜಿಡ್ಡು ಕಡಿಮೆಯಾಗುತ್ತದೆಯೋ ಆಗ ದೊಡ್ಡಕರುಳಿನ ಮೇಲೆ ಸ್ವಾಭಾವಿಕವಾಗಿ ಮಲ ಅಂಟಿಕೊಳ್ಳುತ್ತದೆ

ಮಲವನ್ನು ತೆಗೆಯುಬ ಕೆಲಸ ಮಾಡುತ್ತದೆ ಮಾಡುತ್ತದೆ ಹಾಗೇ ಹರಳೆಣ್ಣೆಯನ್ನು ಬಳಸಬೇಕು ತುಂಬಾ ಮಲಬದ್ಧತೆ ತುಂಬಾ ಗಂಭೀರವಾಗಿರುವವರು ಮಾತ್ರ ಹರಳೆಣ್ಣೆ ಬಳಸಿ ರಾತ್ರಿ ಊಟದ ನಂತರ ಒಂದು ಗಂಟೆ ನಂತರ ಬೆಚ್ಚಗಿನ ನೀರಿನಲ್ಲಿ 1 ಸ್ಪೂನ್ ಹರಳೆಣ್ಣೆ ಮಿಕ್ಸ್ ಮಾಡಿ ಕುಡಿದರೆ ಮಲ ಸಂಬಂಧಿಸಿದ ಕಾಯಿಲೆ ಇರುವವರು ಗರ್ಭಿಣಿಯರು, ಹೃದಯ ರೋಗಿಗಳು ಮೂಳೆ ರೋಗಿಗಳು ಇದನ್ನು ಉಪಯೋಗಿಸಬೇಡಿ ಮತ್ತು ಪ್ರತಿದಿನ ವ್ಯಾಯಾಮ ಮಾಡಬೇಕು

ಇದನ್ನೂ ಓದಿ..ಪುರುಷರ ನಿಶ್ಯಕ್ತಿ ನಿವಾರಿಸಿ ಹಾಸಿಗೆಯಲ್ಲಿ ಹೆಚ್ಚು ಸುಖ ಸುಗುವಂತೆ ಮಾಡುತ್ತೆ ಈ ಕಾಯಿ

ಕನಿಷ್ಠ ಪಕ್ಷ ಮೂರು ಲೀಟರ್ ನಷ್ಟು ನೀರು ಕುಡಿಯಬೇಕು ಸಮಯಕ್ಕೆ ಸರಿಯಾಗಿ ಆರೋಗ್ಯಕರವಾದ ಆಹಾರವನ್ನು ಸೇವಿಸಬೇಕು ರಾತ್ರಿ 07:30 ರ ಒಳಗೆ ಊಟ ಮುಗಿಸಬೇಕು ಊಟವನ್ನು ಚೆನ್ನಾಗಿ ಜಿಗಿದು ತಿನ್ನಬೇಕು ಮಲ ಹೋಗಬೇಕು ಎನಿಸಿದಾಗ ಹೋಗಿಬಿಡಬೇಕು ಶರೀರದಲ್ಲಿ ಎಷ್ಟು ಹೊತ್ತಿನ ತನಕ ಮಲ ಇರುತ್ತದೆ ಅಷ್ಟು ಪ್ರಾಬ್ಲಮ್ ನಮಗೆ ಬರುತ್ತದೆ ನಿಮ್ಮ ಡಯಟ್ ನಲ್ಲಿ ನಾರಿನಂಶ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸಿ ಜಂಕ್ ಫುಡ್ ಗಳನ್ನು ಸೇವಿಸಬೇಡಿ

By

Leave a Reply

Your email address will not be published. Required fields are marked *