ಸಾಮಾನ್ಯವಾಗಿ ಕೆಲವರಲ್ಲಿ ದೇಹದ ಮೇಲೆ ಬೆವರು ಗುಳ್ಳೆ ಸಮಸ್ಯೆ ಕಂಡುಬರುತ್ತದೆ ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಮನೆಯಲ್ಲೇ ಇದೆ ಒಂದಿಷ್ಟು ಔಷದಿ ಗುಣಗಳನ್ನು ಹೊಂದಿರುವಂತ ಮನೆಮದ್ದುಗಳು. ಬೆವರು ಗುಳ್ಳೆ ನಿವಾರಣೆಗೆ ಅಕ್ಕಿ ಹಿಟ್ಟು ಬಳಸಲಾಗುತ್ತದೆ. ಬೆವರು ಗುಳ್ಳೆ ಇರುವಂತ ಜಾಗಕ್ಕೆ ಅಕ್ಕಿ ಹಿಟ್ಟನ್ನು ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ಶುದ್ಧವಾದ ನೀರಿನಿಂದ ಸ್ನಾನ ಮಾಡಿದರೆ ಬೆವರು ಗುಳ್ಳೆ ನಿವಾರಣೆಯಾಗುತ್ತದೆ.

ನಿಮಗೆ ಏನಾದ್ರು ಕೆಮ್ಮು ಸಮಸ್ಯೆ ಕಾಡುತ್ತಿದ್ರೆ ಒಂದು ಚಮಚ ಜೇನುತುಪ್ಪಕ್ಕೆ ಮೂಲಂಗಿ ರಸವನ್ನು ಸಮಪ್ರಮಾಣದಲ್ಲಿ ಬೆರಸಿ ದಿನಕ್ಕೆ ೩ ಬಾರಿಯಂತೆ ಸೇವಿಸುತ್ತಿದ್ದರೆ ಕೆಮ್ಮು ನಿಲ್ಲುತ್ತದೆ. ಕೆಮ್ಮು ನಿವಾರಣೆಗೆ ಮತ್ತೊಂದು ವಿಧಾನ ಏನು ಅನ್ನೋದನ್ನ ನೋಡುವುದಾದರೆ ಉಪ್ಪಿನ ಹರಳು ಮತ್ತು ಲವಂಗವನ್ನು ತಗೆದುಕೊಂಡು ಬಾಯಲ್ಲಿಟ್ಟು ಚಪ್ಪರಿಸಿದರೆ ಕೆಮ್ಮು ನಿವಾರಣೆ ಆಗುತ್ತದೆ.

ಕೆಲವರಲ್ಲಿ ಅಜೀರ್ಣತೆ ಸಮಸ್ಯೆ ಕಾಡುತ್ತಿರುತ್ತದೆ ಅಂತವರಿಗೆ ಇದು ಉಪಯೋಗಕಾರಿ ತುಳಸಿ ರಸವನ್ನು ಒಂದೆರಡು ಟೀ ಚಮಚದಷ್ಟು ಪ್ರತಿನಿತ್ಯ ಸೇವಿಸುತ್ತಿದ್ದರೆ ಅಜೀರ್ಣದ ಬಾಧೆ ನಿವಾರಣೆಯಾಗುತ್ತದೆ. ಇನ್ನು ಪ್ರತಿದಿನ ಆಹಾರ ಸೇವಿಸಿದ ನಂತರ ಸೊಂಪಕಾಳುಗಳನ್ನು ಬಾಯಿಗೆ ಹಾಕಿಕೊಂಡು ಅಗಿಯುವುದರಿಂದ ಅಜೀರ್ಣದ ತೊಂದರೆ ನಿವಾರಣೆಯಾಗುತ್ತದೆ.

Leave a Reply

Your email address will not be published. Required fields are marked *